Site icon Vistara News

IPL 2023 : ಫೈನಲ್ ಪಂದ್ಯದ ವೇಳೆ ಮಳೆ ಬಿದ್ದರೆ ಮುಂದೇನು? ನಿಯಮ ಏನು ಹೇಳುತ್ತದೆ?

IPL 2023 Final

#image_title

ಅಹಮದಾಬಾದ್​: ಐಪಿಎಲ್ 16ನೇ ಅವೃತ್ತಿಯ ಫೈನಲ್​ ಪಂದ್ಯಕ್ಕೆ ಮೊದಲು ಅಹಮದಾಬಾದ್​​ನಲ್ಲಿ ಜೋರು ಮಳೆ ಸುರಿದಿದೆ. ಹೀಗಾಗಿ ಸಮಾರೋಪ ಸಮಾರಂಭ ಇನ್ನೂ ಆರಂಭವಾಗಿಲ್ಲ. ಪಂದ್ಯದ ಟಾಸ್​ ಕೂಡ ತಡವಾಗಿದೆ. ಅಹಮದಾಬಾದ್​​ನಲ್ಲಿ ಮಳೆ ಬರುವ ಸೂಚನೆ ಮೊದಲೇ ಇತ್ತು. ಜತೆಗೆ ಕ್ರಿಕೆಟ್​ ಟೂರ್ನಿಗಳಿಗೆ ಆಗಾಗ ಮಳೆಯ ಅಡಚಣೆ ಉಂಟಾಗುತ್ತಿರುವ ಕಾರಣ ನಿಯಮಗಳೂ ಅದಕ್ಕೆ ಪೂರಕವಾಗಿ ಮಾಡಲಾಗಿದೆ. ಹಾಗಾದರೆ, ಫೈನಲ್ ಪಂದ್ಯದ ಭವಿಷ್ಯವೇನು ಎಂಬುದನ್ನು ನೋಡೋಣ.

ಆರಂಭದಲ್ಲಿ ಮಳೆ ನಿಲ್ಲುವ ವರೆಗೆ ಕಾಯಲಾಗುತ್ತದೆ. ಮೊದಲ ಯೋಜನೆಯಂತೆ ಓವರ್​ ಕಡಿತಗೊಳಿಸಿ ಪಂದ್ಯವನ್ನು ಆಡಿಸಲು ನಿರ್ಧಾರಿಸಲಾಗುತ್ತದೆ. ಒಂದೊಮ್ಮೆ ಇದಕ್ಕೂ ಮಳೆ ಅನುವು ಮಾಡಿಕೊಡದಿದ್ದರೆ ಆಗ ರಾತ್ರಿ1.20 ವರೆಗೆ ಕಾದು ಸೂಪರ್​ ಓವರ್​ ಮೂಲಕ ಪಂದ್ಯದ ಫಲಿತಾಂಶಕ್ಕೆ ಮೊರೆಹೋಗಲಾಗುತ್ತದೆ. ಇದು ಕೂಡ ಸಾಧ್ಯವಾಗದಿದ್ದರೆ ಮೀಸಲು ದಿನವಾದ 29ನೇ ತಾರಿಕಿಗೆ ಪಂದ್ಯವನ್ನು ಮುಂದೂಡಲಾಗುತ್ತದೆ.

ಒಂದೊಮ್ಮೆ ಭಾನುವಾರ ಟಾಸ್​ ಗೆದ್ದು ಪಂದ್ಯ ನಡೆಯದೇ ಇದ್ದರೆ ಆಗ ಮೀಸಲು ದಿನ ಹೊಸ ಟಾಸ್​ ಪ್ರಕ್ರಿಕೆ ಮೂಲಕ ಪಂದ್ಯ ಆರಂಭಿಸಲಾಗುತ್ತದೆ. ಇನ್ನೊಂದು ನಿಯಮದ ಪ್ರಕಾರ ಭಾನುವಾರ ಒಂದು ತಂಡ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಮಳೆ ಬಂದು ಅಂತಿಮ ನಿಗದಿತ ಸಮಯದಲ್ಲೂ ಪಂದ್ಯ ನಡೆಯದಿದ್ದರೆ, ಆಗ ಮೀಸಲು ದಿನದಂದು ಹಿಂದಿನ ದಿನ ಎಷ್ಟು ಓವರ್​ಗೆ ಪಂದ್ಯ ನಿಂತಿದೆಯೋ ಅಲ್ಲಿಂದ ಪಂದ್ಯ ಮರು ಆರಂಭವಾಗಲಿದೆ. ಉದಾಹರಣೆಗೆ ಭಾನುವಾರ ಒಂದು ತಂಡ 4 ಓವರ್​ ಬ್ಯಾಟಿಂಗ್​ ನಡೆಸಿ ಬಳಿಕ ಮಳೆಯಿಂದ ಪಂದ್ಯ ರದ್ದಾದರೆ ಮೀಸಲು ದಿನ ಉಳಿದ 16 ಓವರ್​ ಆಟವನ್ನು ಆಡಲಿದೆ.

ಇದನ್ನೂ ಓದಿ : IPL 2023 : ಫೈನಲ್​ ಪಂದ್ಯಕ್ಕೆ ಮೊದಲೇ ನಿವೃತ್ತಿ ಘೋಷಿಸಿದ ಸಿಎಸ್​ಕೆ ಬ್ಯಾಟರ್​!

ಮೀಸಲು ದಿನವೂ ಮಳೆ ಬಂದರೆ ಏನು ಗತಿ

ಒಂದೊಮ್ಮೆ ಮೀಸಲು ದಿನವೂ ಮಳೆಯಿಂದ ಸಂಪೂರ್ಣವಾಗಿ ಪಂದ್ಯ ನಡೆಯದೇ ಇದ್ದರೆ. ಆಗ ಲೀಗ್​ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ವಿಜಯಿ ಎಂದು ಘೋಷಣೆ ಮಾಡಲಾಗುತ್ತದೆ. ಹೀಗಾದರೆ ಈ ಲಕ್​ ಗುಜರಾತ್​ ತಂಡಕ್ಕೆ ಒಲಿಯಲಿದೆ. ಕಾರಣ ಗುಜರಾತ್​ ಲೀಗ್​ನಲ್ಲಿ 10 ಪಂದ್ಯ ಗೆದ್ದು 20 ಅಂಕ ಸಂಪಾದಿಸಿತ್ತು.

Exit mobile version