Paris Olympics 2024 : ಆ.​​​ 5ರಂದು ಭಾರತದ ಅಥ್ಲೀಟ್​ಗಳು ಒಲಿಂಪಿಕ್ಸ್​ನ ಯಾವ ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ? ಇಲ್ಲಿದೆ ಎಲ್ಲ ಮಾಹಿತಿ - Vistara News

ಕ್ರೀಡೆ

Paris Olympics 2024 : ಆ.​​​ 5ರಂದು ಭಾರತದ ಅಥ್ಲೀಟ್​ಗಳು ಒಲಿಂಪಿಕ್ಸ್​ನ ಯಾವ ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ? ಇಲ್ಲಿದೆ ಎಲ್ಲ ಮಾಹಿತಿ

Paris Olympics 2024 : ಸರಣಿ ರಾಷ್ಟ್ರೀಯ ದಾಖಲೆ ಮುರಿದಿರುವ ಅವಿನಾಶ್ ಸಾಬ್ಲೆ ಪುರುಷರ ಸ್ಟೀಪಲ್ ಚೇಸ್ ಹೀಟ್ಸ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಅವರು ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಭರವಸೆಯಿದೆ. ಮಹಿಳೆಯರ 68 ಕೆ.ಜಿ ವಿಭಾಗದಲ್ಲಿ ಭಾರತದ ನಿಶಾ ದಹಿಯಾ ಪದಕ ಸುತ್ತುಗಳನ್ನು ಪ್ರವೇಶಿಸಲು ಹೋರಾಡುವುದರೊಂದಿಗೆ ಭಾರತದ ಕುಸ್ತಿ ವಿಭಾಗವು ಸೋಮವಾರ ಕಣಕ್ಕೆ ಇಳಿಯಲಿದೆ.

VISTARANEWS.COM


on

Paris Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನ (Paris Olympics 2024) ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಯ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಯುವ ಷಟ್ಲರ್​ ಲಕ್ಷ್ಯ ಸೇನ್ ಸೋತು ಫೈನಲ್​​ಗೆ ಪ್ರವೇಶಿಸಲು ವಿಫ;ರಾದರು. ಇದು ನೋವಿನ ವಿಚಾರವಾದರೂ ಅವರಿನ್ನೂ ಪದಕದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ 2024 ಅಭಿಯಾನ ಕೊನೆಗೊಳಿಸಬಹುದು. ಸೋಮವಾರ ನಡೆಯಲಿರುವ ಕಂಚಿನ ಪದಕದ ಪಂದ್ಯದಲ್ಲಿ ಅವರು ಮಲೇಷ್ಯಾದ ಲೀ ಜಿಯಾ ಜಿ ವಿರುದ್ಧ ಕಠಿಣ ಸವಾಲು ಎದುರಿಸಲಿದ್ದಾರೆ. ಅಲ್ಲಿ ಗೆದ್ದರೆ ಪದಕವೊಂದು ಖಚಿತ. ಸೋಮವಾರ ಭಾರತದ ಕ್ರೀಡಾಭಿಮಾನಿಗಳು ಅವರ ಬಗ್ಗೆ ಗಮನ ಇಟ್ಟಿದ್ದಾರೆ.

ಸರಣಿ ರಾಷ್ಟ್ರೀಯ ದಾಖಲೆ ಮುರಿದಿರುವ ಅವಿನಾಶ್ ಸಾಬ್ಲೆ ಪುರುಷರ ಸ್ಟೀಪಲ್ ಚೇಸ್ ಹೀಟ್ಸ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಅವರು ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಭರವಸೆಯಿದೆ. ಮಹಿಳೆಯರ 68 ಕೆ.ಜಿ ವಿಭಾಗದಲ್ಲಿ ಭಾರತದ ನಿಶಾ ದಹಿಯಾ ಪದಕ ಸುತ್ತುಗಳನ್ನು ಪ್ರವೇಶಿಸಲು ಹೋರಾಡುವುದರೊಂದಿಗೆ ಭಾರತದ ಕುಸ್ತಿ ವಿಭಾಗವು ಸೋಮವಾರ ಕಣಕ್ಕೆ ಇಳಿಯಲಿದೆ. ಭಾರತದ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿಯರು ಸೋಮವಾರ ತಮ್ಮ ತಂಡದ ಸ್ಪರ್ಧೆ ಪ್ರಾರಂಭಿಸಲಿದ್ದಾರೆ. ಹೀಗೆ ಸೋಮವಾರವೂ ಭಾರತಕ್ಕೆ ಹಲವಾರು ಆಶಾಭಾವಗಳಿವೆ. ಅವುಗಳ ಬಗ್ಗ ಗಮನ ಹರಿಸೋಣ.

ಆಗಸ್ಟ್ 5, ಸೋಮವಾರದ ಭಾರತದ ವೇಳಾಪಟ್ಟಿಯ ನೋಟ ಇಲ್ಲಿದೆ

ಮಧ್ಯಾಹ್ನ 12:30: ಸ್ಕೀಟ್ ಮಿಶ್ರ ತಂಡ ಅರ್ಹತಾ ಸುತ್ತು. ಮಹೇಶ್ವರಿ ಚೌಹಾಣ್ ಮತ್ತು ಅನಂತ್ ಜೀತ್ ಸಿಂಗ್ ನರುಕಾ.

ಮಧ್ಯಾಹ್ನ 1:30: ಟೇಬಲ್ ಟೆನಿಸ್ – 16 ನೇ ಸುತ್ತಿನ ಮಹಿಳಾ ತಂಡ ಸುತ್ತಿನಲ್ಲಿ ಭಾರತ ಮತ್ತು ರೊಮೇನಿಯಾ.

ಶ್ರೀಜಾ ಅಕುಲಾ, ಮಣಿಕಾ ಬಾತ್ರಾ ಮತ್ತು ಅರ್ಚನಾ ಕಾಮತ್ ಅವರನ್ನೊಳಗೊಂಡ ಭಾರತ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ.

