Site icon Vistara News

Rishabh Pant: ಸಹೋದರಿಯ ನಿಶ್ಚಿತಾರ್ಥದ ಫೋಟೊ ಹಂಚಿಕೊಂಡ ರಿಷಭ್​ ಪಂತ್​

rishabh pant sister engagement

ನವಹೆದಲಿ: ಕಾರು ಅಪಘಾತದ ಬಳಿಕ ಚೇತರಿಕೆ ಕಂಡಿರುವ ಟೀಮ್​ ಇಂಡಿಯಾದ ಸ್ಟಾರ್​ ಯುವ ಆಟಗಾರ ರಿಷಭ್​ ಪಂತ್​ ಈ ವರ್ಷ ಐಪಿಎಲ್​ ಆಡುವ ಮೂಲಕ ಕ್ರಿಕೆಟ್​ಗೆ ಮರಳುವ ಸಿದ್ಧತೆಯಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪಂತ್​ ಸಹೋದರಿ ಸಾಕ್ಷಿ ಅವರ ನಿಶ್ಚಿತಾರ್ಥ ಆಗಿದ್ದು ಈ ಸಮಾರಂಭದ ಫೋಟೊಗಳನ್ನು ಪಂತ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಿಷಭ್​ ಪಂತ್​ ಅವರು ಕಪ್ಪು ಬಣ್ಣದ ಬ್ಲೇಸರ್​ ಧರಿಸಿ ತಮ್ಮ ತಂಗಿ ಹಾಗೂ ತಾಯಿಯ ಜತೆ ಕುಟುಬಂ ಸಮೇತರಾಗಿ ಫೋಟೊ ತೆಗಿಸಿಕೊಂಡಿದ್ದಾರೆ. ಈ ಫೋಟೊಗಳು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪಂತ್​ ಸಹೋದರಿಗೆ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ Rishabh Pant : ಆಟಕ್ಕೆ ಮರಳಿದ ತಕ್ಷಣ ಪಂತ್​ ಮಿಂಚಲಿದ್ದಾರೆ ಎಂದು ಭವಿಷ್ಯ ನುಡಿದ ಮಾಜಿ ಆಟಗಾರ

ಪಂತ್​ ಸಹೋದರಿ ಸಾಕ್ಷಿ ಅವರು ಕಳೆದ ಒಂಬತ್ತು ವರ್ಷಗಳಿಂದ ಅಂಕಿತ್ ಚೌಧರಿ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದರು. ಇದೀಗ ಮದುವೆಯಾಗಲು ನಿಶ್ಚಯಿಸಿದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಶೈಲಿಯ ಉಡುಪಿನಲ್ಲಿ ಈ ಜೋಡಿ ಸುಂದರವಾಗಿ ಕಾಣಿಸಿದ್ದಾರೆ.


ಅಂಕಿತ್ ಚೌಧರಿ, ಸಹೋದರಿ ಸಾಕ್ಷಿ ಮತ್ತು ತಾಯಿಯ ಜತೆಗಿರುವ ಫೋಟೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಪಂತ್​ “ಅಭಿನಂದನೆಗಳು ನನ್ನ ಸಹೋದರಿ” ಎಂದು ಬರೆದುಕೊಂಡಿದ್ದಾರೆ. ಸಾಕ್ಷಿ ಕೂಡ ನಿಶ್ಚಿತಾರ್ಥದ ಫೋಟೊಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

2022ರ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅರ್ಪಆತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್​ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.

ಸುಟ್ಟ ಗಾಯಗಳು ಹಾಗೂ ಮಂಡಿಗೆ ಗಾಯಗೊಂಡಿಗೆ ರಿಷಭ್​ ಪಂತ್​ಗೆ ಆರಂಭದಲ್ಲಿ ಡೆಹ್ರಾಡೂನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಪಂತ್​ ದುಬೈಯಲ್ಲಿ ಕ್ರಿಸ್​ಮಸ್​ ಪಾರ್ಟಿಯಲ್ಲಿ ಮುಗಿಸಿ ಮರಳಿ ಭಾರತಕ್ಕೆ ಬಂದು ತಾಯಿಗೆ ಹೊಸ ವರ್ಷದ ಸರ್​ಪ್ರೈಸ್​ ನೀಡಲೆಂದು ದೆಹಲಿಯಿಂದ ಡೆಹ್ರಾಡೂನ್​ಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು. 

ರಿಷಭ್​ ಪಂತ್​ ಅವರ ಗಂಭೀರ ಗಾಯವನ್ನು ಕಂಡ ಅನೇಕರು ಪಂತ್​ ಕ್ರಿಕೆಟ್​ ಬಾಳ್ವೆ ಇನ್ನು ಮಂದೆ ಕಷ್ಟ, ಒಂದೊಮ್ಮೆ ಅವರು ಕ್ರಿಕೆಟ್​ಗೆ ಮರಳಬೇಕಾದರೂ ಹಲವು ವರ್ಷ ಬೇಕಾದಿತು ಹೀಗೆ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದರೆ ಪಂತ್​ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಸ್ತ್ರಚಿಕಿತ್ಸೆ ನಡೆದ ಒಂದೆರಡು ದಿನಗಳಿಂದಲೇ ಕಠಿಣ ವ್ಯಾಯಾಮ ನಡೆಸಲು ಆರಂಭಿಸಿದ್ದರು. ಸದ್ಯ ತೇಚರಿಕೆ ಕಂಡಿರುವ ಪಂತ್​ ಈ ಬಾರಿ ಐಪಿಎಲ್​ ಆಡುವ ನಿರೀಕ್ಷೆಯಲ್ಲಿದ್ದಾರೆ. ಆದಷ್ಟು ಬೇಗ ಅವರು ಕ್ರಿಕೆಟ್​ ಮೈದಾನಕ್ಕೆ(rishabh pant comeback) ಬರಲಿ ಎಂಬುದು ಅವರ ಅಭಿಮಾನಿಗಳ(rishabh pant fans) ಆಶಯಾಗಿದೆ.

ಬಹುತೇಕ ಚೇತರಿಕೆ ಕಂಡಿರುವ ಅವರ ಫಿಟ್ನೆಸ್​ ಮೇಲೆ ಬಿಸಿಸಿಐ ವೈದ್ಯಕಿಯ ತಂಡ ನಿಗಾ ಇರಿಸಿದೆ. ಪಂತ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳ ಬೇಕಾದರ ದೇಶೀಯ ಕ್ರಿಕೆಟ್​ನಲ್ಲಿ ಆಡಿ ತಮ್ಮ ಫಿಟ್​ಸೆನ್​ ಸಾಬೀತುಪಡಿಸಬೇಕಿದೆ.

Exit mobile version