ಕೋಲ್ಕೊತಾ: ಶಿಖರ್ ಧವನ್ (57) ಬಾರಿಸಿದ ಅರ್ಧ ಶತಕ ಹಾಗೂ ಬಾಲಂಗೋಚಿ ಬ್ಯಾಟ್ಸ್ಮನ್ಗಳ ಅಬ್ಬರದ ನೆರವು ಪಡೆದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ 53ನೇ ಪಂದ್ಯದಲ್ಲಿ ಎದುರಾಳಿ ಕೋಲ್ಕೊತಾ ನೈಟ್ ರೈಡರ್ಸ್ ತಂಡಕ್ಕೆ 180 ರನ್ಗಳ ಗೆಲುವಿನ ಸವಾಲೊಡ್ಡಿದೆ. ಪಂಜಾಬ್ ತಂಡ ಸತತವಾಗಿ ವಿಕೆಟ್ಗಳನ್ನು ಕಳೆದಕೊಂಡ ಹೊರತಾಗಿಯೂ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಲು ಸಾಫಲ್ಯ ಕಂಡಿತು.
ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್ಗಳಲ್ಲಿ 7 ವಿಕೆಟ್ ನಷ್ಟ ಮಾಡಿಕೊಂಡು 179 ರನ್ ಬಾರಿಸಿತು.
ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡ 21 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಪ್ರಭ್ಸಿಮ್ರಾನ್ ಸಿಂಗ್ 12 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಎದುರಿಸಿದರು. ಅದಾದ ಬಳಿಕ ಆಡಲು ಇಳಿದ ಭಾನುಕಾ ರಾಜಪಕ್ಷ ಶೂನ್ಯಕ್ಕೆ ಔಟಾಗುವುದರೊಂದಿಗೆ ತಂಡಕ್ಕೆ ಮತ್ತೊಂದು ಆಘಾತ ಉಂಟಾಯಿತು. ಹಿಂದಿನ ಪಂದ್ಯದಲ್ಲಿ ಅಮೋಘ 82 ರನ್ ಬಾರಿಸಿದ್ದ ಲಿಯಾಮ್ ಲಿವಿಂಗ್ಸ್ಟನ್ ಕೂಡ 15 ರನ್ಗಳಿಗೆ ಔಟಾದರು.
ಇದನ್ನೂ ಓದಿ ವ: IPL 2023 : ವೃದ್ಧಿಮಾನ್ ಸಾಹಸಕ್ಕೆ ಶಹಬ್ಬಾಸ್ ಎಂದ ವಿರಾಟ್ ಕೊಹ್ಲಿ
ವಿಕೆಟ್ಕೀಪರ್ ಜಿತೇಶ್ ಶರ್ಮಾ ಸ್ಫೋಟಿಸುವ ಸೂಚನೆ ಕೊಟ್ಟರೂ 21 ರನ್ಗಳಿಗೆ ಸೀಮಿತಗೊಂಡರು. ಸ್ಯಾಮ್ ಕರ್ರನ್ 4 ರನ್ಗೆ ಔಟಾದರು. ಆಲ್ರೌಂಡರ್ ರಿಷಿ ಧವನ್ 19 ರನ್ ಬಾರಿಸಿದರೆ, ಕೊನೆಯಲ್ಲಿ ಶಾರುಖ್ ಖಾನ್ 8 ಎಸೆತಕ್ಕೆ 21 ರನ್ ಬಾರಿಸಿದರು. ಹರ್ಪ್ರೀತ್ ಬ್ರಾರ್ ಕೂಡ 9 ಎಸೆತಕ್ಕೆ 17 ರನ್ ಬಾರಿಸಿದರು. ಈ ಜೋಡಿ ಎಂಟನೇ ವಿಕೆಟ್ಗೆ 40 ರನ್ ಬಾರಿಸುವ ಮೂಲಕ ಪಂಜಾಬ್ ತಂಡಕ್ಕೆ ಸಮಾಧಾನಕರ ಮೊತ್ತ ಪೇರಿಸಲು ನೆರವಾದರು.
ಧನವ್ ಅರ್ಧ ಶತಕದ ಸಾಧನೆ
ಪಂಜಾಬ್ ಕಿಂಗ್ಸ್ ನಾಯಕ ಬ್ಯಾಟಿಂಗ್ ಆರಂಭಿಸಿ ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅವರು ಕೆಲವು ಸೊಗಸಾದ ಹೊಡೆತಗಳನ್ನು ಬಾರಿಸಿದರಲ್ಲದೆ, ಋತುವಿನಲ್ಲಿ ತಮ್ಮ ಮೂರನೇ ಅರ್ಧಶತಕವನ್ನು ಗಳಿಸಿದರು. ಈ ಮೂಲಕ ಅವರು ಐಪಿಎಲ್ನಲ್ಲಿ 50 ಅರ್ಧ ಶತಕ ಬಾರಿಸಿದ ಸಾಧನೆ ಮಾಡಿದರು. ಪಂಜಾಬ್ ಕಿಂಗ್ಸ್ ನಾಯಕ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 213 ಇನ್ನಿಂಗ್ಸ್ಗಳಲ್ಲಿ 6592 ರನ್ ಗಳಿಸಿದ್ದಾರೆ ಮತ್ತು 50 ಅರ್ಧಶತಕಗಳನ್ನು ಗಳಿಸಿದ್ದಾರೆ. ಧವನ್ 2 ಐಪಿಎಲ್ ಶತಕಗಳನ್ನೂ ಬಾರಿಸಿದ್ದಾರೆ.