ಇದನ್ನೂ ಓದಿ: Lovlina Borgohain : ಲವ್ಲಿನಾ ಬೊರ್ಗೊಹೈನ್​​ಗೆ ಸೋಲು; ಒಲಿಂಪಿಕ್ಸ್​​ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನ ಅಂತ್ಯ

ಮಧ್ಯಾಹ್ನ 3:25: ಅಥ್ಲೆಟಿಕ್ಸ್ – ಮಹಿಳೆಯರ 400 ಮೀಟರ್ ಹೀಟ್ಸ್​ನಲ್ಲಿ ಕಿರಣ್ ಪಹಲ್.

ಮಧ್ಯಾಹ್ನ 3:45: ಸೇಯ್ಲಿಂಗ್​: ಮಹಿಳಾ ಡಿಂಗಿ ರೇಸ್ 9 ಮತ್ತು 10 ರಲ್ಲಿ ನೇತ್ರಾ ಕುಮನನ್.

ಸಂಜೆ 6: ಬ್ಯಾಡ್ಮಿಂಟನ್​ ಪುರುಷರ ಸಿಂಗಲ್ಸ್ ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಲಕ್ಷ್ಯ ಸೇನ್ ಮತ್ತು ಮಲೇಷ್ಯಾದ ಲೀ ಜಿಯಾ ಝಿ ಹೋರಾಡಲಿದ್ದಾರೆ.

ಸಂಜೆ 6:10: ಸೇಯ್ಲಿಂಗ್​, ಪುರುಷರ ಡಿಂಗಿ ರೇಸ್ 9 ಮತ್ತು 10 ರಲ್ಲಿ ವಿಷ್ಣು ಸರವಣನ್.

ಸಂಜೆ 6:30: ಮಹಿಳೆಯರ 68 ಕೆ.ಜಿ ಫ್ರೀಸ್ಟೈಲ್ ಕುಸ್ತಿಯ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ನಿಶಾ ದಹಿಯಾ.

ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳು ಕೂಡ ಒಂದೇ ದಿನ ನಡೆಯಲಿವೆ.

ರಾತ್ರಿ 10:31: ಅಥ್ಲೆಟಿಕ್ಸ್ – ಪುರುಷರ 3000 ಮೀಟರ್ ಸ್ಟೀಪಲ್​ಚೇಸ್​ ಹೀಟ್ಸ್​​ನಲ್ಲಿ ಅವಿನಾಶ್ ಸಾಬ್ಲೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IND vs SL ODI : ಎರಡನೇ ಏಕ ದಿನ ಪಂದ್ಯದಲ್ಲಿ ಭಾರತ ತಂಡಕ್ಕೆ32 ರನ್ ಸೋಲು, ಸರಣಿಯಲ್ಲಿ ಲಂಕಾಗೆ ಮುನ್ನಡೆ

IND vs SL ODI : ಲಂಕಾ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ಗೆ 240 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ.. ಓವರ್​ಗಳಲ್ಲಿ 42.2 ಓವರ್​ಗಳಲ್ಲಿ 208 ರನ್​ಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು. ಜೆಫ್ರಿ ವಂಡರ್ಸೆ 6 ವಿಕೆಟ್​ ಹಾಗೂ ಚರಿತ್ ಅಸಲಂಕಾ 3 ವಿಕೆಟ್ ಉರುಳಿಸಿ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

VISTARANEWS.COM


on

IND vs SL
Koo

ಬೆಂಗಳೂರು : ಆತಿಥೇಯ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ (IND vs SL ODI ) ಎರಡನೇ ಪಂದ್ಯದಲ್ಲಿ ಭಾರತ ತಂಡ 32 ರನ್​ಗಳ ಸೋಲಿಗೆ ಒಳಗಾಗಿದೆ. ಲಂಕಾದ ಸ್ಪಿನ್ನರ್​ಗಳ ದಾಳಿಗೆ ನಲುಗಿದ ಭಾರತೀಯ ಬ್ಯಾಟರ್​ಗಳು ಸುಲಭವಾಗಿ ಶರಣಾದರು. ಪ್ರಮುಖವಾಗಿ ಕಳೆದ ಎರಡು ಪಂದ್ಯಗಳಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ಪ್ರದರ್ಶನದ ಬಗ್ಗೆ ಟೀಕೆಗಳು ಕೇಳಿ ಬಂದವು. ಭಾರತ ಹಾಗೂ ಲಂಕಾ ನಡುವಿನ ಮೊದಲ ಪಂದ್ಯವು ಟೈ ಆಗಿತ್ತು. ಹೀಗಾಗಿ ಈ ಗೆಲುವಿನೊಂದಿಗೆ ಲಂಕಾ ತಂಡವು ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ. ಮುಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಮಾತ್ರ ಭಾರತ ತಂಡದ ಮರ್ಯಾದೆ ಉಳಿಯಬಹುದು. ಇಲ್ಲವಾದರೆ ರೋಹಿತ್ ಶರ್ಮಾ ಬಳಗ ಮುಖಭಂಗ ಅನುಭವಿಸುವ ಎಲ್ಲ ಸಾಧ್ಯತೆಗಳಿವೆ.

ಕೊಲೊಂಬೊದ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಲಂಕಾ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ಗೆ 240 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ.. ಓವರ್​ಗಳಲ್ಲಿ 42.2 ಓವರ್​ಗಳಲ್ಲಿ 208 ರನ್​ಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು. ಜೆಫ್ರಿ ವಂಡರ್ಸೆ 6 ವಿಕೆಟ್​ ಹಾಗೂ ಚರಿತ್ ಅಸಲಂಕಾ 3 ವಿಕೆಟ್ ಉರುಳಿಸಿ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಲಂಕಾ ಸ್ಪಿನ್ನರ್​ಗಳ ದಾಳಿಗೆ ನಿಯಮಿತವಾಗಿ ವಿಕೆಟ್​ ಕಳೆದುಕೊಂಡು ನಿರಾಸೆಗೆ ಒಳಗಾಯಿತು.

