ಪ್ಯಾರಿಸ್: ಭಾರತದ ಮಹಿಳೆಯರ ಟೇಬಲ್ ಟೆನಿಸ್ ತಂಡ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ (Paris Olympics 2024) ಕ್ವಾರ್ಟರ್ಫೈನಲ್ಗೇರಿದೆ. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೊಮೇನಿಯಾ ವಿರುದ್ಧ 3-2 ಅಂತರದಲ್ಲಿ ಜಯ ಸಾಧಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮುನ್ನಡೆ ಸಾಧಿಸಿದೆ. ಅನುಭವಿ ಆಟಗಾರ್ತಿ ಮಣಿಕಾ ಭಾತ್ರಾ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಶ್ರೀಜಾ ಅಕುಲಾ-ಅರ್ಚನಾ ಕಾಮತ್ ಮತ್ತು ಮಣಿಕಾ ಬಾತ್ರಾ ಅವರಿದ್ದ ತಂಡವು ಈ ಸಾಧನೆ ಮಾಡಿದೆ.
MANIKA BATRA – The Clutch moment in Table Tennis for India. 🥶 pic.twitter.com/dN3XApe98K
— Johns. (@CricCrazyJohns) August 5, 2024
ಭಾರತ ತಂಡ ಎರಡು ಪಂದ್ಯಗಳನ್ನು ಗೆದ್ದು 2-0 ಮುನ್ನಡೆ ಸಾಧಿಸಿತು. ರೊಮೇನಿಯಾ ಮುಂದಿನ ಎರಡು ಪಂದ್ಯಗಳನ್ನು ಗೆದ್ದಿತು. ಐದನೇ ಪಂದ್ಯದಲ್ಲಿ ಬಾತ್ರಾ 11-5, 11-9, 11-9 ಸೆಟ್ ಗಳಿಂದ ಆದಿನಾ ಡಯಾಕೊನು ಅವರನ್ನು ಸೋಲಿಸಿದರು. ಮಹಿಳಾ ಟೇಬಲ್ ಟೆನಿಸ್ ಕ್ವಾರ್ಟರ್ ಫೈನಲ್ನಲ್ಲಿ ಭಾರತ ಯುಎಸ್ಎ ಅಥವಾ ಜರ್ಮನಿಯನ್ನು ಎದುರಿಸಲಿದೆ.
ಅರ್ಚನಾ ಕಾಮತ್ ಮತ್ತು ಶ್ರೀಜಾ ಅಕುಲಾ ಜೋಡಿ ರೊಮೇನಿಯಾದ ಆದಿನಾ ಡಯಾಕೊನು ಮತ್ತು ಎಲಿಜಾಬೆಟಾ ಸಮರಾ ಅವರನ್ನು ಎದುರಿಸುವುದರೊಂದಿಗೆ ಸ್ಪರ್ಧೆಯು ಭಾರತಕ್ಕೆ ಉತ್ತಮ ಆರಂಭದೊಂದಿಗೆ ಪ್ರಾರಂಭವಾಯಿತು. ಭಾರತದ ಜೋಡಿ 11-9, 12-10, 11-7 ನೇರ ಸೆಟ್ ಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ಭಾರತ 1-0 ಮುನ್ನಡೆ ಸಾಧಿಸಿತು. ಭಾರತದ ಸ್ಟಾರ್ ಆಟಗಾರ್ತಿ ಮಣಿಕಾ ಬಾತ್ರಾ ರೊಮೇನಿಯಾದ ಬರ್ನಡೆಟ್ ಸ್ಜೋಕ್ಸ್ ವಿರುದ್ಧ ಸೆಣಸಿದರು. ಬಾತ್ರಾ 11-5, 11-7, 11-7 ಅಂತರದಲ್ಲಿ ಗೆಲುವು ಸಾಧಿಸಿದರು. ಅವರ ಉತ್ತಮ ಪ್ರದರ್ಶನವು ಭಾರತದ ಮುನ್ನಡೆಯನ್ನು 2-0 ಕ್ಕೆ ವಿಸ್ತರಿಸಿತು.
ಇದನ್ನೂ ಓದಿ: Rohit Sharma : ಸಿಕ್ಸರ್ಗಳನ್ನು ಬಾರಿಸುವಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮಾ
ಅಕುಲಾ ಸಮರಾ ವಿರುದ್ಧದ ಪಂದ್ಯದಲ್ಲಿ 8-11, 11-4, 7-11, 11-6, 11-8 ಅಂತರದಲ್ಲಿ ಸೋಲನುಭವಿಸಿದರು. ರೊಮೇನಿಯಾದ ಈ ಗೆಲುವು ಅವರನ್ನು ಸ್ಪರ್ಧೆಯಲ್ಲಿ ಜಿವಂತವಾಗಿ ಉಳಿಸಿಕೊಳ್ಳಿತು. ಭಾರತದ ಮುನ್ನಡೆಯನ್ನು 2-1 ಕ್ಕೆ ಇಳಿಸಿತು. ರೊಮೇನಿಯಾದ ಸ್ಜೋಕ್ಸ್ 11–5, 8–11, 11–7, 11–9ರಲ್ಲಿ ಕಾಮತ್ ಅವರನ್ನು ಮಣಿಸಿತು. ಈ ಫಲಿತಾಂಶವು ಸ್ಕೋರ್ಗಳನ್ನು 2-2 ರಲ್ಲಿ ಸಮಗೊಳಿಸಿತ . ಹೀಗಾಗಿ ನಿರ್ಣಾಯಕ ಅಂತಿಮ ಪಂದ್ಯಕ್ಕೆ ವೇದಿಕೆ ಕಲ್ಪಿಸಿತು. ಹಿನ್ನಡೆ ಹೊರತಾಗಿಯೂ, ಭಾರತದ ತಂಡವು ಏಕಾಗ್ರತೆ ಮತ್ತು ದೃಢನಿಶ್ಚಯವನ್ನು ಉಳಿಸಿಕೊಂಡಿತು.