Site icon Vistara News

Paris Olympics 2024 : ಆ.​​​ 5ರಂದು ಭಾರತದ ಅಥ್ಲೀಟ್​ಗಳು ಒಲಿಂಪಿಕ್ಸ್​ನ ಯಾವ ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ? ಇಲ್ಲಿದೆ ಎಲ್ಲ ಮಾಹಿತಿ

Paris Olympics 2024

ನವ ದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನ (Paris Olympics 2024) ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಯ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಯುವ ಷಟ್ಲರ್​ ಲಕ್ಷ್ಯ ಸೇನ್ ಸೋತು ಫೈನಲ್​​ಗೆ ಪ್ರವೇಶಿಸಲು ವಿಫ;ರಾದರು. ಇದು ನೋವಿನ ವಿಚಾರವಾದರೂ ಅವರಿನ್ನೂ ಪದಕದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ 2024 ಅಭಿಯಾನ ಕೊನೆಗೊಳಿಸಬಹುದು. ಸೋಮವಾರ ನಡೆಯಲಿರುವ ಕಂಚಿನ ಪದಕದ ಪಂದ್ಯದಲ್ಲಿ ಅವರು ಮಲೇಷ್ಯಾದ ಲೀ ಜಿಯಾ ಜಿ ವಿರುದ್ಧ ಕಠಿಣ ಸವಾಲು ಎದುರಿಸಲಿದ್ದಾರೆ. ಅಲ್ಲಿ ಗೆದ್ದರೆ ಪದಕವೊಂದು ಖಚಿತ. ಸೋಮವಾರ ಭಾರತದ ಕ್ರೀಡಾಭಿಮಾನಿಗಳು ಅವರ ಬಗ್ಗೆ ಗಮನ ಇಟ್ಟಿದ್ದಾರೆ.

ಸರಣಿ ರಾಷ್ಟ್ರೀಯ ದಾಖಲೆ ಮುರಿದಿರುವ ಅವಿನಾಶ್ ಸಾಬ್ಲೆ ಪುರುಷರ ಸ್ಟೀಪಲ್ ಚೇಸ್ ಹೀಟ್ಸ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಅವರು ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಭರವಸೆಯಿದೆ. ಮಹಿಳೆಯರ 68 ಕೆ.ಜಿ ವಿಭಾಗದಲ್ಲಿ ಭಾರತದ ನಿಶಾ ದಹಿಯಾ ಪದಕ ಸುತ್ತುಗಳನ್ನು ಪ್ರವೇಶಿಸಲು ಹೋರಾಡುವುದರೊಂದಿಗೆ ಭಾರತದ ಕುಸ್ತಿ ವಿಭಾಗವು ಸೋಮವಾರ ಕಣಕ್ಕೆ ಇಳಿಯಲಿದೆ. ಭಾರತದ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿಯರು ಸೋಮವಾರ ತಮ್ಮ ತಂಡದ ಸ್ಪರ್ಧೆ ಪ್ರಾರಂಭಿಸಲಿದ್ದಾರೆ. ಹೀಗೆ ಸೋಮವಾರವೂ ಭಾರತಕ್ಕೆ ಹಲವಾರು ಆಶಾಭಾವಗಳಿವೆ. ಅವುಗಳ ಬಗ್ಗ ಗಮನ ಹರಿಸೋಣ.

ಆಗಸ್ಟ್ 5, ಸೋಮವಾರದ ಭಾರತದ ವೇಳಾಪಟ್ಟಿಯ ನೋಟ ಇಲ್ಲಿದೆ

ಮಧ್ಯಾಹ್ನ 12:30: ಸ್ಕೀಟ್ ಮಿಶ್ರ ತಂಡ ಅರ್ಹತಾ ಸುತ್ತು. ಮಹೇಶ್ವರಿ ಚೌಹಾಣ್ ಮತ್ತು ಅನಂತ್ ಜೀತ್ ಸಿಂಗ್ ನರುಕಾ.

ಮಧ್ಯಾಹ್ನ 1:30: ಟೇಬಲ್ ಟೆನಿಸ್ – 16 ನೇ ಸುತ್ತಿನ ಮಹಿಳಾ ತಂಡ ಸುತ್ತಿನಲ್ಲಿ ಭಾರತ ಮತ್ತು ರೊಮೇನಿಯಾ.

ಶ್ರೀಜಾ ಅಕುಲಾ, ಮಣಿಕಾ ಬಾತ್ರಾ ಮತ್ತು ಅರ್ಚನಾ ಕಾಮತ್ ಅವರನ್ನೊಳಗೊಂಡ ಭಾರತ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ.

ಇದನ್ನೂ ಓದಿ: Lovlina Borgohain : ಲವ್ಲಿನಾ ಬೊರ್ಗೊಹೈನ್​​ಗೆ ಸೋಲು; ಒಲಿಂಪಿಕ್ಸ್​​ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನ ಅಂತ್ಯ

ಮಧ್ಯಾಹ್ನ 3:25: ಅಥ್ಲೆಟಿಕ್ಸ್ – ಮಹಿಳೆಯರ 400 ಮೀಟರ್ ಹೀಟ್ಸ್​ನಲ್ಲಿ ಕಿರಣ್ ಪಹಲ್.

ಮಧ್ಯಾಹ್ನ 3:45: ಸೇಯ್ಲಿಂಗ್​: ಮಹಿಳಾ ಡಿಂಗಿ ರೇಸ್ 9 ಮತ್ತು 10 ರಲ್ಲಿ ನೇತ್ರಾ ಕುಮನನ್.

ಸಂಜೆ 6: ಬ್ಯಾಡ್ಮಿಂಟನ್​ ಪುರುಷರ ಸಿಂಗಲ್ಸ್ ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಲಕ್ಷ್ಯ ಸೇನ್ ಮತ್ತು ಮಲೇಷ್ಯಾದ ಲೀ ಜಿಯಾ ಝಿ ಹೋರಾಡಲಿದ್ದಾರೆ.

ಸಂಜೆ 6:10: ಸೇಯ್ಲಿಂಗ್​, ಪುರುಷರ ಡಿಂಗಿ ರೇಸ್ 9 ಮತ್ತು 10 ರಲ್ಲಿ ವಿಷ್ಣು ಸರವಣನ್.

ಸಂಜೆ 6:30: ಮಹಿಳೆಯರ 68 ಕೆ.ಜಿ ಫ್ರೀಸ್ಟೈಲ್ ಕುಸ್ತಿಯ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ನಿಶಾ ದಹಿಯಾ.

ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳು ಕೂಡ ಒಂದೇ ದಿನ ನಡೆಯಲಿವೆ.

ರಾತ್ರಿ 10:31: ಅಥ್ಲೆಟಿಕ್ಸ್ – ಪುರುಷರ 3000 ಮೀಟರ್ ಸ್ಟೀಪಲ್​ಚೇಸ್​ ಹೀಟ್ಸ್​​ನಲ್ಲಿ ಅವಿನಾಶ್ ಸಾಬ್ಲೆ.

Exit mobile version