ಜೈಪುರ : ಜೋಸ್ ಬಟ್ಲರ್ ಬಾರಿಸಿದ ಅಮೋಘ 92 ರನ್ ಹಾಗೂ ನಾಯಕ ಸಂಜು ಸ್ಯಾಮ್ಸನ್ (ಅಜೇಯ 66) ಅರ್ಧ ಶತಕದ ನೆರವು ಪಡೆದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ 52ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 214 ರನ್ ಬಾರಿಸಿದೆ. ಈ ಮೂಲಕ ಎದುರಾಳಿ ಎಸ್ಆರ್ಎಚ್ ಬಳಗಕ್ಕೆ.215 ರನ್ಗಳ ಗೆಲುವಿನ ಗುರಿ ಎದುರಾಗಿದೆ. ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಾಜಸ್ಥಾನ್ ಬೃಹತ್ ಮೊತ್ತ ಕಲೆಹಾಕಿತು.
ಇಲ್ಲಿನ ಸವಾಯ್ ಮಾನ್ಸಿಂಗ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆಯೋಜನೆಗೊಂಡಿರುವ ಪಂದ್ಯದಲ್ಲಿ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದಕ್ಕೆ ಪೂರಕವಾಗಿ ಬ್ಯಾಟ್ ಮಾಡಿ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 214 ರನ್ ಬಾರಿಸಿತು.
ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆದರೆ, ಯಶಸ್ವಿ ಜೈಸ್ವಾಲ್ 18 ಎಸೆತಕ್ಕೆ 35 ರನ್ ಬಾರಿಸಿ ಔಟಾದರು. ಎಂದಿನಂತೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಹೀಗಾಗಿ ಆರ್ಆರ್ ತಂಡ 54 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರೂ ಎಸ್ಆರ್ಎಚ್ ಸ್ಪಿನ್ನರ್ಗಳ ವಿರುದ್ಧ ಸ್ಫೋಟಿಸಿದರು. ಕೊನೇ ತನಕ ಅಜೇಯರಾಗಿ ಉಳಿದ ಅವರು 38 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಫೋರ್ಗಳ ಸಮೇತ 66 ರನ್ ಬಾರಿಸಿದರು. ಅವರು ಅರ್ಧ ಶತ ಬಾರಿಸಲು 33 ಎಸೆತಗಳನ್ನು ಬಳಸಿಕೊಂಡಿದ್ದರು.
ಬಟ್ಲರ್ ಭರ್ಜರಿ ಬ್ಯಾಟಿಂಗ್
ಮೊದಲಿಗೆ ಸ್ವಲ್ಪ ಮಟ್ಟಿಗೆ ರಕ್ಷಣಾತ್ಮಕವಾಗಿ ಆಡಲು ಮುಂದಾದ ಜೋಸ್ ಬಟ್ಲರ್ ಕ್ರಮೇಣ ತಮ್ಮ ಬ್ಯಾಟಿಂಗ್ಗೆ ವೇಗ ಕೊಟ್ಟರು. ಸಂಜು ಸ್ಯಾಮ್ಸನ್ ಜತೆ ಸೇರಿಕೊಂಡ ಅವರು ಎಸ್ಆರ್ಎಚ್ ಬೌಲರ್ಗಳನ್ನು ಸತತವಾಗಿ ದಂಡಿಸಿದರು. 32 ಎಸೆತಗಳಲ್ಲಿ 50 ರನ್ ಬಾರಿಸಿದ ಅವರು 59 ಎಸೆತಗಳಲ್ಲಿ 95 ರನ್ ಮಾಡಿ ಮತ್ತೊಂದು ಶತಕದ ಸಾಧನೆ ಮಾಡುವ ಸೂಚನೆ ಕೊಟ್ಟರು. ಆದರೆ, ಭುವನೇಶ್ವರ್ ಕುಮಾರ್ ಎಸೆತ 19ನೇ ಓವರ್ನಲ್ಲಿ ಎಲ್ಬಿಡಬ್ಲ್ಯು ಆಗುವ ಮೂಲಕ ನಿರಾಸೆ ಎದುರಿಸಿದರು. ಕೊನೆಯಲ್ಲಿ ಶಿಮ್ರೋನ್ ಹೆಟ್ಮಾಯರ್ 5 ಎಸೆತಗಳಿಗೆ 7 ರನ್ ಬಾರಿಸಿದರು. ಭುವನೇಶ್ವರ್ ಮತ್ತು ಮಾರ್ಕೊ ಜೆನ್ಸನ್ ತಲಾ ಒಂದ ವಿಕೆಟ್ ತಮ್ಮದಾಗಿಸಿಕೊಂಡರು.