Rishabh Pant : ಆಟಕ್ಕೆ ಮರಳಿದ ತಕ್ಷಣ ಪಂತ್​ ಮಿಂಚಲಿದ್ದಾರೆ ಎಂದು ಭವಿಷ್ಯ ನುಡಿದ ಮಾಜಿ ಆಟಗಾರ - Vistara News

ಕ್ರಿಕೆಟ್

Rishabh Pant : ಆಟಕ್ಕೆ ಮರಳಿದ ತಕ್ಷಣ ಪಂತ್​ ಮಿಂಚಲಿದ್ದಾರೆ ಎಂದು ಭವಿಷ್ಯ ನುಡಿದ ಮಾಜಿ ಆಟಗಾರ

Rishabh Pant : ರಿಷಭ್ ಪಂತ್​ 2022ರ ಡಿಸೆಂಬರ್​ 30ರಂದು ರಾತ್ರಿ ಅಪಘಾತಕ್ಕೆ ಒಳಗಾಗಿದ್ದರು. ಅಲ್ಲಿಂದ ಅವರು ಆಡಿರಲಿಲ್ಲ.

VISTARANEWS.COM


on

Rishabh Pant
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತದ ವಿಕೆಟ್ ಕೀಪರ್-ಬ್ಯಾಟರ್​ ರಿಷಭ್ ಪಂತ್ (Rishabh Pant) ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳುವ ಬಗ್ಗೆ ಇಂಗ್ಲೆಂಡ್​ ಮಾಜಿ ನಾಯಕ ನಾಸಿರ್ ಹುಸೇನ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅವರಿಲ್ಲದೆ ಟೀಮ್ ಇಂಡಿಯಾ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಪಂತ್ ಬಾಕ್ಸ್ ಆಫೀಸ್ ಕ್ರಿಕೆಟಿಗ ಮತ್ತು ಭಾರತವು ಅವರನ್ನು ಹೊಂದಲು ಅದೃಷ್ಟಶಾಲಿ ಎಂದು ಹುಸೇನ್ ಒಪ್ಪಿಕೊಂಡಿದ್ದಾರೆ.

ಪಂತ್ ಕಳೆದ ವರ್ಷ ಡಿಸೆಂಬರ್​ನಲ್ಲಿ ದೆಹಲಿಯಿಂದ ಹೋಗುವಾಗ ಡೆಹ್ರಾಡೂನ್ ಹೆದ್ದಾರಿಯಲ್ಲಿ ಕಾರು ಅಪಘಾತಕ್ಕೆ ಒಳಗಾಗಿದ್ದರು. ಸ್ವಲ್ಪ ಸಮಯದವರೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ತಮ್ಮ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಅಂದಿನಿಂದ ಎನ್​ಸಿಎನಲ್ಲಿ ಪುನಶ್ಚೇತನಗೊಳ್ಳುತ್ತಿದ್ದಾರೆ.

ಇದನ್ನೂ ಓದಿ : KL Rahul : ರಾಹುಲ್​ ನಾಯಕತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಎಲ್​ಎಸ್​ಜಿ ಕೋಚ್​​

ಗಾಯದಿಂದಾಗಿ ಅವರು ಏಷ್ಯಾ ಕಪ್ 2023 ವಿಶ್ವಕಪ್ 2023 ಮತ್ತು ಐಪಿಎಲ್ 2023 ಅನ್ನು ತಪ್ಪಿಸಿಕೊಂಡರು. ಆದರೆ ಪಂತ್ ಐಪಿಎಲ್ 2024 ನೊಂದಿಗೆ ಸ್ಪರ್ಧಾತ್ಮಕ ಕ್ರಿಕೆಟ್​​ಗೆ ಮರಳುತ್ತಾರೆ ಎಂಬ ಊಹಾಪೋಹಗಳು ಹರಡಿರುವುದರಿಂದ ಆ ಬಗ್ಗೆ ಕೌತುಕ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್​​ನಲ್ಲಿ ಮಾಜಿ ನಾಯಕ ನಾಸಿರ್ ಹುಸೇನ್ ಅವರು ಇಡೀ ಜಗತ್ತು ಅವರ ಮರಳುವಿಕೆಗಾಗಿ ಕಾಯುತ್ತಿದೆ ಎಂದು ಹೇಳಿದ್ದಾರೆ.

ಹುಸೇನ್ ಹೇಳಿದ್ದೇನು?

ಅದೊಂದು ಗಂಭೀರ ಅಪಘಾತವಾಗಿತ್ತು. ಇಡೀ ಜಗತ್ತು ಉಸಿರು ಬಿಗಿಹಿಡಿದಿತ್ತು. ಅದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ನೀವು ಸೋಷಿಯಲ್ ಮೀಡಿಯಾದಲ್ಲಿ, ನನ್ನ ಫೋನ್​ನಲ್ಲಿ ಮತ್ತು ಜಿಮ್​ನಲ್ಲಿ ದೃಶ್ಯಗಳಿಗೆ ಆರಂಭಿಕ ಮೊದಲ ನಡಿಗೆಯ ಹೆಜ್ಜೆಗಳನ್ನು ಮತ್ತು ನಂತರ ಅವರು ಸ್ವಲ್ಪ ಕ್ರಿಕೆಟ್ ಆಡುವ ದೃಶ್ಯಗಳು, ರಿಕಿ (ಪಾಂಟಿಂಗ್) ಅವರೊಂದಿಗೆ ಅವರ ಚಟುವಟಿಕೆಗಳನ್ನು ಗಮನಹರಿಸಿದ್ದೀರಿ. ಆ್ಯಶಸ್​ನಲ್ಲಿ ಬೇಸಿಗೆಯಲ್ಲಿ ನಾನು ರಿಕಿ ಪಾಟಿಂಗ್​ ಅವರೊಂದಿಗೆ ಪ್ರಯಾಣಿಸಿದೆ. ರಿಕಿ ಪಂತ್ ಪ್ರಗತಿ ಕುರಿತು ಸಂದೇಶ ಕಳುಹಿಸುತ್ತಿದ್ದರು. ಇದೀಗ ನೋಡಿದರೆ ಅವರು ಬಾಕ್ಸ್​ಆಫೀಸ್​ ಕ್ರಿಕೆಟಿಗನಾಗುವುದು ಖಚಿತ ಎಂದು ಹೇಳಿದರು.

