Neeraj Chopra: ಬುಮ್ರಾಗೆ ಬೌಲಿಂಗ್ ಟಿಪ್ಸ್ ಕೊಟ್ಟ ಚಿನ್ನದ ಹುಡುಗ ನೀರಜ್​ ಚೋಪ್ರಾ - Vistara News

ಕ್ರೀಡೆ

Neeraj Chopra: ಬುಮ್ರಾಗೆ ಬೌಲಿಂಗ್ ಟಿಪ್ಸ್ ಕೊಟ್ಟ ಚಿನ್ನದ ಹುಡುಗ ನೀರಜ್​ ಚೋಪ್ರಾ

ಬುಮ್ರಾ ತನ್ನ ಓಟದ ವೇಗ ಮತ್ತು ಅಂತರವನ್ನು ಹೆಚ್ಚಿಸಿ ಬೌಲಿಂಗ್ ವೇಗವನ್ನೂ ವೃದ್ಧಿಸಬೇಕು ಎಂಬುದಾಗಿ ನೀರಜ್ ಚೋಪ್ರಾ (Neeraj Chopra) ಹೇಳಿದ್ದಾರೆ.

VISTARANEWS.COM


on

Neeraj Chopra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತದಲ್ಲಿ ಜಾವೆಲಿನ್ ಎಸೆತವನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರಾಗಿರುವ ಹಾಲಿ ಒಲಿಂಪಿಕ್ ಚಾಂಪಿಯನ್ ಚಿನ್ನದ ಹುಡುಗ ನೀರಜ್ ಚೋಪ್ರಾ ತಮ್ಮ ನೆಚ್ಚಿನ ಮತ್ತು ಭಾರತದ ಸ್ಟಾರ್​ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ತಮ್ಮ ವೇಗವನ್ನು ಹೆಚ್ಚಿಸುವ ಕುರಿತು ಒಳನೋಟದ ಸಲಹೆ ನೀಡಿದ್ದಾರೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್​ ಪಂದ್ಯವನ್ನು ವೀಕ್ಷಿಸಿದ್ದ ನೀರಜ್, ಬುಮ್ರಾ ಅವರ ವಿಶಿಷ್ಟ ಬೌಲಿಂಗ್ ಶೈಲಿಯನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಅವರನ್ನು ತಮ್ಮ ಆದ್ಯತೆಯ ವೇಗದ ಬೌಲರ್ ಎಂದು ಹೇಳಿದ್ದಾರೆ.

“ನಾನು ಜಸ್ಪ್ರೀತ್ ಬುಮ್ರಾ ಅವರನ್ನು ಸಾಕಷ್ಟು ಇಷ್ಟಪಡುತ್ತೇನೆ. ಅವರ ಬೌಲಿಂಗ್​ ಶೈಲಿಯನ್ನು ವಿಶೇಷವಾಗಿ ಆಸ್ವಾದಿಸುತ್ತೇನೆ ” ಎಂದು ನೀರಜ್ ಇಂಡಿಯನ್ ನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ವಿಶ್ವಕಪ್​​ನಲ್ಲಿ ಬುಮ್ರಾ ಅವರ ಅಸಾಧಾರಣ ಪ್ರದರ್ಶನದಿಂದಾಗಿ ಅವರಿಗೆ 20 ವಿಕೆಟ್​ಗಳನ್ನು ಗಳಿಸಲು ಸಹಾಯ ಮಾಡಿತು. ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುವ ಅವರ ಅಸಾಧಾರಣ ಸಾಮರ್ಥ್ಯವು ಭಾರತದ ಯಶಸ್ಸಿಗೆ ಕೊಡುಗೆ ನೀಡಿದೆ. ಬುಮ್ರಾ ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, ಚೋಪ್ರಾ ಅವರ ವೇಗವನ್ನು ಹೆಚ್ಚಿಸಬೇಕು ಎಂಬ ಸಣ್ಣ ಬದಲಾವಣೆಯನ್ನೂ ಸೂಚಿಸಿದ್ದಾರೆ.

