ಕೊಚ್ಚಿ : ಐಪಿಎಲ್ 16ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಕೊಚ್ಚಿಯಲ್ಲಿ ನಡೆಯುತ್ತಿದೆ. ಇದು ಮಿನಿ ಹರಾಜು ಪ್ರಕ್ರಿಯೆಯಾಗಿದ್ದು 10 ಫ್ರಾಂಚೈಸಿಗಳಲ್ಲಿ ಖಾಲಿ ಇರುವ 87 ಆಟಗಾರರ ಆಯ್ಕೆಗಾಗಿ ಬಿಡ್ ನಡೆಯುತ್ತಿದೆ. 25ಕ್ಕೂ ಹೆಚ್ಚು ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಆರಂಭದಲ್ಲೇ ಹಿಂದಿನ ಹಲವು ದಾಖಲೆಗಳು ಮುರಿದಿವೆ. ಪ್ರಮುಖವಾಗಿ ವಿದೇಶಿ ಆಟಗಾರರು ದೊಡ್ಡ ಮೊತ್ತದ ಥೈಲಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಿರೀಕ್ಷೆಯಂತೆ ಇಂಗ್ಲೆಂಡ್ ತಂಡದ ಬೌಲಿಂಗ್ ಆಲ್ರೌಂಡರ್ ಸ್ಯಾಮ್ ಕರ್ರನ್ ದೊಡ್ಡ ಮೊತ್ತ ಪಡೆದಿದ್ದಾರೆ. ಅವರು 18.25 ಕೋಟಿ ರೂಪಾಯಿ ಪಡೆದ ಪಂಜಾಬ್ ಕಿಂಗ್ಸ್ ತಂಡ ಸೇರಿಕೊಂಡಿದ್ದಾರೆ. ಈ ಮೊತ್ತ ಐಪಿಎಲ್ ಇತಿಹಾಸದಲ್ಲಿ ಇದುವರೆಗಿನ ಗರಿಷ್ಠ ಮೊತ್ತವೆಂಬದ ದಾಖಲೆ ಸೃಷ್ಟಿಸಿದೆ. ಇದೇ ವೇಳೆ 17.5 ಕೋಟಿ ರೂಪಾಯಿಗೆ ಆಸ್ಟ್ರೇಲಿಯಾದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮುಂಬಯಿ ಇಂಡಿಯನ್ಸ್ ಪಾಲಾಗಿದ್ದಾರೆ.
ಸ್ಯಾಮ್ ಕರ್ರನ್ ಅವರನ್ನು ಸಿಗದ ಹಿನ್ನೆಲೆಯಲ್ಲಿ ಬೆನ್ ಸ್ಟೋಕ್ಸ್ಗೆ ಭರ್ಜರಿ ಬಿಡ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 16.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಇದೇ ವೇಳೆ ವಿಕೆಟ್ಕೀಪರ್ ಬ್ಯಾಟರ್ 16.00 ಕೋಟಿ ರೂಪಾಯಿಗೆ ಲಖನೌ ಸೂಪರ್ ಜಯಂಟ್ಸ್ ತಂಡ ಸೇರಿಕೊಂಡಿದ್ದಾರೆ. ಅದಕ್ಕಿಂತ ಮೊದಲು ಇಂಗ್ಲೆಂಡ್ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ 13.5 ಕೋಟಿ ರೂಪಾಯಿಗೆ ಸನ್ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡಿದ್ದಾರೆ.
ಪಂಜಾಬ್ ತಂಡದ ಮಾಜಿ ನಾಯಕ ಮಯಾಂಕ್ ಅಗರ್ವಾಲ್ ಕೂಡ ಭರ್ಜರಿ ಬೇಡಿಕೆ ಸೃಷ್ಟಿಸಿಕೊಂಡಿದ್ದರು. ಅವರು 8.25 ಕೋಟಿ ರೂಪಾಯಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡಿದ್ದಾರೆ.
ವೇಗದ ಬೌಲರ್ ಶಿವಂ ಮಾವಿಗೆ ಭರ್ಜರಿ ಬೇಡಿಕೆ. 6 ಕೋಟಿ ರೂಪಾಯಿಗೆ ಗುಜರಾತ್ ಟೈಟನ್ಸ್ ತಂಡಕ್ಕೆ ಸೇರ್ಪಡೆ. ಭರ್ಜರಿ ಮೊತ್ತ ಪಡೆದ ಯುವ ಆಟಗಾರ.
ವಿಕೆಟ್ ಕೀಪರ್ ಕೆ. ಎಸ್ ಭರತ್ 1.2 ಕೋಟಿ ರೂಪಾಯಿಗೆ ಗುಜರಾತ್ ತಂಡ ಸೇರಿಕೊಂಡಿದ್ದಾರೆ.
ಇತ್ತೀಚಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕಗಳ ದಾಖಲೆ ಬರೆದಿದ್ದ ಜಗದೀಶನ್ ಅವರು 90 ಲಕ್ಷ ರೂಪಾಯಿಗೆ ಕೆಕೆಆರ್ ತಂಡ ಸೇರಿಕೊಂಡಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಇನ್ನೂ 10.2 ಕೋಟಿ ರೂಪಾಯಿ ಉಳಿಕೆ.
ಸಮರ್ಥ್ ವ್ಯಾಸ್ 20 ಲಕ್ಷ ರೂಪಾಯಿಗೆ ಎಸ್ಆರ್ಎಚ್ ಸೇರಿಕೊಂಡಿದ್ದಾರೆ.