ಇಂಗ್ಲೆಂಡ್ ಮುಂದಿನ ವರ್ಷ ಜನವರಿ-ಮಾರ್ಚ್​​ನಲ್ಲಿ ಐದು ಟೆಸ್ಟ್ ಪಂದ್ಯಗಳಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ. ಪಂತ್​​ ಇಂಗ್ಲಂಡ್​ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಆಂಗ್ಲರ ವಿರುದ್ಧ 12 ಇನಿಂಗ್ಸ್​ಗಳಲ್ಲಿ ಮೂರು ಶತಕಗಳು ಮತ್ತು ನಾಲ್ಕು ಅರ್ಧಶತಕಗಳೊಂದಿಗೆ 781 ರನ್ ಗಳಿಸಿದ್ದಾರೆ.

ಪಂತ್ ಅನುಪಸ್ಥಿತಿಯಲ್ಲಿ, ಭಾರತವು ಟೆಸ್ಟ್​​ ತಂಡ ವಿಕೆಟ್ ಕೀಪರ್​ಗಳಾಗಿ ಕೆಎಸ್ ಭರತ್, ಇಶಾನ್ ಕಿಶನ್ ಮತ್ತು ಕೆಎಲ್ ರಾಹುಲ್ ಅವರನ್ನು ಪ್ರಯತ್ನಿಸಿದೆ. ವೈಟ್-ಬಾಲ್ ಕ್ರಿಕೆಟ್​ನಲ್ಲಿ ಇಶಾನ್ ಕಿಶನ್ ಮತ್ತು ಕೆಎಲ್ ರಾಹುಲ್ ತಮ್ಮ ಕೆಲಸವನ್ನು ಮಾಡಿದ್ದಾರೆ.

ಪಂತ್ ಇಲ್ಲದೆ ಭಾರತ ಉತ್ತಮ ಪ್ರದರ್ಶನ ನೀಡಿದೆ. ಏಕೆಂದರೆ ಕೆಎಲ್ ಎಲ್ಲಾ ಸ್ವರೂಪಗಳಲ್ಲಿ ಅದ್ಭುತವಾಗಿ ಆಡಿದ್ದಾರೆ. ಅವರು ಅದ್ಭುತವಾಗಿ ಮುಂದುವರಿಯುತ್ತಾರೆ. ಅವರಿಬ್ಬರನ್ನು ಹೊಂದಲು ಭಾರತ ತಂಡವು ಅದೃಷ್ಟ ಮಾಡಿದೆ. ರಿಷಭ್ ಪಂತ್ ಅವರ ಗಾಯದ ಮೊದಲು ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಗಾಯದ ನಂತರ ಅವರು ಬಾಕ್ಸ್ ಆಫೀಸ್ ಕ್ರಿಕೆಟಿಗ ಆಗುತ್ತಾರೆ ಎಂದು ಆಶಿಸುತ್ತೇವೆಎಂದು ಹುಸೇನ್ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

T20 World Cup : ಆಸ್ಟ್ರೇಲಿಯಾ ವಿರುದ್ಧ 24 ರನ್​ಗಳ ಭರ್ಜರಿ ಗೆಲುವು ಸಾಧಿಸಿ ಸೇಡು ತೀರಿಸಿಕೊಂಡ ಭಾರತ

T20 World Cup : ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 5 ವಿಕೆಟ್​ ನಷ್ಟಕ್ಕೆ 205 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತನ್ನ ಪಾಲಿನ 20 ಒವರ್​ಗಳಲ್ಲಿ 7 ವಿಕೆಟ್​ಗೆ 181 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

Rohit Sharma
Koo

ಸೇಂಟ್​ ಲೂಸಿಯಾ: ರೋಹಿತ್ ಶರ್ಮಾ ಅವರ (92 ರನ್​, 41 ಎಸೆತ, 8 ಸಿಕ್ಸರ್, 7 ಫೋರ್​) ಪ್ರಚಂಡ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಭಾರತ ತಂಡ ಟಿ20 ವಿಶ್ವ ಕಪ್​ನ 2024ನೇ (T20 World Cup) ಆವೃತ್ತಿಯ ಸೂಪರ್ 8 ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ದ (IND vs AUS) 24 ರನ್​ಗಳ ಗೆಲುವು ದಾಖಲಿಸಿತು. ಈ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಹಾಗೂ 2023ರ ಏಕ ದಿನ ವಿಶ್ವ ಕಪ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿತು. ಈ ಸೋಲಿನೊಂದಿಗೆ ಆಸ್ಟ್ರೇಲಿಯಾ ತಂಡದ ಟಿ 20 ವಿಶ್ವ ಕಪ್​ ಸೆಮಿಫೈನಲ್ ಹಾದಿ ಕಠಿಣಗೊಂಡಿತು. ಇದೇ ವೇಳೆ ಟಿ20 ವಿಶ್ವ ಕಪ್​​ನಲ್ಲಿ ಭಾರತ ತಂಡದ ಅಜೇಯ ಓಟ ಮುಂದುವರಿಯಿತು. ಸೂಪರ್​ 8 ಹಂತದಲ್ಲಿ ಗುಂಪು ಎ ಯಿಂದ ಒಟ್ಟು ಮೂರು 3 ಗೆಲುವಿನೊಂದಿಗೆ 6 ಅಂಕಗಳ ಸಮೇತ ಸೆಮಿಫೈನಲ್​​ಗೆ ಪ್ರವೇಶ ಪಡೆಯಿತು.