ಹೆಚ್ಚು ದೂರ ಓಡಲಿ

ತಮ್ಮ ಎಸೆತಗಳಿಗೆ ಇನ್ನಷ್ಟು ವೇಗ ನೀಡಲು ಬುಮ್ರಾ ತಮ್ಮ ರನ್-ಅಪ್ ಅನ್ನು ಹೆಚ್ಚಿಸಬೇಕು ಎಂದು ನಾನು ಭಾವಿಸುತ್ತೇನೆ. ಜಾವೆಲಿನ್ ಎಸೆತಗಾರರಾಗಿ ನಾನು ಹೇಳುವುದಾದರೆ ಬೌಲರ್​ಗಳು ತಮ್ಮ ರನ್-ಅಪ್ ಅನ್ನು ಸ್ವಲ್ಪ ಹಿಂದಿನಿಂದ ಪ್ರಾರಂಭಿಸಿದರೆ ವೇಗವನ್ನು ವೃದ್ದಿಸಲು ಸಾಧ್ಯವಿದೆ ಎಂದು ಹೇಳುತ್ತೇನೆ. ಆದರೆ, ಬುಮ್ರಾ ಅವರ ಬೌಲಿಂಗ್​ ಶೈಲಿಯನ್ನು ನಾನು ಇಷ್ಟಪಡುತ್ತೇನೆ, “ಎಂದು ಅವರು ಹೇಳಿದರು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್​​ನಲ್ಲಿ ಭಾಗವಹಿಸಿದ್ದ ವೇಳೆ ಕ್ರಿಕೆಟ್ ಅಭಿಮಾನಿಯಾಗಿ ತಮ್ಮ ಅನುಭವವನ್ನು ಹೇಳಿಕೊಂಡ ನೀರಜ್, “ನಾನು ಕ್ರಿಕೆಟ್​ ಪಂದ್ಯವನ್ನು ಸಂಪೂರ್ಣವಾಗಿ ನೋಡಿದ್ದು ಇದೇ ಮೊದಲು. ನಾನು ವಿಮಾನದಲ್ಲಿದ್ದಾಗ ಭಾರತ ಮೂರು ವಿಕೆಟ್ ಕಳೆದುಕೊಂಡಿತ್ತು. ನಾನು ತಲುಪಿದಾಗ ವಿರಾಟ್ (ಕೊಹ್ಲಿ) ಭಾಯ್ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುತ್ತಿದ್ದರು. ಕ್ರಿಕೆಟ್​​ನಲ್ಲಿ ನನಗೆ ಅರ್ಥವಾಗದ ಕೆಲವು ತಾಂತ್ರಿಕ ವಿಷಯಗಳಿವೆ. ಹಗಲಿನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಸುಲಭವಾಗಿರಲಿಲ್ಲ. ಸಂಜೆ ಮೇಲೆ ಬ್ಯಾಟಿಂಗ್ ಸುಲಭವಾಯಿತು ಎಂದು ನಾನು ಭಾವಿಸುತ್ತೇನೆ. ಆದರೆ ನಮ್ಮ ಆಟಗಾರರ ಉತ್ತಮವಾಗಿ ಪ್ರಯತ್ನಿಸಿದರು. ಕೆಲವೊಮ್ಮೆ, ಅದು ನಮ್ಮ ದಿನ ಆಗಿರುವುದಿಲ್ಲ್ಲಲ ಆದರೆ, ಪ್ರಾಮಾಣಿಕವಾಗಿ, ಪ್ರತಿಯೊಬ್ಬರೂ ಉತ್ತಮ ಟೂರ್ನಿಯನ್ನು ಹೊಂದಿದ್ದರು ಎಂದು ನೀರಜ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಮನಸ್ಥಿತಿಯೇ ಕಾರಣ

ಬಹುಶಃ, ಮಾನಸಿಕವಾಗಿ, ಆಸ್ಟ್ರೇಲಿಯಾ ತಂಡವು ಆರಂಭದಲ್ಲಿ ಮೇಲುಗೈ ಸಾಧಿಸಿತು. ಅವರು ಬೌಲಿಂಗ್ ಮಾಡಿದಾಗ ಅವರು ಉತ್ತಮm ಮನಸ್ಥಿತಿಯನ್ನು ಹೊಂದಿದ್ದಾರೆಂದು ನಾನು ಕಂಡುಕೊಂಡೆ. ಕೊನೆಯಲ್ಲಿ ಅವರು ಅದನ್ನು ಸಂಪೂರ್ಣವಾಗಿ ಬಳಸಿಕೊಂಡರು. ಅವರು ತಮ್ಮ ಆಟದ ಬಗ್ಗೆ ವಿಶ್ವಾಸ ಹೊಂದಿದ್ದರು ಎಂದು ನೀರಜ್ ಹೇಳಿದ್ದಾರೆ. ಇದೇ ವೇಳೆ ಅವರು ಆ ದಿನದ ಸವಾಲಿನ ಬ್ಯಾಟಿಂಗ್ ಪರಿಸ್ಥಿತಿಗಳನ್ನು ಒಪ್ಪಿಕೊಂಡಿದ್ದಾರೆ

ಚೋಪ್ರಾ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಗಳನ್ನು ಗೆದ್ದ ಮೂರನೇ ಜಾವೆಲಿನ್ ಎಸೆತಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ವಿಶ್ವ ದಾಖಲೆ ಹೊಂದಿರುವ ಜೆಕ್ ಗಣರಾಜ್ಯದ ಜಾನ್ ಜೆಲೆಜ್ನಿ ಮತ್ತು ನಾರ್ವೆಯ ಆಂಡ್ರಿಯಾಸ್ ಥೋರ್ಕಿಲ್ಡ್ಸೆನ್ ಅವರು ಈ ಪಟ್ಟಿಯ ಇನ್ನಿಬ್ಬರು ಅಥ್ಲೀಟ್​ಗಳು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

R Ashwin: ಧರ್ಮಶಾಲಾ ಟೆಸ್ಟ್​ನಲ್ಲಿ ಆರ್​.ಅಶ್ವಿನ್​ಗೆ ವಿಶೇಷ ಗೌರವ

ಧರ್ಮಶಾಲಾ ಟೆಸ್ಟ್​ನಲ್ಲಿ ನಾಯಕ ರೋಹಿತ್‌ ಶರ್ಮ ಅವರು ಶತಕದ ಟೆಸ್ಟ್​ ಸಾಧಕ ಅಶ್ವಿ‌ನ್‌ ಅವರಿಗೆ ತಂಡವನ್ನು ಅಂಗಳಕ್ಕೆ ಮುನ್ನಡೆಸುವ ಗೌರವ ನೀಡಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

