ಕೇಪ್ಔಟ್ (ದಕ್ಷಿಣ ಆಫ್ರಿಕಾ): ಇಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ವಿಶ್ವ ಕಪ್ (Women’s T20 World Cup) ಟೂರ್ನಿಯಲ್ಲಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳೆಯರ ತಂಡದ ವಿರುದ್ಧ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ವಿಶೇಷ ಸಾಧನೆಯೊಂದನ್ನು ಮಾಡಿದೆ. ಪಾಕ್ ಮಹಿಳೆಯರ ಬಳಗ ಭಾನುವಾರ (ಫೆಬ್ರವರಿ 12ರಂದು) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 149 ರನ್ ಬಾರಿಸಿದೆ. ಇದು ಟೀಮ್ ಇಂಡಿಯಾ ವಿರುದ್ಧ ಪಾಕ್ ಮಹಿಳೆಯರ ಬಳಗ ಟಿ20 ಮಾದರಿಯಲ್ಲಿ ಕಲೆಹಾಕಿದ ಗರಿಷ್ಠ ಮೊತ್ತವಾಗಿದೆ.
ನ್ಯೂಲ್ಯಾಂಡ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮಹಿಳೆಯರ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಬೌಲರ್ಗಳು ಉತ್ತಮ ಬೌಲಿಂಗ್ ಸಂಘಟಿಸಿ 68 ರನ್ಗಳಿಗೆ ಎದುರಾಳಿ ತಂಡದ ನಾಲ್ಕು ವಿಕೆಟ್ ಕಬಳಿಸಿದ್ದರು. ಆದರೆ, ಬಳಿಕ ಕ್ರೀಸ್ಗಂಟಿಕೊಂಡು ಆಡಿದ ನಾಯಕಿ ಬಿಸ್ಮಾ ಮರೂಫ್ (68) ಅರ್ಧ ಶತಕ ಬಾರಿಸಿದರೆ ಆಯೇಷಾ ನಸೀಮ್ (43) ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಕಾರಣರಾದರು. ಈ ಜೋಡಿ ಐದನೇ ವಿಕೆಟ್ಗೆ 81 ರನ್ ಬಾರಿಸಿತು.
ಇದನ್ನೂ ಓದಿ : Women’s T20 World Cup : ವಿಶ್ವ ಕಪ್ ಗೆದ್ದರೆ ಭಾರತ ಮಹಿಳೆಯರ ಕ್ರಿಕೆಟ್ ತಂಡದ ಭವಿಷ್ಯವೇ ಬದಲಾಗುವುದು
2022ರಲ್ಲಿ ಅಕ್ಟೋಬರ್ನಲ್ಲಿ ಬಾಂಗ್ಲಾದೇಶದ ಸಿಲ್ಹಟ್ನಲ್ಲಿ ನಡೆದ ಟಿ20 ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತ ವಿರುದ್ಧ 6 ವಿಕೆಟ್ಗಳ ನಷ್ಟಕ್ಕೆ 137 ರನ್ ಬಾರಿಸಿತ್ತು. ಇದು ಈ ಮಾದರಿಯಲ್ಲಿ ಭಾರತ ತಂಡದ ವಿರುದ್ಧ ನೆರೆಯ ದೇಶದ ತಂಡದ ಗರಿಷ್ಠ ಮೊತ್ತವಾಗಿತ್ತು.