ಸ್ಪಿನ್ ಪಿಚ್​ನಲ್ಲಿ ಸವಾಲಿನ ಮೊತ್ತವೇ ಅಗಿದ್ದ 241 ರನ್​ಗಳನ್ನು ಬೆನ್ನಟ್ಟಲು ಹೊರಟ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. ರೋಹಿತ್ ಶರ್ಮಾ ಮತ್ತೊಂದು ಬಾರಿ ಅರ್ಧ ಶತಕ (64 ರನ್​, 44 ಎಸೆತ, 5 ಫೊರ್​, 4 ಸಿಕ್ಸರ್​) ಉತ್ತಮ ಆರಂಭ ತಂದುಕೊಟ್ಟರು. ಶುಭ್​​ ಮನ್​ ಗಿಲ್​ ಕೂಡ 35 ರನ್ ಬಾರಿಸಿ ಅವರಿಗೆ ನೆರವಾದರು. ರೋಹಿತ್ ತಮ್ಮ ವಿಕೆಟ್ ಒಪ್ಪಿಸುವ ಮೊದಲು ಭಾರತ 13.3 ಓವರ್​ಗಳಲ್ಲಿ 97 ರನ್ ಬಾರಿಸಿ ನಿಶ್ಚಿಂತೆಯಿಂದ ಇತ್ತು. ಆದರೆ, ಆ ಬಳಿಕ ಭಾರತದ ಬ್ಯಾಟರ್​ಗಳು ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವಿರಾಟ್​ ಕೊಹ್ಲಿ 14 ರನ್​ಗೆ ಔಟಾದರೆ, ಬಡ್ತಿ ಪಡೆದುಕೊಂಡು ನಾಲ್ಕನೇ ಕ್ರಮಾಂಕದಲ್ಲಿ ಬಂದ ಶಿವಂ ದುಬೆ ಶೂನ್ಯಕ್ಕೆ ಔಟಾದರು.

ಅಕ್ಷರ್ ಪಟೇಲ್ ಆಧಾರ

ಮಧ್ಯಮ ಕ್ರಮಾಂಕದಲ್ಲಿ ಆಡಲು ಇಳಿದ ಅಕ್ಷರ್ ಪಟೇಲ್ ತಂಡಕ್ಕೆ ಸ್ವಲ್ಪ ಹೊತ್ತು ಆಧಾರವಾದರು. ಅವರು 44 ರನ್ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಆದರೆ, ಉಳಿದವರು ಕ್ರೀಸ್​ನಲ್ಲಿ ನಿಲ್ಲಲು ಮನಸ್ಸು ಮಾಡಿಲ್ಲ. ಶ್ರೇಯಸ್ ಅಯ್ಯರ್​ 7 ರನ್ ಬಾರಿಸಿದರೆ, ಕೆ. ಎಲ್​ ರಾಹುಲ್ ಬ್ಯಾಟಿಂಗ್​ನಲ್ಲಿ ವೈಫಲ್ಯ ಎದುರಿಸಿ ಶೂನ್ಯಕ್ಕೆ ಔಟಾದರು. ವಾಷಿಂಗ್ಟನ್ ಸುಂದರ್​ 15 ರನ್ ಬಾರಿಸಿದರೆ ಕುಲ್ದಿಪ್​ ಯಾದವ್​ 7 ರನ್​, ಕುಲ್ದೀಪ್​ ಯಾದವ್ 7 ರನ್​, ಮೊಹಮ್ಮದ್ ಶಮಿ 4 ರನ್​, ಅರ್ಶ್​ದೀಪ್​ ಸಿಂಗ್​ 3 ರನ್ ಬಾರಿಸಿದರು.

ಇದನ್ನೂ ಓದಿ: Novak Djokovic : ಅಲ್ಕರಾಜ್ ಮಣಿಸಿ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ನೊವಾಕ್ ಜೊಕೊವಿಕ್

ಲಂಕಾದ ಲಯ ಬದ್ಧ ಬ್ಯಾಟಿಂಗ್​

ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ಲಂಕಾ ಶೂನ್ಯಕ್ಕೆ ಮೊದಲ ವಿಕೆಟ್​ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು. ಆದರೆ, ನಂತರ ಪ್ರತಿಯೊಬ್ಬರೂ ಲಯಬದ್ಧ ಬ್ಯಾಟಿಂಗ್ ಮಾಡಿದರು. ಅವಿಷ್ಕಾ ಫರ್ನಾಂಡೊ 40 ರನ್ ಬಾರಿಸಿದರೆ, ಕುಸಾಲ್​ ಮೆಂಡಿಸ್​ 30 ರನ್ ಗಳಿಸಿದರು. ಚರಿತ್ ಅಸಲಂಕಾ 25 ರನ್​, ದುನಿಲ್​ ವೆಲ್ಲಾಲಗೆ 39 ರನ್​, ಕಮಿಂಡು ಮೆಂಡಿಸ್​ 40 ರನ್ ಬಾರಿಸಿ ಭಾರತಕ್ಕೆ ಸ್ಪರ್ಧಾತ್ಮಕ ಗುರಿಯನ್ನು ಒಡ್ಡಲು ತಮ್ಮ ತಂಡಕ್ಕೆ ನೆರವಾದರು.

Continue Reading

ಪ್ರಮುಖ ಸುದ್ದಿ

Novak Djokovic : ಅಲ್ಕರಾಜ್ ಮಣಿಸಿ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ನೊವಾಕ್ ಜೊಕೊವಿಕ್

Novak Djokovic : ಆರಂಭಿಕ ಸೆಟ್ ನಲ್ಲಿ ಅಲ್ಕರಾಜ್ ಉತ್ತಮ ಆರಂಭವನ್ನು ಹೊಂದಿರಲಿಲ್ಲ. ಜೊಕೊವಿಕ್ ಮೂರು ಬ್ರೇಕ್ ಪಾಯಿಂಟ್ ಗಳನ್ನು ಗಳಿಸಿದ್ದರಿಂದ ಅವರು ಮತ್ತಷ್ಟು ಹಿನ್ನಡೆ ಅನುಭವಿಸಿದರು, ಆದರೆ ಸ್ಪೇನ್ ಆಟಗಾರ ಅವೆಲ್ಲವನ್ನೂ ಉಳಿಸಿ 2-2 ರಿಂದ ಸಮಬಲ ಸಾಧಿಸಿದರು. ಮತ್ತೆ ಅಲ್ಕರಾಜ್​ಗೆ ಜೊಕೊವಿಕ್ ಅವರ ಸರ್ವ್ ಮುರಿಯುವ ಅವಕಾಶವಿತ್ತು. ಆದರೆ ಸರ್ಬಿಯಾದ ಆಟಗಾರ ಯುವ ಆಟಗಾರನಿಗೆ ಅವಕಾಶವೇ ನೀಡಲಿಲ್ಲ.