VISTARANEWS.COM


on

r ashwin
Koo

ಧರ್ಮಶಾಲಾ: ಇಂಗ್ಲೆಂಡ್‌ ಎದುರಿನ ಅಂತಿಮ ಟೆಸ್ಟ್‌ ಪಂದ್ಯ(India vs England 5th Test) ಭಾರತ ತಂಡದ ಅನುಭವಿ ಮತ್ತು ಹಿರಿಯ ಆಟಗಾರ ಆರ್​.ಅಶ್ವಿನ್​ಗೆ(R Ashwin) ವಿಶೇಷ ಪಂದ್ಯವಾಗಲಿದೆ. ಇದು ಅವರ 100ನೇ ಟೆಸ್ಟ್‌ ಪಂದ್ಯವಾಗಿದೆ. ಈ ಸಾಧನೆ ಮಾಡಿ 13ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಅವರಿಗೆ ಪಂದ್ಯ ಆರಂಭಕ್ಕೂ ಮುನ್ನ ವಿಶೇಷ ಗೌರವ ಸೂಚಿಸುವ ಕಾರ್ಯಕ್ರಮವೊಂದನ್ನು ಬಿಸಿಸಿಐ ಏರ್ಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಕೆಲವು ದಿನಗಳ ಹಿಂದೆ ಮಾಜಿ ಆಟಗಾರ ಸುನಿಲ್​ ಗವಾಸ್ಕರ್ ಅವರು 100ನೇ ಟೆಸ್ಟ್​ ಹೊಸ್ತಿಲಲ್ಲಿ ನಿಂತಿರುವ ಅಶ್ವಿನ್​ಗೆ ಅಂತಿಮ ಪಂದ್ಯದಲ್ಲಿ ನಾಯಕತ್ವವನ್ನು ನೀಡಬೇಕು ಎಂದು ಹೇಳಿದ್ದರು. ಇದೀಗ ಗವಾಸ್ಕರ್​ ಅವರ ಬಯಕೆಯಂತೆ ಧರ್ಮಾಶಾಲಾ ಟೆಸ್ಟ್​ನಲ್ಲಿ ನಾಯಕ ರೋಹಿತ್‌ ಶರ್ಮ ಅವರು ಶತಕದ ಟೆಸ್ಟ್​ ಸಾಧಕ ಅಶ್ವಿ‌ನ್‌ ಅವರಿಗೆ ತಂಡವನ್ನು ಅಂಗಳಕ್ಕೆ ಮುನ್ನಡೆಸುವ ಗೌರವ ನೀಡಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಕಳೆದ 13 ವರ್ಷಗಳಿಂದ ಭಾರತೀಯ ಟೆಸ್ಟ್‌ ತಂಡದ ಭಾಗವಾಗಿರುವ ಅಶ್ವಿ‌ನ್‌ ಸದ್ಯ 99* ಟೆಸ್ಟ್‌ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಮೂರನೇ ಟೆಸ್ಟ್​ ಪಂದ್ಯದಲ್ಲಿ ಅವರು 500 ಟೆಸ್ಟ್​ ವಿಕೆಟ್​ಗಳನ್ನು ಪೂರ್ತಿಗೊಳಿಸಿದ ಸಾಧನೆ ಕೂಡ ಮಾಡಿದ್ದರು. ಸದ್ಯ ಅವರ ಬತ್ತಳಿಕೆಯಲ್ಲಿ 507 ವಿಕೆಟ್​ಗಳಿವೆ. ಅತ್ಯಧಿಕ 35 ಸಲ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಉರುಳಿಸಿದ ಭಾರತೀಯ ದಾಖಲೆ ಕೂಡ ಇವರ ಹೆಸರಿನಲ್ಲಿದೆ. 8 ಬಾರಿ 10ಕ್ಕಿಂತ ಅಧಿಕ ವಿಕೆಟ್​ ಕಿತ್ತ ದಾಖಲೆ ಕೂಡ ಇವರದ್ದಾಗಿದೆ.

ಇದನ್ನೂ ಓದಿ WPL 2024 Points Table: ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

ಬೌಲಿಂಗ್​ ಮಾತ್ರವಲ್ಲದೆ ಬ್ಯಾಟಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಇವರು 3 ಸಾವಿರಕ್ಕೂ ಅಧಿಕ ರನ್​ ಬಾರಿಸಿದ್ದಾರೆ. ಇದರಲ್ಲಿ 5 ಶತಕಗಳು ಕೂಡ ಒಳಗೊಂಡಿದೆ. 14 ಅರ್ಧಶತಕ ಬಾರಿಸಿದ್ದಾರೆ.

ಭಾರತ ಪರ 100 ಟೆಸ್ಟ್​ ಪಂದ್ಯ ಆಡಿದ ಆಟಗಾರರು


ಸಚಿನ್‌ ತೆಂಡೂಲ್ಕರ್‌ (200)

ರಾಹುಲ್‌ ದ್ರಾವಿಡ್‌ (163)

ವಿವಿಎಸ್‌ ಲಕ್ಷ್ಮಣ್‌ (134)

ಅನಿಲ್‌ ಕುಂಬ್ಳೆ (132)

ಕಪಿಲ್‌ದೇವ್‌ (131)

ಸುನೀಲ್‌ ಗಾವಸ್ಕರ್‌ (125)

ಸೌರವ್‌ ಗಂಗೂಲಿ (113)

ವಿರಾಟ್‌ ಕೊಹ್ಲಿ (113*)

ಇಶಾಂತ್‌ ಶರ್ಮ (103*)

ಹರ್ಭಜನ್‌ ಸಿಂಗ್‌ (103)

ವೀರೇಂದ್ರ ಸೆಹವಾಗ್‌ (103)

ಚೇತೇಶ್ವರ್‌ ಪೂಜಾರ (103*)

ಅಂತಿಮ ಟೆಸ್ಟ್​ಗೆ ಭಾರತ ತಂಡ


ರೋಹಿತ್ ಶರ್ಮಾ (ನಾಯಕ), ಜಸ್​ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್, ದೇವದತ್ ಪಡಿಕ್ಕಲ್.

Continue Reading

ಕ್ರಿಕೆಟ್

WPL 2024 Points Table: ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

ನಿನ್ನೆ(ಬುಧವಾರ) ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ತಂಡ ಸೋಲು ಕಂಡ ಕಾರಣ ಅಂಕಪಟ್ಟಿಯಲ್ಲಿ(WPL 2024 Points Table) ಮಹತ್ವದ ಬದಲಾವಣೆ ಸಂಭವಿಸಿದೆ.

