Site icon Vistara News

IPL 2023 : ಪಂಜಾಬ್​​ ಟಾಸ್​ ಗೆದ್ದ ಗುಜರಾತ್​ ತಂಡದಿಂದ ಫೀಲ್ಡಿಂಗ್​ ಆಯ್ಕೆ

#image_title

ಮೊಹಾಲಿ: ಐಪಿಎಲ್ 16ನೇ ಆವೃತ್ತಿಯ 18ನೇ ಪಂದ್ಯದಲ್ಲಿ ಟಾಸ್​ ಗೆದ್ದಿರುವ ಗುಜರಾತ್​ ಜಯಂಟ್ಸ್​ ತಂಡದ ನಾಯಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಧವನ್ ನೇತೃತ್ವದ ಪಂಜಾಬ್​ ಕಿಂಗ್ಸ್​ ತಂಡ ಮೊದಲು ಬ್ಯಾಟ್​ ಮಾಡಿ ದೊಡ್ಡ ಸ್ಕೋರ್​ ಗಳಿಸುವ ಮೂಲಕ ಗೆಲುವಿನ ಪ್ರಯತ್ನ ಮಾಡಬೇಕಾಗಿದೆ. ಇಲ್ಲಿನ ಪಂಜಾಬ್​ ಕ್ರಿಕೆಟ್ ಅಸೋಸಿಯೇಷನ್​ ಐಎಸ್​ ಬಿಂದ್ರಾ ಸ್ಟೇಡಿಯಮ್​ನಲ್ಲಿ ಹಣಾಹಣಿ ನಡೆಯುತ್ತಿದೆ.

ಪಿಚ್​ ಬ್ಯಾಟಿಂಗ್​ಗೆ ಹೆಚ್ಚು ಪೂರಕವಾಗಿರುವ ಕಾರಣ ದೊಡ್ಡ ಮೊತ್ತದ ಪಂದ್ಯ ನಡೆಯಬಹುದು ಎಂದು ಅಂದಾಜಿಸಲಾಗಿದೆ. ಅದೇ ರೀತಿ ದೊಡ್ಡ ಮೈದಾನವಾಗಿರುವ ಕಾರಣ ಬ್ಯಾಟರ್​​ಗಳು ಕೂಡ ರನ್​ಗಾಗಿ ಹೆಚ್ಚು ಓಡಾಡ ನಡೆಸಬೇಕಾಗಬಹುದು. ಸ್ಫೋಟಕ ಬ್ಯಾಟರ್​ ಲಿಯಾಮ್​ ಲಿವಿಂಗ್​ಸ್ಟನ್​ ತಂಡಕ್ಕೆ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆಗಳಿವೆ.

ಪಂಜಾಬ್​ ಕಿಂಗ್ಸ್ ತಂಡ ಈ ಪಂದ್ಯದಲ್ಲಿ ತನ್ನ ಬ್ಯಾಟಿಂಗ್ ಲಹರಿ ಉತ್ತಮ ಪಡಿಸಿಕೊಳ್ಳಬೇಕಾಗಿದೆ. ಪ್ರಮುಖವಾಗಿ ಆಟದ ಮಧ್ಯಮ ಕ್ರಮಾಂಕದ ಆಟಗಾರರು ತಮ್ಮ ಪ್ರದರ್ಶನ ಉತ್ತಮ ಪಡಿಸಿಕೊಳ್ಳಬೇಕು. ಆರಂಭಿಕರಾದ ಶಿಖರ್​ ಧವನ್ ಹಾಗೂ ಪ್ರಭ್​ ಸಿಮ್ರಾನ್​ ಸಿಂಗ್​ ಉತ್ತಮ ರೀತಿಯಲ್ಲಿ ಬ್ಯಾಟ್​ ಬೀಸುತ್ತಿದ್ದಾರೆ.

ಅತ್ತ ಗುಜರಾತ್​ ಜಯಂಟ್ಸ್​ ಬಳಗ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಹಿಂದಿನ ಪಂದ್ಯದಲ್ಲಿ ರಿಂಕು ಸಿಂಗ್​ ಸತತವಾಗಿ ಐದು ಸಿಕ್ಸರ್​ ಬಾರಿಸದೇ ಹೋಗಿದ್ದರೆ ಸತತವಾಗಿ ಮೂರನೇ ಜಯಕ್ಕೆ ಪಾತ್ರವಾಗುತ್ತಿತ್ತು ಗುಜರಾತ್​ ಬಳಗ.

ಇದೊಂದು ಉತ್ತಮ ಪಿಚ್​ ಆಗಿದ್ದು, ಚೇಸಿಂಗ್ ಮಾಡುವುದಕ್ಕೆ ಉತ್ತಮ ಪಿಚ್ ಆಗಿದೆ. ನಮ್ಮ ತಂಡ ಉತ್ತಮವಾಗಿದೆ. ಕೊನೇ ಓವರ್​ ತನಕವೂ ಉತ್ತಮವಾಗಿ ಆಡಲಿದ್ದೇವೆ. ಇದೊಂದು ಹೊಸ ಪಂದ್ಯ ಎಂಬಂತೆ ನಗುವಿನೊಂದಿಗೆ ಆಡ ಮುಂದುವರಿಸುತ್ತೇವೆ. ತಂಡದ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ ಎಂದು ಟಾಸ್​ ಗೆದ್ದ ಹಾರ್ದಿಕ್​ ಪಾಂಡ್ಯ ಹೇಳಿದ್ದಾರೆ.

ಪಂಜಾಬ್ ತಂಡದ ಶಿಖರ್​ ಧವನ್ ಮಾತನಾಡಿ, ಟಾಸ್​ ಗೆಲ್ಲದಿರುವ ಬಗ್ಗೆ ಬೇಸರ ಇಲ್ಲ. ನಾವು ಕೂಡ ಉತ್ತಮ ಪ್ರದರ್ಶನ ನೀಡುವ ಭರವಸೆ ಇಟ್ಟುಕೊಂಡಿದ್ದೇವೆ. ನಥಾನ್ ಎಲಿಸ್​ ಬದಲಿಗೆ ಕಗಿಸೊ ರಬಾಡ ತಂಡ ಸೇರಿಕೊಳ್ಳಲಿದ್ದಾರೆ. ಸಿಕಂದರ್​ ರಾಜಾ ಸ್ಥಾನಕ್ಕೆ ಭಾನುಕಾ ರಾಜಪಕ್ಷ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಧವನ್ ಮಾಹಿತಿ ನೀಡಿದರು.

ತಂಡಗಳು

ಪಂಜಾಬ್ ಕಿಂಗ್ಸ್ : ಪ್ರಭಾಸಿಮ್ರಾನ್ ಸಿಂಗ್, ಶಿಖರ್ ಧವನ್(ನಾಯಕ), ಮ್ಯಾಥ್ಯೂ ಶಾರ್ಟ್, ಭಾನುಕಾ ರಾಜಪಕ್ಷ, ಜಿತೇಶ್ ಶರ್ಮಾ, ಸ್ಯಾಮ್ ಕರ್ರನ್​, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ರಿಷಿ ಧವನ್, ಅರ್ಷದೀಪ್ ಸಿಂಗ್.

ಗುಜರಾತ್ ಟೈಟಾನ್ಸ್ : ವೃದ್ಧಿಮಾನ್ ಸಹಾ, ಶುಬ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್.

Exit mobile version