Site icon Vistara News

ICC World Cup 2023 : ಹಿಂದೂ ವಿರೋಧಿ ಹೇಳಿಕೆ; ಪಾಕ್​ನ ಸುಂದರಿ ಆ್ಯಂಕರ್​ಳನ್ನು ಒದ್ದೋಡಿಸಿದ ಭಾರತ

Zainab Abbas

ಬೆಂಗಳೂರು: ಪಾಕಿಸ್ತಾನದ ಟಿವಿ ನಿರೂಪಕಿ ಝೈನಬ್ ಅಬ್ಬಾಸ್ ಅವರನ್ನು ಭಾರತದಿಂದ ಗಡೀಪಾರು ಮಾಡಲಾಗಿದೆ ಎಂದು ವರದಿಯಾಗಿದೆ. ಪರಿಣಾಮವಾಗಿ ಅವರು ನಡೆಯುತ್ತಿರುವ ಐಸಿಸಿ ವಿಶ್ವಕಪ್ (ICC World Cup 2023) ಅನ್ನು ಕವರ್ ಮಾಡಲು ಸಾಧ್ಯವಾಗುವುದಿಲ್ಲ. ಅವರು ಈ ಹಿಂದೆ ಮಾಡಿದ್ದ ಭಾರತದ ವಿರುದ್ಧ ಮತ್ತು ಹಿಂದೂ ವಿರೋಧಿ ಹೇಳಿಕೆಗಳು ಮನ್ನೆಲೆಗೆ ಬಂದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಪಾಕಿಸ್ತಾನದ ಟಿವಿ ಸುಂದರಿಯನ್ನು ಭಾರತದಿಂದ ಗಡೀಪಾರು ಮಾಡಲಾಗಿದ್ದು, ಪ್ರಸ್ತುತ ದುಬೈನಲ್ಲಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದ ಹಲವು ಕ್ರೀಡಾ ನಿರೂಪಕರನ್ನು ಐಸಿಸಿ ನಿರೂಪಕರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ ಝೈನಬ್​ ಹಳೆಯ ಹಿಂದೂ ವಿರೋಧಿ ಹೇಳಿಕೆಗಳು ವಿವಾದವನ್ನು ಹುಟ್ಟುಹಾಕಿವೆ. ಕೆಲವು ದಿನಗಳ ಹಿಂದೆ ಎಕ್ಸ್ (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ಹೇಳಿಕೆ ನೀಡಿದ್ದರು ಎಂಬುದಾಗಿ ಅವರ ವಿರುದ್ಧ ಸೈಬರ್​ ದೂರು ದಾಖಲಾಗಿತ್ತು.

ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ಅವರು ಪಾಕಿಸ್ತಾನದ ನಿರೂಪಕಿಯವ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ವರದಿಯನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.

ಹಿಂದೂ ನಂಬಿಕೆ ಮತ್ತು ನಂಬಿಕೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮತ್ತು ಭಾರತ ವಿರೋಧಿ ಹೇಳಿಕೆಗಳಿಗಾಗಿ ಸೆಕ್ಷನ್ 153 ಎ, 295, 506, 121 ಐಪಿಸಿ ಮತ್ತು ಸೆಕ್ಷನ್ 67 ಐಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸುವಂತೆ ಕೋರಿ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ವಿಜೀತ್​ ಜಿಂದಾಲ್​ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಝೈನಬ್​ ಅವರನ್ನು ಐಸಿಸಿ ವಿಶ್ವಕಪ್​ ನಿರೂಪಕರ ಪಟ್ಟಿಯಿಂದ ತೆಗೆದುಹಾಕಬೇಕು. ಭಾರತ ವಿರೋಧಿ ಜನರಿಗೆ ಭಾರತದಲ್ಲಿ ಸ್ವಾಗತವಿಲ್ಲ. ಜಿಂದಾಲ್​​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ : ICC World Cup 2023 : ಕ್ರಿಕೆಟ್​ ವಿಶ್ವ ಕಪ್​ನಿಂದ ದಕ್ಷಿಣ ಆಫ್ರಿಕಾ ತಂಡ ಬ್ಯಾನ್​

