Paris Olympics Boxing Draw: ಒಲಿಂಪಿಕ್ಸ್​ ಬಾಕ್ಸಿಂಗ್​ ಡ್ರಾ ಪ್ರಕಟ; ಮೊದಲ ಸುತ್ತಿನಲ್ಲೇ ಭಾರತೀಯ ಬಾಕ್ಸರ್​ಗಳಿಗೆ ಕಠಿಣ ಸ್ಪರ್ಧಿಗಳ ಸವಾಲು - Vistara News

ಕ್ರೀಡೆ

Paris Olympics Boxing Draw: ಒಲಿಂಪಿಕ್ಸ್​ ಬಾಕ್ಸಿಂಗ್​ ಡ್ರಾ ಪ್ರಕಟ; ಮೊದಲ ಸುತ್ತಿನಲ್ಲೇ ಭಾರತೀಯ ಬಾಕ್ಸರ್​ಗಳಿಗೆ ಕಠಿಣ ಸ್ಪರ್ಧಿಗಳ ಸವಾಲು

Paris Olympics 2024 Boxing Draw: ಜಾಸ್ಮಿನ್ ಲಂಬೋರಿಯಾ ಮಹಿಳೆಯರ 57 ಕೆಜಿ ವಿಭಾಗದ ತನ್ನ ಆರಂಭಿಕ ಸುತ್ತಿನ ಪಂದ್ಯದಲ್ಲಿ ಟೋಕಿಯೊ 2020 ರ ಬೆಳ್ಳಿ ಪದಕ ವಿಜೇತ ಫಿಲಿಪೈನ್ಸ್‌ನ ನೆಸ್ತಿ ಪೆಟೆಸಿಯೊ ವಿರುದ್ಧ ಸೆಣಸಲಿದ್ದಾರೆ. ಇಲ್ಲಿ ಗೆದ್ದು ಮುಂದಿನ ಸುತ್ತಿಗೆ ಮುನ್ನಡೆದರೆ, ಹಾಲಿ ಯುರೋಪಿಯನ್ ಚಾಂಪಿಯನ್ ಆಗಿರುವ ಫ್ರಾನ್ಸ್‌ನ ಮೂರನೇ ಶ್ರೇಯಾಂಕದ ಅಮಿನಾ ಜಿದಾನಿಯನ್ನು ಎದುರಿಸಲಿದ್ದಾರೆ.

VISTARANEWS.COM


on

Paris Olympics 2024 Boxing Draw
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್​: ಪ್ಯಾರಿಸ್​ ಒಲಿಂಪಿಕ್ಸ್​ನ ಬಾಕ್ಸಿಂಗ್​ ವಿಭಾಗದ ಡ್ರಾ(Paris Olympics Boxing Draw) ಪಕಟಗೊಂಡಿದೆ. ಭಾರತದ ಪದಕ ಭರವಸೆಯ ಮಹಿಳಾ ಬಾಕ್ಸರ್‌ಗಳಾದ ನಿಖತ್ ಜರೀನ್(Nikhat Zareen) ಮತ್ತು ಲೊವ್ಲಿನಾ ಬೊರ್ಗೊಹೈನ್(Lovlina Borgohain)​ ಮೊದಲ ಸುತ್ತಿನಲ್ಲೇ ಕಠಿಣ ಸ್ಪರ್ಧಿಗಳ ಸವಾಲು ಎದುರಿಸಲಿದ್ದಾರೆ. ಮಹಿಳೆಯರ 50 ಕೆಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಿಖತ್ ಜರೀನ್​ 32ರ ಸುತ್ತಿನಲ್ಲಿ ಜರ್ಮನಿಯ ಮ್ಯಾಕ್ಸಿ ಕ್ಯಾರಿನಾ ಕ್ಲೋಟ್ಜರ್ ಅವರನ್ನು ಎದುರಿಸಲಿದ್ದಾರೆ. ಲೊವ್ಲಿನಾ ಮಹಿಳೆಯರ 75 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ನಾರ್ವೆಯ ಸುನ್ನಿವಾ ಹಾಫ್‌ಸ್ಟಾಡ್ ಸವಾಲು ಎದುರಿಸಲಿದ್ದಾರೆ.

ಒಂದೊಮ್ಮೆ ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ 32ರ ಸುತ್ತಿನಲ್ಲಿ ಗೆಲುವು ಸಾಧಿಸಿ​ 16ರ ಸುತ್ತಿಗೇರಿದರೆ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಚೀನಾದ ವು ಯು ಅವರನ್ನು ಎದುರಿಸುವ ಸಾಧ್ಯತೆ ಇದೆ. ಟೋಕಿಯೊ ಒಲಿಂಪಿಕ್ಸ್​ ಕಂಚಿನ ಪದಕ ವಿಜೇತೆ ಲೊವ್ಲಿನಾ ಮೊದಲ ಸುತ್ತಿನಲ್ಲಿ ನಾರ್ವೆಯ ಸುನ್ನಿವಾ ಹಾಫ್‌ಸ್ಟಾಡ್ ವಿರುದ್ಧ ಗೆಲುವು ಸಾಧಿಸಿದರೆ, ಕ್ವಾರ್ಟರ್-ಫೈನಲ್‌ನಲ್ಲಿ ಚೀನಾದ ಲಿ ಕಿಯಾನ್ ಎದುರಾಗುವ ಸಾಧ್ಯತೆ ಇದೆ.

ನಿಖತ್ ಅವರ ಸಂಭಾವ್ಯ ಎದುರಾಳಿ, ವು ಯು, ಪ್ಯಾರಿಸ್ ಒಲಿಂಪಿಕ್ಸ್ 2024 ರ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಬಾಕ್ಸರ್ ಆಗಿದ್ದಾರೆ. ಅವರು ಮಹಿಳೆಯರ 52 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ನಿಖತ್ ಮಹಿಳೆಯರ 50 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ನಿಖತ್ ಚೀನಿ ಬಾಕ್ಸರ್ ಸವಾಲು ಮೆಟ್ಟಿ ನಿಂತರೆ ಕ್ವಾರ್ಟರ್-ಫೈನಲ್‌ನಲ್ಲಿ ಥಾಯ್ಲೆಂಡ್‌ನ ಚುತಾಮತ್ ರಕ್ಸತ್ ಅಥವಾ ಉಜ್ಬೇಕಿಸ್ತಾನ್‌ನ ಸಬೀನಾ ಬೊಬೊಕುಲೋವಾ ಅವರನ್ನು ಎದುರಿಸಬಹುದು.

