ಪ್ಯಾರಿಸ್: ಒಲಿಂಪಿಕ್ಸ್ನಲ್ಲಿ(Paris Olympics 2024) ಪದಕ ಸ್ಪರ್ಧೆಗಳು ಇಂದಿನಿಂದ(ಶನಿವಾರ) ಆರಂಭವಾಗಲಿದೆ. ಭಾರತ ಇಂದು ಹಲವು ವಿಭಾಗದ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿವೆ. ಈ ಪೈಕಿ ಶೂಟಿಂಗ್ನಲ್ಲಿ ಭಾರತ ಒಂದು ಪದಕ್ಕೆ ಸ್ಪರ್ಧಿಸಲಿದ್ದು, ಪದಕ ಗೆಲ್ಲುವ ನಿರೀಕ್ಷೆಯೊಂದನ್ನು ಇಡಲಾಗಿದೆ. 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಸಂದೀಪ್ ಸಿಂಗ್-ಇಲವೆನಿಲ್ ವಲರಿವನ್ ಮತ್ತು ಅರ್ಜುನ್ ಬಬುಟ-ರಮಿತಾ ಜಿಂದಾಲ್ ಕಣಕ್ಕಿಳಿಯಲಿದ್ದಾರೆ. ಗೆದ್ದರೆ, ಶೂಟಿಂಗ್ ವಿಭಾಗದಲ್ಲಿ 12 ವರ್ಷಗಳ ಪದಕ ಬರ ನೀಗಲಿದೆ. ಶೂಟಿಂಗ್ ಸ್ಪರ್ಧೆ ಪ್ಯಾರಿಸ್ನಿಂದ 272 ಕಿಲೋಮೀಟರ್ ದೂರದಲ್ಲಿರುವ ಚಟೌರೊಕ್ಸ್ನಲ್ಲಿ ನಡೆಯಲಿದೆ. ಭಾರತದ ಇಂದಿನ ಕ್ರೀಡಾ ಸ್ಪರ್ಧೆಗಳ ವೇಳಾಪ್ಟಟಿ ಹೀಗಿದೆ.
ಬ್ಯಾಡ್ಮಿಂಟನ್
ಪುರುಷರ ಸಿಂಗಲ್ಸ್ ಗುಂಪು ಹಂತ: ಎಚ್ ಎಸ್ ಪ್ರಣಯ್, ಲಕ್ಷ್ಯ ಸೇನ್.
ಪುರುಷರ ಡಬಲ್ಸ್ ಗುಂಪು ಹಂತ: ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ.
ಮಹಿಳೆಯರ ಡಬಲ್ಸ್ ಗುಂಪು ಹಂತ: ತನೀಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ. (ಮಧ್ಯಾಹ್ನ 12 ಗಂಟೆಯಿಂದ)
ರೋಯಿಂಗ್
ಪುರುಷರ ಸಿಂಗಲ್ ಸ್ಕಲ್ಸ್ ಹೀಟ್ಸ್: ಬಾಲರಾಜ್ ಪನ್ವಾರ್. ಆರಂಭ ಮಧ್ಯಾಹ್ನ 12:30 ರಿಂದ
ಶೂಟಿಂಗ್
10 ಮೀ ಏರ್ ರೈಫಲ್ ಮಿಶ್ರ ತಂಡ ಅರ್ಹತೆ: ಸಂದೀಪ್ ಸಿಂಗ್, ಅರ್ಜುನ್ ಬಾಬುತಾ, ಎಲವೆನಿಲ್ ವಲರಿವನ್, ರಮಿತಾ ಜಿಂದಾಲ್. ಮಧ್ಯಾಹ್ನ 12:30
10ಮೀ ಏರ್ ಪಿಸ್ತೂಲ್ ಪುರುಷರ ಅರ್ಹತೆ: ಸರಬ್ಜೋತ್ ಸಿಂಗ್, ಅರ್ಜುನ್ ಚೀಮಾ. (ಮಧ್ಯಾಹ್ನ 2 ಗಂಟೆ)
10ಮೀ ಏರ್ ರೈಫಲ್ ಮಿಶ್ರ ತಂಡ ಪದಕ ಸುತ್ತುಗಳು: (ಅರ್ಹತೆ ಪಡೆದರೆ) ಮಧ್ಯಾಹ್ನ 2 ಗಂಟೆ
10 ಮೀ ಏರ್ ಪಿಸ್ತೂಲ್ ಮಹಿಳೆಯರ ಅರ್ಹತೆ ಸುತ್ತು: ರಿದಮ್ ಸಾಂಗ್ವಾನ್, ಮನು ಭಾಕರ್. (ಸಂಜೆ 4 ಗಂಟೆಯಿಂದ)
ಟೆನಿಸ್; ಮೊದಲ ಸುತ್ತಿನ ಪಂದ್ಯಗಳು
ಪುರುಷರ ಸಿಂಗಲ್ಸ್: ಸುಮಿತ್ ನಗಾಲ್.
ಪುರುಷರ ಡಬಲ್ಸ್: ರೋಹನ್ ಬೋಪಣ್ಣ ಮತ್ತು ಎನ್. ಶ್ರೀರಾಮ್ ಬಾಲಾಜಿ. (ಮಧ್ಯಾಹ್ನ 3:30 ರಿಂದ)
ಟೇಬಲ್ ಟೆನ್ನಿಸ್
ಪುರುಷರ ಸಿಂಗಲ್ಸ್: ಶರತ್ ಕಮಲ್, ಹರ್ಮೀತ್ ದೇಸಾಯಿ
ಮಹಿಳೆಯರ ಸಿಂಗಲ್ಸ್: ಮಾಣಿಕಾ ಬಾತ್ರಾ, ಶ್ರೀಜಾ ಅಕುಲಾ. (ಸಂಜೆ 6:30 ರಿಂದ)
ಬಾಕ್ಸಿಂಗ್
ಮಹಿಳೆಯರ 54 ಕೆಜಿ ವಿಭಾಗ: ಪ್ರೀತಿ ಪವಾರ್, 32ರ ಸುತ್ತು. (ಸಂಜೆ 7 ರಿಂದ)
ಹಾಕಿ
ಪುರುಷರ ಗುಂಪು ‘ಬಿ’: ಭಾರತ ಮತ್ತು ನ್ಯೂಜಿಲ್ಯಾಂಡ್. (ರಾತ್ರಿ 9 ಗಂಟೆಗೆ)