VISTARANEWS.COM


on

WPL 2024
Koo

ಬೆಂಗಳೂರು: 2ನೇ ಆವೃತ್ತಿ(WPL 2024)ಯ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌)ನಲ್ಲಿ 6 ಪಂದ್ಯಗಳು ಮುಕ್ತಾಯ ಕಂಡಿದೆ. ಇಂದು ನಡೆಯುವ 7ನೇ ಪಂದ್ಯದಲ್ಲಿ ಆತಿಥೇಯ ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಗಲಿದೆ. ನಿನ್ನೆ(ಬುಧವಾರ) ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ತಂಡ ಸೋಲು ಕಂಡ ಕಾರಣ ಅಂಕಪಟ್ಟಿಯಲ್ಲಿ(WPL 2024 Points Table) ಮಹತ್ವದ ಬದಲಾವಣೆ ಸಂಭವಿಸಿದೆ.

2 ಪಂದ್ಯಗಳ ಸೋಲಿನ ಬಳಿಕ ಗೆಲುವಿನ ಖಾತೆ ತೆರೆದ ಯುಪಿ ವಾರಿಯರ್ಸ್ ತಂಡ 2 ಅಂಕದೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ. ಅಜೇಯ ಗೆಲುವಿನ ಓಟ ಕಾಯ್ದುಕೊಂಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 4 ಅಂಕದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಮುಂಬೈ ಇಂಡಿಯನ್ಸ್​ 4 ಅಂಕದೊಂದಿಗೆ ದ್ವಿತೀಯ ಸ್ಥಾನಿಯಾಗಿದೆ. ಡೆಲ್ಲಿ 2 ಅಂಕ ಮತ್ತು ಮುತ್ತಮ ರನ್​ರೇಟ್​ ಆಧಾರದಲ್ಲಿ ಮೂರನೇ ಸ್ಥಾನಿಯಾಗಿದೆ. ಖಾತೆ ತೆರೆಯದ ಗುಜರಾತ್​ ಜೈಂಟ್ಸ್​ ಕೊನೆಯ ಸ್ಥಾನಿಯಾಗಿದೆ.

ಬುಧವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಗೆಲುವು ದಾಖಲಿಸಿದ್ದರೆ 6 ಅಂಕದೊಂದಿಗೆ ಅಗ್ರಸ್ಥಾನಕ್ಕೇರಬಹುದಿತ್ತು. ಆದರೆ ಸೋಲು ಕಂಡು ಈ ಅವಕಾಶದಿಂದ ವಂಚಿತವಾಯಿತು. ಇಂದು ನಡೆಯುವ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಡೆಲ್ಲಿ ಗೆಲುವು ಸಾಧಿಸಿದರೆ ರನ್​ರೇಟ್​ ಧಾರಣೆಯಲ್ಲಿ ಮುಂದಿರುವ ಡೆಲ್ಲಿ ದ್ವಿತೀಯ ಸ್ಥಾನಕ್ಕೇರಲಿದೆ. ಮುಂಬೈ ಮೂರನೇ ಸ್ಥಾನಕ್ಕೆ ಜಾರಲಿದೆ.

ಅಂಕಪಟ್ಟಿ ಹೀಗಿದೆ

ತಂಡಪಂದ್ಯಗೆಲುವುಸೋಲುಅಂಕ
ಆರ್​ಸಿಬಿ2204 (+1.665)
ಮುಂಬೈ ಇಂಡಿಯನ್ಸ್​3214 (-0.182)
ಡೆಲ್ಲಿ ಕ್ಯಾಪಿಟಲ್ಸ್​2112 (+1.222)
ಯುಪಿ ವಾರಿಯರ್ಸ್​3122 (-0.357)
ಗುಜರಾತ್​ ಜೈಂಟ್ಸ್​2020 (-1.968)

ಮುಂಬೈಗೆ 7 ವಿಕೆಟ್​ ಸೋಲು


ಬುಧವಾರ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಯುಪಿ ಮತ್ತು ಮುಂಬೈ ವಿರುದ್ಧದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್(Mumbai Indians vs UP Warriorz) ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 161 ರನ್​ ಬಾರಿಸಿತು. ಜವಾಬಿತ್ತ ಯುಪಿ ವಾರಿಯರ್ಸ್16.3​ ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 163 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಇದಕ್ಕೂ ಮುನ್ನ ಆಡಿದ 2 ಪಂದ್ಯಗಳಲ್ಲಿ ಯುಪಿ ಹೀನಾಯ ಸೋಲು ಕಂಡಿತ್ತು.

ಗುರಿ ಬೆನ್ನಟ್ಟಿದ ಯುಪಿ ತಂಡಕ್ಕೆ ನಾಯಕಿ ಅಲಿಸ್ಸಾ ಹೀಲಿ ಮತ್ತು ಹಾರ್ಡ್​ ಹಿಟ್ಟರ್​ ಕಿರಣ್ ನವಗಿರೆ ಉತ್ತಮ ಜತೆಯಾಟದ ಮೂಲಕ ಭರ್ಜರಿ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ 94 ರನ್​ಗಳನ್ನು ರಾಶಿ ಹಾಕಿತು. 6 ಬೌಂಡರಿ ಮತ್ತು 4 ಸಿಕ್ಸರ್​ ಬಾರಿಸಿದ ಕಿರಣ್ ನವಗಿರೆ 57 ರನ್​ ಗಳಿಸಿ ಅಮೆಲಿಯಾ ಕೆರ್​ಗೆ ವಿಕೆಟ್​ ಒಪ್ಪಿಸಿದರು. ಈ ವಿಕೆಟ್​ ಪತನಗೊಂಡು 3 ರನ್​ ಒಟ್ಟುಗೂಡುವಷ್ಟರಲ್ಲಿ ಅಲಿಸ್ಸಾ ಹೀಲಿ ವಿಕೆಟ್​ ಕೂಡ ಉದುರಿತು. ಅವರ ಗಳಿಕೆ 33. ಉಭಯ ಆಟಗಾರ್ತಿಯರ ವಿಕೆಟ್​ ಕಳೆದುಕೊಂಡ ಬಳಿಕ ಆಡಲಿಳಿದ ಗ್ರೇಸ್ ಹ್ಯಾರಿಸ್ ಮತ್ತು ದೀಪ್ತಿ ಶರ್ಮ(ಅಜೇಯ 27) ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಉಭಯ ಆಟಗಾರ್ತಿಯರು ಕೂಡ ಅಜೇಯರಾಗಿ ಉಳಿದರು. ಅಗ್ರೆಸಿವ್​ ಬ್ಯಾಟಿಂಗ್​ ನಡೆಸಿದ ಗ್ರೇಸ್ ಹ್ಯಾರಿಸ್ ಕೇವಲ 17 ಎಸೆತಗಳಿಂದ 38* ರನ್​ ಚಚ್ಚಿದರು. ಮುಂಬೈ ಪರ ಇಸ್ಸಿ ವಾಂಗ್ 2 ವಿಕೆಟ್​ ಪಡೆದರು.