ಫೆಬ್ರವರಿಯಲ್ಲಿ ನಡೆದ ಸ್ಟ್ರಾಂಡ್ಜಾ ಸ್ಮಾರಕ ಫೈನಲ್‌ನಲ್ಲಿ ನಿಖತ್ ಬೊಬೊಕುಲೋವಾ ವಿರುದ್ಧ ಸೋಲು ಕಂಡಿದ್ದರು. ಏತನ್ಮಧ್ಯೆ, ಚುತಾಮತ್ ರಕ್ಸತ್ ಅವರು ಕಳೆದ ವರ್ಷ ಏಷ್ಯನ್ ಗೇಮ್ಸ್ ಸೆಮಿಫೈನಲ್‌ನಲ್ಲಿ ನಿಖತ್ ಅವರನ್ನು ಸೋಲಿಸಿದ್ದರು. ಹೀಗಾಗಿ ಈ ಬಾರಿ ನಿಖತ್​ಗೆ ಬಲಿಷ್ಠ ಎದುರಾಳಿಗಳ ಸವಾಲು ಎದುರಾಗುದ ಸಾಧ್ಯತೆ ಇದೆ.

ಟೋಕಿಯೊ ಒಲಿಂಪಿಕ್ಸ್ 2020ರ ಕಂಚಿನ ಪದಕ ವಿಜೇತೆ ಲೊವ್ಲಿನಾ ಎರಡನೇ ಸುತ್ತನ್ನು ತಲುಪಿದರೆ, ಅವರು ತಮ್ಮ ಹಳೆಯ ಪ್ರತಿಸ್ಪರ್ಧಿ ಮತ್ತು ಅಗ್ರ ಶ್ರೇಯಾಂಕದ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಲಿ ಕಿಯಾನ್ ಅವರನ್ನು ಎದುರಿಸಬಹುದು. ಏಷ್ಯನ್ ಗೇಮ್ಸ್ ಚಿನ್ನದ ಪದಕದ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಭಾರತೀಯ ಆಟಗಾರ್ತಿಯನ್ನು ಸೋಲಿಸಿದ್ದರು.

ಇದನ್ನೂ ಓದಿ Paris Olympics 2024: ನೀರಿನಾಳದಲ್ಲಿ ಅಭ್ಯಾಸ ನಡೆಸಿದ ನೀರಜ್ ಚೋಪ್ರಾ; ವಿಡಿಯೊ ವೈರಲ್​

ಜಾಸ್ಮಿನ್ ಲಂಬೋರಿಯಾ ಮಹಿಳೆಯರ 57 ಕೆಜಿ ವಿಭಾಗದ ತನ್ನ ಆರಂಭಿಕ ಸುತ್ತಿನ ಪಂದ್ಯದಲ್ಲಿ ಟೋಕಿಯೊ 2020 ರ ಬೆಳ್ಳಿ ಪದಕ ವಿಜೇತ ಫಿಲಿಪೈನ್ಸ್‌ನ ನೆಸ್ತಿ ಪೆಟೆಸಿಯೊ ವಿರುದ್ಧ ಸೆಣಸಲಿದ್ದಾರೆ. ಇಲ್ಲಿ ಗೆದ್ದು ಮುಂದಿನ ಸುತ್ತಿಗೆ ಮುನ್ನಡೆದರೆ, ಹಾಲಿ ಯುರೋಪಿಯನ್ ಚಾಂಪಿಯನ್ ಆಗಿರುವ ಫ್ರಾನ್ಸ್‌ನ ಮೂರನೇ ಶ್ರೇಯಾಂಕದ ಅಮಿನಾ ಜಿದಾನಿಯನ್ನು ಎದುರಿಸಲಿದ್ದಾರೆ. ಏಷ್ಯನ್ ಗೇಮ್ಸ್‌ನ ಕಂಚಿನ ಪದಕ ವಿಜೇತೆ ಪ್ರೀತಿ ಪವಾರ್ 32 ರ ಸುತ್ತಿನಲ್ಲಿ ವಿಯೆಟ್ನಾಂನ ವೋ ಥಿ ಕಿಮ್ ಅನ್ಹ್ ವಿರುದ್ಧ ಆಡಲಿದ್ದಾರೆ.

ಅಮಿತ್ ಪಂಘಲ್ ಮತ್ತು ನಿಶಾಂತ್ ದೇವ್ ಅವರು ಕ್ರಮವಾಗಿ ಪುರುಷರ 51 ಕೆಜಿ ಮತ್ತು 71 ಕೆಜಿಯ 16 ರ ಸುತ್ತಿನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಇಬ್ಬರೂ ಆರಂಭಿಕ ಸುತ್ತಿನಲ್ಲಿ ಬೈಗಳನ್ನು ಪಡೆದಿದ್ದಾರೆ. ಅಮಿತ್ ಪಂಘಲ್ ಅವರು ಪ್ಯಾರಿಸ್‌ನಲ್ಲಿ ತಮ್ಮ ಆರಂಭಿಕ ಪಂದ್ಯದಲ್ಲಿ ಜಾಂಬಿಯಾದ ಪ್ಯಾಟ್ರಿಕ್ ಚಿನ್ಯೆಂಬಾ ಅವರನ್ನು ಎದುರಿಸಲಿದ್ದಾರೆ. ಚಿನ್ಯೆಂಬಾ ಟೋಕಿಯೊ 2020 ಒಲಿಂಪಿಕ್ಸ್‌ನಲ್ಲಿ ಮತ್ತು 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದ ಬಾಕ್ಸರ್​ ಆಗಿದ್ದಾರೆ. ನಿಶಾಂತ್ ದೇವ್ ಈಕ್ವೆಡಾರ್‌ನ ಜೋಸ್ ರೊಡ್ರಿಗಸ್ ಟೆನೊರಿಯೊ ವಿರುದ್ಧ ಹೋರಾಡಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Maharaja Trophy Squads: ಹರಾಜಿನ ಬಳಿಕ ಎಲ್ಲ ತಂಡಗಳ ಆಟಗಾರರ ಪಟ್ಟಿ ಹೀಗಿದೆ

Maharaja Trophy Squads: ಟೀಮ್​ ಇಂಡಿಯಾ ಮಾಜಿ ಕೋಚ್​ ರಾಹುಲ್​ ದ್ರಾವಿಡ್​ ಪುತ್ರ ಸಮಿತ್​ ದ್ರಾವಿಡ್(Samit Dravid)​ ಅವರನ್ನು ಮೂಲಬೆಲೆ 50 ಸಾವಿರ ನೀಡಿ ಮೈಸೂರು ವಾರಿಯರ್ಸ್​ ತಂಡ ಖರೀದಿಸಿತು.

