Site icon Vistara News

ಬೆಂಗಳೂರಿನಲ್ಲಿ ಮೊಮ್ಮಗ ರಚಿನ್ ರವೀಂದ್ರಗೆ ದೃಷ್ಟಿ ತೆಗೆದ ಅಜ್ಜಿ; ವಿಡಿಯೊ ವೈರಲ್​

rachin ravindra grandmother

ಬೆಂಗಳೂರು: ಹಾಲಿ ಆವೃತ್ತಿಯ ವಿಶ್ವಕಪ್​ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರುತ್ತಿರುವ ಕರ್ನಾಟಕ ಮೂಲದ ನ್ಯೂಜಿಲ್ಯಾಂಡ್​ ತಂಡದ ಆಟಗಾರ ರಚಿನ್​ ರವೀಂದ್ರ(Rachin Ravindra) ಅವರಿಗೆ ಯಾರ ದೃಷ್ಟಿಯೂ ಬೀಳಬಾರದೆಂದು ಅವರ ಅಜ್ಜಿ ದೃಷ್ಟಿ ತೆಗೆದಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಶ್ರೀಲಂಕಾ ಎದುರಿನ ಪಂದ್ಯ ಮುಗಿದ ಬಳಿಕ ರಚಿನ್​ ಅವರು ಬೆಂಗಳೂರಿನಲ್ಲೇ ಇರುವ ತಮ್ಮ ಪ್ರೀತಿಯ ಅಜ್ಜಿ ಮನೆಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಅವರು ತಮ್ಮ ಮೊಮ್ಮಗನಿಗೆ ಯಾರ ದೃಷ್ಟಿಯೂ ಬೀಳಬಾರದು ಎಂದು ದೃಷ್ಟಿ ತೆಗೆದಿದ್ದಾರೆ. ಈ ಮುದ್ದಾದ ವಿಡಿಯೊ ಎಲ್ಲಡೆ ವೈರಲ್​ ಆಗುತ್ತಿದೆ.

ಇದನ್ನೂ ಓದಿ Rachin Ravindra : ಆರ್​ಸಿಬಿ ಸೇರುತ್ತಾರೆ ರಚಿನ್ ರವೀಂದ್ರ; ಸುಳಿವು ಬಿಟ್ಟುಕೊಟ್ಟ ಕಿವೀಸ್ ತಾರೆ

ಚೊಚ್ಚಲ ವಿಶ್ವಕಪ್​ ಆಡುತ್ತಿರುವ ರಚಿನ್​ ಅವರು ಹಾಲಿ ಆವೃತ್ತೊಯಲ್ಲಿ ಒಟ್ಟು ಮೂರು ಶತಕ ಬಾರಿಸಿ ದಿಗ್ಗಜ ಸಚಿನ್​ ತೆಂಡೂಲ್ಕರ್​ ಸೇರಿ ಅನೇಕ ಆಟಗಾರರ ದಾಖಲೆಯನ್ನು ಮುರಿದಿದ್ದಾರೆ. ಸದ್ಯ 565 ಬಾರಿಸಿರುವ ಅವರು ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಯಾರು ಈ ರಚಿನ್ ರವೀಂದ್ರ?

ರಚಿನ್ ರವೀಂದ್ರ 1999 ರಲ್ಲಿ ವೆಲ್ಲಿಂಗ್ಟನ್​ ಭಾರತೀಯ ಮೂಲದ ಪೋಷಕರಿಗೆ ಜನಿಸಿದರು. ಬೆಂಗಳೂರಿನವರಾದ ರಚಿನ್ ಅವರ ತಂದೆ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿ. ಇಬ್ಬರು ಕ್ರಿಕೆಟ್ ದಂತಕಥೆಗಳ ಬಗ್ಗೆ ಅವರ ಪ್ರೀತಿ ಎಷ್ಟು ಆಳವಾಗಿತ್ತು ಎಂದರೆ, ಅವರು ಇಬ್ಬರೂ ಆಟಗಾರರ ಹೆಸರಿನ ಅಕ್ಷರಗಳನ್ನು ಸಂಯೋಜಿಸುವ ಮೂಲಕ ತಮ್ಮ ಮಗನಿಗೆ ಹೆಸರಿಟ್ಟಿದ್ದಾರೆ. ರಾಹುಲ್ ಅವರಿಂದ “ರಾ” ಮತ್ತು ಸಚಿನ್ ಅವರಿಂದ “ಚಿನ್​ ” ತೆಗೆದುಕೊಂಡು ಎರಡನ್ನೂ ಸಂಯೋಜಿಸಿ “ರಚಿನ್” ಎಂಬ ಹೆಸರನ್ನು ಪುತ್ರನಿಗೆ ಇಟ್ಟಿದ್ದಾರೆ. ಆತನಿಗೆ ತರಬೇತಿ ಕೊಡಿಸಿ ಕ್ರಿಕೆಟಿಗನನ್ನಾಗಿ ಮಾಡಿದ್ದಾರೆ.

