ಲಖನೌ: ಐಪಿಎಲ್ 16ನೇ ಆವೃತ್ತಿಯ (IPL 2023) 43ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಆತಿಥೇಯ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಮಾಡಬೇಕಾಗಿದೆ. ಲಕ್ನೊ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿದ್ದು, ಆರ್ಸಿಬಿ ತಂಡ ಕೆಕೆಆರ್ ವಿರುದ್ಧ ಸೋಲು ಕಂಡಿದೆ. ಹೀಗಾಗಿ ಆರ್ಸಿಬಿ ತಂಡ ಗೆಲುವಿನ ಹಳಿಗೆ ಮರಳಲು ಯತ್ನಿಸಿದರೆ ಲಕ್ನೊ ಅಂಕಪಟ್ಟಿಯ ಅಗ್ರಸ್ಥಾನಕ್ಕಾಗಿ ಹೋರಾಡಲಿದೆ.
ಭಾರತರತ್ನ ಅಟಲ್ಬಿಹಾರಿ ವಾಜಪೇರಿ ಕ್ರಿಕೆಟ್ ಸ್ಟೇಡಿಯಮ್ನ ಪಿಚ್ ಬೌಲಿಂಗ್ಗೆ ನೆರವಾಗಲಿದೆ. ಅದೇ ರೀತಿ ಒಂದು ಬದಿ 72 ಮೀಟರ್, ಇನ್ನೊಂದು ಬದಿ 63 ಮೀಟರ್ ಬೌಂಡರಿ ಲೈನ್ ಇದೆ. ಸ್ಟ್ರೈಟ್ ಬೌಂಡರಿ 78 ಮೀಟರ್ ದೂರವಿದೆ. ಇದು ಕಪ್ಪು ಮಣ್ಣಿನ ಪಿಚ್, ಆದ್ದರಿಂದ ಬೌನ್ಸ್ ಸ್ವಲ್ಪ ಕಡಿಮೆ. 150ಕ್ಕಿಂತ ಹೆಚ್ಚು ಸ್ಕೋರ್ ದಾಖಲಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಆರ್ಸಿಬಿ ತಂಡಕ್ಕೆ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್ವುಡ್ ಅವರ ಆಗಮನವಾಗಿದೆ. ಡೇವಿಡ್ ವಿಲ್ಲಿ ಗಾಯದ ಸಮಸ್ಯೆಯಿಂದ ಔಟಾಗಿದ್ದಾರೆ. ಅವರ ಬದಲಿಗೆ ತಂಡಕ್ಕೆ ಕೇದಾರ್ ಜಾಧವ್ ಆಯ್ಕೆಗೊಂಡಿದ್ದಾರೆ. ಆದರೆ, ವಿದೇಶಿ ಕೋಟ ಆಗಿರುವ ಕಾರಣ ಹೇಜಲ್ವುಡ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಟಾಸ್ ಗೆದ್ದ ಬಳಿಕ ಮಾತನಾಡಿದ ನಾಯಕ ಫಾಫ್ ಡು ಪ್ಲೆಸಿಸ್, ಎರಡನೇ ಇನಿಂಗ್ಸ್ ವೇಳೆ ಪಿಚ್ ಹೆಚ್ಚು ತಿರುವು ಪಡೆಯುವ ಸಾಧ್ಯತೆಗಳಿವೆ. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿಕೊಂಡಿದ್ದೇವೆ. ತಂಡದಲ್ಲಿ ಎರಡು ಬದಲಾವಣೆಗಳಿವೆ. ಹೇಜಲ್ವುಡ್ ತಂಡಕ್ಕೆ ಆಗಮಿಸಿರುವ ಜತೆಗೆ ಶಹಬಾಜ್ ಅಹಮದ್ ಬದಲಿಗೆ ಅನುಜ್ ರಾವತ್ ಅವಕಾಶ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : Rashimka Mandanna : ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಕ್ರಿಕೆಟರ್ ಎಂದ ರಶ್ಮಿಕಾ ಮಂದಣ್ಣ
ಕೆ.ಎಲ್ ರಾಹುಲ್ ಮಾತನಾಡಿ, ಇಲ್ಲಿ ವೇಗಿಗಳಿಗಿಂತ ಸ್ಪಿನ್ನರ್ಗಳಿಗೆ ಹೆಚ್ಚು ವಿಕೆಟ್ ಕಬಳಿಸುವ ಅವಕಾಶಗಳಿವೆ. ರನ್ ಗಳಿಸುವುದು ಎರಡೂ ತಂಡಗಳಿಗೆ ಸವಾಲಿನ ಸಂಗತಿ. ಆವೇಶ್ ಖಾನ್ ಹೊರಕ್ಕೆ ನಡೆದಿದ್ದು ಕೃಷ್ಣಪ್ಪ ಗೌತಮ್ ತಂಡಕ್ಕೆ ಪ್ರವೇಶ ಪಡೆದಿದ್ದಾರೆ ಎಂದು ಹೇಳಿದರು.
ತಂಡಗಳು ಇಂತಿವೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ , ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್ವೆಲ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್ (), ಸುಯಾಶ್ ಪ್ರಭುದೇಸಾಯಿ, ವನಿಂದು ಹಸರಂಗ, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್ವುಡ್.
ಲಕ್ನೊ ಸೂಪರ್ ಜಯಂಟ್ಸ್: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃಣಾಲ್ ಪಾಂಡ್ಯ, ನಿಕೋಲಸ್ ಪೂರನ್, ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಅಮಿತ್ ಮಿಶ್ರಾ, ಯಶ್ ಠಾಕೂರ್.