Site icon Vistara News

IPL Auction 2023 | ಸ್ಯಾಮ್ ಕರ್ರನ್​; 18.5 ಕೋಟಿ ರೂಪಾಯಿಗೆ ದಾಖಲೆಯ ಮೊತ್ತಕ್ಕೆ ಪಂಜಾಬ್​ ತಂಡಕ್ಕೆ ಸೇರ್ಪಡೆ,

Mini IPL auction

ಕೊಚ್ಚಿ : ಐಪಿಎಲ್​ 16ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಕೊಚ್ಚಿಯಲ್ಲಿ ನಡೆಯುತ್ತಿದೆ. ಇದು ಮಿನಿ ಹರಾಜು ಪ್ರಕ್ರಿಯೆಯಾಗಿದ್ದು 10 ಫ್ರಾಂಚೈಸಿಗಳಲ್ಲಿ ಖಾಲಿ ಇರುವ 87 ಆಟಗಾರರ ಆಯ್ಕೆಗಾಗಿ ಬಿಡ್​ ನಡೆಯುತ್ತಿದೆ. 25ಕ್ಕೂ ಹೆಚ್ಚು ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಆರಂಭದಲ್ಲೇ ಹಿಂದಿನ ಹಲವು ದಾಖಲೆಗಳು ಮುರಿದಿವೆ. ಪ್ರಮುಖವಾಗಿ ವಿದೇಶಿ ಆಟಗಾರರು ದೊಡ್ಡ ಮೊತ್ತದ ಥೈಲಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ನಿರೀಕ್ಷೆಯಂತೆ ಇಂಗ್ಲೆಂಡ್​ ತಂಡದ ಬೌಲಿಂಗ್​ ಆಲ್​ರೌಂಡರ್​ ಸ್ಯಾಮ್​ ಕರ್ರನ್​ ದೊಡ್ಡ ಮೊತ್ತ ಪಡೆದಿದ್ದಾರೆ. ಅವರು 18.25 ಕೋಟಿ ರೂಪಾಯಿ ಪಡೆದ ಪಂಜಾಬ್​ ಕಿಂಗ್ಸ್​ ತಂಡ ಸೇರಿಕೊಂಡಿದ್ದಾರೆ. ಈ ಮೊತ್ತ ಐಪಿಎಲ್​ ಇತಿಹಾಸದಲ್ಲಿ ಇದುವರೆಗಿನ ಗರಿಷ್ಠ ಮೊತ್ತವೆಂಬದ ದಾಖಲೆ ಸೃಷ್ಟಿಸಿದೆ. ಇದೇ ವೇಳೆ 17.5 ಕೋಟಿ ರೂಪಾಯಿಗೆ ಆಸ್ಟ್ರೇಲಿಯಾದ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಮುಂಬಯಿ ಇಂಡಿಯನ್ಸ್​ ಪಾಲಾಗಿದ್ದಾರೆ.

ಸ್ಯಾಮ್​ ಕರ್ರನ್​ ಅವರನ್ನು ಸಿಗದ ಹಿನ್ನೆಲೆಯಲ್ಲಿ ಬೆನ್​ ಸ್ಟೋಕ್ಸ್​ಗೆ ಭರ್ಜರಿ ಬಿಡ್​ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್​ ತಂಡ 16.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಇದೇ ವೇಳೆ ವಿಕೆಟ್​ಕೀಪರ್ ಬ್ಯಾಟರ್​ 16.00 ಕೋಟಿ ರೂಪಾಯಿಗೆ ಲಖನೌ ಸೂಪರ್​ ಜಯಂಟ್ಸ್​ ತಂಡ ಸೇರಿಕೊಂಡಿದ್ದಾರೆ. ಅದಕ್ಕಿಂತ ಮೊದಲು ಇಂಗ್ಲೆಂಡ್​ ಸ್ಫೋಟಕ ಬ್ಯಾಟರ್​ ಹ್ಯಾರಿ ಬ್ರೂಕ್​ 13.5 ಕೋಟಿ ರೂಪಾಯಿಗೆ ಸನ್​ರೈಸರ್ಸ್​ ಹೈದರಾಬಾದ್ ತಂಡ ಸೇರಿಕೊಂಡಿದ್ದಾರೆ.

ಪಂಜಾಬ್​ ತಂಡದ ಮಾಜಿ ನಾಯಕ ಮಯಾಂಕ್​ ಅಗರ್ವಾಲ್​ ಕೂಡ ಭರ್ಜರಿ ಬೇಡಿಕೆ ಸೃಷ್ಟಿಸಿಕೊಂಡಿದ್ದರು. ಅವರು 8.25 ಕೋಟಿ ರೂಪಾಯಿಗೆ ಸನ್​ ರೈಸರ್ಸ್​ ಹೈದರಾಬಾದ್ ತಂಡ ಸೇರಿಕೊಂಡಿದ್ದಾರೆ.

Sukhesha Padibagilu

ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಇದುವರೆಗೆ 9 ಆಟಗಾರರನ್ನು ಖರೀದಿಸಿದೆ. ಉಳಿದ 4 ಸ್ಲಾಟ್‌ಗಳನ್ನು ಭರ್ತಿ ಮಾಡಲು ಇನ್ನೂ 9.75 ಕೋಟಿ ರೂಪಾಯಿ ಉಳಿಸಿಕೊಂಡಿದೆ.

Sukhesha Padibagilu

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೆ ಮೂವರು ಆಟಗಾರರನ್ನು ಖರೀದಿಸಿದೆ. ಉಳಿದ ನಾಲ್ಕು ಸ್ಲಾಟ್‌ಗಳನ್ನು ಭರ್ತಿ ಮಾಡಲು 3.45 ಕೋಟಿ ರೂ. ಉಳಿದುಕೊಂಡಿದೆ.

Sukhesha Padibagilu

ಇಂದು ಇಲ್ಲಿಯವರೆಗೆ ಒಟ್ಟು 37 ಆಟಗಾರರು ಹರಾಜಾಗಿದ್ದಾರೆ — 18 ವಿದೇಶಿ ಆಟಗಾರರು ಮತ್ತು 19 ಭಾರತೀಯ ಆಟಗಾರರು ಈ ಪಟ್ಟಿಯಲ್ಲಿದ್ದಾರೆ.

Sukhesha Padibagilu

75 ಲಕ್ಷ ರೂಪಾಯಿಗೆ ಡೇನಿಯಲ್​​ ಸ್ಯಾಮ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡ ಲಖನೌ ಸೂಪರ್ ಜಯಂಟ್ಸ್​.

Sukhesha Padibagilu

50 ಲಕ್ಷ ರೂಪಾಯಿಗೆ ಲಖನೌ ತಂಡದ ಸೇರಿಕೊಂಡ ವಿಂಡೀಸ್​ ಅಟಗಾರ ರೊಮಾರಿಯೊ ಶಫರ್ಡ್​.

Exit mobile version