ಬಾರ್​ನಲ್ಲಿ ಕುಳಿತು ಫೈನಲ್​ ವೀಕ್ಷಣೆ

ರಚಿನ್ ಅವರು 2019 ವಿಶ್ವಕಪ್​ ಫೈನಲ್​ ಪಂದ್ಯವನ್ನು ಅಭಿಮಾನಿಯಾಗಿ ಬೆಂಗಳೂರಿನ ಬಾರೊಂದರಲ್ಲಿ ಕುಳಿತು ವೀಕ್ಷಿಸಿದ್ದರಂತೆ, ಈ ವಿಚಾರವನ್ನು ಅವರೇ ಈ ಬಾರಿಯ ವಿಶ್ವಕಪ್​ ಟೂರ್ನಿಯ ವೇಳೆ ತಿಳಿಸಿದ್ದರು. ಇಂಗ್ಲೆಂಡ್ ವಿರುದ್ಧ ನ್ಯೂಜಿಲ್ಯಾಂಡ್​ ಸೋತಾಗ ತುಂಬಾ ಬೇಸರಗೊಂಡಿದ್ದೆ ಎಂದಿದ್ದರು.

ಲಂಕಾ ವಿರುದ್ಧದ ಪಂದ್ಯದಲ್ಲಿ ಹಲವು ದಾಖಲೆ

ಲಂಕಾ ವಿರುದ್ಧದ ಪಂದ್ಯದಲ್ಲಿ 42 ರನ್​ ಬಾರಿಸಿದ ರವೀಂದ್ರ ಹಲವು ದಾಖಲೆಯನ್ನು ತಮ್ಮ ಹಸರಿಗ ಬರೆದರು. 2019ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ಪರ ಚೊಚ್ಚಲ ಆವೃತ್ತಿಯಲ್ಲೇ 532 ರನ್ ಗಳಿಸಿದ್ದ ಇಂಗ್ಲೆಂಡ್​​ನ ಜಾನಿ ಬೈರ್​ಸ್ಟೋವ್ ಅವರ ದಾಖಲೆಯನ್ನು ರವೀಂದ್ರ ಮುರಿದರು. ತಮ್ಮ ಇನ್ನಿಂಗ್ಸ್ ಉದ್ದಕ್ಕೂ, ರವೀಂದ್ರ ತಮ್ಮ ಹೆಸರನ್ನು ದಾಖಲೆ ಪುಸ್ತಕಗಳಲ್ಲಿ ಕೆತ್ತಿದ್ದಲ್ಲದೆ, ಪ್ರಸ್ತುತ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದರು. ಪ್ರಸ್ತುತ ಕ್ವಿಂಟನ್ ಡಿ ಕಾಕ್ ಮತ್ತು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ರವೀಂದ್ರ ಅಗ್ರಸ್ಥಾನಕ್ಕೇರಿದ್ದಾರೆ.

ಸಚಿನ್​ ದಾಖಲೆ ಮುರಿದ ರಚಿನ್​

ರಚಿನ್ ಕಳದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಟೀಮ್​ ಇಂಡಿಯಾದ ಮಾಜಿ ಆಟಗಾರ ಸಚಿನ್​ ತೆಂಡೂಲ್ಕರ್​ ಅವರ ವಿಶ್ವಕಪ್​ನ ದಾಖಲೆಯೊಂದನ್ನು ಮುರಿದ್ದರು. ಅತಿ ಕಿರಿಯ ವಯಸ್ಸಿನಲ್ಲಿ 3 ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. ಸಚಿನ್​ ಅವರು 1996 ವಿಶ್ವಕಪ್​ ಟೂರ್ನಿಯಲ್ಲಿ 2 ಶತಕ ಬಾರಿಸಿದ್ದರು. ಈ ದಾಖಲೆಯನ್ನು ರಚಿನ್​ ಅವರು ಕಳೆದ ಆಸೀಸ್​ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಸರುಗಟ್ಟಿದ್ದರು. ಇದೀಗ ಪಾಕ್​ ವಿರುದ್ಧ ಶತಕ ಬಾರಿಸಿ ಸಚಿನ್​ ಅವರನ್ನು ಹಿಂದಿಕ್ಕಿದ್ದಾರೆ. ಉಭಯ ಆಟಗಾರರು ಈ ದಾಖಲೆಯನ್ನು 23 ವರ್ಷದಲ್ಲಿ ಮಾಡಿದ್ದಾರೆ.

Exit mobile version