ಇಲ್ಲಿನ ಡ್ಯಾರೆನ್​ ಸಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 5 ವಿಕೆಟ್​ ನಷ್ಟಕ್ಕೆ 205 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತನ್ನ ಪಾಲಿನ 20 ಒವರ್​ಗಳಲ್ಲಿ 7 ವಿಕೆಟ್​ಗೆ 181 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಗುರಿ ಬೆನ್ನಟ್ಟಲು ಹೊರಟ ಆಸ್ಟ್ರೇಲಿಯಾ 6 ರನ್​ಗೆ ಮೊದಲ ವಿಕೆಟ್​ ಕಳೆದುಕೊಂಡಿತು. ಡೇವಿಡ್​ ವಾರ್ನರ್​ 6 ರನ್ ಬಾರಿಸಿ ಅರ್ಶ್​ದೀಪ್​ಗೆ ವಿಕೆಟ್​ ಒಪ್ಪಿಸಿದರು. ಆದರೆ, ನಂತರದಲ್ಲಿ ಟ್ರಾವಿಸ್​ ಹೆಡ್​ (76ರನ್​ ) ಹಾಗೂ ಮಿಚೆಲ್ ಮಾರ್ಷ್​ (37 ರನ್​) ರನ್ ವೇಗ ಕುಸಿಯದಂತೆ ನೋಡಿಕೊಂಡರು. ಟ್ರಾವಿಸ್ ಹೆಡ್​ ಹೋರಾಟ ನಡೆಸಿದ ಭಾರತ ತಂಡದಿಂದ ಗೆಲುವು ಕಸಿಯಲು ಯತ್ನಿಸಿದರು. ಅದರೆ, ಕುಲ್ದೀಪ್​ ಯಾದವ್​ (2 ವಿಕೆಟ್​), ಅರ್ಶ್​ದೀಪ್​ ಸಿಂಗ್​ (3 ವಿಕೆಟ್​) ಆಸೀಸ್ ತಂಡದ ಓಟಕ್ಕೆ ತಡೆಯೊಡ್ಡಿತು. ಮ್ಯಾಕ್ಸ್​ವೆಲ್​ 20 ರನ್ ಬಾರಿಸಿದರೆ, ಟಿಮ್ ಡೇವಿಡ್​ 15 ರನ್ ಬಾರಿಸಿದರು.

ಭಾರತದ ಉತ್ತಮ ಬ್ಯಾಟಿಂಗ್​

ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆಘಾತ ಕೊಟ್ಟಿದ್ದು ವಿರಾಟ್ ಕೊಹ್ಲಿ. ಐದು ಎಸೆತಗಳನ್ನು ಎದುರಿಸಿದ ಅವರು ಶೂನ್ಯಕ್ಕೆ ಔಟಾಗಿ ಬೇಸರ ಮೂಡಿಸಿದರು. ಆದರೆ, ಇನ್ನೊಂದು ಬದಿಯಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ ರನ್ ಪೇರಿಸುತ್ತಲೇ ಹೋದರು. ಭಾರತ ಕೇವಲ 29 ಎಸೆತಗಳಲ್ಲಿ 50 ರನ್ ಬಾರಿಸಿದರೆ ಬಳಿಕ ರೋಹಿತ್ ಶರ್ಮಾ 19 ಎಸೆತಕ್ಕೆ ಅರ್ಧ ಶತಕ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಿಷಭ್​ ಪಂತ್​ 14 ಎಸೆತಕ್ಕೆ 15 ರನ್ ಬಾರಿಸಿದರು. ಆದರೆ, ನಂತರ ಆಡಲು ಬಂದ ಸೂರ್ಯಕುಮಾರ್​ ಯಾದವ್​ ರೋಹಿತ್ ಶರ್ಮಾಗೆ ಉತ್ತಮ ಬೆಂಬಲ ಕೊಟ್ಟರು. ಆದರೆ, ಅವರು 16 ಎಸೆತಕ್ಕೆ 36 ರನ್ ಬಾರಿಸಿ ಔಟಾದರು.

ಇದನ್ನೂ ಓದಿ: Rohit Sharma : ಆಸ್ಟ್ರೇಲಿಯಾದ ವೇಗಿ ​ ಸ್ಟಾರ್ಕ್​ ಬೆಂಡೆತ್ತಿದ ರೋಹಿತ್​; ಒಂದೇ ಓವರ್​​ನಲ್ಲಿ 29 ರನ್​

ಸೂರ್ಯ ಔಟಾಗುತ್ತಿದ್ದಂತೆ ಭಾರತದ ಸ್ಕೋರ್ ಗಳಿಕೆ ನಿಧಾನಗೊಂಡಿತು. ಆದಾಗ್ಯೂ ಶಿವಂ ದುಬೆ 1 ಸಿಕ್ಸರ್ ಹಾಗೂ 2 ಫೋರ್ ಸಮೇತ 28 ರನ್ ಬಾರಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಔಟಾಗದೇ 17 ಎಸೆತಕ್ಕೆ 27 ರನ್ ಬಾರಿಸಿದರು. ರವೀಂದ್ರೆ ಜಡೇಜಾ 5 ಎಸೆತಕ್ಕೆ 9 ರನ್ ಬಾರಿಸಿದರು.

