ಮೊಹಾಲಿ: ಐಪಿಎಲ್ 16ನೇ ಆವೃತ್ತಿಯ 38ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡ ಮೊದಲು ಫೀಲ್ಡಿಂಗ್ ಮಾಡುವುದಾಗಿ ಹೇಳಿದೆ. ಹೀಗಾಗಿ ಪ್ರವಾಸಿ ಲಕ್ನೊ ಸೂಪರ್ ಜಯಂಟ್ಸ್ ತಂಡ ಮೊದಲು ಬ್ಯಾಟ್ ಮಾಡಿ ದೊಡ್ಡ ಮೊತ್ತದ ಸ್ಕೋರ್ ಪೇರಿಸಿ ಸವಾಲೊಡ್ಡಬೇಕಾಗಿದೆ.
ಟಾಸ್ ಗೆಲುವಿನ ಬಳಿಕ ಮಾತನಾಡಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್, ಬೌಲಿಂಗ್ ಮಾಡಿ ಲಕ್ನೊ ತಂಡವನ್ನು ಕಟ್ಟಿ ಹಾಕುವುದು ನಮ್ಮ ಗುರಿ. ಬೆನ್ನು ನೋವಿನಿಂದ ನಾನು ಸುಧಾರಿಸಿಕೊಂಡಿದ್ದೇನೆ. ತಂಡವೂ ಖುಷಿಯಲ್ಲಿದೆ. ಟೂರ್ನಿಯಲ್ಲಿ ಇನ್ನು ಏಳು ಪಂದ್ಯಗಳು ಬಾಕಿ ಉಳಿದಿವೆ. ಅವುಗಳೆಲ್ಲವನ್ನೂ ಗೆಲ್ಲುವ ಗುರಿಯಿದೆ. ಮ್ಯಾಥ್ಯೂ ಶಾರ್ಟ್ ಆಡಲು ಅವಕಾಶ ಪಡೆಯುವುದಿಲ್ಲ. ಸಿಕಂದರ್ ರಾಜಾಗೆ ಅವಕಾಶ ನೀಡುತ್ತಿದೆ ಎಂದು ಹೇಳಿದರು.
ಲಕ್ನೊ ತಂಡದ ನಾಯಕ ಕೆ. ಎಲ್ ರಾಹುಲ್ ಮಾತನಾಡಿ, ನಾನು ಎಲ್ಲಿ ಆಡಿದರೂ ಪ್ರೇರಣೆ ಒಂದೇ ಆಗಿರುತ್ತದೆ. ಇಲ್ಲಿನ ಪರಿಸ್ಥಿತಿಗಳ ಬಗ್ಗೆ ಹೆಚ್ಚು ಪರಿಚಿತವಾಗಿದೆ. ಉತ್ತಮ ವಿಕೆಟ್ನಂತೆ ಕಾಣುತ್ತಿದೆ. ಇಬ್ಬನಿ ಕೂಡ ನಿರ್ಣಾಯಕ. ಅದಕ್ಕಾಗಿಯೇ ಪಂಜಾಬ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ ಎಂದು ಹೇಳಿದರು.
ಇದೇ ಮೊದಲ ಬಾರಿಗೆ ಎಲ್ಎಸ್ಜಿ ಮೊಹಾಲಿಯಲ್ಲಿ ಆಡುತ್ತಿದೆ. ಅದೇ ರೀತಿ ಪಂಜಾಬ್ ಕಿಂಗ್ಸ್ ತಂಡ ವಿರುದ್ಧ ಈ ತಂಡಕ್ಕೆ ಹೊಸ ಅಭಿಯಾನವಾಗಿದೆ. ಮೊಹಾಲಿಯ ಸ್ಟೇಡಿಯಮ್ನ ಮೂರನೇ ಪಿಚ್ನಲ್ಲಿ ನಡೆಯುತ್ತಿದೆ. ಬೌಂಡರಿ ಗೆರೆಗಳು ಹೆಚ್ಚು ದೂರದಲ್ಲಿಯೇ ಇವೆ. ಪಿಚ್ನಲ್ಲಿ ಹೆಚ್ಚು ಹುಲ್ಲು ಇದ್ದು ಬ್ಯಾಟರ್ಗಳಿಗೆ ಸ್ವಲ್ಪ ಅನುಕೂಲವಾಗುವ ಸಾಧ್ಯತೆಗಳಿವೆ. ಮೊಹಾಲಿಯಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 173 ಆಗಿದೆ. ಆದರೆ, ಪಂಜಾಬ್ ತಂಡ ಕೆಕೆಆರ್ ವಿರುದ್ಧ 191 ರನ್ ಗಳಿಸಿದೆ. ಮೊದಲು ಬ್ಯಾಟ್ ಮಾಡುವ ತಂಡ ದೊಡ್ಡ ಮೊತ್ತ ಪೇರಿಸಿದರೆ ಮಾತ್ರ ಗೆಲುವು ಪಡೆಯಲು ಸಾಧ್ಯವಿದೆ.
ತಂಡಗಳು:
ಲಕ್ನೊ ಸೂಪರ್ ಜಯಂಟ್ಸ್: ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯ್ನಿಸ್, ಕೃಣಾಲ್ ಪಾಂಡ್ಯ, ನಿಕೋಲಸ್ ಪೂರನ್, ಆಯುಷ್ ಬದೋನಿ, ನವೀನ್ ಉಲ್ ಹಕ್, ರವಿ ಬಿಷ್ಣೋಯ್, ಅವೇಶ್ ಖಾನ್, ಯಶ್ ಠಾಕೂರ್.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ಶಿಖರ್ ಧವನ್ (ನಾಯಕ), ಅಥರ್ವ ಟೈಡೆ, ಸಿಕಂದರ್ ರಾಜಾ, ಲಿಯಾಮ್ ಲಿವಿಂಗ್ಸ್ಟನ್, ಸ್ಯಾಮ್ ಕರ್ರನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಕಗಿಸೊ ರಬಾಡ, ರಾಹುಲ್ ಚಹರ್, ಗುರ್ನೂರ್ ಬ್ರಾರ್, ಅರ್ಶ್ದೀಪ್ ಸಿಂಗ್.