Continue Reading

ಕ್ರೀಡೆ

Pro Kabaddi: ಹಾಲಿ ಚಾಂಪಿಯನ್​ ಜೈಪುರಕ್ಕೆ ಸೋಲು; ಪುಣೇರಿ-ಹರ್ಯಾಣ ಫೈನಲ್​ ಫೈಟ್​

ಮಾರ್ಚ್​ 1ರಂದು ನಡೆಯುವ 10ನೇ ಆವೃತ್ತಿ ಪ್ರೊ ಕಬಡ್ಡಿ(Pro Kabaddi) ಲೀಗ್‌ನ ಫೈನಲ್ ಕಾಳಗದಲ್ಲಿ ಪುಣೇರಿ ಪಲ್ಟನ್‌(Puneri Paltan) ಮತ್ತು ಇದೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದ ಹರ್ಯಾಣ ಸ್ಟೀಲರ್ಸ್(Haryana Steelers) ಪ್ರಶಸ್ತಿಗಾಗಿ ಸೆಣಸಾಡಲಿದೆ.

VISTARANEWS.COM


on

Puneri Paltan vs Haryana Steelers
Koo

ಹೈದರಾಬಾದ್‌: 10ನೇ ಆವೃತ್ತಿ ಪ್ರೊ ಕಬಡ್ಡಿ(Pro Kabaddi) ಲೀಗ್‌ನ ಫೈನಲ್(Pro Kabaddi Final)​ ಪಂದ್ಯಕ್ಕೆ ವೇದಿಕೆ ಸಿದ್ದಗೊಂಡಿದೆ. ಮಾರ್ಚ್​ 1ರಂದು ನಡೆಯುವ ಪ್ರಶಸ್ತಿ ಕಾಳಗದಲ್ಲಿ ಪುಣೇರಿ ಪಲ್ಟನ್‌(Puneri Paltan) ಮತ್ತು ಇದೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದ ಹರ್ಯಾಣ ಸ್ಟೀಲರ್ಸ್(Haryana Steelers) ಸೆಣಸಾಡಲಿದೆ.

ಬುಧವಾರ ಇಲ್ಲಿನ ಗಚ್ಚಿಬೌಲಿಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿ ಫೈನಲ್​ ಪಂದ್ಯದಲ್ಲಿ ಆಡಲಿಳಿದ ಪುಣೇರಿ ಪಲ್ಟನ್‌ ತಂಡ ಪಾಟ್ನಾ ಪೈರೇಟ್ಸ್‌(Patna Pirates) ತಂಡವನ್ನು 37-21 ಅಂಕಗಳ ಅಂತರದಿಂದ ಮಣಿಸಿ ಸತತ 2ನೇ ಬಾರಿಗೆ ಫೈನಲ್​ ಪ್ರವೇಶಿಸಿದ ಸಾಧನೆ ಮಾಡಿತು. ದ್ವಿತೀಯ ಸೆಮಿಫೈನಲ್​ನಲ್ಲಿ ಹಾಲಿ ಚಾಂಪಿಯನ್​ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು 31-27 ಅಂತರದಿಂದ ಕೆಡವಿ ಹಾಕಿದ ಹರ್ಯಾಣ ಫೈನಲ್​ ಟಿಕೆಟ್​ ಗಿಟ್ಟಿಸಿಕೊಂಡಿತು.

3 ಬಾರಿ ಪ್ರಶಸ್ತಿ ಗೆದ್ದಿರುವ ಪಾಟ್ನಾ ಈ ಬಾರಿ 5ನೇ ಫೈನಲ್‌ ತವಕದಲ್ಲಿತ್ತು. ಆದರೆ ಸೆಮಿಯಲ್ಲಿ ಸೋತು ನಿರಾಸೆ ಅನುಭವಿಸಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಸೆಮಿಫೈನಲ್​ ತಲುಪಿದ್ದ ಪುಣೇರಿ ಪಲ್ಟನ್‌ ತನ್ನ ಖ್ಯಾತಿಗೆ ತಕ್ಕ ಪ್ರದರ್ಶನ ನೀಡಿ ಗಮನ ಸೆಳೆಯಿತು. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದು ಸೆಮಿ ತಲುಪಿದ್ದ ಜೈಪುರ ತಂಡ ಎಲಿಮಿನೇಟರ್​ ಪಂದ್ಯವಾಡಿ ಬಂದಿದ್ದ ಹರ್ಯಾಣದ ಮುಂದೆ ತನ್ನ ಪ್ರರಾಕ್ರಮ ತೋರ್ಪಡಿಸುವಲ್ಲಿ ಎಡವಿತು. ಚೊಚ್ಚಲ ಫೈನಲ್‌ ಪ್ರವೇಶಿಸಿದ ಹರ್ಯಾಣ ಮೊದಲ ಕಪ್​ಗಾಗಿ ತವಕಿಸುತ್ತಿದೆ.