VISTARANEWS.COM


on

Novak Djokovic
Koo

ಪ್ಯಾರಿಸ್​: ಸರ್ಬಿಯಾದ ನೊವಾಕ್ ಜೊಕೊವಿಕ್ (Novak Djokovic) ಪ್ಯಾರಿಸ್ ಒಲಿಂಪಿಕ್ಸ್ 2024 ರ ಪುರುಷರ ಟೆನಿಸ್ ಸಿಂಗಲ್ಸ್​​ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದು ಅವರ ಪಾಲಿಗೆ ಚೊಚ್ಚಲ ಒಲಿಂಪಿಕ್ಸ್​ ಚಿನ್ನ. ಭಾನುವಾರ ಫಿಲಿಪ್-ಚಾಟ್ರಿಯರ್​​ನಲ್ಲಿ ನಡೆದ ಚಿನ್ನದ ಪದಕದ ಪಂದ್ಯದಲ್ಲಿ 37 ವರ್ಷದ ಆಟಗಾರ ಸ್ಪೇನ್​​ ಕಾರ್ಲೋಸ್ ಅಲ್ಕರಾಜ್ ಅವರನ್ನು 7-6 (7-3), 7-6 (7-2) ಸೆಟ್​​ಗಳಿಂದ ಸೋಲಿಸಿದರು. ಈ ಮೂಲಕ ಒಲಿಂಪಿಕ್ಸ್​​​ ಟೆನಿಸ್​​ನ ಅತ್ಯಂತ ಹಿರಿಯ ಚಾಂಪಿಯನ್ ಎನಿಸಿಕೊಂಡರು. 21 ವರ್ಷದ ಅಲ್ಕರಾಜ್ ಗೆ ಅತ್ಯಂತ ಕಿರಿಯ ಒಲಿಂಪಿಕ್ ವಿಜೇತರಾಗುವ ಅವಕಾಶವಿತ್ತು. ಅದು ಸಾಧ್ಯವಾಗಲಿಲ್ಲ.

ಆರಂಭಿಕ ಸೆಟ್ ನಲ್ಲಿ ಅಲ್ಕರಾಜ್ ಉತ್ತಮ ಆರಂಭವನ್ನು ಹೊಂದಿರಲಿಲ್ಲ. ಜೊಕೊವಿಕ್ ಮೂರು ಬ್ರೇಕ್ ಪಾಯಿಂಟ್ ಗಳನ್ನು ಗಳಿಸಿದ್ದರಿಂದ ಅವರು ಮತ್ತಷ್ಟು ಹಿನ್ನಡೆ ಅನುಭವಿಸಿದರು, ಆದರೆ ಸ್ಪೇನ್ ಆಟಗಾರ ಅವೆಲ್ಲವನ್ನೂ ಉಳಿಸಿ 2-2 ರಿಂದ ಸಮಬಲ ಸಾಧಿಸಿದರು. ಮತ್ತೆ ಅಲ್ಕರಾಜ್​ಗೆ ಜೊಕೊವಿಕ್ ಅವರ ಸರ್ವ್ ಮುರಿಯುವ ಅವಕಾಶವಿತ್ತು. ಆದರೆ ಸರ್ಬಿಯಾದ ಆಟಗಾರ ಯುವ ಆಟಗಾರನಿಗೆ ಅವಕಾಶವೇ ನೀಡಲಿಲ್ಲ.

ಒಂಬತ್ತನೇ ಗೇಮ್ ಸಂಪೂರ್ಣ ಥ್ರಿಲ್ಲರ್ ಆಗಿ ಪರಿಣಮಿಸಿತು. ಜೊಕೊವಿಕ್ ಐದು ಬ್ರೇಕ್ ಪಾಯಿಂಟ್ ಗಳನ್ನು ಉಳಿಸಿ ಅಂತಿಮವಾಗಿ ತಮ್ಮ ಸರ್ವ್ ಹಿಡಿತದಲ್ಲಿಟ್ಟುಕೊಂಡು 5-4 ಕ್ಕೆ ಮುನ್ನಡೆದರು. ಹಲವಾರು ಬಾರಿ ನೋವಿನ ಸಮಸ್ಯೆ ಎದುರಿಸಿ ಅದರಿಂದ ಹೊರಕ್ಕೆ ಬಂದರು. ಟೈ-ಬ್ರೇಕರ್ನಲ್ಲಿಯೂ 3-3 ರಲ್ಲಿ ಸಮಬಲದ ಸಾಧನೆ ಬಂತು. ಆದರೆ ಜೊಕೊವಿಕ್ ಸತತ ನಾಲ್ಕು ಅಂಕಗಳನ್ನು ಪಡೆದರು. ಫೋರ್​ಹ್ಯಾಂಡ್​ ಬಲದೊಂದಿಗೆ ಒಂದು ಗಂಟೆ 34 ನಿಮಿಷಗಳಲ್ಲಿ ಆರಂಭಿಕ ಸೆಟ್ ಗೆದ್ದರು. ಅಲ್ಕರಾಜ್ ತನ್ನ ಎಂಟು ಬ್ರೇಕ್ ಪಾಯಿಂಟ್ ಅವಕಾಶಗಳಲ್ಲಿ ಒಂದನ್ನು ಸಹ ಪರಿವರ್ತಿಸಲು ವಿಫಲಗೊಂಡು ನಿರಾಸೆಗೆ ಒಳಗಾದರು.

ಎರಡನೇ ಸೆಟ್ ಇದೇ ರೀತಿ ಪ್ರಾರಂಭವಾಯಿತು. ಅಲ್ಲಿ ಅಲ್ಕರಾಜ್ ಮತ್ತು ಜೊಕೊವಿಕ್ ಇಬ್ಬರೂ ಪರಸ್ಪರ ಜಿದ್ದಿಗೆ ಬಿದ್ದರು. ಅಲ್ಕರಾಜ್ ಮೂರನೇ ಗೇಮ್ ನಲ್ಲಿ ಬ್ರೇಕ್ ಪಾಯಿಂಟ್ ಉಳಿಸಿ ಪಂದ್ಯವನ್ನು ಜೀವಂತವಾಗಿ ಉಳಿಸಿದರು. 3-3 ರಲ್ಲಿ ಮುಂದುವರಿಯಿತು.

