ಬೆಂಗಳೂರು: ಭಾರತದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್(Infosys) ಸ್ಪೇನಿನ 22 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ವಿಜೇತ, ಟೆನಿಸ್ ದಿಗ್ಗಜ ರಫೆಲ್ ನಡಾಲ್(Rafael Nadal) ಅವರನ್ನು ಬ್ರ್ಯಾಂಡ್ ಅಂಬಾಸಿಡರ್(global ambassador) ಆಗಿ ನೇಮಿಸಿದೆ. ಇನ್ಫೋಸಿಸ್‌ನ ಸಿಇಒ ಮತ್ತು ಎಂಡಿ ಆಗಿರುವ ಸಲೀಲ್ ಪರೇಖ್(Salil Parekh) ಈ ವಿಚಾರವನ್ನು ಗುರುವಾರ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ನಡಾಲ್ ಅವರು ಇನ್ಫೋಸಿಸ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿರಲಿದ್ದಾರೆ.
“ವಿಶ್ವದ ಅತ್ಯಂತ ಶ್ರೇಷ್ಠ ಮತ್ತು ಗೌರವಾನ್ವಿತ ಟೆನಿಸ್ ಚಾಂಪಿಯನ್ ಆಗಿರುವ ರಫೆಲ್ ನಡಾಲ್ ಅವರನ್ನು ಇನ್ಫೋಸಿಸ್‌ನ ರಾಯಭಾರಿಯಾಗಿ ಸ್ವಾಗತಿಸಲು ಹೆಮ್ಮೆಯಾಗುತ್ತಿದೆ” ಎಂದು ಸಲೀಲ್ ಪರೇಖ್ ಹೇಳಿದ್ದಾರೆ. ಎಟಿಪಿ ಟೂರ್, ರೋಲ್ಯಾಂಡ್-ಗ್ಯಾರೋಸ್, ಆಸ್ಟ್ರೇಲಿಯನ್ ಓಪನ್ ಮತ್ತು ಸೇರಿ ಟೆನಿಸ್ ಹಾಲ್ ಆಫ್ ಫೇಮ್‌ಗೆ ಡಿಜಿಟಲ್ ಇನ್ನೋವೇಶನ್ ಪಾಲುದಾರರಾಗಿ, ಬ್ರಾಂಡ್ ಇನ್ಫೋಸಿಸ್ ಜಾಗತಿಕವಾಗಿ ಎಐ, ಕ್ಲೌಡ್, ಡೇಟಾವನ್ನು ಬಳಸಿಕೊಂಡು ಒಂದು ಬಿಲಿಯನ್ ಅಭಿಮಾನಿಗಳಿಗೆ ಟೆನಿಸ್ ಕುರಿತ ಮಾಹಿತಿಯನ್ನು ನೀಡಲು ಸದಾ ಸಿದ್ಧ ಎಂದು ಇನ್ಫೋಸಿಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಂತಸ ವ್ಯಕ್ತಪಡಿಸಿದ ನಡಾಲ್
ಇನ್ಫೋಸಿಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಕಗೊಂಡ ಬಳಿಕ ಟ್ವಿಟ್ ವಿಡಿಯೊ ಮೂಲಕ ಪ್ರತಿಕ್ರಿಯೆ ನೀಡಿದ ನಡಾಲ್, “ಎಲ್ಲರಿಗೂ ನಮಸ್ಕಾರ. ಇನ್ಫೋಸಿಸ್‌ನ ಜಾಗತಿಕ ರಾಯಭಾರಿಯಾಗಿ ನೇಮಕಗೊಂಡಿರುವುದು ಸಂತಸವಾಗಿ. ಈ ಸಂಸ್ಥೆಯೊಂದಿಗೆ ಕೆಲಸ ನಿರ್ವಹಿಸಲು ತುಂಬಾ ಉತ್ಸುಕನಾಗಿದ್ದೇನೆ. ಟೆನಿಸ್ ಲೋಕಕ್ಕೆ ಇನ್ಫೋಸಿಸ್ ಜತೆ ಸೇರಿಕೊಂಡು ಏನಾದರು ಹೊಸತನ್ನು ನೀಡಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ Rafael Nadal | ರಾಫೆಲ್ ನಡಾಲ್ ಗ್ರ್ಯಾನ್ ಸ್ಲಾಮ್ ಸಾಧನೆ
