Site icon Vistara News

IPL 2023 : ಟಾಸ್ ಗೆದ್ದ ರಾಜಸ್ಥಾನ್​ ತಂಡದಿಂದ ಬ್ಯಾಟಿಂಗ್​ ಆಯ್ಕೆ

#image_title

ಜೈಪುರ: ಐಪಿಎಲ್ 16ನೇ ಆವೃತ್ತಿಯ 52ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್​ ರಾಯಲ್ಸ್​ ತಂಡ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಪ್ರವಾಸಿ ಎಸ್​ಆರ್​​ಎಚ್​ ಬಳಗ ಫೀಲ್ಡಿಂಗ್ ಮಾಡಬೇಕಾಗಿದೆ. ಜೈಪುರದ ಸವಾಯಿ ಮಾನ್​ಸಿಂಗ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಈ ಪಂದ್ಯ ನಡೆಯುತ್ತಿದೆ. ರಾಜಸ್ಥಾನ್​ ರಾಯಲ್ಸ್ ತಂಡ ಪ್ಲೇಆಫ್​ ರೇಸ್​ನಲ್ಲಿ ಸದ್ಯ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಎಸ್​ಆರ್​ಎಚ್​ ತಂಡ ಹತ್ತನೇ ಸ್ಥಾನದಿಂದ ಮೇಲಕ್ಕೆ ಎದ್ದಿಲ್ಲ. ಹೀಗಾಗಿ ರಾಜಸ್ಥಾನ್​ ತಂಡಕ್ಕೆ ಈ ಪಂದ್ಯದ ಗೆಲುವು ಅನಿವಾರ್ಯವಾಗಿದೆ.

ಟಾಸ್​ ಗೆದ್ದ ಬಳಿಕ ಮಾತನಾಡಿದ ರಾಜಸ್ಥಾನ್​ ತಂಡದ ನಾಯಕ ಸಂಜು ಸ್ಯಾಮ್ಸನ್​, ವಾತಾವರಣ ಸ್ವಲ್ಪ ವಿಭಿನ್ನವಾಗಿ ತೋರುತ್ತಿದೆ. ಹೀಗಾಗಿ ಎರಡನೇ ಇನಿಂಗ್ಸ್​ ವೇಳೆ ಇಬ್ಬನಿ ಪರಿಣಾಮ ಉಂಟಾಗದು ಎಂಬುದು ನನ್ನ ಅಂದಾಜು. ಅದಕ್ಕಾಗಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದೇ. ನಮ್ಮ ಪ್ರದರ್ಶನದ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಉತ್ತಮ ಕ್ರಿಕೆಟ್​ ಅಡುವುದು ಮತ್ತು ಸರಿಯಾದ ಫಲಿತಾಂಶ ಪಡೆಯುವುದು ಅನಿವಾರ್ಯ. ನಮ್ಮ ತಂಡದಲ್ಲಿ ಗಾಯದ ಸಮಸ್ಯೆಗಳು ಕಾಣಿಸಿವೆ. ಜೋ ರೂಟ್​ ಈ ಪಂದ್ಯದಲ್ಲಿ ಪದಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು.

ಎಸ್​ಆರ್​ಎಚ್ ತಂಡದ ನಾಯಕ ಏಡೆನ್ ಮಾರ್ಕ್ರಮ್​ ಮಾತನಾಡಿ, ಟಾಸ್ ಗೆದ್ದಿದ್ದರೆ ನಾವು ಕೂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆವು. ಈ ಪಿಚ್​ನಲ್ಲಿ ಈಗಾಗಲೇ ಒಂದು ಪಂದ್ಯ ನಡೆದಿದೆ. ಹೀಗಾಗಿ ವಿಭಿನ್ನ ರಣತಂತ್ರ ರೂಪಿಸಬೇಕಾಗಿದೆ. ನಮ್ಮ ತಂಡದಲ್ಲಿ ಎರಡು ಬದಲಾವಣೆಗಳಿವೆ. ಹ್ಯಾರಿ ಬ್ರೂಕ್​ ಬದಲಿಗೆ ಗ್ಲೆನ್​ ಫಿಲಪ್ಸ್​ ಆಡಲಿದ್ದಾರೆ. ವಿವ್ರಾಂತ್ ಶರ್ಮಾ ಪದಾರ್ಪಣೆ ಮಾಡುತ್ತಿದ್ದಾರೆ ಎಂದು ಹೇಳಿದರು.

ತಂಡಗಳು ಇಂತಿವೆ

ಸನ್​ ರೈಸರ್ಸ್​​ ಹೈದರಾಬಾದ್: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಮ್(ನಾಯಕ), ಹೆನ್ರಿಚ್ ಕ್ಲಾಸೆನ್(ವ್), ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಮಾರ್ಕೊ ಜಾನ್ಸೆನ್, ವಿವ್ರಾಂತ್ ಶರ್ಮ, ಮಯಾಂಕ್ ಮಾರ್ಕಂಡೆ, ಭುವನೇಶ್ವರ ಕುಮಾರ್, ಟಿ ನಟರಾಜನ್.

ರಾಜಸ್ಥಾನ್ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ಜೋ ರೂಟ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೈಯರ್, ರವಿಚಂದ್ರನ್ ಅಶ್ವಿನ್, ಮುರುಗನ್ ಅಶ್ವಿನ್, ಸಂದೀಪ್ ಶರ್ಮಾ, ಕುಲ್ದೀಪ್ ಯಾದವ್, ಯಜ್ವೇಂದ್ರ ಚಹಲ್.

Exit mobile version