VISTARANEWS.COM


on

Maharaja Trophy Squads
Koo

ಬೆಂಗಳೂರು: ಮುಂದಿನ ತಿಂಗಳು ಆಗಸ್ಟ್​ 15ರಿಂದ ಆರಂಭಗೊಳ್ಳಲಿರುವ 3ನೇ ಆವೃತ್ತಿಯ ಮಹಾರಾಜ ಟ್ರೋಫಿ(Maharaja Trophy) ಟಿ20 ಟೂರ್ನಿಗೆ ನಿನ್ನೆ(ಗುರುವಾರ) ಆಟಗಾರರ ಹರಾಜು ಪ್ರಕ್ರಿಯೆ ನಡೆದಿತ್ತು. 8.6 ಲಕ್ಷ ರೂ.ಗೆ ಬೆಂಗಳೂರು ಬ್ಲಾಸ್ಟರ್​ ತಂಡ ಸೇರಿದ 24 ವರ್ಷದ ಎಲ್​.ಆರ್​ ಚೇತನ್​ ಈ ಬಾರಿ ದುಬಾರಿ ಮೊತ್ತ ಪಡೆದ ಆಟಗಾರ ಎನಿಸಿಕೊಂಡರು. ಟೀಮ್​ ಇಂಡಿಯಾ ಮಾಜಿ ಕೋಚ್​ ರಾಹುಲ್​ ದ್ರಾವಿಡ್​ ಪುತ್ರ ಸಮಿತ್​ ದ್ರಾವಿಡ್(Samit Dravid)​ ಅವರನ್ನು ಮೂಲಬೆಲೆ 50 ಸಾವಿರ ನೀಡಿ ಮೈಸೂರು ವಾರಿಯರ್ಸ್​ ತಂಡ ಖರೀದಿಸಿತು. ಇದೀಗ ಎಲ್ಲ ತಂಡದ ಆಟಗಾರರ(Maharaja Trophy squads) ಪಟ್ಟಿ ಇಲ್ಲಿದೆ.

ಹುಬ್ಬಳ್ಳಿ ಟೈಗರ್ಸ್


ಮನೀಶ್ ಪಾಂಡೆ, ಶ್ರೀಜಿತ್ ಕೆ.ಎಲ್, ವಿಧ್ವತ್ ಕಾವೇರಪ್ಪ, ಮನ್ವಂತ್ ಕುಮಾರ್ ಎಲ್, ಕೆಸಿ ಕಾರಿಯಪ್ಪ , ಮೊಹಮ್ಮದ್ ತಾಹಾ, ತಿಪ್ಪಾ ರೆಡ್ಡಿ, ಕಾರ್ತಿಕೇಯ ಕೆಪಿ, ಕುಮಾರ್ ಎಲ್ಆರ್, ಆದರ್ಶ್ ಪ್ರಜ್ವಲ್, ಕೃತಿಕ್ ಕೃಷ್ಣ, ಅನೀಶ್ವರ್ ಗೌತಮ್, ಮಾಧವ್ ಪ್ರಕಾಶ್ ಬಜಾಜ್, ಶ್ರೀಶ ಎಸ್ ಅಕಾಹರ್, ದಮನ್ ದೇಪಹಾರ್, ಸಿಂಗ್, ಮಿತ್ರಕಾಂತ್ ಯಾದವ್, ನಿಶ್ಚಿತ್ ಪೈ, ರಿಷಿ ಬೋಪಣ್ಣ.

ಮೈಸೂರು ವಾರಿಯರ್ಸ್


ಕರುಣ್ ನಾಯರ್, ಕಾರ್ತಿಕ್ ಸಿಎ, ಮನೋಜ್ ಭಾಂಡಗೆ, ಕಾರ್ತಿಕ್ ಎಸ್ ಯು, ಸುಚಿತ್ ಜೆ, ಗೌತಮ್ ಕೆ, ವಿದ್ಯಾಧರ್ ಪಾಟೀಲ್, ವೆಂಕಟೇಶ್ ಎಂ, ಹರ್ಷಿಲ್ ಧರ್ಮಾನಿ, ಗೌತಮ್ ಮಿಶ್ರಾ, ಧನುಷ್ ಗೌಡ, ಸಮಿತ್ ದ್ರಾವಿಡ್, ದೀಪಕ್ ದೇವಾಡಿಗ, ಸುಮಿತ್ ಕುಮಾರ್, ಸ್ಮಯನ್ ಶ್ರೀವಾಸ್ತವ, ಜಾಸ್ಪರ್ ಇಜೆ , ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸರ್ಫರಾಜ್ ಅಶ್ರಫ್.

ಶಿವಮೊಗ್ಗ ಲಯನ್ಸ್


ಅಭಿನವ್ ಮನೋಹರ್, ನಿಹಾಲ್ ಉಳ್ಳಾಲ್, ಕೌಶಿಕ್ ವಿ, ಶಿವರಾಜ್ ಎಸ್, ಪ್ರದೀಪ್ ಟಿ, ಹಾರ್ದಿಕ್ ರಾಜ್, ಧ್ರುವ ಪ್ರಭಾಕರ್, ಆನಂದ್ ದೊಡ್ಡಮನಿ, ರಾಜವೀರ್ ವಾಧ್ವಾ, ಅವಿನಾಶ್ ಡಿ, ಧೀರಜ್ ಮೋಹನ್, ಭರತ್ ಧುರಿ, ಆದಿತ್ಯ ವಿಶ್ವ ಕರ್ಮ, ಆದಿತ್ಯ ಮಣಿ, ರೋಹಿತ್ ಕೆ. ನವೀನ್, ಶರತ್ ಎಚ್.ಎಸ್, ಮೋಹಿತ್ ಬಿ.ಎ.

