ಕೊಚ್ಚಿ : ಐಪಿಎಲ್ 16ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಕೊಚ್ಚಿಯಲ್ಲಿ ನಡೆಯುತ್ತಿದೆ. ಇದು ಮಿನಿ ಹರಾಜು ಪ್ರಕ್ರಿಯೆಯಾಗಿದ್ದು 10 ಫ್ರಾಂಚೈಸಿಗಳಲ್ಲಿ ಖಾಲಿ ಇರುವ 87 ಆಟಗಾರರ ಆಯ್ಕೆಗಾಗಿ ಬಿಡ್ ನಡೆಯುತ್ತಿದೆ. 25ಕ್ಕೂ ಹೆಚ್ಚು ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಆರಂಭದಲ್ಲೇ ಹಿಂದಿನ ಹಲವು ದಾಖಲೆಗಳು ಮುರಿದಿವೆ. ಪ್ರಮುಖವಾಗಿ ವಿದೇಶಿ ಆಟಗಾರರು ದೊಡ್ಡ ಮೊತ್ತದ ಥೈಲಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಿರೀಕ್ಷೆಯಂತೆ ಇಂಗ್ಲೆಂಡ್ ತಂಡದ ಬೌಲಿಂಗ್ ಆಲ್ರೌಂಡರ್ ಸ್ಯಾಮ್ ಕರ್ರನ್ ದೊಡ್ಡ ಮೊತ್ತ ಪಡೆದಿದ್ದಾರೆ. ಅವರು 18.25 ಕೋಟಿ ರೂಪಾಯಿ ಪಡೆದ ಪಂಜಾಬ್ ಕಿಂಗ್ಸ್ ತಂಡ ಸೇರಿಕೊಂಡಿದ್ದಾರೆ. ಈ ಮೊತ್ತ ಐಪಿಎಲ್ ಇತಿಹಾಸದಲ್ಲಿ ಇದುವರೆಗಿನ ಗರಿಷ್ಠ ಮೊತ್ತವೆಂಬದ ದಾಖಲೆ ಸೃಷ್ಟಿಸಿದೆ. ಇದೇ ವೇಳೆ 17.5 ಕೋಟಿ ರೂಪಾಯಿಗೆ ಆಸ್ಟ್ರೇಲಿಯಾದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮುಂಬಯಿ ಇಂಡಿಯನ್ಸ್ ಪಾಲಾಗಿದ್ದಾರೆ.
ಸ್ಯಾಮ್ ಕರ್ರನ್ ಅವರನ್ನು ಸಿಗದ ಹಿನ್ನೆಲೆಯಲ್ಲಿ ಬೆನ್ ಸ್ಟೋಕ್ಸ್ಗೆ ಭರ್ಜರಿ ಬಿಡ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 16.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಇದೇ ವೇಳೆ ವಿಕೆಟ್ಕೀಪರ್ ಬ್ಯಾಟರ್ 16.00 ಕೋಟಿ ರೂಪಾಯಿಗೆ ಲಖನೌ ಸೂಪರ್ ಜಯಂಟ್ಸ್ ತಂಡ ಸೇರಿಕೊಂಡಿದ್ದಾರೆ. ಅದಕ್ಕಿಂತ ಮೊದಲು ಇಂಗ್ಲೆಂಡ್ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ 13.5 ಕೋಟಿ ರೂಪಾಯಿಗೆ ಸನ್ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡಿದ್ದಾರೆ.
ಪಂಜಾಬ್ ತಂಡದ ಮಾಜಿ ನಾಯಕ ಮಯಾಂಕ್ ಅಗರ್ವಾಲ್ ಕೂಡ ಭರ್ಜರಿ ಬೇಡಿಕೆ ಸೃಷ್ಟಿಸಿಕೊಂಡಿದ್ದರು. ಅವರು 8.25 ಕೋಟಿ ರೂಪಾಯಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ಯುವ ಆಟಗಾರ ರೀಲಿ ರೊಸ್ಸೊ ಭಾರತ ಪ್ರವಾಸದಲ್ಲಿ ಶತಕ ಬಾರಿಸಿದ್ದರು. ಅಲ್ಲದೆ ಸ್ಫೋಟಕ ಬ್ಯಾಟರ್ ಕೂಡ. ಹೀಗಾಗಿ ಅವರು ದೊಡ್ಡ ಮೊತ್ತ ಪಡೆಯಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅವರು ನಿರಾಸೆ ಎದುರಿಸಿದ್ದಾರೆ.
ಮೊದಲ ಸುತ್ತಿನಲ್ಲೇ 21. 50 ಕೋಟಿ ರೂಪಾಯಿ ಖರ್ಚು ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ.
ಇದುವರೆಗಿನ ಹರಾಜು.
ಹ್ಯಾರಿ ಬ್ರೂಕ್ ಎಸ್ಆರ್ಎಚ್ ಪಾಲು- 13.25 ಕೋಟಿ
ಮಯಾಂಕ್ ಅಗರ್ವಾಲ್- ಎಸ್ಆರ್ಎಚ್ ತಂಡಕ್ಕೆ 8.25 ಕೋಟಿ ರೂಪಾಯಿ
ಕೇನ್ ವಿಲಿಯಮ್ಸನ್- ಗುಜರಾತ್ ಟೈಟನ್ಸ್- 2 ಕೋಟಿ ರೂಪಾಯಿ
ಅಜಿಂಕ್ಯ ರಹಾನೆ- ಸಿಎಸ್ಕೆ- 50 ಲಕ್ಷ ರೂಪಾಯಿ
ಐಪಿಲ್ 16ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಅಚ್ಚರಿ. ಯಾರೂ ಖರೀದಿಸದೇ ಅನ್ಸೋಲ್ಡ್ ಆದ ದಕ್ಷಿಣ ಆಫ್ರಿಕಾದ ರೀಲಿ ರೊಸ್ಸೊ…
ಇಂಗ್ಲೆಂಡ್ ತಂಡ ಟೆಸ್ಟ್ ಸ್ಪೆಷಲಿಸ್ಟ್ ಜೂ ರೂಟ್ಗೆ ಬೇಡಿಕೆಯಿಲ್ಲ. ಅನ್ ಸೋಲ್ಡ್