Site icon Vistara News

Vistara Top10 News : ಗಣರಾಜ್ಯೋತ್ಸವಕ್ಕೆ ರಾಜ್ಯದ ಟ್ಯಾಬ್ಲೋ ಇಲ್ಲ, ಭ್ರಷ್ಟರ ಮೇಲೆ ಲೋಕಾ ದಾಳಿ ಇತ್ಯಾದಿ ದಿನದ ಪ್ರಮುಖ ಸುದ್ದಿಗಳು

top 10 news

1. Karnataka Tableau: ಈ ಸಲ ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದ ಟ್ಯಾಬ್ಲೋ ಇಲ್ಲ, ನಾಲ್ಕೂ ಮಾದರಿ ರಿಜೆಕ್ಟ್!‌
ಗಳೂರು: ಈ ಬಾರಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ (Republic Day parade) ರಾಜ್ಯದ ಯಾವುದೇ ಸ್ತಬ್ಧಚಿತ್ರಕ್ಕೆ (Karnataka Tableau) ಅವಕಾಶ ಸಿಕ್ಕಿಲ್ಲ. ರಾಜ್ಯ ಸರ್ಕಾರದ ವಾರ್ತಾ ಇಲಾಖೆ‌ ಕಳುಹಿಸಿದ್ದ ಸ್ತಬ್ಧ ಚಿತ್ರಗಳ ನಾಲ್ಕು ಮಾದರಿಗೂ ಪ್ರದರ್ಶನಕ್ಕೆ ಅನುಮತಿ ದೊರೆತಿಲ್ಲ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Republic Day 2024: ರಾಜ್ಯದ ಸ್ತಬ್ಧಚಿತ್ರ ನಿರಾಕರಿಸಿ ಕನ್ನಡಿಗರಿಗೆ ಅಪಮಾನ; ಕೇಂದ್ರದ ವಿರುದ್ಧ ಸಿಎಂ ಟೀಕೆ

2. ಆರು ಭ್ರಷ್ಟರ ಮೇಲೆ ಲೋಕಾ ದಾಳಿ ; ಕೋಟಿ ಕೋಟಿ ಹಣ, ದುಬಾರಿ ಮದ್ಯ ವಶ!
ಬೆಂಗಳೂರು: ರಾಜ್ಯದ ಆರು ಅಧಿಕಾರಿಗಳ ಮೇಲೆ (Six corrupt officers) ಮಂಗಳವಾರ ಲೋಕಾಯುಕ್ತ ಮುಗಿಬಿದ್ದಿದೆ (Lokayukta Raid). ರಾಜ್ಯಾದ್ಯಂತ ಸುಮಾರು 30 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ (Lokayukta officers) ಮಾಡಿದ್ದು, ಕೋಟ್ಯಂತರ ರೂ. ನಗದು, ರಾಶಿ ರಾಶಿ ಚಿನ್ನಾಭರಣ ಮತ್ತು ದುಬಾರಿ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು, ಬಳ್ಳಾರಿ,‌ ಚಿತ್ರದುರ್ಗ, ರಾಮನಗರ, ಬೆಂಗಳೂರಿನಲ್ಲಿ ಈ ದಾಳಿಗಳು ನಡೆದಿವೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