ಗಾಯದ ಸಮಸ್ಯೆ
ಸೊಂಟ ನೋವಿನ ಗಾಯಕ್ಕೆ ತುತ್ತಾಗಿರುವ ನಡಾಲ್ ಈ ವರ್ಷದ ಫ್ರೆಂಚ್ ಓಪನ್ (French Open) ಟೂರ್ನಿಯಿಂದ ಹೊರಗುಳಿದ್ದರು. ಇದಾದ ಬಳಿಕ ವಿಂಬಲ್ಡನ್ ಟೂರ್ನಿಯಲ್ಲೂ ಅವರು ಕಣಕ್ಕಿಳಿದಿರಿಲ್ಲ. ಸದ್ಯ ಚೇತರಿಕೆ ಕಂಡಿರುವ ಅವರು ಮುಂದಿನ ವರ್ಷ ನಡೆಯುವ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಯಶಸ್ಸನ್ನು ಸಾಧಿಸಿದ್ದರೂ, ಕೊರೊನಾ ಸಾಂಕ್ರಾಮಿಕ ರೋಗದ ನಂತರ ತನ್ನ ಟೆನಿಸ್ ಅಟವನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ ಎಂದು ನಡಾಲ್ ಹೇಳಿದ್ದಾರೆ. 2024ರ ಋತುವಿನಲ್ಲಿ ಎಲ್ಲಾ ಪ್ರಮುಖ ಪಂದ್ಯಾವಳಿಗಳಲ್ಲಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ ಸ್ಪೇನ್ನ ಆಟಗಾರ ಮುಂದಿನ ವರ್ಷ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಹೇಳಿದ್ದಾರೆ.
ಮುಂದಿನ ವರ್ಷ ಶ್ರೇಷ್ಠ ಆಟ
ನಾನು ನಿರಂತರವಾಗಿ ಆಡಲು ಬಯಸುತ್ತೇನೆ. ಆದರೆ ಸತತ ಗಾಯಗಳ ನಡುವೆ ಆಡುವುದು ಜಟಿಲವಾದಾಗ ಕಾರ್ಯ. ಕಳೆದ ಕೆಲವು ತಿಂಗಳುಗಳಲ್ಲಿ ನಾನು ಟೆನಿಸ್ ಅಂಗಣಕ್ಕೆ ಹಿಂತಿರುಗಲು ಕಷ್ಟಪಟ್ಟಿದ್ದೇನೆ. ಚೇತರಿಸಿಕೊಳ್ಳಲು ಮತ್ತು ಪುನಶ್ಚೇತನಕ್ಕೆ ಸಮಯ ತೆಗೆದುಕೊಳ್ಳಲು ಬಯಸಿದ್ದೇನೆ. ನಾನು ಹಿಂದಿರುಗುವ ದಿನಾಂಕವನ್ನು ಈಗಲೇ ಹೇಳವುವುದು ಕೂಡ ಕಷ್ಟ.. ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧಗೊಂಡ ದಿನ ಆಟಕ್ಕೆ ಮರಳುತ್ತೇನೆ. ಡೇವಿಸ್ ಕಪ್ ಆಟನಲ್ಲಿ ಆಡುವುದು ಮತ್ತು 2024ರ ಋತುವನ್ನು ಉತ್ತಮವಾಗಿ ಪ್ರಾರಂಭಿಸುವುದು ನನ್ನ ಗುರಿ ಎಂದು ಚಾಂಪಿಯನ್ ಟೆನಿಸ್ ಆಟಗಾರ ಹೇಳಿಕೊಂಡಿದ್ದಾರೆ.