Site icon Vistara News

IPL Auction 2023 | ಸ್ಯಾಮ್ ಕರ್ರನ್​; 18.5 ಕೋಟಿ ರೂಪಾಯಿಗೆ ದಾಖಲೆಯ ಮೊತ್ತಕ್ಕೆ ಪಂಜಾಬ್​ ತಂಡಕ್ಕೆ ಸೇರ್ಪಡೆ,

Mini IPL auction

ಕೊಚ್ಚಿ : ಐಪಿಎಲ್​ 16ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಕೊಚ್ಚಿಯಲ್ಲಿ ನಡೆಯುತ್ತಿದೆ. ಇದು ಮಿನಿ ಹರಾಜು ಪ್ರಕ್ರಿಯೆಯಾಗಿದ್ದು 10 ಫ್ರಾಂಚೈಸಿಗಳಲ್ಲಿ ಖಾಲಿ ಇರುವ 87 ಆಟಗಾರರ ಆಯ್ಕೆಗಾಗಿ ಬಿಡ್​ ನಡೆಯುತ್ತಿದೆ. 25ಕ್ಕೂ ಹೆಚ್ಚು ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಆರಂಭದಲ್ಲೇ ಹಿಂದಿನ ಹಲವು ದಾಖಲೆಗಳು ಮುರಿದಿವೆ. ಪ್ರಮುಖವಾಗಿ ವಿದೇಶಿ ಆಟಗಾರರು ದೊಡ್ಡ ಮೊತ್ತದ ಥೈಲಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ನಿರೀಕ್ಷೆಯಂತೆ ಇಂಗ್ಲೆಂಡ್​ ತಂಡದ ಬೌಲಿಂಗ್​ ಆಲ್​ರೌಂಡರ್​ ಸ್ಯಾಮ್​ ಕರ್ರನ್​ ದೊಡ್ಡ ಮೊತ್ತ ಪಡೆದಿದ್ದಾರೆ. ಅವರು 18.25 ಕೋಟಿ ರೂಪಾಯಿ ಪಡೆದ ಪಂಜಾಬ್​ ಕಿಂಗ್ಸ್​ ತಂಡ ಸೇರಿಕೊಂಡಿದ್ದಾರೆ. ಈ ಮೊತ್ತ ಐಪಿಎಲ್​ ಇತಿಹಾಸದಲ್ಲಿ ಇದುವರೆಗಿನ ಗರಿಷ್ಠ ಮೊತ್ತವೆಂಬದ ದಾಖಲೆ ಸೃಷ್ಟಿಸಿದೆ. ಇದೇ ವೇಳೆ 17.5 ಕೋಟಿ ರೂಪಾಯಿಗೆ ಆಸ್ಟ್ರೇಲಿಯಾದ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಮುಂಬಯಿ ಇಂಡಿಯನ್ಸ್​ ಪಾಲಾಗಿದ್ದಾರೆ.

ಸ್ಯಾಮ್​ ಕರ್ರನ್​ ಅವರನ್ನು ಸಿಗದ ಹಿನ್ನೆಲೆಯಲ್ಲಿ ಬೆನ್​ ಸ್ಟೋಕ್ಸ್​ಗೆ ಭರ್ಜರಿ ಬಿಡ್​ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್​ ತಂಡ 16.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಇದೇ ವೇಳೆ ವಿಕೆಟ್​ಕೀಪರ್ ಬ್ಯಾಟರ್​ 16.00 ಕೋಟಿ ರೂಪಾಯಿಗೆ ಲಖನೌ ಸೂಪರ್​ ಜಯಂಟ್ಸ್​ ತಂಡ ಸೇರಿಕೊಂಡಿದ್ದಾರೆ. ಅದಕ್ಕಿಂತ ಮೊದಲು ಇಂಗ್ಲೆಂಡ್​ ಸ್ಫೋಟಕ ಬ್ಯಾಟರ್​ ಹ್ಯಾರಿ ಬ್ರೂಕ್​ 13.5 ಕೋಟಿ ರೂಪಾಯಿಗೆ ಸನ್​ರೈಸರ್ಸ್​ ಹೈದರಾಬಾದ್ ತಂಡ ಸೇರಿಕೊಂಡಿದ್ದಾರೆ.

ಪಂಜಾಬ್​ ತಂಡದ ಮಾಜಿ ನಾಯಕ ಮಯಾಂಕ್​ ಅಗರ್ವಾಲ್​ ಕೂಡ ಭರ್ಜರಿ ಬೇಡಿಕೆ ಸೃಷ್ಟಿಸಿಕೊಂಡಿದ್ದರು. ಅವರು 8.25 ಕೋಟಿ ರೂಪಾಯಿಗೆ ಸನ್​ ರೈಸರ್ಸ್​ ಹೈದರಾಬಾದ್ ತಂಡ ಸೇರಿಕೊಂಡಿದ್ದಾರೆ.

Sukhesha Padibagilu

ಐಪಿಎಲ್​ 2023ನೇ ಆವೃತ್ತಿಯ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯ.

Sukhesha Padibagilu

1.5 ಕೋಟಿ ರೂಪಾಯಿಗೆ ಕೆ. ಕೆ ಆರ್​ ತಂಡ ಸೇರಿಕೊಂಡ ಶಕಿಬ್​ ಅಲ್ ಹಸನ್​.

Sukhesha Padibagilu

ಒಂದು ಕೋಟಿ ರೂಪಾಯಿಗೆ ರಾಜಸ್ಥಾನ್​ ರಾಯಲ್ಸ್​ ತಂಡ ಸೇರಿಕೊಂಡ ಜೋ ರೂಟ್​

Sukhesha Padibagilu

50 ಲಕ್ಷ ರೂಪಾಯಿಗೆ ಕೆಕೆಆರ್​ ಬಳಗ ಸೇರಿದ ಮನ್​ದೀಪ್​ ಸಿಂಗ್​.

Sukhesha Padibagilu

20 ಲಕ್ಷ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ಬಳಗ ಸೇರಿದ ಮುರುಗನ್​ ಅಶ್ವಿನ್​.

Exit mobile version