3. ಅಧ್ಯಕ್ಷ ಮುಯಿಜುವನ್ನು ವಜಾಗೊಳಿಸಿ; ಮೋದಿಗೆ ಮಾಲ್ಡೀವ್ಸ್‌ ಪ್ರತಿಪಕ್ಷಗಳಿಂದಲೂ ಬೆಂಬಲ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಲ್ಡೀವ್ಸ್‌ನಲ್ಲಿಯೇ ಟೀಕೆಗಳು ವ್ಯಕ್ತವಾಗುತ್ತಿವೆ. ಭಾರತ ಹಾಗೂ ಮೋದಿ ಅವರ ಬಗ್ಗೆ ಮಾಲ್ಡೀವ್ಸ್‌ ಸಚಿವರು ಹೀಗೆ ಹೇಳಬಾರದಿತ್ತು ಎಂದು ಮಾಲ್ಡೀವ್ಸ್‌ ಪ್ರವಾಸೋದ್ಯಮ ಸಂಘವು (Maldives Association of Tourism Industry-MATI) ಅಸಮಾಧಾನ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ, ಮಾಲ್ಡೀವ್ಸ್‌ ಪ್ರತಿಪಕ್ಷ ನಾಯಕರು ಕೂಡ ಅಧ್ಯಕ್ಷ ಮೊಹಮ್ಮದ್‌ ಮುಯಿಜು (Mohamed Muizzu) ಅವರನ್ನು ವಜಾಗೊಳಿಸಬೇಕು, ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುವ ಮೂಲಕ ಭಾರತ ಹಾಗೂ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಇದನ್ನೂ ಓದಿ : ಹೆಚ್ಚಿನ ಪ್ರವಾಸಿಗರನ್ನು ದೇಶಕ್ಕೆ ಕಳುಹಿಸಿ; ಭಾರತ ಪೆಟ್ಟಿನ ಬೆನ್ನಲ್ಲೇ ಚೀನಾಗೆ ಮಾಲ್ಡೀವ್ಸ್‌ ಮನವಿ
ಇದನ್ನೂ ಓದಿ : Boycott Maldives : ಬಂಡುಕೋರರಿಂದ ಮಾಲ್ಡೀವ್ಸ್​​ಅನ್ನು ರಕ್ಷಿಸಿದ್ದೇ ಭಾರತ; ಅದು ಆಪರೇಷನ್‌ ಕ್ಯಾಕ್ಟಸ್‌!
ಇದನ್ನೂ ಓದಿ : ಮೋದಿ ಭೇಟಿ, ವಿವಾದ ಬಳಿಕ ಲಕ್ಷದ್ವೀಪಕ್ಕೆ ಶುಕ್ರದೆಸೆ; ಶೀಘ್ರವೇ ಹೊಸ ಏರ್‌ಪೋರ್ಟ್‌ ನಿರ್ಮಾಣ

4. ರಾಜ್ಯದಲ್ಲಿಂದು 252 ಮಂದಿಗೆ ಕೊರೊನಾ ಸೋಂಕು, ಇಬ್ಬರ ಸಾವು
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 252 ಕೊರೊನಾ ಪ್ರಕರಣಗಳು (coronavirus News) ಪತ್ತೆಯಾಗಿವೆ. ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದು, ಗುಣಮುಖರಾಗಿ 441 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1031ಕ್ಕೆ ಏರಿಕೆಯಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

5. : ಮಗುವನ್ನೇ ಕೊಂದ ಬುದ್ಧಿವಂತೆ; ಭೀಕರ ಕ್ರೌರ್ಯದ ಬೆಚ್ಚಿಬೀಳಿಸುವ ಕಥೆ!
ಬೆಂಗಳೂರು: ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ನಾಲ್ಕು ವರ್ಷದ ಮಗುವನ್ನು ಕೊಂದು ಹಾಕಿದ ಧೂರ್ತ ಮಹಿಳೆ ಸುಚನಾ ಸೇಠ್‌ (39) ವಿದ್ಯಾವಂತರೆಲ್ಲರೂ ವಿವೇಕಿಗಳಾಗಿರಬೇಕಾಗಿಲ್ಲ ಎಂಬ ಮಾತಿಗೆ ಅತ್ಯಂತ ಸೂಕ್ತ ನಿದರ್ಶನ. ಜಗತ್ತಿನ ಅತ್ಯಂತ ನವೀನ ಜ್ಞಾನಶಾಖೆಯಾಗಿರುವ ಕೃತಕ ಬುದ್ಧಿಮತ್ತೆಯನ್ನು (Artificial Intelligence) ಅರೆದು ಕುಡಿದಂತಿರುವ ಸುಚನಾ ಸೇಠ್‌ಳ (Suchana Seth) ಬುದ್ಧಿಯೇ ನೆಟ್ಟಗಿರಲಿಲ್ಲ! ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