ಇದನ್ನೂ ಓದಿ Maharaja Trophy: ಮೈಸೂರು ವಾರಿಯರ್ಸ್ ತಂಡ ಸೇರಿದ ದ್ರಾವಿಡ್ ಪುತ್ರ ಸಮಿತ್

ಗುಲ್ಬರ್ಗ ಮಿಸ್ಟಿಕ್ಸ್


ದೇವದತ್ತ್ ಪಡಿಕ್ಕಲ್, ವೈಶಾಕ್ ವಿಜಯ್​ ಕುಮಾರ್, ಸ್ಮರಣ್ ಆರ್, ಅನೀಶ್ ಕೆವಿ, ಪ್ರವೀಣ್ ದುಬೆ, ಲುವ್ನಿತ್ ಸಿಸೋಡಿಯಾ, ಶರತ್ ಬಿಆರ್, ಆದಿತ್ಯ ನಾಯರ್, ಮೋನಿಶ್ ರೆಡ್ಡಿ, ಶರಣ್ ಗೌಡ್, ಯಶೋವರ್ಧನ್ ಪರಂತಪ್, ನಾಥನ್ ದ್ಮೆಲ್ಲೋ ಜೋಕಿಮ್, ಫೈಜಾನ್ ರಿಯಾಜ್, ರೈಟ್‌ಕಾಲ್, ರೈಟ್‌ಕಾಲ್ ಅಭಿಷೇಕ್ ಪ್ರಭಾಕರ್, ಪೃಥ್ವಿ ಶೇಖಾವತ್, ಶಿಮೊನ್ ಲೂಯಿಜ್.

ಬೆಂಗಳೂರು ಬ್ಲಾಸ್ಟರ್ಸ್


ಶುಭಾಂಗ್ ಹೆಗ್ಡೆ, ಮಯಾಂಕ್ ಅಗರ್ವಾಲ್, ಮೊಹ್ಸಿನ್ ಖಾನ್, ಸೂರಜ್ ಅಹುಜಾ, ಅನಿರುಧಾ ಜೋಶಿ, ನವೀನ್ ಎಂಜಿ, ಪ್ರತೀಕ್ ಜೈನ್, ಚೇತನ್ ಎಲ್ಆರ್, ಮೇಲು ಕ್ರಾಂತಿ ಕುಮಾರ್, ಸಂತೋಖ್ ಸಿಂಗ್, ಆದಿತ್ಯ ಗೋಯಲ್, ರಕ್ಷಿತ್ ಎಸ್, ವರುಣ್ ರಾವ್ ಟಿಎನ್, ನಿರಂಜನ್ ನಾಯ್ಕ್, ಲವಿಶ್ ಕಶಾಲ್ ವರುಣ್ ಕುಮಾರ್ ಎಚ್.ಸಿ, ಶಿಖರ್ ಶೆಟ್ಟಿ, ಭೀಮ್ ರಾವ್ ನವಲೆ.

ಮಂಗಳೂರು ಡ್ರಾಗನ್ಸ್

ರೋಹನ್ ಪಾಟೀಲ್, ಪಾರಸ್ ಗುರ್ಬಕ್ಸ್ ಆರ್ಯ, ಸಿದ್ಧಾರ್ಥ್ ಕೆವಿ, ನಿಕಿನ್ ಜೋಸ್, ಶ್ರೇಯಸ್ ಗೋಪಾಲ್, ಧೀರಜ್ ಜೆ ಗೌಡ, ದರ್ಶನ್ ಎಂಬಿ, ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ, ತುಷಾರ್ ಸಿಂಗ್, ಲಂಕೇಶ್ ಕೆಎಸ್, ಸಮರ್ಥ್ ನಾಗರಾಜ್, ಸಂಕಲ್ಪ್ ಎಸ್ಎಸ್, ಅಭಿಲಾಷ್ ರಾವ್, ನಿಶ್ಚಿತ್ ಶೆಟ್ಟಿ, ನಿಶ್ಚಿತ್ ಶೆಟ್ಟಿ ಗೌಡ, ಪ್ರಣವ್ ಭಾಟಿಯಾ, ಸಂಜಯ್ ಅಶ್ವಿನ್, ಸಾಗರ್ ಸೋಲಂಕಿ.

Continue Reading

ಕ್ರೀಡೆ

Paris Olympics India schedule: ಒಲಿಂಪಿಕ್ಸ್​ನಲ್ಲಿ ನಾಳೆ ಭಾರತ ಯಾವೆಲ್ಲ ವಿಭಾಗದಲ್ಲಿ ಸ್ಪರ್ಧಿಸಲಿದೆ?; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

Paris Olympics India schedule: ಇಂದು ಉದ್ಘಾಟನಾ ಸಮಾರಂಭ ನಡೆಯುವ ಕಾರಣ ಯಾವುದೇ ಸ್ಪರ್ಧೆಗಳು ನಡೆಯುವುದಿಲ್ಲ. ಫ್ರಾನ್ಸ್‌ ಕಾಲಮಾನದಂತೆ ಸಾಯಂಕಾಲ 5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಭಾರತದಲ್ಲಿ ರಾತ್ರಿ 11 ಗಂಟೆಗೆ ಆರಂಭಗೊಳ್ಳಲಿದೆ.

VISTARANEWS.COM


on

Paris Olympics India schedule
Koo

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಕೂಟದಲ್ಲಿ ಭಾರತ ಈಗಾಗಲೇ ಶುಭಾರಂಭ ಮಾಡಿದೆ. ಗುರುವಾರ ನಡೆದಿದ್ದ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ಮಹಿಳಾ ಮತ್ತು ಪುರುಷರ ತಂಡ ಉತ್ತಮ ಪ್ರದರ್ಶನ ತೋರುವ ಮೂಲಕ ಕ್ವಾರ್ಟರ್​ ಫೈನಲ್​ ಪ್ರವೇಶಿಸಿ ಐತಿಹಾಸಿಕ ಪದಕ ಭರವಸೆಯೊಂದನ್ನು ಮೂಡಿಸಿದೆ. ಇದೀಗ ನಾಳೆ(ಶನಿವಾರ) ನಡೆಯುವ ಹಲವು ವಿಭಾಗದ ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ನಾಳೆ ಭಾರತ ಯಾವೆಲ್ಲ(Paris Olympics India schedule) ವಿಭಾಗದಲ್ಲಿ ಸ್ಪರ್ಧಿಸಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಇಂದು ಉದ್ಘಾಟನಾ ಸಮಾರಂಭ ನಡೆಯುವ ಕಾರಣ ಯಾವುದೇ ಸ್ಪರ್ಧೆಗಳು ನಡೆಯುವುದಿಲ್ಲ. ಫ್ರಾನ್ಸ್‌ ಕಾಲಮಾನದಂತೆ ಸಾಯಂಕಾಲ 5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಭಾರತದಲ್ಲಿ ರಾತ್ರಿ 11 ಗಂಟೆಗೆ ಆರಂಭಗೊಳ್ಳಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ತಂಡ 84ನೇ ರಾಷ್ಟ್ರವಾಗಿ ಈ ಬಾರಿ ಕಾಣಿಸಿಕೊಳ್ಳಲಿದೆ. ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ ಸಿಂಧು ಮತ್ತು ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ 7 ಚಿನ್ನದ ಪದಕಗಳನ್ನು ಗೆದ್ದಿರುವ ಶರತ್‌ ಕಮಲ್‌ ಭಾರತದ ಧ್ವಜಧಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

ಬ್ಯಾಡ್ಮಿಂಟನ್

ಪುರುಷರ ಸಿಂಗಲ್ಸ್ ಗುಂಪು ಹಂತ: ಎಚ್ ಎಸ್ ಪ್ರಣಯ್, ಲಕ್ಷ್ಯ ಸೇನ್.