ಸುಮಾರು 9 ವರ್ಷಗಳಷ್ಟು ಹಿಂದೆ ಝೈನ್​ಬ್ಲೊವ್ಸ್​ಆರ್​ಕೆ ಎಂಬ ಖಾತೆಯಿಂದ ಭಾರತ ಹಾಗೂ ಹಿಂದೂ ವಿರೋಧಿ ಟ್ವೀಟ್​ಗಳನ್ನು ಮಾಡಲಾಗಿತ್ತು. ಆ ಖಾತೆಯನ್ನು ಈಗ ಝೈನಬ್ ಅವರ ಬದಲಾಯಿಸಲಾಗಿದೆ ಎಂದು ವಿನೀತ್ ಜಿಂದಾಲ್ ಆರೋಪಿಸಿದ್ದಾರೆ. ದೂರಿನ ಆಧಾರದಲ್ಲಿ ಪ್ರಸ್ತುತ ನಡೆಯುತ್ತಿರುವ ಐಸಿಸಿ ವಿಶ್ವಕಪ್ 2023 ಆ್ಯಂಕರ್​ಗಳ ಪಟ್ಟಿಯಿಂದ ಝೈನಬ್ ಅಬ್ಬಾಸ್ ಅವರನ್ನು ವಾಪಸ್ ಕಳುಹಿಸಲಾಗಿದೆ.

ವಿಶ್ವಕಪ್ ಗಾಗಿ ಭಾರತಕ್ಕೆ ಪ್ರಯಾಣಿಸುವ ಮೊದಲು ಝೈನಬ್​ ಅಬ್ಬಾಸ್​ ಹೀಗೆ ಬರೆದಿದ್ದರು. ಇನ್ನೊಂದು ಬದಿಯಲ್ಲಿ ಏನಿದೆ? ವ್ಯತ್ಯಾಸಗಳಿಗಿಂತ ಹೆಚ್ಚು ಸಾಂಸ್ಕೃತಿಕ ಹೋಲಿಕೆಗಳಿವೆ. ಮೈದಾನದಲ್ಲಿ ಪ್ರತಿಸ್ಪರ್ಧಿಗಳು, ಆದರೆ ಮೈದಾನದ ಹೊರಗೆ ಸ್ನೇಹಪರತೆ, ಅದೇ ಭಾಷೆ ಮತ್ತು ಕಲೆಯ ಮೇಲಿನ ಪ್ರೀತಿ ಮತ್ತು ಶತಕೋಟಿ ಜನರನ್ನು ಹೊಂದಿರುವ ದೇಶವದು. ಅಲ್ಲಿ ಪ್ರತಿನಿಧಿಸಲು, ಪರಿಣತಿಯನ್ನು ಹೊಂದಲು ವಿಶ್ವಕಪ್ 2023ರಲ್ಲಿ ಭಾರತದಲ್ಲಿ ಪ್ರಸ್ತುತಪಡಿಸಲು ವಿನಮ್ರನಾಗಿದ್ದೇನೆ. 6 ವಾರಗಳ ಮನೆಯಿಂದ ದೂರ ಪ್ರಯಾಣ ಈಗ ಪ್ರಾರಂಭವಾಗಿದೆ ಎಂದು ಝೈನಬ್​ ಹೇಳಿದ್ದರು. ಈ ಮೂಲಕ ಅವರು ಭಾರತಕ್ಕೆ ಬರುವ ಸೂಚನೆ ಕೊಟ್ಟಿದ್ದರು. ಆದರೆ, ಪ್ರಸ್ತುತ ಅವರು ಯಾವುದೇ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಅವರ ಗಡಿಪಾರಿನ ಸುದ್ದಿ ಬಹುತೇಕ ಸತ್ಯ ಎಂದು ಹೇಳಲಾಗಿದೆ.

Exit mobile version