6. ಹಿಂದುಗಳೇ 1-2 ಮಕ್ಕಳು ಮಾಡ್ಕೊಂಡ್ರೆ ಸಾಕಾಗಲ್ಲ; ಶಾಸಕ ಹರೀಶ್‌ ಪೂಂಜಾ ಎಚ್ಚರಿಕೆ!
ಮಂಗಳೂರು: ಹಿಂದೂಗಳು ಒಂದೋ ಎರಡೋ ಮಕ್ಕಳು ಮಾಡ್ಕೊಂಡ್ರೆ ಆಗಲ್ಲ, ಹೀಗಾದ್ರೆ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ (Muslim Population) ಹಿಂದೂಗಳನ್ನು ಮೀರಿಸಲಿದೆ (Hindu population) ಎಂದು ಎಚ್ಚರಿಕೆ ನೀಡಿದ್ದಾರೆ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್‌ ಪೂಂಜಾ (BJP MLA Harish Poonja). ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತುಳುವಿನಲ್ಲಿ ಮಾತನಾಡಿದ ಅವರು ಹಿಂದೂ ಮುಸ್ಲಿಂ ಜನಸಂಖ್ಯೆಯನ್ನು ಹೋಲಿಸಿ ಅಪಾಯದ ಕರೆಗಂಟೆ ಬಾರಿಸಿದ್ದಲ್ಲದೆ, ಸಲಹೆಯನ್ನೂ ನೀಡಿದರು! ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

7. ಆವೋಗೆ ಜಬ್‌ ತುಮ್‌’ ಖ್ಯಾತಿಯ ಸಂಗೀತ ಮಾಂತ್ರಿಕ ರಶೀದ್‌ ಖಾನ್‌ ಇನ್ನಿಲ್ಲ
ಕೋಲ್ಕೊತಾ: ಸಂಗೀತ ಮಾಂತ್ರಿಕ, ಶಾಸ್ತ್ರೀಯ ಸಂಗೀತದಲ್ಲಿ ಮೇರು ಸಾಧನೆಗೈದ, ‘ಆವೋಗೆ ಜಬ್‌ ತುಮ್‌’ ಹಾಡಿನ ಖ್ಯಾತಿಯ ಉಸ್ತಾದ್‌ ರಶೀದ್‌ ಖಾನ್‌ (Ustad Rashid Khan) ಅವರು ನಿಧನರಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು (55) ಕೋಲ್ಕೊತಾದ ಟಾಟಾ ಮೆಮೋರಿಯಲ್‌ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ (Tata Memorial Cancer Hospital) ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ (ಜನವರಿ 9) ಮೃತಪಟ್ಟಿದ್ದಾರೆ. ಆಸ್ಪತ್ರೆ ವೈದ್ಯರು ಇವರ ಸಾವಿನ ಕುರಿತು ಮಾಹಿತಿ ನೀಡಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

8. ನೀವು ಖರೀದಿಸಿದ ಬಾಟಲಿ ನೀರು ಶುದ್ಧವೇ? ಇಲ್ಲ ವಿಷಕಾರಿ ಪ್ಲಾಸ್ಟಿಕ್​ ಉಂಟು!
ಬೆಂಗಳೂರು: ಬಾಟಲಿಗಳಲ್ಲಿ ದೊರೆಯುವ ಕುಡಿಯುವ ನೀರಿನಲ್ಲಿ (Drinking Water) ಶುದ್ಧತೆ ಇಲ್ಲದಿರುವುದು ಆತಂಕಕಾರಿ ವಿಷಯ. ನೀರು ಚೆನ್ನಾಗಿಲ್ಲದ ಕಾರಣ ಆರೋಗ್ಯ ಹದಗೆಡುತ್ತಿದೆ ಎಂಬ ವಾದ ಬಲಗೊಳ್ಳುತ್ತಿರುವ ನಡುವೆ ನಾವು ದುಡ್ಡು ಕೊಟ್ಟು ಕುಡಿಯುವ ನೀರಿನ ಬಗ್ಗೆ ನಡೆದ ಸಂಶೋಧನೆಯೊಂದು ಆಘಾತಕಾರಿ ಮಾಹಿತಿಯೊಂದನ್ನು (Shocking News) ಬಹಿರಂಗ ಮಾಡಿದೆ. ನಾವು ಸೇವಿಸುವ ಒಂದು ಲೀಟರ್ ನೀರಿನಲ್ಲಿ ಸರಾಸರಿ 2,40,000 ನ್ಯಾನೊ ಪ್ಲಾಸ್ಟಿಕ್ ಕಣಗಳಿರುತ್ತವೆ ಎಂದು ಅಧ್ಯಯನ ತಿಳಿಸಿದೆ. ಆ ತುಣುಕುಗಳಲ್ಲಿ ಅನೇಕವು ಪತ್ತೆಯಾಗಿಲ್ಲ ಎಂಬುದಾಗಿಯೂ ಸಂಶೋಧಕರು ಹೇಳಿದ್ದಾರೆ. ಪ್ಲಾಸ್ಟಿಕ್ ಮಾಲಿನ್ಯದಿಂದಾಗಿ ನಮ್ಮ ನೀರು ಕಲುಷಿತಗೊಳ್ಳುತ್ತಿದೆ ಎಂಬುದು ಸಂಶೋಧಕರ ಅಭಿಪ್ರಾಯ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

