Site icon Vistara News

Novak Djokovic: ಟವೆಲ್​ನಿಂದ ಮೈದಾನ ಒಣಗಿಸಿದ ನೊವಾಕ್‌ ಜೊಕೋವಿಕ್‌

novak djokovic in wimbledon court

ಲಂಡನ್​: ಸರ್ಬಿಯಾದ ಗ್ರ್ಯಾನ್‌ಸ್ಲಾಮ್‌ ಸರದಾರ ನೊವಾಕ್‌ ಜೊಕೋವಿಕ್‌(Novak Djokovic) ಅವರು ಪ್ರತಿಷ್ಠಿತ ವಿಂಬಲ್ಡನ್(Wimbledon 2023)​ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಆದರೆ ಮೊದಲ ಸುತ್ತಿನ ಪಂದ್ಯದ ವೇಳೆ ಅವರು ಮಳೆ ನೀರನ್ನು ಟವೆಲ್​ನಿಂದ ಒರೆಸಿದ ಫೋಟೊವೊಂದು ಇದೀಗ ವೈರಲ್(viral)​ ಆಗಿದೆ.​ ಫೋರ್ಬ್ಸ್ ಇಂಡಿಯಾ ಈ ಫೋಟೊವನ್ನು ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ.

ಆರ್ಜೆಂಟೀನಾದ ಪೆಡ್ರೊ ಕ್ಯಾಶಿನ್‌ ವಿರುದ್ಧದ ಮೊದಲ ಪಂದ್ಯದಲ್ಲಿ ನೊವಾಕ್‌ ಜೊಕೋವಿಕ್‌ ಆಡುತ್ತಿದ್ದ ಈ ವೇಳೆ ಮಳೆ ಬಂದಿದೆ. ಮಳೆಯ ನೀರನ್ನು ಅವರು ಟವೆಲ್​ನಿಂದ ಓರೆಸುವು ಮೂಲಕ ಮೈದಾನದ ನೀರನ್ನು ಒಣಗಿಸಲು ಯತ್ನಿಸಿದ್ದಾರೆ. ಈ ಫೋಟೊವನ್ನು ಹಂಚಿಕೊಂಡ ಫೋರ್ಬ್ಸ್ ಇಂಡಿಯಾ ಮಳೆಯ ಮಧ್ಯೆಯೂ ಜೋಕೊ ಅವರ ತಮಾಷೆ ಎಂದು ಬರೆದುಕೊಂಡಿದೆ.

ಇದನ್ನೂ ಓದಿ French Open 2023: ಇಂದಿನಿಂದ ಫ್ರೆಂಚ್‌ ಓಪನ್‌; ನಡಾಲ್‌ ದಾಖಲೆ ಮುರಿಯುವ ವಿಶ್ವಾಸದಲ್ಲಿ ಜೋಕೊ

ಇತ್ತೀಚೆಗಷ್ಟೇ ಜೋಕೊ ಫ್ರೆಂಚ್​ ಓಪನ್​ ಕಿರೀಟ ಗೆದ್ದು ದಾಖಲೆಯ 23 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದು ನೂತನ ಮೈಲುಗಲ್ಲು ನೆಟ್ಟಿದ್ದರು. ಇದೀಗ ತಮ್ಮ ಪ್ರಶಸ್ತಿ ಸಂಖ್ಯೆಯನ್ನು 24ಕ್ಕೆ ವಿಸ್ತರಿಸುವ ಆತ್ಮವಿಶ್ವಾಸದಲ್ಲಿದ್ದಾರೆ. ಮೂರನೇ ಸುತ್ತಿಗೇರಿದ ಅವರು ಈ ಟೂರ್ನಿಯಲ್ಲಿಯೂ ಗೆದ್ದರೆ ಇನ್ನೊಂದು ನೂತನ ದಾಖಲೆ ಬರೆಯಲಿದ್ದಾರೆ. ಅತಿ ಹೆಚ್ಚು 24 ಗ್ರ್ಯಾನ್‌ಸ್ಲಾಮ್‌ ಗೆದ್ದ ಸಾಧಕಿ ಮಾರ್ಗರೇಟ್‌ ಕೋರ್ಟ್‌ ಅವರ ಸಾರ್ವಕಾಲಿಕ ದಾಖಲೆಯನ್ನು ಸರಿದೂಗಿಸಲಿದ್ದಾರೆ. ಜೊಕೋವಿಕ್‌ 2011ರಿಂದ ಈವರೆಗೆ 7 ವಿಂಬಲ್ಡನ್‌ ಟ್ರೋಫಿಗಳನ್ನು ಗೆದ್ದಿದ್ದಾರೆ.

ಕೋವಿಡ್​ ಲಸಿಕೆಗೆ ಸಡ್ಡು ಹೊಡೆದಿದ್ದ ಜೋಕೊ

ಕಳೆದ ವರ್ಷ ಕೋವಿಡ್‌ ಲಸಿಕೆ ತೆಗೆದು ಕೊಳ್ಳಲಿಲ್ಲ ಎಂಬ ಕಾರಣಕ್ಕೆ ಜೊಕೋಗೆ ಆಸ್ಟ್ರೇಲಿಯಕ್ಕೆ ಆಗಮಿಸದಂತೆ ನಿಷೇಧ ಹೇರಲಾಗಿತ್ತು. ಹೀಗಾಗಿ ಅವರು 2022 ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯಲ್ಲಿ ಆಡಲಾಗದೆ ವಾಪಸಾಗಿದ್ದರು. ಆದರೆ ಅದೇ ವರ್ಷದ ನವೆಂಬರ್‌ನಲ್ಲಿ ಅವರ ನಿಷೇಧವನ್ನು ತೆರವುಗೊಳಿಸಲಾಗಿತ್ತು. ಅಚ್ಚರಿ ಎಂದರೆ ನಿಷೇಧ ಮುಕ್ತರಾಗಿ ಕಣಕ್ಕಿಳಿದ ಜೋಕೊ ಅವರು ಚಾಂಪಿಯನ್​ ಪಟ್ಟ ಕೂಡ ಅಲಂಕರಿಸಿದ್ದರು.

Exit mobile version