ಜಿದ್ದಾಜಿದ್ದಿನಿಂದ ಪೈಪೋಟಿ ಕಂಡ ದ್ವಿತೀಯ ಸೆಮಿ ಪಂದ್ಯದಲ್ಲಿ ಮೊದಲ ಅವಧಿಯಲ್ಲಿ ಹರ್ಯಾಣ 18-13 ಅಂಕದ ಮುನ್ನಡೆ ಸಾಧಿಸಿತು. ದ್ವಿತಿಯಾರ್ಧದಲ್ಲಿ ತಿರುಗಿ ಬಿದ್ದ ಜೈಪುರ ಸತತವಾಗಿ ಅಂಕಗಳಿಸಿ ತಿರುಗೇಟು ನೀಡಿತು. ಆದರೆ ಅಂತಿಮ ಮೂರು ನಿಮಿಷದ ಆಟದಲ್ಲಿ ತನ್ನ ತಪ್ಪನ್ನು ತಿದ್ದಿಕೊಂಡು ಎಚ್ಚೆತ್ತುಕೊಂಡ ಹರ್ಯಾಣ ಆಟಗಾರರು ರಕ್ಷಣಾತ್ಮ ಆಟದ ಮೂಲಕ ತಮ್ಮ ಮುನ್ನಡೆಯನ್ನು ಪಂದ್ಯದ ಕೊನೆಯವರೆಗೂ ಕಾಪಾಡಿಕೊಂಡು ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಹರ್ಯಾಣ ಪರ ರೇಡರ್​ ವಿನಯ್​ 11 ಅಂಕ ಕಲೆಹಾಕಿ ಗೆಲುವಿನ ಹೀರೊ ಎನಿಸಿಕೊಂಡರು. ಇವರಿಗೆ ಮತ್ತೊಂದು ತುದಿಯಲ್ಲಿ ಶಿವಂ ಪತಾರೆ(7 ಅಂಕ) ಉತ್ತಮ ಬೆಂಬಲ ನೀಡಿದರು. ಜೈಪುರ ಪರ ಏಕಾಂಗಿಯಾಗಿ ಹೋರಾಟ ನಡೆಸಿದ ಅರ್ಜುನ್​ ದೇಸ್ವಾಲ್​ 14 ಅಂಕ ಗಳಿಸಿದರು. ಆದರೆ ಇವರಿಗೆ ಸಹ ಆಟಗಾರರಿಂದ ಉತ್ತಮ ಸಾಥ್​ ಸಿಗದ ಕಾರಣ ಇವರ ಈ ಆಟ ವ್ಯರ್ಥವಾಯಿತು.

ಇದನ್ನೂ ಓದಿ WPL 2024: ಬಲಿಷ್ಠ ಮುಂಬೈಗೆ ಸೋಲುಣಿಸಿ ಗೆಲುವಿನ ಖಾತೆ ತೆರೆದ ಯುಪಿ ವಾರಿಯರ್ಸ್

ಆಕ್ರಮಣಕಾರಿ ಆಟವಾಡಿದ ಪುಣೇರಿ


ಮೊದಲ ಸೆಮಿ ಪಂದ್ಯವಾದ ಪುಣೇರಿ ಪಲ್ಟನ್‌ ಮತ್ತು ಪಾಟ್ನಾ ಪೈರೇಟ್ಸ್‌ ನಡುವಣ ಪಂದ್ಯ ಮೊದಲಾರ್ಧದ ಅಂತಿಮ 8 ನಿಮಿಷದ ಆಟ ಬಾಕಿ ಇರುವವರೆಗೆ ಜಿದ್ದಾಜಿದ್ದಿನಿಂದ ಕೂಡಿತ್ತು. ಉಭಯ ತಂಡಗಳು ತೀವ್ರ ಪೈಪೋಟಿ ನಡೆಸಿ ಕೇವಲ ಒಂದು ಅಂಕದ ಮುನ್ನಡೆಯೊಂದಿಗೆ ಆಟವಾಡಿತ್ತು. ಆದರೆ, ಇನ್ನೇನು ಮೊದಲ ಅವಧಿಯ ಆಟ ಮುಕ್ತಾಯಗೊಳ್ಳುತ್ತದೆ ಎನ್ನುವಷ್ಟರಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಪುಣೇರಿ ತಂಡದ ಆಟಗಾರರು 20-11 ಅಂತರದ ಅಂಕ ಕಲೆ ಹಾಕಿ 9 ಅಂಕದ ಮುನ್ನಡೆ ಸಾಧಿಸಿದರು.

ದ್ವಿತಿಯಾರ್ಧದಲ್ಲಿಯೂ ಇದೇ ಲಯವನ್ನು ಮುಂದುವರಿಸಿದ ಪುಣೇರಿ ಆಟಗಾರರು ಸತತವಾಗಿ ಅಂಕ ಗಳಿಸಿ ಎದುರಾಳಿ ಆಟಗಾರರಿಗೆ ಇನ್ನಿಲ್ಲದ ಒತ್ತಡ ಹೇರಿದರು. ಆಲ್‌ರೌಂಡರ್ ಅಸ್ಲಾಂ ಮುಸ್ತಫಾ ತಮ್ಮ ಆಲ್​ರೌಂಡರ್​ ಶೋ ನಿಂದ 7 ಪಾಯಿಂಟ್ ಕಲೆ ಹಾಕಿದರು. ಇವರಿಗೆ ರೇಡರ್​ ಪಂಕಜ್​ ಮೋಹಿತ್(7)​ ಮತ್ತು ಮತೋರ್ವ ಆಲ್​ರೌಂಡರ್​ ಮೊಹಮ್ಮದ್ರೇಜಾ ಚಿಯಾನೆಹ್(5) ಅಂಕ ಗಳಿಸಿ ಉತ್ತಮ ಸಾಥ್​ ನೀಡಿದರು.