Continue Reading

ಪ್ರಮುಖ ಸುದ್ದಿ

Rohit Sharma : ಆಸ್ಟ್ರೇಲಿಯಾದ ವೇಗಿ ​ ಸ್ಟಾರ್ಕ್​ ಬೆಂಡೆತ್ತಿದ ರೋಹಿತ್​; ಒಂದೇ ಓವರ್​​ನಲ್ಲಿ 29 ರನ್​

Rohit Sharma: ಪಂದ್ಯಾವಳಿಯಲ್ಲಿ ಕಡಿಮೆ ಸ್ಕೋರ್​ಗಳನ್ನು ಬಾರಿಸಿದ್ದ ರೋಹಿತ್ ಶರ್ಮಾ, ಬ್ಯಾಟ್​ ಮೂಲಕ ಅಬ್ಬರಿಸಿ ತಮ್ಮ ಟೀಕಾಕಾರರನ್ನು ಮೌನವಾಗಿಸಿದರು. ಡೇರೆನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭದಿಂದಲೂ ಆಸ್ಟ್ರೇಲಿಯಾದ ಬೌಲರ್​ಗಳನ್ನು ಹಿಮ್ಮೆಟ್ಟಿಸಿದರು.

VISTARANEWS.COM


on

Rohit Sharma
Koo

ಬೆಂಗಳೂರು: 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಸೇಂಟ್ ಲೂಸಿಯಾದ ಗ್ರೋಸ್ ಐಸ್ಲೆಟ್​​ನಲ್ಲಿರುವ ಡೇರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ತಂಡಗಳ ನಡುವಿನ ಪಂದ್ಯಾವಳಿಯ ಸೂಪರ್ 8 ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ರೋಹಿತ್​ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 41 ಎಸೆತಕ್ಕೆ 92 ರನ್ ಬಾರಿಸಿ ಔಟಾದರು. ಈ ಮೂಲಕ ಅವರು ಮೊಟ್ಟ ಮೊದಲ ಟಿ2 ವಿಶ್ವ ಕಪ್​ ಶತಕದ ಅವಕಾಶ ನಷ್ಟ ಮಾಡಿಕೊಂಡರು.

ಪಂದ್ಯಾವಳಿಯಲ್ಲಿ ಕಡಿಮೆ ಸ್ಕೋರ್​ಗಳನ್ನು ಬಾರಿಸಿದ್ದ ರೋಹಿತ್ ಶರ್ಮಾ, ಬ್ಯಾಟ್​ ಮೂಲಕ ಅಬ್ಬರಿಸಿ ತಮ್ಮ ಟೀಕಾಕಾರರನ್ನು ಮೌನವಾಗಿಸಿದರು. ಡೇರೆನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭದಿಂದಲೂ ಆಸ್ಟ್ರೇಲಿಯಾದ ಬೌಲರ್​ಗಳನ್ನು ಹಿಮ್ಮೆಟ್ಟಿಸಿದರು.

ರೋಹಿತ್ ಶರ್ಮಾ ಮೂರನೇ ಓವರ್​ ಎಸೆತ ಮಿಚೆಲ್ ಸ್ಟಾರ್ಕ್ ಅವರನ್ನು ಮೌನವಾಗಿಸಿದರು. ಒಂದೇ ಓವರ್​ನಲ್ಲಿ 29 ರನ್ ಬಾರಿಸಿದರು. ಭಾರತದ ನಾಯಕ ಕವರ್ ಏರಿಯಾ ಮೇಲೆ ಬೃಹತ್ ಸಿಕ್ಸರ್ ಬಾರಿಸಿದರು. ಎರಡನೇ ಎಸೆತದಲ್ಲಿ ರೋಹಿತ್ ಶರ್ಮಾ ಕೂಡ ಇದೇ ರೀತಿಯ ಶಾಟ್ ಬಾರಿಸಿದರು. ಎರಡು ಸಿಕ್ಸರ್​ಗಳ ನಂತರ ಒಂದು ಎಸೆತ ನಷ್ಟ ಮಾಡಿಕೊಂಡರು.

ರೋಹಿತ್ ಶರ್ಮಾ ಅಲ್ಲಿಗೆ ನಿಲ್ಲಲಿಲ್ಲ . ನಾಲ್ಕನೇ ಎಸೆತಕ್ಕೆ ಮತ್ತೊಂದು ಬೃಹತ್​ ಸಿಕ್ಸರ್ ಬಾರಿಸಿದರು. ಅದು 96 ಮೀಟರ್​ ಸಿಕ್ಸರ್. ಓವರ್ ನ ಕೊನೆಯ ಎಸೆತದಲ್ಲಿ ಮಿಚೆಲ್ ಸ್ಟಾರ್ಕ್ ಅವರು ಫುಲ್ ಟಾಸ್ ಎಸೆದರು. ರೋಹಿತ್ ಶರ್ಮಾ ಅವರು ಬೃಹತ್ ಸಿಕ್ಸರ್ ಗಾಗಿ ಥರ್ಡ್​ ಮ್ಯಾನ್ ಕಡೆ ಹಾರಿಸಿದರು. ಅಲ್ಲಿಗೆ ಒಂದೇ ಓವರ್​ನಲ್ಲಿ 29 ರನ್​ ಬಾರಿಸಿದರು.

