Site icon Vistara News

IPL 2023 : ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್​​ ತಂಡದಿಂದ ಬ್ಯಾಟಿಂಗ್ ಆಯ್ಕೆ

Rajasthan Royals won the toss and elected to bat

#image_title

ಚೈಪುರ: ಐಪಿಎಲ್​ 16ನೇ ಅವೃತ್ತಿಯ 37ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆತಿಥೇಯ ರಾಜಸ್ಥಾನ್​ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಮಹೇಂದ್ರ ಸಿಂಗ್​ ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​ ಬಳಗ ಫೀಲ್ಡಿಂಗ್ ಮಾಡಬೇಕಾಗಿದೆ. ದೊಡ್ಡ ಮೊತ್ತವನ್ನು ಪೇರಿಸಿ ಚೆನ್ನೈ ತಂಡವನ್ನು ಕಟ್ಟಿಹಾಕವುದು ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್​ ಅವರ ಉದ್ದೇಶವಾಗಿದ್ದರೆ, ಆತಿಥೇಯ ತಂಡವನ್ನು ಕಡಿಮೆ ಮೊತ್ತಕ್ಕೆ ಕಡಿವಾಣ ಹಾಕಿ ಗೆಲ್ಲುವುದು ಪ್ರವಾಸಿ ಚೆನ್ನೈ ಬಳಗದ ಯೋಜನೆಯಾಗಿದೆ.

ಇಲ್ಲಿನ ಸವಾಯ್​ ಮಾನ್​ಸಿಂಗ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಪಂದ್ಯ ನಡೆಯುತ್ತಿದೆ. ಈ ಮೂಲಕ ಆತಿಥೇಯ ರಾಜಸ್ಥಾನ್ ತಂಡ ಹಿಂದಿನ ಪಂದ್ಯದ ಸೋಲಿಗೆ ಪ್ರತಿಕಾರ ತೀರಿಸಲು ಹವಣಿಸಲಿದೆ.

ನಾವು ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತೇವೆ. ನಾವು ನಮ್ಮ ಬ್ಯಾಟಿಂಗ್​ ಬಲಕ್ಕೆ ಅಂಟಿಕೊಳ್ಳಲು ಇಷ್ಟಪಡುತ್ತೇವೆ. ನಮ್ಮ ತಂಡ 200ನೇ ಪಂದ್ಯವನ್ನು ಆಡುತ್ತಿದ್ದು ವಿಶೇಷ ಅನುಭವ ಆಗುತ್ತಿದೆ. 10 ವರ್ಷಗಳ ಕಾಲ ಆಡುತ್ತಿರುವುದು ಕೂಡ ಸ್ಮರಣೀಯ. ಪ್ರೇಕ್ಷಕರ ಗ್ಯಾಲರಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಗುಲಾಬಿ ಬಣ್ಣವನ್ನು ನೋಡಲು ಬಯಸುತ್ತೇವೆ ಎಂದು ಟಾಸ್​ ವಿಜೇತ ಸಂಜು ಸ್ಯಾಮ್ಸನ್ ಹೇಳಿದರು.

ಈ ಪಿಚ್ ಸಾಕಷ್ಟು ವೇಗವನ್ನು ಹೊಂದಿರಲಿದೆ. ಆದರೆ ಸರಾಸರಿ ಬೌನ್ಸ್ಕ ಕಡಿಮೆಯಿರಬಹುದು. ನಮ್ಮ ತಂಡದ ಬೌಲರ್​ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ತಂಡಕ್ಕೆ ಗೆಲುವು ತಂದುಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.

ತಂಡಗಳು ಈ ರೀತಿ ಇವೆ

ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ), ಶಿಮ್ರೋನ್​ ಹೆಟ್ಮಾಯರ್​, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಆಡಮ್ ಜಂಪಾ, ಸಂದೀಪ್ ಶರ್ಮಾ, ಯಜುವೇಂದ್ರ ಚಾಹಲ್.

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯೀನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ಮಥೀಶಾ ಪತಿರಾಣಾ, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಾನಾ, ಆಕಾಶ್ ಸಿಂಗ್.

Exit mobile version