ಉಳಿದಂತೆ ಮೋಹಿತ್​ ಗೋಯತ್​(4), ​ಅಭಿನೇಶ್ ನಾಡರಾಜನ್(3), ಸಂಕೇತ್ ಸಾವಂತ್(3) ಅಂಕ ಕಲೆ ಹಾಕಿ ತಂಡದ ಗೆಲುವಿನಲ್ಲಿ ತಮ್ಮ ಕೊಡುಗೆ ನೀಡಿದರು. ಪಾಟ್ನಾ ಪರ ತಾರಾ ರೇಡರ್​ಗಳಾದ​ ಸಚಿನ್(5) ಮತ್ತು ಮಂಜಿತ್(4)​​ ಅವರು ಈ ಪಂದ್ಯದಲ್ಲಿ ವೈಫಲ್ಯ ಕಂಡದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

Continue Reading

ಕ್ರೀಡೆ

WPL 2024: ಬಲಿಷ್ಠ ಮುಂಬೈಗೆ ಸೋಲುಣಿಸಿ ಗೆಲುವಿನ ಖಾತೆ ತೆರೆದ ಯುಪಿ ವಾರಿಯರ್ಸ್

ಯುಪಿ ವಾರಿಯರ್ಸ್(UP Warriorz)​ ತಂಡ 2ನೇ ಆವೃತ್ತಿಯ ಡಬ್ಲ್ಯೂಪಿಎಲ್ (WPL 2024) ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಕಂಡಿದೆ.

VISTARANEWS.COM


on

Mumbai Indians Women vs UP Warriorz
Koo

ಬೆಂಗಳೂರು: ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಯುಪಿ ವಾರಿಯರ್ಸ್(UP Warriorz)​ ತಂಡ 2ನೇ ಆವೃತ್ತಿಯ ಡಬ್ಲ್ಯೂಪಿಎಲ್ (WPL 2024) ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಕಂಡಿದೆ. ಬುಧವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್(Mumbai Indians)​ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಈ ಸಾಧನೆಗೈದಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್(Mumbai Indians vs UP Warriorz) ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 161 ರನ್​ ಬಾರಿಸಿತು. ಜವಾಬಿತ್ತ ಯುಪಿ ವಾರಿಯರ್ಸ್16.3​ ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 163 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಇದಕ್ಕೂ ಮುನ್ನ ಆಡಿದ 2 ಪಂದ್ಯಗಳಲ್ಲಿ ಯುಪಿ ಹೀನಾಯ ಸೋಲು ಕಂಡಿತ್ತು.

​ಕಿರಣ್-ಅಲಿಸ್ಸಾ ಉತ್ತಮ ಜತೆಯಾಟ


ಗುರಿ ಬೆನ್ನಟ್ಟಿದ ಯುಪಿ ತಂಡಕ್ಕೆ ನಾಯಕಿ ಅಲಿಸ್ಸಾ ಹೀಲಿ ಮತ್ತು ಹಾರ್ಡ್​ ಹಿಟ್ಟರ್​ ಕಿರಣ್ ನವಗಿರೆ ಉತ್ತಮ ಜತೆಯಾಟದ ಮೂಲಕ ಭರ್ಜರಿ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ 94 ರನ್​ಗಳನ್ನು ರಾಶಿ ಹಾಕಿತು. 6 ಬೌಂಡರಿ ಮತ್ತು 4 ಸಿಕ್ಸರ್​ ಬಾರಿಸಿದ ಕಿರಣ್ ನವಗಿರೆ 57 ರನ್​ ಗಳಿಸಿ ಅಮೆಲಿಯಾ ಕೆರ್​ಗೆ ವಿಕೆಟ್​ ಒಪ್ಪಿಸಿದರು. ಈ ವಿಕೆಟ್​ ಪತನಗೊಂಡು 3 ರನ್​ ಒಟ್ಟುಗೂಡುವಷ್ಟರಲ್ಲಿ ಅಲಿಸ್ಸಾ ಹೀಲಿ ವಿಕೆಟ್​ ಕೂಡ ಉದುರಿತು. ಅವರ ಗಳಿಕೆ 33. ಉಭಯ ಆಟಗಾರ್ತಿಯರ ವಿಕೆಟ್​ ಕಳೆದುಕೊಂಡ ಬಳಿಕ ಆಡಲಿಳಿದ ಗ್ರೇಸ್ ಹ್ಯಾರಿಸ್ ಮತ್ತು ದೀಪ್ತಿ ಶರ್ಮ(ಅಜೇಯ 27) ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಉಭಯ ಆಟಗಾರ್ತಿಯರು ಕೂಡ ಅಜೇಯರಾಗಿ ಉಳಿದರು. ಅಗ್ರೆಸಿವ್​ ಬ್ಯಾಟಿಂಗ್​ ನಡೆಸಿದ ಗ್ರೇಸ್ ಹ್ಯಾರಿಸ್ ಕೇವಲ 17 ಎಸೆತಗಳಿಂದ 38* ರನ್​ ಚಚ್ಚಿದರು. ಮುಂಬೈ ಪರ ಇಸ್ಸಿ ವಾಂಗ್ 2 ವಿಕೆಟ್​ ಪಡೆದರು.