205 ರನ್ ಬಾರಿಸಿದ ಭಾರತ

ಇಲ್ಲಿನ ಡ್ಯಾರೆನ್​ ಸಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 5 ವಿಕೆಟ್​ ನಷ್ಟಕ್ಕೆ 205 ರನ್ ಬಾರಿಸಿತು. ವಿರಾಟ್​ ಕೊಹ್ಲಿ ಶೂನ್ಯಕ್ಕೆ ಔಟಾಗಿರುವ ಹೊರತಾಗಿಯೂ ಭಾರತ ತಂಡ ದೊಡ್ಡ ಮೊತ್ತ ಪೇರಿಸಿದೆ.

ಇದನ್ನೂ ಓದಿ: Virat Kohli : ವಿರಾಟ್​​ ಕೊಹ್ಲಿ ಕತೆ ಮುಗೀತು… ಮತ್ತೆ ಶೂನ್ಯಕ್ಕೆ ಔಟಾದ ಸ್ಟಾರ್​ ಬ್ಯಾಟರ್​!

ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆಘಾತ ಕೊಟ್ಟಿದ್ದು ವಿರಾಟ್ ಕೊಹ್ಲಿ. ಐದು ಎಸೆತಗಳನ್ನು ಎದುರಿಸಿದ ಅವರು ಶೂನ್ಯಕ್ಕೆ ಔಟಾಗಿ ಬೇಸರ ಮೂಡಿಸಿದರು. ಆದರೆ, ಇನ್ನೊಂದು ಬದಿಯಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ ರನ್ ಪೇರಿಸುತ್ತಲೇ ಹೋದರು. ಭಾರತ ಕೇವಲ 29 ಎಸೆತಗಳಲ್ಲಿ 50 ರನ್ ಬಾರಿಸಿದರೆ ಬಳಿಕ ರೋಹಿತ್ ಶರ್ಮಾ 19 ಎಸೆತಕ್ಕೆ ಅರ್ಧ ಶತಕ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಿಷಭ್​ ಪಂತ್​ 14 ಎಸೆತಕ್ಕೆ 15 ರನ್ ಬಾರಿಸಿದರು. ಆದರೆ, ನಂತರ ಆಡಲು ಬಂದ ಸೂರ್ಯಕುಮಾರ್​ ಯಾದವ್​ ರೋಹಿತ್ ಶರ್ಮಾಗೆ ಉತ್ತಮ ಬೆಂಬಲ ಕೊಟ್ಟರು. ಆದರೆ, ಅವರು 16 ಎಸೆತಕ್ಕೆ 36 ರನ್ ಬಾರಿಸಿ ಔಟಾದರು.

ಸೂರ್ಯ ಔಟಾಗುತ್ತಿದ್ದಂತೆ ಭಾರತದ ಸ್ಕೋರ್ ಗಳಿಕೆ ನಿಧಾನಗೊಂಡಿತು. ಆದಾಗ್ಯೂ ಶಿವಂ ದುಬೆ 1 ಸಿಕ್ಸರ್ ಹಾಗೂ 2 ಫೋರ್ ಸಮೇತ 28 ರನ್ ಬಾರಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಔಟಾಗದೇ 17 ಎಸೆತಕ್ಕೆ 27 ರನ್ ಬಾರಿಸಿದರು. ರವೀಂದ್ರೆ ಜಡೇಜಾ 5 ಎಸೆತಕ್ಕೆ 9 ರನ್ ಬಾರಿಸಿದರು.

Continue Reading

ಪ್ರಮುಖ ಸುದ್ದಿ

IND vs AUS : ಟಿ20 ವಿಶ್ವ ಕಪ್​ 2024ರಲ್ಲಿ ಗರಿಷ್ಠ ಸ್ಕೋರ್ ಬಾರಿಸಿದ ಭಾರತ ತಂಡ; 5 ವಿಕೆಟ್​ಗೆ 205

IND vs AUS :ಇಲ್ಲಿನ ಡ್ಯಾರೆನ್​ ಸಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 5 ವಿಕೆಟ್​ ನಷ್ಟಕ್ಕೆ 205 ರನ್ ಬಾರಿಸಿತು. ವಿರಾಟ್​ ಕೊಹ್ಲಿ ಶೂನ್ಯಕ್ಕೆ ಔಟಾಗಿರುವ ಹೊರತಾಗಿಯೂ ಭಾರತ ತಂಡ ದೊಡ್ಡ ಮೊತ್ತ ಪೇರಿಸಿದೆ.

VISTARANEWS.COM


on

IND vs AUS
Koo

ಸೇಂಟ್​ ಲೂಸಿಯಾ: ರೋಹಿತ್ ಶರ್ಮಾ ಅವರ (92 ರನ್​, 41 ಎಸೆತ, 8 ಸಿಕ್ಸರ್, 7 ಫೋರ್​) ಪ್ರಚಂಡ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಭಾರತ ತಂಡ ಟಿ20 ವಿಶ್ವ ಕಪ್​ನ 2024ನೇ ಆವೃತ್ತಿಯ ಸೂಪರ್ 8 ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ದ (IND vs AUS) ಮೊದಲು ಬ್ಯಾಟ್​ ಮಾಡಿ 5 ವಿಕೆಟ್ ನಷ್ಟಕ್ಕೆ 205 ರನ್ ಬಾರಿಸಿದೆ. ಇದು ಹಾಲಿ ವಿಶ್ವ ಕಪ್​ನಲ್ಲಿ ತಂಡವೊಂದು ಬಾರಿಸಿದ ಗರಿಷ್ಠ ಸ್ಕೋರ್​ ಆಗಿದೆ. ಈ ಸಾಧನೆ ಯನ್ನು ಮೀರಬೇಕಾದರೆ ಆಸ್ಟ್ರೇಲಿಯಾ ತಂಡ ಈ ಗುರಿಯನ್ನು ಬೆನ್ನಟ್ಟಬೇಕಾಗುತ್ತದೆ. ಇದಕ್ಕಿಂತ ಹಿಂದೆ ಬಿ ಗುಂಪಿನ ಲೀಗ್ ಹಂತದ ಪಂದ್ಯದಲ್ಲಿ ಇಂಗ್ಲೆಂಡ್​ ತಂಡದ ವಿರುದ್ಧ ಆಸ್ಟ್ರೇಲಿಯಾ 201 ರನ್ ಬಾರಿಸಿ ಗೆಲುವು ಸಾಧಿಸಿತ್ತು.