ಮಹಿಳೆಯರ ಸಿಂಗಲ್ಸ್ ಗುಂಪು ಹಂತ: ಪಿ.ವಿ ಸಿಂಧು.

ಪುರುಷರ ಡಬಲ್ಸ್ ಗುಂಪು ಹಂತ: ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ.

ಮಹಿಳೆಯರ ಡಬಲ್ಸ್ ಗುಂಪು ಹಂತ: ತನೀಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ. (ಮಧ್ಯಾಹ್ನ 12 ಗಂಟೆಯಿಂದ)

ಇದನ್ನೂ ಓದಿ Paris Olympics Boxing Draw: ಒಲಿಂಪಿಕ್ಸ್​ ಬಾಕ್ಸಿಂಗ್​ ಡ್ರಾ ಪ್ರಕಟ; ಮೊದಲ ಸುತ್ತಿನಲ್ಲೇ ಭಾರತೀಯ ಬಾಕ್ಸರ್​ಗಳಿಗೆ ಕಠಿಣ ಸ್ಪರ್ಧಿಗಳ ಸವಾಲು

ರೋಯಿಂಗ್


ಪುರುಷರ ಸಿಂಗಲ್ ಸ್ಕಲ್ಸ್ ಹೀಟ್ಸ್: ಬಾಲರಾಜ್ ಪನ್ವಾರ್. ಆರಂಭ ಮಧ್ಯಾಹ್ನ 12:30 ರಿಂದ

ಶೂಟಿಂಗ್

10 ಮೀ ಏರ್ ರೈಫಲ್ ಮಿಶ್ರ ತಂಡ ಅರ್ಹತೆ: ಸಂದೀಪ್ ಸಿಂಗ್, ಅರ್ಜುನ್ ಬಾಬುತಾ, ಎಲವೆನಿಲ್ ವಲರಿವನ್, ರಮಿತಾ ಜಿಂದಾಲ್. ಮಧ್ಯಾಹ್ನ 12:30

10ಮೀ ಏರ್ ಪಿಸ್ತೂಲ್ ಪುರುಷರ ಅರ್ಹತೆ: ಸರಬ್ಜೋತ್ ಸಿಂಗ್, ಅರ್ಜುನ್ ಚೀಮಾ. (ಮಧ್ಯಾಹ್ನ 2 ಗಂಟೆ)

10ಮೀ ಏರ್ ರೈಫಲ್ ಮಿಶ್ರ ತಂಡ ಪದಕ ಸುತ್ತುಗಳು: (ಅರ್ಹತೆ ಪಡೆದರೆ) ಮಧ್ಯಾಹ್ನ 2 ಗಂಟೆ

10 ಮೀ ಏರ್ ಪಿಸ್ತೂಲ್ ಮಹಿಳೆಯರ ಅರ್ಹತೆ ಸುತ್ತು: ರಿದಮ್ ಸಾಂಗ್ವಾನ್, ಮನು ಭಾಕರ್. (ಸಂಜೆ 4 ಗಂಟೆಯಿಂದ)

ಟೆನಿಸ್; ಮೊದಲ ಸುತ್ತಿನ ಪಂದ್ಯಗಳು


ಪುರುಷರ ಸಿಂಗಲ್ಸ್: ಸುಮಿತ್ ನಗಾಲ್.

ಪುರುಷರ ಡಬಲ್ಸ್: ರೋಹನ್ ಬೋಪಣ್ಣ ಮತ್ತು ಎನ್. ಶ್ರೀರಾಮ್ ಬಾಲಾಜಿ. (ಮಧ್ಯಾಹ್ನ 3:30 ರಿಂದ)

ಟೇಬಲ್ ಟೆನ್ನಿಸ್


ಪುರುಷರ ಸಿಂಗಲ್ಸ್: ಶರತ್ ಕಮಲ್, ಹರ್ಮೀತ್ ದೇಸಾಯಿ

ಮಹಿಳೆಯರ ಸಿಂಗಲ್ಸ್: ಮಾಣಿಕಾ ಬಾತ್ರಾ, ಶ್ರೀಜಾ ಅಕುಲಾ. (ಸಂಜೆ 6:30 ರಿಂದ)

ಬಾಕ್ಸಿಂಗ್

ಮಹಿಳೆಯರ 54 ಕೆಜಿ ವಿಭಾಗ: ಪ್ರೀತಿ ಪವಾರ್, 32ರ ಸುತ್ತು. (ಸಂಜೆ 7 ರಿಂದ)

ಹಾಕಿ


ಪುರುಷರ ಗುಂಪು ‘ಬಿ’: 
ಭಾರತ ಮತ್ತು ನ್ಯೂಜಿಲ್ಯಾಂಡ್​. (ರಾತ್ರಿ 9 ಗಂಟೆಗೆ)

Continue Reading

ಕ್ರೀಡೆ

PKL 2024: ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆಗೆ ದಿನಾಂಕ ನಿಗದಿ

PKL 2024: ಕಳೆದ 10ನೇ ಆವೃತ್ತಿ ಪ್ರೊ ಕಬಡ್ಡಿಯ ಫೈನಲ್(Pro Kabaddi Final)​ ಪಂದ್ಯದಲ್ಲಿ ಪುಣೇರಿ ಪಲ್ಟಾನ್‌(Puneri Paltan) 28-25 ಅಂಕಗಳ ಅಂತರದಿಂದ ಹರಿಯಾಣ ಸ್ಟೀಲರ್ಸ್‌(Haryana Steelers) ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದು ಬೀಗಿತ್ತು.