ಇದನ್ನೂ ಓದಿ: Mohammed Siraj : ಲಂಕಾ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಮೊಹಮ್ಮದ್​ ಸಿರಾಜ್​

ಅಲ್ಕರಾಜ್ 5-4 ರ ಮುನ್ನಡೆಯೊಂದಿಗೆ ಸೆಟ್ ಗೆಲ್ಲುವ ಅವಕಾಶ ಹೊಂದಿದ್ದರು. ಆದರೆ ಜೊಕೊವಿಕ್​ ಅವಕಾಶ ಕೊಡದೇ ಆ ಗೇಮ್ ಗೆದ್ದರು. ಹೀಗಾಗಿ ಮೊದಲ ಸೆಟ್​ನಂತೆಯೇ ಎರಡನೇಯದೂ ಟೈ-ಬ್ರೇಕರ್​ಗೆ ಹೋಯಿತು. ಅಲ್ಕರಾಜ್ ಜೊಕೊವಿಕ್ ಅವರ ಸರ್ವ್ ಅನ್ನು ಮುರಿಯಲು ವಿಫಲಗೊಂಡು ಸೋಲೊಪ್ಪಿಕೊಂಡರು.

Continue Reading

ಕ್ರೀಡೆ

Mohammed Siraj : ಲಂಕಾ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಮೊಹಮ್ಮದ್​ ಸಿರಾಜ್​

Mohammed Siraj : ಮೊಹಮ್ಮದ್ ಸಿರಾಜ್ ಪಂದ್ಯದ ಮೊದಲ ಎಸೆತದಲ್ಲಿ ಪಥುಮ್ ನಿಸ್ಸಾಂಕಾ ಅವರನ್ನು ಔಟ್ ಮಾಡುವ ಮೂಲಕ ತಮ್ಮ ತಂಡಕ್ಕೆ ಆರಂಭಿಕ ಪ್ರಗತಿ ಒದಗಿಸಿದರು. ಸಿರಾಜ್ ಎಸೆದ ಆಫ್ -ಸ್ಟಂಪ್ ಎಸೆತವನ್ನು ಎಸೆದು ನಿಸ್ಸಾಂಕಾ ಅವರ ರಕ್ಷಣಾತ್ಮಕವಾಗಿ ಆಡಿದರು. ರಾಹುಲ್ ಕ್ಯಾಚ್ ಹಿಡಿದರು. ನಿಸ್ಸಾಂಕಾ ಗೋಲ್ಡನ್ ಡಕ್ ಗೆ ಔಟ್ ಆದರು.

VISTARANEWS.COM


on

Mohammed Siraj
Koo

ಬೆಂಗಳೂರು : ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕ ದಿನ ಸರಣಿಯ ಎರಡನೇ ಪಂದ್ಯದಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಭಾರತೀಯ ಬೌಲರ್​ಗಳು ಇರು ಎಲೈಟ್ ಪಟ್ಟಿಗೆ ಸೇರಿದ್ದಾರೆ. ಮೊಹಮ್ಮದ್ ಸಿರಾಜ್ (Mohammed Siraj) 50 ಓವರ್​ಗಳ ಅಂತರರಾಷ್ಟ್ರೀಯ ಸ್ವರೂಪದಲ್ಲಿ ಹೊಸ ಚೆಂಡಿನೊಂದಿಗೆ ಈ ಮೈಲಿಗಲ್ಲನ್ನು ಸಾಧಿಸಿದ ನಾಲ್ಕನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಚರಿತ್ ಅಸಲಂಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕಮಿಂಡು ಮೆಂಡಿಸ್ ಮತ್ತು ಜೆಫ್ರಿ ವಾಂಡರ್ಸೆ ತಂಡಕ್ಕೆ ಮರಳಿದ್ದರಿಂದ ಆತಿಥೇಯರು ತಮ್ಮ ಪ್ಲೇಯಿಂಗ್ ಇಲೆವೆನ್ನಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿತ್ತು .

ಮೊಹಮ್ಮದ್ ಸಿರಾಜ್ ಸಾಧನೆ

ಮೊಹಮ್ಮದ್ ಸಿರಾಜ್ ಪಂದ್ಯದ ಮೊದಲ ಎಸೆತದಲ್ಲಿ ಪಥುಮ್ ನಿಸ್ಸಾಂಕಾ ಅವರನ್ನು ಔಟ್ ಮಾಡುವ ಮೂಲಕ ತಮ್ಮ ತಂಡಕ್ಕೆ ಆರಂಭಿಕ ಪ್ರಗತಿ ಒದಗಿಸಿದರು. ಸಿರಾಜ್ ಎಸೆದ ಆಫ್ -ಸ್ಟಂಪ್ ಎಸೆತವನ್ನು ಎಸೆದು ನಿಸ್ಸಾಂಕಾ ಅವರ ರಕ್ಷಣಾತ್ಮಕವಾಗಿ ಆಡಿದರು. ರಾಹುಲ್ ಕ್ಯಾಚ್ ಹಿಡಿದರು. ನಿಸ್ಸಾಂಕಾ ಗೋಲ್ಡನ್ ಡಕ್ ಗೆ ಔಟ್ ಆದರು.

ಪಥುಮ್ ನಿಸ್ಸಾಂಕಾ ಅವರನ್ನು ಔಟ್ ಮಾಡಿದ ನಂತರ, 30 ವರ್ಷದ ವೇಗಿ ಡಿ ಮೊಹಾಂತಿ, ಜಹೀರ್ ಖಾನ್ ಮತ್ತು ಪ್ರವೀಣ್ ಕುಮಾರ್ ಅವರ ಎಲೈಟ್ ಪಟ್ಟಿಗೆ ಸೇರಿದರು. ಏಕದಿನ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಭಾರತದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಸಿರಾಜ್ ಪಾತ್ರರಾದರು. ವಿಶೇಷವೆಂದರೆ, ಜಹೀರ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಎಸೆತದಲ್ಲಿ ಎದುರಾಳಿ ಬ್ಯಾಟ್ಸ್ಮನ್ ಅನ್ನು ನಾಲ್ಕು ಬಾರಿ ಔಟ್ ಮಾಡಿದ್ದಾರೆ.