ಇಲ್ಲಿನ ಡ್ಯಾರೆನ್​ ಸಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 5 ವಿಕೆಟ್​ ನಷ್ಟಕ್ಕೆ 205 ರನ್ ಬಾರಿಸಿತು. ವಿರಾಟ್​ ಕೊಹ್ಲಿ ಶೂನ್ಯಕ್ಕೆ ಔಟಾಗಿರುವ ಹೊರತಾಗಿಯೂ ಭಾರತ ತಂಡ ದೊಡ್ಡ ಮೊತ್ತ ಪೇರಿಸಿದೆ.

ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆಘಾತ ಕೊಟ್ಟಿದ್ದು ವಿರಾಟ್ ಕೊಹ್ಲಿ. ಐದು ಎಸೆತಗಳನ್ನು ಎದುರಿಸಿದ ಅವರು ಶೂನ್ಯಕ್ಕೆ ಔಟಾಗಿ ಬೇಸರ ಮೂಡಿಸಿದರು. ಆದರೆ, ಇನ್ನೊಂದು ಬದಿಯಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ ರನ್ ಪೇರಿಸುತ್ತಲೇ ಹೋದರು. ಭಾರತ ಕೇವಲ 29 ಎಸೆತಗಳಲ್ಲಿ 50 ರನ್ ಬಾರಿಸಿದರೆ ಬಳಿಕ ರೋಹಿತ್ ಶರ್ಮಾ 19 ಎಸೆತಕ್ಕೆ ಅರ್ಧ ಶತಕ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಿಷಭ್​ ಪಂತ್​ 14 ಎಸೆತಕ್ಕೆ 15 ರನ್ ಬಾರಿಸಿದರು. ಆದರೆ, ನಂತರ ಆಡಲು ಬಂದ ಸೂರ್ಯಕುಮಾರ್​ ಯಾದವ್​ ರೋಹಿತ್ ಶರ್ಮಾಗೆ ಉತ್ತಮ ಬೆಂಬಲ ಕೊಟ್ಟರು. ಆದರೆ, ಅವರು 16 ಎಸೆತಕ್ಕೆ 36 ರನ್ ಬಾರಿಸಿ ಔಟಾದರು.

ಸೂರ್ಯ ಔಟಾಗುತ್ತಿದ್ದಂತೆ ಭಾರತದ ಸ್ಕೋರ್ ಗಳಿಕೆ ನಿಧಾನಗೊಂಡಿತು. ಆದಾಗ್ಯೂ ಶಿವಂ ದುಬೆ 1 ಸಿಕ್ಸರ್ ಹಾಗೂ 2 ಫೋರ್ ಸಮೇತ 28 ರನ್ ಬಾರಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಔಟಾಗದೇ 17 ಎಸೆತಕ್ಕೆ 27 ರನ್ ಬಾರಿಸಿದರು. ರವೀಂದ್ರೆ ಜಡೇಜಾ 5 ಎಸೆತಕ್ಕೆ 9 ರನ್ ಬಾರಿಸಿದರು.

ಇದನ್ನೂ ಓದಿ: Virat Kohli : ವಿರಾಟ್​​ ಕೊಹ್ಲಿ ಕತೆ ಮುಗೀತು… ಮತ್ತೆ ಶೂನ್ಯಕ್ಕೆ ಔಟಾದ ಸ್ಟಾರ್​ ಬ್ಯಾಟರ್​!

Continue Reading

ಕ್ರಿಕೆಟ್

Virat Kohli : ವಿರಾಟ್​​ ಕೊಹ್ಲಿ ಕತೆ ಮುಗೀತು… ಮತ್ತೆ ಶೂನ್ಯಕ್ಕೆ ಔಟಾದ ಸ್ಟಾರ್​ ಬ್ಯಾಟರ್​!

Virat Kohli :

VISTARANEWS.COM


on

Virat kohli
Koo

ಬೆಂಗಳೂರು: ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ (Virat Kohli) ಉತ್ತಮ ಫಾರ್ಮ್​ನಲ್ಲಿ ಇಲ್ಲ. ಅವರು ಮತ್ತೊಂದು ಬಾರಿ ಡಕ್ಔಟ್ ಆಗಿದ್ದಾರೆ. ಡೇರೆನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಪುರುಷರ ಟಿ 20 ವಿಶ್ವಕಪ್​​ನ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಸೂಪರ್ 8 ಪಂದ್ಯದಲ್ಲಿ ಅವರು ಶೂನ್ಯಕ್ಕೆ ಔಟಾಗಿರುವುದು ಮಂಡೆ ಬಿಸಿಗೆ ಕಾರಣವಾಗಿದೆ. ಆಸ್ಟ್ರೇಲಿಯಾ ಟಾಸ್ ಗೆದ್ದ ನಂತರ ಭಾರತ ಬ್ಯಾಟ್​ ಮಾಡಿತು. ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಐದು ಎಸೆತಗಳನ್ನು ಬಳಸಿಕೊಂಡು ರನ್ ಬಾರಿಸದೇ ನಿರ್ಗಮಿಸಿದರು. ಇದು ಅಭಿಮಾನಿಗಳ ಹೃದಯ ಚೂರು ಚೂರು ಮಾಡಿತು. ಕೊಹ್ಲಿ ಕತೆ ಮುಗೀತು ಎಂದು ಇನ್ನೊಂದು ವರ್ಗ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ.