VISTARANEWS.COM


on

Koo

ಮುಂಬಯಿ: 11ನೇ ಆವೃತ್ತಿಯ(Pro Kabaddi Season 11) ಪ್ರೊ ಕಬಡ್ಡಿ ಲೀಗ್ (ಪಿಕೆಎಲ್)ನ(pro kabaddi league) ಆಟಗಾರರ ಹರಾಜು(PKL 2024) ಪ್ರಕ್ರಿಯೆ ಆಗಸ್ಟ್ 15 ಮತ್ತು 16 ರಂದು ಮುಂಬೈನಲ್ಲಿ ನಡೆಯಲಿದೆ ಎಂದು ಆಯೋಜಕ ಮಶಾಲ್ ಸ್ಪೋರ್ಟ್ಸ್ ಸಂಸ್ಥೆ ತಿಳಿಸಿದೆ. 11ನೇ ಆವೃತ್ತಿಗೂ ಮುನ್ನ ಟೂರ್ನಿಯ ನೂತನ ಲಾಂಛನ ಅನಾವರಣದ ಮಾಡಲಾಗುತ್ತದೆ. ನೂತನ ಲಾಂಛನದಲ್ಲಿ ತ್ರಿವರ್ಣ ಧ್ವಜ ಹೋಲುವ ಕೇಸರಿ ಮತ್ತು ಹಸಿರು ಬಣ್ಣಗಳನ್ನು ಪ್ರದರ್ಶಿಸಲಾಗಿದೆ. ಕಬಡ್ಡಿ ದೇಶದ ಹೆಮ್ಮೆಯ ಕ್ರೀಡೆ ಎಂಬುದನ್ನು ಇದು ಸಾರುತ್ತದೆ.

ಕಳೆದ 10ನೇ ಆವೃತ್ತಿ ಪ್ರೊ ಕಬಡ್ಡಿಯ ಫೈನಲ್(Pro Kabaddi Final)​ ಪಂದ್ಯದಲ್ಲಿ ಪುಣೇರಿ ಪಲ್ಟಾನ್‌(Puneri Paltan) 28-25 ಅಂಕಗಳ ಅಂತರದಿಂದ ಹರಿಯಾಣ ಸ್ಟೀಲರ್ಸ್‌(Haryana Steelers) ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದು ಬೀಗಿತ್ತು.

ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದ್ದ ಉಭಯ ತಂಡಗಳ ಈ ಫೈನಲ್​ ಫೈಟ್​ ಆರಂಭದಿಂದ ಹಿಡಿದು ಕೊನೆಯ ತನಕವೂ ರೋಚಕತೆ ಮತ್ತು ಕುತೂಹಲಕ್ಕೆ ಸಾಕ್ಷಿಯಾಗಿತ್ತು. ಇತ್ತಂಡಗಳ ಆಟಗಾರರು ಕೂಡ ಅಂಕ ಗಳಿಕೆಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಇವರ ಜತೆಗೆ ಕೋಚ್​ಗಳು ಕೂಡ ಅಗ್ರೆಸಿವ್​ ಆಗಿ ಕಂಡುಬಂದಿದ್ದರು. ಅಂತಿಮವಾಗಿ ಪುಣೇರಿ ಪಲ್ಟಾನ್‌ ತಂಡ 28-25 ಅಂಕಗಳ ಅಂತರದಿಂದ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿತ್ತು.

ಇದನ್ನೂ ಓದಿ Paris Olympics 2024: ನೀರಿನಾಳದಲ್ಲಿ ಅಭ್ಯಾಸ ನಡೆಸಿದ ನೀರಜ್ ಚೋಪ್ರಾ; ವಿಡಿಯೊ ವೈರಲ್​

ಕನ್ನಡಿಗ ಕೋಚ್‌ ಬಿ.ಸಿ. ರಮೇಶ್‌ ಮಾರ್ಗದರ್ಶನ


ಕನ್ನಡಿಗ ಕೋಚ್‌ ಬಿ.ಸಿ. ರಮೇಶ್‌ ಮಾರ್ಗದರ್ಶನದಲ್ಲಿ ಪುಣೇರಿ ತಂಡ ಈ ಆವೃತ್ತಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿ ಆಡಿದ 22 ಪಂದ್ಯಗಳಲ್ಲಿ 17 ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ತನ್ನ ಖ್ಯಾತಿಗೆ ತಕ್ಕಂತೆ ಫೈನಲ್​ನಲ್ಲಿಯೂ ಇದೇ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕಳೆದ ಬಾರಿಯೂ ಪುಣೇರಿ ತಂಡ ಫೈನಲ್​ ಆಡಿತ್ತು. ಆದರೆ ಅಲ್ಲಿ ಜೈಪುರ ವಿರುದ್ಧ ಸೋತು ರನ್ನರ್​ ಅಪ್​ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಪ್ರಶಸ್ತಿಗೆಲ್ಲುವಲ್ಲಿ ಯಶಸ್ಸು ಕಂಡಿತ್ತು. ಇದಕ್ಕೆ ಪ್ರಮುಖ ಕಾರಣ ಕೋಚ್‌ ಬಿ.ಸಿ. ರಮೇಶ್‌ ಮಾರ್ಗದರ್ಶನ.

ಮೊದಲಾರ್ಧದ 20 ನಿಮಿಷದ ಆಟದಲ್ಲಿ ಕೊನೆಯ 1.28 ನಿಮಿಷದವರೆಗೂ ಪುಣೆ ತಂಡ ಹಿನ್ನಡೆಯಲ್ಲಿತ್ತು. ಆದರೆ, ಈ ವೇಳೆ ಡು ಆರ್​ ಡೈ ರೇಟ್​ನಲ್ಲಿ ಪಂಕಜ್​ ಮೋಹಿತೆ ಅವರು ಪಾದರಸದಂತಹ ರೇಡಿಂಗ್​ ದಾಳಿ ನಡೆಸಿ ಒಂದೇ ಬಾರಿಗೆ 5 ಅಂಕ ಕಲೆಹಾಕಿ ಪಂದ್ಯದ ಗತಿಯನ್ನೇ ಬದಲಿಸಿದರು. ಇದು ಪಂದ್ಯ ಟರ್ನಿಂಗ್​ ಪಾಯಿಂಟ್​ ಕೂಡ ಆಯಿತು. ಅವರ ಈ ರೇಡಿಂಗ್​ ಸಾಹಸದಿಂದ ಪುಣೆ ಭರ್ಜರಿ ಲೀಡ್​ ಪಡೆಯಿತು. ಮೊದಲಾರ್ಧ ಮುಕ್ತಾಯಕ್ಕೆ 13-10 ಅಂಕದ ಮುನ್ನಡೆ ಸಾಧಿಸಿತು. ಇದೇ ಮುನ್ನಡೆಯನ್ನು ಪಂದ್ಯದಕ್ಕೂ ಕಾಯ್ದುಕೊಂಡು ಪ್ರಶಸ್ತಿ ಎತ್ತಿಹಿಡಿದಿತ್ತು.