  • ಡಿ ಮೊಹಾಂತಿ ವೆಸ್ಟ್ ಇಂಡೀಸ್ 1999 ರಿಡ್ಲೆ ಜೇಕಬ್ಸ್
  • ಜಹೀರ್ ಖಾನ್ ನ್ಯೂಜಿಲೆಂಡ್ 2001 ಮ್ಯಾಥ್ಯೂ ಸಿಂಕ್ಲೇರ್
  • ಜಹೀರ್ ಖಾನ್ ಶ್ರೀಲಂಕಾ 2002 ಸನತ್ ಜಯಸೂರ್ಯ
  • ಜಹೀರ್ ಖಾನ್ ಆಸ್ಟ್ರೇಲಿಯಾ 2007 ಮೈಕಲ್ ಕ್ಲಾರ್ಕ್
  • ಜಹೀರ್ ಖಾನ್ ಶ್ರೀಲಂಕಾ 2009 ಉಪುಲ್ ತರಂಗ
  • ಪ್ರವೀಣ್ ಕುಮಾರ್ ಶ್ರೀಲಂಕಾ 2010 ಉಪುಲ್ ತರಂಗ
  • ಮೊಹಮ್ಮದ್ ಸಿರಾಜ್ ಶ್ರೀಲಂಕಾ 2024 ಪಥುಮ್ ನಿಸ್ಸಾಂಕಾ

ಮೊಹಮ್ಮದ್ ಸಿರಾಜ್ ತಮ್ಮ ಮೊದಲ ಸ್ಪೆಲ್​​ನಲ್ಲಿ ಹೆಚ್ಚಿನ ವಿಕೆಟ್​ ಪಡೆಯಲು ವಿಫಲರಾದರು. ಬಲಗೈ ವೇಗಿ ಪವರ್ ಪ್ಲೇ ಸಮಯದಲ್ಲಿ ತಮ್ಮ ಐದು ಓವರ್ ಗಳಲ್ಲಿ 16 ರನ್ ಗಳನ್ನು ನೀಡಿದರು. ಶ್ರೀಲಂಕಾದ ಅಗ್ರ ಕ್ರಮಾಂಕದ ಬ್ಯಾಟರ್​​ಳಾದ ಕುಸಾಲ್ ಮೆಂಡಿಸ್ ಮತ್ತು ಅವಿಷ್ಕಾ ಫರ್ನಾಂಡೊ ಪಂದ್ಯದ ಮೊದಲ 10 ಓವರ್​ಗಳಲ್ಲಿ ತಂಡ ಇನ್ನಷ್ಟು ವಿಕೆಟ್​​ ಕಳೆದುಕೊಳ್ಳದಂತೆ ನೋಡಿಕೊಂಡರು.

ಮೊದಲ ಏಕದಿನ ಪಂದ್ಯ ಟೈನಲ್ಲಿ ಕೊನೆಗೊಂಡಿತು

ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಶುಕ್ರವಾರ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಟೈನಲ್ಲಿ ಕೊನೆಗೊಂಡಿತ್ತು. ಟಾಸ್ ಗೆದ್ದ ಮೊದಲು ಬ್ಯಾಟ್ ಮಾಡಿದ ಲಂಕಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. 65 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದ ದುನಿತ್ ವೆಲ್ಲಾಲಗೆ ಶ್ರೀಲಂಕಾ ಪರ ಗರಿಷ್ಠ ಸ್ಕೋರ್ ಗಳಿಸಿದರು. ಪಥುಮ್ ನಿಸ್ಸಾಂಕಾ 75 ಎಸೆತಗಳಲ್ಲಿ 9 ಬೌಂಡರಿ ಸೇರಿದಂತೆ 56 ರನ್ ಸೇರಿಸಿದರು. ಭಾರತದ ಪರ ಅರ್ಷ್ದೀಪ್ ಸಿಂಗ್ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ: Paris Olympics 2024 : ಆ.​​​ 5ರಂದು ಭಾರತದ ಅಥ್ಲೀಟ್​ಗಳು ಒಲಿಂಪಿಕ್ಸ್​ನ ಯಾವ ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ? ಇಲ್ಲಿದೆ ಎಲ್ಲ ಮಾಹಿತಿ

ಇದಕ್ಕೆ ಪ್ರತ್ಯುತ್ತರವಾಗಿ ಭಾರತ ತಂಡವು ಉತ್ತಮ ಆರಂಭವನ್ನು ಪಡೆಯಿತು. ನಾಯಕ ರೋಹಿತ್ ಶರ್ಮಾ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 58 ರನ್ ಗಳಿಸಿದರು. ಭಾರತ ತಂಡವು ನಿಯಮಿತ ವಿರಾಮಗಳಲ್ಲಿ ವಿಕೆಟ್ ಗಳನ್ನು ಕಳೆದುಕೊಂಡಿತು. ಅವರು ಅಂತಿಮ ರನ್ ಗಳಿಸಲು ವಿಫಲರಾದರು ಮತ್ತು ಎರಡು ವಿಕೆಟ್ ಗಳನ್ನು ಕಳೆದುಕೊಂಡರು, ಇದರ ಪರಿಣಾಮವಾಗಿ ಸಮಬಲ ಸಾಧಿಸಿತು.

Continue Reading

ಕ್ರಿಕೆಟ್

Chennai Super Kings : ಮಹಿಳೆಯರ ಪ್ರೀಮಿಯರ್ ಲೀಗ್​ಗೆ ಎಂಟ್ರಿ ಪಡೆಯಲಿದೆ ಚೆನ್ನೈ ಸೂಪರ್ ಕಿಂಗ್ಸ್​

Chennai Super Kings : ಶ್ರೀನಿವಾಸನ್ ಅವರ ಪುತ್ರಿ ಮತ್ತು ಇಂಡಿಯಾ ಸಿಮೆಂಟ್ಸ್​​ನ ಪೂರ್ಣಾವಧಿ ನಿರ್ದೇಶಕಿ ರೂಪಾ ಗುರುನಾಥ್ ಅವರನ್ನು ಸಿಎಸ್​ಕೆಸಿಎಲ್ ಮಂಡಳಿಯ ಭಾಗವಾಗಿದ್ದಾರೆ. ಫ್ರ್ಯಾಂಚೈಸ್​ನ ನಿರ್ವಹಣೆಯಲ್ಲಿ ಅವರ ವ್ಯಾಪಕ ತೊಡಗಿಸಿಕೊಳ್ಳುವಿಕೆಯನ್ನು ಗಮನಿಸಿದರೆ, ಅವರು ಮುಂಬರುವ ದಿನಗಳಲ್ಲಿ ತಂಡಗಳ ವಿಸ್ತರಣಾ ಉಪಕ್ರಮಗಳನ್ನು ಮುನ್ನಡೆಸುವ ನಿರೀಕ್ಷೆಯಿದೆ. ಇದು ಮಹಿಳೆಯರ ತಂಡದಲ್ಲಿ ಹೂಡಿಕೆಗೆ ಕಾರಣವಾಗಬಹುದು.

