ಬೆಂಗಳೂರು: ಭಾರತ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಮೈದಾನದಿಂದ ದೂರವಿರುವ ಸಾಧ್ಯತೆಗಳಿವೆ. ಅವರು ತಮ್ಮ ಊರಿನಲ್ಲಿ ಬಿಡುವಿನ ಸಮಯವನ್ನು ಆನಂದಿಸುತ್ತಿದ್ದಾರೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧ ಭಾರತದ 5 ಪಂದ್ಯಗಳ ತವರು ಟೆಸ್ಟ್ ಸರಣಿ ಪ್ರಾರಂಭವಾಗುವ ಕೆಲವೇ ವಾರಗಳ ಮೊದಲು ಅವರು ತಮ್ಮ ಹಳ್ಳಿಯಲ್ಲಿ ಜಾಲಿ ಮೂಡ್ನಲ್ಲಿರುವುದು ಕಂಡು ಬಂತು. ಅವರು ತಮ್ಮ ಊರಿನಲ್ಲಿ ಎತ್ತಿನ ಗಾಡಿಯ ಮೇಲೆ ಸವಾರಿ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ.
ಜನವರಿ 6 ರಂದು, ಜಡೇಜಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 15 ಸೆಕೆಂಡುಗಳ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಎತ್ತಿನ ಗಾಡಿಯ ಮೇಲೆ ಸವಾರಿ ಮಾಡುವುದನ್ನು ಕಾಣಬಹುದು. ಇದಕ್ಕೆ ಅವರು “ವಿಂಟೇಜ್ ಸವಾರಿ” ಎಂದು ಶೀರ್ಷಿಕೆ ಕೊಟ್ಟಿದ್ದಾರೆ.
ಜಡೇಜಾ ಎತ್ತಿನ ಗಾಡಿ ಓಡಿಸುವ ವಿಡಿಯೊ ಇಲ್ಲಿದೆ
Ravindra Jadeja begins the pitch preparations for the England series.#INDvENG pic.twitter.com/vDdWmQOc9Q
— Saurabh Malhotra (@MalhotraSaurabh) January 6, 2024
ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಕೆಲವೇ ದಿನಗಳಲ್ಲಿ, ರವೀಂದ್ರ ಜಡೇಜಾ ಅವರು ಎತ್ತಿನಗಾಡಿಯ ಸವಾರಿಯನ್ನು ಆನಂದಿಸುವ 15 ಸೆಕೆಂಡುಗಳ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕ್ರಿಕೆಟಿಗ ತನ್ನ ಮೋಜಿನ ವಿಹಾರವನ್ನು ಶೀರ್ಷಿಕೆಯಲ್ಲಿ ತನ್ನ “ವಿಂಟೇಜ್ ಸವಾರಿ” ಎಂದು ಬಣ್ಣಿಸಿದ್ದಾರೆ.
ರವೀಂದ್ರ ಜಡೇಜಾ ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ಐ ಮತ್ತು ಟೆಸ್ಟ್ ಸರಣಿಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಛಾಪು ಮೂಡಿಸಲು ಕ್ರಿಕೆಟಿಗನಿಗೆ ಸಾಕಷ್ಟು ಅವಕಾಶಗಳು ಸಿಗಲಿಲ್ಲ. ಆದರೆ ಅದಕ್ಕಿಂತ ಹಿಂದೆ ಭಾರತದಲ್ಲಿ ನಡೆದ ಹಿಂದಿನ 2023 ರ ವಿಶ್ವಕಪ್ನಲ್ಲಿ ಅವರು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು.
ಇದನ್ನೂ ಓದಿ : IND vs ENG: ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡದೊಂದಿಗೆ ಬರಲಿದ್ದಾರೆ ಪ್ರಸಿದ್ಧ ಬಾಣಸಿಗ
ಕಳೆದ ವರ್ಷ ಎಲ್ಲಾ ಸ್ವರೂಪಗಳಲ್ಲಿ ಭಾರತಕ್ಕಾಗಿ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ಐಸಿಸಿ 2023 ರ ವರ್ಷದ ಪುರುಷರ ಕ್ರಿಕೆಟಿಗ ಪ್ರಶಸ್ತಿಗೆ ನಾಲ್ಕು ಸ್ಪರ್ಧಿಗಳಲ್ಲಿ ಒಬ್ಬರಾಗಿ ಆಯ್ಕೆ ಮಾಡಲಾಗಿದೆ. ತಂಡದ ಸಹ ಆಟಗಾರ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ತಾರೆಗಳಾದ ಟ್ರಾವಿಸ್ ಹೆಡ್ ಮತ್ತು ಪ್ಯಾಟ್ ಕಮಿನ್ಸ್ ಅವರೊಂದಿಗೆ ಪ್ರತಿಷ್ಠಿತ ಗೌರವಕ್ಕಾಗಿ ಸ್ಪರ್ಧಿಸಲಿದ್ದಾರೆ.
ಲೆಜೆಂಡರಿ ಆಲ್ರೌಂಡರ್ ಶೀಘ್ರದಲ್ಲೇ ಇಂಗ್ಲೆಂಡ್ ವಿರುದ್ಧ ಭಾರತದ ಮುಂಬರುವ ಐದು ಪಂದ್ಯಗಳ ತವರು ಟೆಸ್ಟ್ ಸರಣಿಯ ಮೂಲಕ ಮತ್ತೊಮ್ಮೆ ರಾಷ್ಟ್ರೀಯ ಜೆರ್ಸಿಯನ್ನು ಅಲಂಕರಿಸಲಿದ್ದಾರೆ. ಸರಣಿಯ ಆರಂಭಿಕ ಪಂದ್ಯ ಜನವರಿ 25 ರಿಂದ 29 ರವರೆಗೆ ಹೈದರಾಬಾದ್ನಲ್ಲಿ ನಡೆಯಲಿದೆ.