Continue Reading

ಕ್ರೀಡೆ

Paris Olympics 2024: ನೀರಿನಾಳದಲ್ಲಿ ಅಭ್ಯಾಸ ನಡೆಸಿದ ನೀರಜ್ ಚೋಪ್ರಾ; ವಿಡಿಯೊ ವೈರಲ್​

Paris Olympics 2024: ನೀರಿನಾಳದಲ್ಲಿ ಸ್ಕೂಬಾ ಡೈವ್ ಉಡುಪು ತೊಟ್ಟು ಜಾವೆಲಿನ್​ ಎಸೆಯುವಂತೆ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಸ್ವತಃ ನೀರಜ್​ ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಆಕಾಶದಲ್ಲೇ ಆಗಲಿ, ನೆಲದ ಮೇಲಾಗಲಿ, ಅಥವಾ ನೀರಿನಾಳದಲ್ಲೇ ಆಗಲಿ! ನಾನು ಯಾವಾಗಲೂ ಜಾವೆಲಿನ್ ಬಗ್ಗೆಯೇ ಯೋಚಿಸುತ್ತಿರುವೆ. ತರಬೇತಿ ಶುರುವಾಗಿದೆ ಎಂದು” ಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Paris Olympics 2024
Koo

ಪ್ಯಾರಿಸ್​: ಮಹತ್ವದ ಕ್ರೀಡಾಕೂಟವಾದ ಪ್ಯಾರಿಸ್ ಒಲಿಂಪಿಕ್ಸ್(​Paris Olympics 2024) ಕ್ರೀಡಾಕೂಟಕ್ಕೆ ಇಂದು ಅದ್ಧೂರಿ ಉದ್ಘಾಟನಾ ಸಮಾರಂಭದ ಮೂಲಕ ಅಧಿಕೃತ ಚಾಲನೆ ಸಿಗಲಿದೆ. ಕಳೆದ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಭಾರತದ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ(neeraj chopra) ಅವರು ಈ ಬಾರಿಯೂ ದೇಶಕ್ಕೆ ಚಿನ್ನ ಗೆಲ್ಲುವ ಪಣತೊಟ್ಟಿದ್ದಾರೆ. ಇದಕ್ಕಾಗಿ ಅವರು ಸಮುದ್ರದ ಆಳದಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ನೀರಿನಾಳದಲ್ಲಿ ಸ್ಕೂಬಾ ಡೈವ್ ಉಡುಪು ತೊಟ್ಟು ಜಾವೆಲಿನ್​ ಎಸೆಯುವಂತೆ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಸ್ವತಃ ನೀರಜ್​ ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಆಕಾಶದಲ್ಲೇ ಆಗಲಿ, ನೆಲದ ಮೇಲಾಗಲಿ, ಅಥವಾ ನೀರಿನಾಳದಲ್ಲೇ ಆಗಲಿ! ನಾನು ಯಾವಾಗಲೂ ಜಾವೆಲಿನ್ ಬಗ್ಗೆಯೇ ಯೋಚಿಸುತ್ತಿರುವೆ. ತರಬೇತಿ ಶುರುವಾಗಿದೆ ಎಂದು” ಎಂದು ಬರೆದುಕೊಂಡಿದ್ದಾರೆ.

23 ವರ್ಷದ ನೀರಜ್ ಚೋಪ್ರಾ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್​ಹೋಮ್​ ಡೈಮಂಡ್​ ಲೀಗ್​ನಲ್ಲಿ ಎಸೆದಿದ್ದರು. ಈ ಬಾರಿಯ ಒಲಿಂಪಿಕ್ಸ್​ನಲ್ಲಿ 90 ಮೀ. ದೂರ ಎಸೆಯುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ Paris Olympics: ಇಂದು ಪ್ಯಾರಿಸ್​ ಒಲಿಂಪಿಕ್ಸ್​ಗೆ ಅಧಿಕೃತ ಚಾಲನೆ: ಉದ್ಘಾಟನಾ ಸಮಾರಂಭ ಎಷ್ಟು ಗಂಟೆಗೆ ಆರಂಭ?

ಕಾಶಿನಾಥ್ ನಾಯ್ಕ್ ಅವರು ನೀರಜ್ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿಯೂ(neeraj chopra paris olympics) ಚಿನ್ನದ ಪದಕ ಗೆಲ್ಲಲಿದ್ದಾರೆ ಎಂದು ಆತ್ಮವಿಶ್ವಾಸದಿಂದ ಈ ಮಾತನ್ನು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕಾಶಿನಾಥ್, “ನಾನು 2015 ರಿಂದ ನೀರಜ್​ ಜತೆ ಕೆಲಸ ಮಾಡುತ್ತಿದ್ದೇನೆ. ಅವರ ಛಲವನ್ನು ಮೆಚ್ಚಲೇ ಬೇಕು.​ ಸಾಧಿಸುವ ಛಲವೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅತ್ಯಂತ ಶಿಸ್ತಿನ ಕ್ರೀಡಾಪಟು ಕೂಡ ಆಗಿದ್ದಾರೆ. 90 ಮೀ. ದೂರ ಜಾವೆಲಿನ್​ ಎಸೆಯುವದು ಪ್ರಮುಖ ಗುರಿ ಎಂದು ನೀರಜ್​ ಈಗಾಗಲೇ ಹೇಳಿದ್ದಾರೆ. ಹೇಳಿದಂತೆ ಅವರು ಈ ದೂರವನ್ನು ಕ್ರಮಿಸುವ ವಿಶ್ವಾಸ ನನ್ನಲ್ಲಿದೆ” ಎಂದು ಹೇಳಿದ್ದಾರೆ.