9. ವಿಶೇಷ ದಾಖಲೆಯ ಹೊಸ್ತಿಲಲ್ಲಿ ರೋಹಿತ್​; ಬೇಕಿದೆ 18 ಸಿಕ್ಸರ್​
ಬೆಂಗಳೂರು: ಅಫಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ತವರಿನ ಟಿ20 ಸರಣಿ ಜನವರಿ 11ರಿಂದ ಆರಂಭಗೊಳ್ಳಲಿದೆ. ಟೀಮ್ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ವಿಶೇಷ ಮೈಲಿಗಲ್ಲು ನಿರ್ಮಿಸುವ ಸನಿಹದಲ್ಲಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

10. ರಾಮ ಮಂದಿರಕ್ಕಾಗಿ 30 ವರ್ಷಗಳಿಂದ ಮೌನ ವ್ರತ! ಜ.22ರಂದು ಮಾತನಾಡಲಿದ್ದಾಳೆ ಈ ಶಬರಿ!
ಬೆಂಗಳೂರು: ರಾಮಮಂದಿರ ನಿರ್ಮಾಣಗೊಳ್ಳುವ ಮೂಲಕ ಭಾರತದ ಬಹುಸಂಖ್ಯಾತ ಹಿಂದೂಗಳ ಶತಮಾನಗಳ ಕನಸು ನನಸಾಗಲಿದೆ. ಹೀಗಾಗಿ ಈ ಕ್ಷಣ ಪ್ರತಿಯೊಬ್ಬ ಹಿಂದೂವಿಗೆ ವಿಶೇಷ. ವಿಶಾಲ ಭಾರತದ ನಾನಾ ಪ್ರದೇಶದ ಜನರಿಗೆ ಬೇರೆಬೇರೆ ಕಾರಣಕ್ಕೆ ಅಯೋಧ್ಯೆಯ ಬಾಲರಾಮ ಮತ್ತು ಆತನ ಮಂದಿರ ಪ್ರಮುಖ ಎನಿಸಿಕೊಳ್ಳಲಿದೆ. ಅಂತೆಯೇ ರಾಮನ ಪ್ರಾಣಪ್ರತಿಷ್ಠೆಯಾಗುವ ದಿನ ಜಾರ್ಖಂಡ್​ನ ಮಾತೆಯೊಬ್ಬರಿಗೆ ತಮ್ಮದೇ ಆದ ಕಾರಣಕ್ಕೆ ಮಹತ್ವದ್ದಾಗಿದೆ. ಹೇಗೆಂದರೆ ರಾಮ ಮಂದಿರ ನಿರ್ಮಾಣಗೊಳ್ಳುವ ತನಕ ಮಾತನಾಡುವುದಿಲ್ಲ ಎಂದು ಕಳೆದ 30 ವರ್ಷಗಳಿಂದ ಮೌನವ್ರತ ಕೈಗೊಂಡಿರುವ ಅವರು ಜ.22ರಂದು ತಮ್ಮ ಶಪಥ ಪೂರೈಸಲಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version