VISTARANEWS.COM


on

Chennai Super Kings
Koo

ಬೆಂಗಳೂರು: ಕ್ರಿಕೆಟ್ ಜಗತ್ತಿಗೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಇಂಡಿಯಾ ಸಿಮೆಂಟ್ಸ್​​ನ ಕ್ರೀಡಾ ವಿಭಾಗವು ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್ (ಸಿಎಸ್​ಕೆಸಿಎಲ್) ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆವೃತ್ತಿಯಲ್ಲಿ ಸಿಎಸ್​ಕೆ ಫ್ರಾಂಚೈಸಿ (Chennai Super Kings ) ಮಹಿಳೆಯರ ಕ್ರಿಕೆಟ್​ನಲ್ಲೂ ಹೂಡಿಕೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹೀಗಾಗಿ 2025ನೇ ಆವೃತ್ತಿಯಲ್ಲಿ ಒಟ್ಟು ತಂಡಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

ಶ್ರೀನಿವಾಸನ್ ಅವರ ಪುತ್ರಿ ಮತ್ತು ಇಂಡಿಯಾ ಸಿಮೆಂಟ್ಸ್​​ನ ಪೂರ್ಣಾವಧಿ ನಿರ್ದೇಶಕಿ ರೂಪಾ ಗುರುನಾಥ್ ಅವರನ್ನು ಸಿಎಸ್​ಕೆಸಿಎಲ್ ಮಂಡಳಿಯ ಭಾಗವಾಗಿದ್ದಾರೆ. ಫ್ರ್ಯಾಂಚೈಸ್​ನ ನಿರ್ವಹಣೆಯಲ್ಲಿ ಅವರ ವ್ಯಾಪಕ ತೊಡಗಿಸಿಕೊಳ್ಳುವಿಕೆಯನ್ನು ಗಮನಿಸಿದರೆ, ಅವರು ಮುಂಬರುವ ದಿನಗಳಲ್ಲಿ ತಂಡಗಳ ವಿಸ್ತರಣಾ ಉಪಕ್ರಮಗಳನ್ನು ಮುನ್ನಡೆಸುವ ನಿರೀಕ್ಷೆಯಿದೆ. ಇದು ಮಹಿಳೆಯರ ತಂಡದಲ್ಲಿ ಹೂಡಿಕೆಗೆ ಕಾರಣವಾಗಬಹುದು.

ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಭಾಗವಹಿಸುವ ಸಾಧ್ಯತೆಯ ಬಗ್ಗೆಯೂ ಗುರುನಾಥ್ ಯೋಚಿಸುತ್ತಿದ್ದಾರೆ. ಅದರಿಂದ ಆಗುವ ಆರ್ಥಿಕ ಕಾರ್ಯಸಾಧ್ಯತೆಯನ್ನು ನಿರ್ಣಯಿಸುತ್ತಿದ್ದಾರೆ. ಈ ವರ್ಷ ಭಾಗಿಯಾಗಿರುವ ಐದು ಐಪಿಎಲ್ ಫ್ರಾಂಚೈಸಿಗಳ ಅನುಭವಗಳಿಂದ ಒಳನೋಟಗಳನ್ನು ಪಡೆಯುತ್ತಿದ್ದಾರೆ. ಅದರ ಪ್ರಕಾರ ಮುಂದಿನ ಹೂಡಿಕೆ ಮಾಡಲು ನಿರ್ಧರಿಸಲಿದೆ.

ಇಂಡಿಯಾ ಸಿಮೆಂಟ್ಸ್ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್​ನಲ್ಲಿ ಕ್ರಿಕೆಟ್ ಬೆಳೆಸುವ ಶ್ರೀಮಂತ ಪರಂಪರೆ ಹೊಂದಿದೆ. ತನ್ನ ತಂಡಗಳು ಮತ್ತು ಕೋಚಿಂಗ್ ಸಿಬ್ಬಂದಿಯ ಮೂಲಕ ಗಣನೀಯ ಕೊಡುಗೆಗಳನ್ನು ನೀಡಿದೆ. ಹೀಗಾಗಿ ಈ ಕಂಪನಿಯು ಆ ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರಾಬಲ್ಯ ಪಡೆದುಕೊಂಡಿದೆ.

ಇದನ್ನೂ ಓದಿ ; Lovlina Borgohain : ಲವ್ಲಿನಾ ಬೊರ್ಗೊಹೈನ್​​ಗೆ ಸೋಲು; ಒಲಿಂಪಿಕ್ಸ್​​ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನ ಅಂತ್ಯ

ಐಪಿಎಲ್ ಇತಿಹಾಸದಲ್ಲಿ ಸಿಎಸ್​ಕೆ ಹೆಚ್ಚು ಯಶಸ್ಸು ಕಂಡಿರುವ ಫ್ರಾಂಚೈಸಿ. ಮುಂಬೈ ಜತೆ 5 ಟ್ರೋಫಿಗಳ ಜಂಟಿ ಸಾಧನೆ ಮಾಡಿದೆ. ಹೀಗಾಗಿ ಶ್ರೀಮಂತ ಲೀಗ್​ನಲ್ಲಿ ಅತ್ಯಂತ ಮೌಲ್ಯಯುತ ತಂಡ ಎಂದು ವರದಿಯಾಗಿದೆ. ಬ್ರಾಂಡ್ ಮೌಲ್ಯವು 231 ಮಿಲಿಯನ್ ಡಾಲರ್ ಎಂದು ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕಿ ಇಂಕ್ ಜೂನ್​​ಲ್ಲಿ ವರದಿ ಮಾಡಿದೆ.