ಇದನ್ನೂ ಓದಿ WPL 2024 : ಆರ್​ಸಿಬಿ ತಂಡಕ್ಕೆ ಸತತ ಎರಡನೇ ಜಯ, ಗುಜರಾತ್​ಗೆ ಹೀನಾಯ ಸೋಲು

ಮ್ಯಾಥ್ಯೂಸ್ ಅರ್ಧಶತಕ ವ್ಯರ್ಥ


ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಮುಂಬೈ ತಂಡಕ್ಕೆ ವೆಸ್ಟ್​ ಇಂಡೀಸ್​ನ ಆಲ್​ರೌಂಡರ್​ ಹೀಲಿ ಮ್ಯಾಥ್ಯೂಸ್​ ಅರ್ಧಶತಕ ಬಾರಿಸಿ ಆಸರೆಯಾದರು. 47 ಎಸೆತ ಎದುರಿಸಿದ ಅವರು 9 ಬೌಂಡರಿ ಮತ್ತು ಒಂದು ಸಿಕ್ಸರ್​ ನೆರವಿನಿಂದ 55 ರನ್​ ಬಾರಿಸಿದರು. ಇವರ ಜತೆಗಾರ್ತಿ ಯಾಸ್ತಿಕಾ ಭಾಟಿಯಾ 26ರನ್​ ಬಾರಿಸಿದರು.

ಹಂಗಾಮಿ ನಾಯಕಿ ನ್ಯಾಟ್‌ ಸ್ಕಿವರ್‌ ಬ್ರಂಟ್‌ ಅವರು ಈ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಆಟ ಪ್ರದರ್ಶಿಸುವಲ್ಲಿ ವಿಫಲರಾದರು. 2 ಬೌಂಡರಿ ಬಾರಿಸಿ 19ರನ್​ಗೆ ಸೀಮಿತರಾದರು. ಆ ಬಳಿಕ ಬಂದ ಅಮೆಲಿಯಾ ಕೆರ್ 23 ರನ್​ ಗಳಿಸಿದರು. ಉಳಿದಂತೆ ಯಾರು ಹೆಚ್ಚುಹೊತ್ತು ಕ್ರೀಸ್​ ಆಕ್ರಮಿಸಲು ಯಶಸ್ಸು ಕಾಣಲಿಲ್ಲ. ತಂಡದ ಖಾಯಂ ನಾಯಕಿ ಹರ್ಮನ್​ಪ್ರೀತ್​ ಕೌರ್​ ಅವರು ಗಾಯದಿಂದಾಗಿ ಈ ಪಂದ್ಯದಿಂದ ಹೊರಗುಳಿದರು. ಯುಪಿ ವಾರಿಯರ್ಸ್ ಪರ ಬೌಲಿಂಗ್​ ಮಾಡಿದ 5 ಮಂದಿಯೂ ತಲಾ ಒಂದೊಂದು ವಿಕೆಟ್​ ಪಡೆದರು.

Continue Reading
Advertisement
r ashwin
ಕ್ರೀಡೆ6 mins ago

R Ashwin: ಧರ್ಮಶಾಲಾ ಟೆಸ್ಟ್​ನಲ್ಲಿ ಆರ್​.ಅಶ್ವಿನ್​ಗೆ ವಿಶೇಷ ಗೌರವ

Karthik Mahesh And Namratha Gowda in wedding dress For Ad Shoot
ಸಿನಿಮಾ28 mins ago

Karthik-Namratha: ಹಸೆಮಣೆ ಮೇಲೆ ಕಾರ್ತಿಕ್‌-ನಮ್ರತಾ: ಸಂಗೀತಾಗೆ `ಕರಿಮಣಿ ಮಾಲೀಕ’ ಯಾರು?

WPL 2024
ಕ್ರಿಕೆಟ್28 mins ago

WPL 2024 Points Table: ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

Shahjahan-Sheikh
ದೇಶ33 mins ago

Sandeshkhali Violence: ಲೈಂಗಿಕ ದೌರ್ಜನ್ಯ ಆರೋಪಿ, ಟಿಎಂಸಿ ನಾಯಕ ಷಹಜಹಾನ್‌ ಶೇಖ್‌ ಬಂಧನ

Doctor listens to the human lungs
ಆರೋಗ್ಯ59 mins ago

Health Tips For Lungs: ಈ ಆಹಾರ ತಿನ್ನಿ, ನಿಮ್ಮ ಶ್ವಾಸಕೋಶದ ಆರೋಗ್ಯ ಹೆಚ್ಚಿಸಿಕೊಳ್ಳಿ

kannada sign boards
ಪ್ರಮುಖ ಸುದ್ದಿ1 hour ago

ಕನ್ನಡ ನಾಮಫಲಕ ಅಳವಡಿಕೆಗೆ ಇಂದೇ ಕೊನೆಯ ದಿನ, ಇಲ್ಲದಿದ್ದರೆ ಬೀಗ ಖಚಿತ

graveyard
ಪ್ರಮುಖ ಸುದ್ದಿ1 hour ago

ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

KAS Recruitment 2024 invited for 384 KAS posts Apply from March 4
ಉದ್ಯೋಗ1 hour ago

KAS Recruitment 2024: 384 ಕೆಎಎಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾರ್ಚ್‌ 4ರಿಂದಲೇ ಅರ್ಜಿ ಸಲ್ಲಿಸಿ

Raja Marga Column depressed
ಸ್ಫೂರ್ತಿ ಕತೆ2 hours ago

Raja Marga Column : ಅಪವಾದ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ; ಗೆಲ್ಲೋದು ಹೇಗೆ?

slim woman good health digestion
ಆರೋಗ್ಯ2 hours ago

Health Tips For Digestion: ಹೊಟ್ಟೆಬಿರಿಯುವಂತೆ ಉಂಡ ಬಳಿಕ ಜೀರ್ಣಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸರಳೋಪಾಯ!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ4 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ2 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ3 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