ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics 2024) ಗುರುವಾರ ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಹಾಕಿ ತಂಡ ಸ್ಪೇನ್ ವಿರುದ್ಧದ ಕಂಚಿನ ಪದಕದ ಪಂದ್ಯದಲ್ಲಿ ಗೆದ್ದಿದೆ. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಎಲ್ಲವೂ ಕಂಚಿನ ಪದಕಗಳಾಗಿವೆ. ಭಾರತದ ಪಾಲಿಗೆ ಇದು ಖುಷಿಯ ವಿಚಾರವೇ ಸರಿ. ಪುರುಷರ 57 ಕೆ.ಜಿ ವಿಭಾಗದ ಪದಕದ ಸುತ್ತಿಗೆ ಪ್ರವೇಶ ಪಡೆಯುವ ಗುರಿಯೊಂದಿಗೆ ಪ್ರದರ್ಶನ ನೀಡಿದ್ದಾರೆ. ಗುರುವಾರ ನಡೆದ ಆರಂಭಿಕ ಎರಡು ಪಂದ್ಯಗಳಲ್ಲಿ ಅಮನ್ ಅತ್ಯುತ್ತಮ ಪ್ರದರ್ಶನ ನೀಡಿದರು, ತಾಂತ್ರಿಕ ಶ್ರೇಷ್ಠತೆಯೊಂದಿಗೆ ಎರಡನ್ನೂ ಗೆದ್ದಿದ್ದಾರೆ.
Harmanpreet Singh reignites the hopes for victory as India takes the lead! 🏑 🥉#Cheer4Bharat & watch 🇮🇳🆚🇪🇸, LIVE NOW on #Sports18 & stream for FREE on #JioCinema 👈 #OlympicsonJioCinema #OlympicsonSports18 #Olympics #JioCinemaSports #Hockey pic.twitter.com/xaio1BCoGz
— JioCinema (@JioCinema) August 8, 2024
1972ರಲ್ಲಿ ಪುರುಷರ ಹಾಕಿ ತಂಡ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿತ್ತು. ಅದೇ ರೀತಿ ಭಾರತ ಹಾಕಿ ತಂಡ ಮತ್ತೊಮ್ಮೆ ಸತತ ಎರಡು ಬಾರಿ ಪದಕವನ್ನು ಗೆದ್ದುಕೊಂಡಿದೆ. 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು. ಇದೀಗ ಮತ್ತೆ ಕಂಚಿನ ಪದಕಕ್ಕೆ ಭಾಜನವಾಗಿದೆ.
ಭಾರತ ನಿಯೋಗದ ಕೆಲವು ಸ್ಪರ್ಧಿಗಳು ಆಗಸ್ಟ್ 9ರಂದು ಕೆಲವೊಂದು ಸ್ಪರ್ಧೆಗಳಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಆ ಸ್ಪರ್ಧೆಗಳ ವಿವರ ಈ ಕೆಳಗೆ ನೀಡಲಾಗಿದೆ.
ಇದನ್ನೂ ಓದಿ: Paris Olympics 2024 : ಕ್ರೀಡಾಗ್ರಾಮಲ್ಲಿ ಮಾದಕ ವಸ್ತು ಕೊಕೇನ್ ಸೇವನೆ, ಆಸ್ಟ್ರೇಲಿಯಾದ ಹಾಕಿ ಆಟಗಾರನ ಬಂಧನ
ಮಧ್ಯಾಹ್ನ 12:30: ಗಾಲ್ಫ್ – ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 2 ರಲ್ಲಿ ದೀಕ್ಷಾ ದಾಗರ್ ಮತ್ತು ಅದಿತಿ ಅಶೋಕ್.
ಮಧ್ಯಾಹ್ನ 2:10: ಅಥ್ಲೆಟಿಕ್ಸ್ – ಮಹಿಳೆಯರ 4×400 ಮೀಟರ್ ರಿಲೇ ಹೀಟ್ಸ್.
ಭಾರತದ ಜ್ಯೋತಿಕಾ ಶ್ರೀ ದಂಡಿ, ಕಿರಣ್ ಪಹಲ್, ಎಂ.ಪೂವಮ್ಮ ರಾಜು ಮತ್ತು ವಿಠ್ಠಲ ರಾಮರಾಜ್ ಕಣಕ್ಕಿಳಿಯಲಿದ್ದಾರೆ.
ಮಧ್ಯಾಹ್ನ 2:35: ಅಥ್ಲೆಟಿಕ್ಸ್ – ಪುರುಷರ 4×400 ಮೀಟರ್ ರಿಲೇ ಹೀಟ್ಸ್.
ಅಮೋಜ್ ಜಾಕೋಬ್, ರಾಜೇಶ್ ರಮೇಶ್, ಸಂತೋಷ್ ಕುಮಾರ್ ತಮಿಳರಸನ್ ಮತ್ತು ಮುಹಮ್ಮದ್ ಅಜ್ಮಲ್ ವರಿಯತೋಡಿ ಸೆಮಿಫೈನಲ್ ಗೆ ಅರ್ಹತೆ ಪಡೆಯುವ ಗುರಿ ಹೊಂದಿದ್ದಾರೆ.
ಮಧ್ಯಾಹ್ನ 2:30: ಮಹಿಳೆಯರ 57 ಕೆ.ಜಿ ಫ್ರೀಸ್ಟೈಲ್ನಲ್ಲಿ ಕುಸ್ತಿಯಲ್ಲಿ ಅನ್ಶು ಮಲಿಕ್ . ಅನ್ಶು ಅವರ ಅದೃಷ್ಟ ಮಾಜಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಹೆಲೆನ್ ಮರೌಲಿಸ್ ಅವರ ವಿರುದ್ಧ ಗೆಲ್ಲುವ ಮೂಲಕ ನಿರ್ಧಾರವಾಗಲಿದೆ.
ರಾತ್ರಿ 11:10: ಪುರುಷರ 57 ಕೆ.ಜಿ ಫ್ರೀಸ್ಟೈಲ್ ಕಂಚಿನ ಅಥವಾ ಚಿನ್ನದ ಪದಕ ಪಂದ್ಯದಲ್ಲಿ (ಪದಕ ಸ್ಪರ್ಧೆಗಳು) ಅಮನ್ ಸೆಹ್ರಾವತ್.
ಇದನ್ನೂ ಓದಿ: Paris Olympics 2024 : ಅಥ್ಲೀಟ್ಗಳಿಗೆ ಒಲಿಂಪಿಕ್ಸ್ ಮಸ್ಕಾಟ್ ಚಿತ್ರ ಇರುವ ಕಾಂಡೋಮ್ ಹಂಚಿದ ಆಯೋಜಕರು!