ಸೇಂಟ್ ಲೂಸಿಯಾದಲ್ಲಿ ನಡೆದ ಟಿ 20 ವಿಶ್ವಕಪ್​ನ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್ವುಡ್ ಎಸೆತಕ್ಕೆ ಔಟಾದ ಕೊಹ್ಲಿ ಒಂದೇ ಆವೃತ್ತಿಯ ವಿಶ್ವ ಕಪ್​ನಲ್ಲಿ ಎರಡು ಶೂನ್ಯಕ್ಕೆ ಔಟಾದ ಎರಡನೇ ಭಾರತೀಯ ಎಂಬ ಕುಖ್ಯಾತಿಗೆ ಪಾತ್ರರಾದರು. 2010 ರ ಟಿ 20 ವಿಶ್ವಕಪ್​ನಲ್ಲಿ ಎರಡು ಡಕ್ಗಳನ್ನು ದಾಖಲಿಸಿದ ಆಶಿಶ್ ನೆಹ್ರಾ ಈ ಅನಪೇಕ್ಷಿತ ದಾಖಲೆಯನ್ನು ಸಾಧಿಸಿದ ಮೊದಲ ಭಾರತೀಯ. ಡೆಲ್ಲಿ ಮೂಲದ ನೆಹ್ರಾ ಅವರು ಕಳಪೆ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ಆದರೆ, ನೆಹ್ರಾ ಬ್ಯಾಟರ್​ ಅಲ್ಲ ಎಂಬುದು ಇಲ್ಲಿ ನೆನಪಿಸಬೇಕಾದ ಸಂಗತಿ.

ಹೇಜಲ್​ವುಡ್​ ಹೆಚ್ಚುವರಿ ಬೌನ್ಸ್​ ಇರುವ ಶಾರ್ಟ್​ ಪಿಚ್​ ಎಸೆತವನ್ನು ಎಸೆದು ಕೊಹ್ಲಿಯನ್ನು ಔಟ್ ಮಾಡಿದರು. ಪುಲ್ ಶಾಟ್ ಪ್ರಯತ್ನದಲ್ಲಿ ಕೊಹ್ಲಿ ಕೇವಲ ಅವರು ಟಿಮ್ ಡೇವಿಡ್​ಗೆ ಕ್ಯಾಚ್​ ನೀಡಿದರು. ಟಿಮ್ ಡೇವಿಡ್ ಸರ್ಕಲ್ ಒಳಗಿನಿಂದ ಒಳಗಿನಿಂದ 25 ಮೀಟರ್ ದೂರ ಓಡಿ ಉತ್ತಮ ಕ್ಯಾಚ್ ಪಡೆದರು. ಕೊಹ್ಲಿ ಎದುರಿಸಿದ ಐದು ಎಸೆತಗಳಲ್ಲಿ ರನ್​ ಗಳಿಸಲೇ ಇಲ್ಲ.

ಟೂರ್ನಿಯಲ್ಲಿ ಕೊಹ್ಲಿ ನಿರಾಸೆ

ಕೊಹ್ಲಿಯ ಈ ಇನಿಂಗ್ಸ್​​ ಕೊಹ್ಲಿಯ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನ ಪತನವಾಗಿದೆ. ಈ ಬಾರಿ ಆರಂಭಿಕನಾಗಿ ಅವರ ಪ್ರದರ್ಶನವು ಅಪೇಕ್ಷಿತ ಫಲಿತಾಂಶಗಳನ್ನು ನೀಡಲಿಲ್ಲ. ಟಿ 20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೊಹ್ಲಿ ಈ ವರ್ಷ ನಿರಾಶಾದಾಯಕ ಟೂರ್ನಿ ಹೊಂದಿದ್ದಾರೆ. ಅವರು ಆರು ಇನ್ನಿಂಗ್ಸ್​ಗಳಲ್ಲಿ 11.00 ಸರಾಸರಿ ಮತ್ತು 100.00 ಸ್ಟ್ರೈಕ್ ರೇಟ್​ನಲ್ಲಿ ಕೇವಲ 66 ರನ್ ಗಳಿಸಿದ್ದಾರೆ. ಭಾರತದ ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 28 ಎಸೆತಗಳಲ್ಲಿ 37 ರನ್ ಗಳಿಸಿದ್ದು ಈ ಟೂರ್ನಿಯಲ್ಲಿ ಅವರ ಗರಿಷ್ಠ ಸ್ಕೋರ್ . ಈ ನಿರ್ಣಾಯಕ ಪಂದ್ಯದಲ್ಲಿ ಅವರು ಸ್ಕೋರ್ ಮಾಡಲು ವಿಫಲರಾಗಿರುವುದು ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಲು ಪ್ರಯತ್ನಿಸುತ್ತಿರುವ ಭಾರತೀಯ ಬ್ಯಾಟಿಂಗ್ ಲೈನ್ಅಪ್ ಮೇಲೆ ಹೆಚ್ಚುವರಿ ಒತ್ತಡ ಉಂಟು ಮಾಡಿತು.

