ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (IPL 2023) ತಂಡವು ಸೋಲಿನ ಅಭಿಯಾನ ಮುಂದುವರಿಸಿದೆ. ಗುಜರಾತ್ ಟೈಟನ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ 2023ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ. ಇದರೊಂದಿಗೆ ಆರ್‌ಸಿಬಿ ಅಭಿಯಾನ ಅಂತ್ಯವಾಗಿದೆ. ಇನ್ನು ಕಳೆದ 16 ಸೀಸನ್‌ಗಳಲ್ಲಿ ಆರ್‌ಸಿಬಿ ಪ್ರದರ್ಶನ ಹೇಗಿತ್ತು? ಎಷ್ಟು ಬಾರಿ ಪ್ಲೇಆಫ್‌ಗೆ ಹೋಗಿತ್ತು? ಎಷ್ಟು ಸಲ ಫೈನಲ್‌ಗೇರಿತ್ತು ಹಾಗೂ ಎಷ್ಟು ಬಾರಿ ಪ್ಲೇಆಫ್ ಕೂಡ ಪ್ರವೇಶಿಸದೆ ಮನೆಗೆ ಹೋಗಿತ್ತು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಎಂಟು ಬಾರಿ ಪ್ಲೇಆಫ್ ಪ್ರವೇಶ
ಆಡಿರುವ 16 ಸೀಸನ್‌ಗಳಲ್ಲಿ ಆರ್‌ಸಿಬಿಯು ಎಂಟು ಬಾರಿ ಪ್ಲೇಆಫ್‌ಗೆ ತಲುಪಿದ ಸಾಧನೆ ಮಾಡಿದೆ. 2022 ಹಾಗೂ 2021ರಲ್ಲಿ ಪ್ಲೇಆಫ್‌ಗೆ ತೆರಳಿದ್ದ ಆರ್‌ಸಿಬಿ, ಫೈನಲ್‌ಗೇರುವಲ್ಲಿ ವಿಫಲವಾಗಿತ್ತು. 2020ರಲ್ಲಿ ಬೆಂಗಳೂರು ತಂಡವು 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇನ್ನು 2019ರಲ್ಲಿ 8, 2018ರಲ್ಲಿ 6, 2017ರಲ್ಲಿ 8, 2016ರಲ್ಲಿ ರನ್ನರ್ಸ್ ಅಪ್, 2015ರಲ್ಲಿ ತೃತೀಯ, 2014ರಲ್ಲಿ 7, 2013ರಲ್ಲಿ 5, 2012ರಲ್ಲಿ 5, 2011ರಲ್ಲಿ ರನ್ನರ್ಸ್ ಅಪ್, 2010ರಲ್ಲಿ ತೃತೀಯ, 2009ರಲ್ಲಿ ರನ್ನರ್ಸ್ ಅಪ್ ಹಾಗೂ 2008ರಲ್ಲಿ 7ನೇ ಸ್ಥಾನ ಪಡೆದಿತ್ತು. ಈಗ 2023ರಲ್ಲಿ ಆರನೇ ಸ್ಥಾನ ಪಡೆಯುವಲ್ಲಿ ಮಾತ್ರ ಶಕ್ತವಾಗಿದೆ.
ಇದನ್ನೂ ಓದಿ: IPL 2023: ಐಪಿಎಲ್ನಲ್ಲಿ ನೂತನ ದಾಖಲೆ ಬರೆದ ಕಿಂಗ್ ಕೊಹ್ಲಿ
ಮೂರು ಬಾರಿ ಫೈನಲ್‌ಗೆ ಲಗ್ಗೆ
ಇದುವರೆಗೆ ಆರ್‌ಸಿಬಿ ತಂಡವು ಮೂರು ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಐಪಿಎಲ್ ಆರಂಭವಾದ ಎರಡನೇ ವರ್ಷ ಅಂದರೆ, 2009ರಲ್ಲಿ ಪ್ರಶಸ್ತಿ ಸುತ್ತಿಗೆ ತೆರಳಿದ್ದ ಬೆಂಗಳೂರು ತಂಡವು ಫೈನಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋಲನುಭವಿಸಿತ್ತು. ಇನ್ನು 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ರನ್ನರ್ಸ್ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.