ಸಿಎಸ್​ಕೆಸಿಎಲ್ ಶಾಲಾ ಮಕ್ಕಳಿಗಾಗಿ ಹೆಚ್ಚುವರಿ ತರಬೇತಿ ಅಕಾಡೆಮಿಗಳನ್ನು ಉದ್ಘಾಟಿಸಿದೆ. ಅಭಿಮಾನಿಗಳ ಪಾಲ್ಗೊಳ್ಳುವಿಕೆ ಉಪಕ್ರಮಗಳನ್ನು ಹೆಚ್ಚಿಸಲು ಮತ್ತು ವರ್ಧಿತ ಪ್ರಾಯೋಜಕತ್ವ ಮತ್ತು ಸರಕು ಮಾರಾಟದ ಮೂಲಕ ಆದಾಯ ಹೆಚ್ಚಿಸಲು ಉದ್ದೇಶಿಸಿದೆ.

ಭಾರತದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಇಂಡಿಯಾ ಸಿಮೆಂಟ್ಸ್ ಗ್ರೂಪ್​ಗೆ ಮತ್ತೆ ಸೇರಿದ್ದಾರೆ. ಅಲ್ಲಿ ಅವರು ಸಿಎಸ್​ಕೆ ವಿಸ್ತರಣಾ ಚೌಕಟ್ಟಿನೊಳಗೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.

37 ವರ್ಷದ ಕ್ರಿಕೆಟಿಗ 2016 ರವರೆಗೆ ಇಂಡಿಯಾ ಸಿಮೆಂಟ್ಸ್​ನೊಂದಿಗೆ ಸಹಯೋಗ ಪಡೆದುಕೊಂಡಿದ್ದರು. 2008 ರಿಂದ 2015 ರವರೆಗೆ ಸಿಎಸ್​ಕೆ ತಂಡವನ್ನು ಪ್ರತಿನಿಧಿಸಿದ್ದರು. ಸಿಎಸ್​ಕೆ ಯಿಂದ ನಿರ್ಗಮಿಸಿದಾಗಿನಿಂದ ನಾಲ್ಕು ವಿಭಿನ್ನ ಫ್ರಾಂಚೈಸಿಗಳ ಭಾಗವಾಗಿದ್ದಾರೆ.

Continue Reading
Advertisement
IND vs SL
ಪ್ರಮುಖ ಸುದ್ದಿ34 mins ago

IND vs SL ODI : ಎರಡನೇ ಏಕ ದಿನ ಪಂದ್ಯದಲ್ಲಿ ಭಾರತ ತಂಡಕ್ಕೆ32 ರನ್ ಸೋಲು, ಸರಣಿಯಲ್ಲಿ ಲಂಕಾಗೆ ಮುನ್ನಡೆ

Bengal Minister
ದೇಶ1 hour ago

Bengal Minister: ಮಹಿಳಾ ಅಧಿಕಾರಿಗೆ ಬಂಗಾಳ ಸಚಿವ ಜೀವ ಬೆದರಿಕೆ; ದೀದಿ ಆದೇಶದ ಬಳಿಕ ರಾಜೀನಾಮೆ!

BJP-JDS Padayatra
ಕರ್ನಾಟಕ2 hours ago

BJP-JDS Padayatra: ಬಿಜೆಪಿ-ಜೆಡಿಎಸ್‌ ಪಿತೂರಿಗೆ ಜಗ್ಗಲ್ಲ, ನಾವು ಒಗ್ಗಟ್ಟಿನಿಂದ ಹೋರಾಡುತ್ತೇವೆ: ಕೆ.ಸಿ. ವೇಣುಗೋಪಾಲ್

Novak Djokovic
ಪ್ರಮುಖ ಸುದ್ದಿ2 hours ago

Novak Djokovic : ಅಲ್ಕರಾಜ್ ಮಣಿಸಿ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ನೊವಾಕ್ ಜೊಕೊವಿಕ್

PSI Parashuram Case
ಕ್ರೈಂ2 hours ago

PSI Parashuram Case: ಪಿಎಸ್‌ಐ ಪರಶುರಾಮ ಸಾವು ಪ್ರಕರಣದ ಕಡತ ನಾಳೆ ಸಿಐಡಿಗೆ ಹಸ್ತಾಂತರ: ಎಸ್‌ಪಿ ಜಿ.ಸಂಗೀತಾ

Health Tips
ಆರೋಗ್ಯ2 hours ago

Health Tips: ಪಾದಗಳ ಊತ, ನೋವನ್ನು ಕಡಿಮೆ ಮಾಡಲು ಇಲ್ಲಿದೆ ಸರಳ ಉಪಾಯ

Viral Video
ವೈರಲ್ ನ್ಯೂಸ್2 hours ago

Viral Video: ಇಸ್ರೇಲಿ ಅಪಹೃತನ ಮೃತ ದೇಹವನ್ನು ನಡುಬೀದಿಯಲ್ಲಿ ಒದ್ದ ಪ್ಯಾಲೆಸ್ತೀನ್‌ ಜನ!

Krishnam Pranaya Sakhi
ಸಿನಿಮಾ3 hours ago

Krishnam Pranaya Sakhi: ಕೃಷ್ಣಂ ಪ್ರಣಯ ಸಖಿ ಸಿನಿಮಾದ 4ನೇ ಹಾಡು ಔಟ್;‌ ರೊಮ್ಯಾಂಟಿಕ್‌ ಸಾಂಗ್ ಇಲ್ಲಿ ಕೇಳಿ!

Mohammed Siraj
ಕ್ರೀಡೆ3 hours ago

Mohammed Siraj : ಲಂಕಾ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಮೊಹಮ್ಮದ್​ ಸಿರಾಜ್​

Murder Case
ಕರ್ನಾಟಕ3 hours ago

Murder Case: 300 ರೂಪಾಯಿಗಾಗಿ ಹೆತ್ತಮ್ಮನನ್ನೇ ಕೊಂದ ಪಾಪಿ ಮಗ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ9 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