ಇದನ್ನೂ ಓದಿ: Varun Chakravarthy : ತಮ್ಮನ್ನು ಆಯ್ಕೆ ಮಾಡದ್ದಕ್ಕೆ ಸಿಡಿದೆದ್ದ ವರುಣ್​ ಚಕ್ರವರ್ತಿ; ಸೋಶಿಯಲ್ ಮೀಡಿಯಾದಲ್ಲಿ ಆಕ್ರಮಣಕಾರಿ ಪೋಸ್ಟ್​​

ಅಫ್ಘಾನಿಸ್ತಾನ ವಿರುದ್ಧ ಅಚ್ಚರಿಯ ಸೋಲಿನ ನಂತರ ಸೆಮಿಫೈನಲ್ ಆಸೆಯನ್ನು ಜೀವಂತವಾಗಿಡಲು ಜಯದ ಅಗತ್ಯವಿರುವ ಆಸ್ಟ್ರೇಲಿಯಾ, ಹೆಚ್ಚಿನ ತೀವ್ರತೆಯೊಂದಿಗೆ ಆಟ ಪ್ರಾರಂಭಿಸಿತು. ಮತ್ತೊಂದೆಡೆ, ಸೆಮಿಫೈನಲ್​ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಭಾರತ ಗೆಲ್ಲಲೇಬೇಕು. ಪಂದ್ಯಾವಳಿಯ ಮುಂದಿನ ಹಂತದಲ್ಲಿ ಎರಡೂ ತಂಡಗಳು ತಮ್ಮ ಸ್ಥಾನಕ್ಕಾಗಿ ಹೋರಾಡುತ್ತಿರುವುದರಿಂದ ಈ ಪಂದ್ಯವು ರೋಮಾಂಚಕ ಸ್ಪರ್ಧೆಯಾಗಿದೆ.

Continue Reading
Advertisement
ನನ್ನ ದೇಶ ನನ್ನ ದನಿ ಅಂಕಣ indira gandhi
ಅಂಕಣ11 mins ago

ನನ್ನ ದೇಶ ನನ್ನ ದನಿ ಅಂಕಣ: “ನೀವು ಭಾರತೀಯರೋ, ರಾಷ್ಟ್ರೀಯರೋ?”

karnataka Weather Forecast
ಮಳೆ51 mins ago

Karnataka Weather : ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ ಸೇರಿ ವಿವಿಧೆಡೆ ಮಳೆ ಅಬ್ಬರ; ಆರೆಂಜ್‌ ಅಲರ್ಟ್‌ ಘೋಷಣೆ

Seeds For Men Sexual Power
ಆರೋಗ್ಯ1 hour ago

Seeds For Men Sexual Power: ಪುರುಷರ ಲೈಂಗಿಕ ಶಕ್ತಿ ಹೆಚ್ಚಳಕ್ಕೆ ಈ ಬೀಜಗಳು ಪರಿಣಾಮಕಾರಿ!

Ram Mandir
Latest1 hour ago

Ayodhya Temple: ಕಡಿಮೆಯಾದ ಭಕ್ತರ ದಟ್ಟಣೆ; ಅಯೋಧ್ಯೆಗೆ ಭೇಟಿ ನೀಡಲು ಇದು ಸಕಾಲ

Monsoon Hair care
ಆರೋಗ್ಯ2 hours ago

Monsoon Hair care: ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಈ ಸಲಹೆ ಪಾಲಿಸಿ

Dina Bhavihsya
ಭವಿಷ್ಯ2 hours ago

Dina Bhavishya : ಕುಟುಂಬದ ಆಪ್ತರಿಂದ ಶುಭ ಸುದ್ದಿ; ಬಹು ದಿನಗಳ ಕನಸು ನನಸಾಗುವ ಕಾಲವಿದು

Kannada New movie Ee Pada Punya Pada title unveiling
ಕರ್ನಾಟಕ7 hours ago

Kannada New Movie: ಸಿದ್ದು ಪೂರ್ಣಚಂದ್ರ ನಿರ್ದೇಶನದ ನೂತನ ಚಿತ್ರ ‘ಈ ಪಾದ ಪುಣ್ಯ ಪಾದ’ ಶೀರ್ಷಿಕೆ ಅನಾವರಣ

bagilige bantu sarkara sevege irali sahakara programme in channapattana
ರಾಮನಗರ7 hours ago

DK Shivakumar: ವಿವಿಧ ಸಮಸ್ಯೆ ಹೊತ್ತು ಬಂದವರಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದ ಡಿ.ಕೆ. ಶಿವಕುಮಾರ್

Lecture and interaction program by Akhil Bharatiya Sahitya Parishad at Yallapur
ಉತ್ತರ ಕನ್ನಡ7 hours ago

Uttara Kannada News: ರಾಮಮಂದಿರವಾಗಲಿ, ನಳಂದ ವಿವಿಯಾಗಲಿ ಜಾತಿ, ಧರ್ಮ, ಪಂಥಗಳಿಗೆ ಸೀಮಿತವಾದುದಲ್ಲ: ಹರಿಪ್ರಕಾಶ್‌ ಕೋಣೆಮನೆ

Rohit Sharma
ಪ್ರಮುಖ ಸುದ್ದಿ7 hours ago

T20 World Cup : ಆಸ್ಟ್ರೇಲಿಯಾ ವಿರುದ್ಧ 24 ರನ್​ಗಳ ಭರ್ಜರಿ ಗೆಲುವು ಸಾಧಿಸಿ ಸೇಡು ತೀರಿಸಿಕೊಂಡ ಭಾರತ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ13 hours ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ4 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