ಕಾಶಿನಾಥ್ ಮನೆ ಭೇಟಿ ನೀಡಿದ್ದ ನೀರಜ್​

ನೀರಜ್ ಪೋಲೆಂಡ್‌ನಲ್ಲಿ ನಡೆದಿದ್ದ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಬಳಿಕ 2018ರ ಕಾಮನ್‌ವೆಲ್ತ್ ಗೇಮ್ಸ್, 2018 ಇಂಡೋನೇಷ್ಯಾ ಏಷ್ಯನ್ ಗೇಮ್ಸ್, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮತ್ತು ಡೈಮಂಡ್ ಲೀಗ್‌ನಲ್ಲಿ ಚಿನ್ನ ಗೆದ್ದಿದ್ದರು. ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚೊಚ್ಚಲ ಪ್ರಯತ್ನದಲ್ಲಿ ಬೆಳ್ಳಿ ಗೆದ್ದರೂ ಈ ಬಾರಿ ಚಿನ್ನ ಗೆದ್ದು ಎಲ್ಲ ವಿಶ್ವಮಟ್ಟದ ಟೂರ್ನಿಯಲ್ಲಿಯೂ ಚಿನ್ನ ಗೆದ್ದು ತಮ್ಮ ಆಸೆಯನ್ನು ಈಡೇರಿಸಿದರು. ಜತೆಗೆ ದೇಶದ ಕೀರ್ತಿ ಪತಾಕೆಯನ್ನು ಬಹು ಎತ್ತರಕ್ಕೆ ಹಾರಿಸಿದರು. ಅವರ ಈ ಸಾಧನೆ ಹೀಗೆಯೇ ಮುಂದುವರಿಯಲಿ ಎಂದು ಕಾಶಿನಾಥ್ ಹಾರೈಸಿದರು. ಟೊಕಿಯೊದಲ್ಲಿ ಚಿನ್ನದ ಪದಕ ಗೆದ್ದವು ಭಾರತಕ್ಕೆ ಮರಳಿದ ನೀರಜ್​ ಚೋಪ್ರಾ ಅವರು ತನ್ನ ಗುರು ಕಾಶಿನಾಥ್ ಅವರ ಮನೆಗೆ ಭೇಟಿ ನೀಡಿ ತಾವು ಗೆದ್ದ ಪದಕವನ್ನು ಅವರಿಗೆ ತೋರಿಸಿದ್ದರು. ಅಲ್ಲದೆ ಅವರ ಮನೆಯಲ್ಲಿ ಭೋಜನ ಮಾಡಿ ಮುಂದಿನ ಟೂರ್ನಿಗೆ ಆಶಿರ್ವಾದ ಪಡೆದು ಹಿಂದಿರುಗಿದ್ದರು.

Continue Reading
Advertisement
Sundar Pichai
ದೇಶ9 mins ago

Sundar Pichai: ಗೂಗಲ್‌ ಸಿಇಒ ಸುಂದರ್‌ ಪಿಚೈಗೆ ಗೌರವ ಡಾಕ್ಟರೇಟ್‌ ಪ್ರದಾನ-ಫೋಟೋ ವೈರಲ್‌

Sai Pallavi Dating a Married Actor Who Has Two Kids
ಸಿನಿಮಾ15 mins ago

Sai Pallavi: ಮದುವೆಯಾಗಿ ಮಕ್ಕಳಿರುವ ಸಹ ನಟನೊಂದಿಗೆ ಸಾಯಿ ಪಲ್ಲವಿ ಡೇಟಿಂಗ್‌?

Nissan SUV X-TRAIL
ಆಟೋಮೊಬೈಲ್25 mins ago

Nissan SUV X-TRAIL : ನಿಸ್ಸಾನ್ ನ ಹೊಚ್ಚ ಹೊಸ 4 ಜನರೇಷನ್ ಪ್ರೀಮಿಯಂ ಅರ್ಬನ್ ಎಸ್‌ಯುವಿ ಎಕ್ಸ್-ಟ್ರಯಲ್ ಬಿಡುಗಡೆ

CM Siddaramaiah muda scam
ಪ್ರಮುಖ ಸುದ್ದಿ27 mins ago

MUDA Scam: ಮುಡಾ ಜಮೀನಿನ ಸಂಪೂರ್ಣ ದಾಖಲೆಗಳನ್ನು ತೆರೆದಿಟ್ಟ ಸಿಎಂ ಸಿದ್ದರಾಮಯ್ಯ; ಇಲ್ಲಿದೆ ವಿವರ

Vinod Raj Visited Renuka Swamy Family Gave Them 1 Lakh Rs and shares Opinion
ಸ್ಯಾಂಡಲ್ ವುಡ್32 mins ago

Actor Darshan: ರೇಣುಕಾ ಸ್ವಾಮಿ ಕುಟುಂಬ ಭೇಟಿಯಾಗಿ ಧನ ಸಹಾಯ ಮಾಡಿದ ವಿನೋದ್‌ ರಾಜ್‌ !

Viral News
Latest33 mins ago

Viral News: ಸಾಯುವ ಮುನ್ನ ವಿದ್ಯಾರ್ಥಿಗಳ ಜೀವ ಕಾಪಾಡಿದ ಶಾಲಾ ಬಸ್ ಚಾಲಕ!

Cylinder blast in Hulimavu
ಬೆಂಗಳೂರು34 mins ago

Cylinder Blast: ಅಕ್ರಮ ರೀ ಫಿಲ್ಲಿಂಗ್‌ ಅಡ್ಡೆಯಾದ ಹುಳಿಮಾವು;ಸಿಲಿಂಡರ್ ಸ್ಫೋಟಕ್ಕೆ ಪಾತ್ರೆ ಅಂಗಡಿ ಛಿದ್ರ ಛಿದ್ರ

Actor Darshan
ಕರ್ನಾಟಕ36 mins ago

Actor Darshan: ಜೈಲಲ್ಲಿ ದರ್ಶನ್ ಭೇಟಿಯಾದ ಟಾಲಿವುಡ್ ಖ್ಯಾತ ನಟ ನಾಗಶೌರ್ಯ

Maharaja Trophy Squads
ಕ್ರೀಡೆ44 mins ago

Maharaja Trophy Squads: ಹರಾಜಿನ ಬಳಿಕ ಎಲ್ಲ ತಂಡಗಳ ಆಟಗಾರರ ಪಟ್ಟಿ ಹೀಗಿದೆ

cm siddaramaiah pressmeet
ಪ್ರಮುಖ ಸುದ್ದಿ57 mins ago

MUDA Scam: ಬಿಜೆಪಿಯವರದು ಮನೆಮುರುಕ ರಾಜಕೀಯ; ಮುಡಾ ಜಮೀನಿನಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ21 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್1 day ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ1 day ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ1 day ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ3 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ6 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