Site icon Vistara News

IPL 2023 : ಧೋನಿ ಬಟರ್​ ಚಿಕನ್​ ತಿನ್ನುವ ವಿಚಿತ್ರ ಶೈಲಿ ಬಹಿರಂಗ ಮಾಡಿದ ರಾಬಿನ್​ ಉತ್ತಪ್ಪ!

Robin Uthappa revealed the strange way Dhoni eats butter chicken!

#image_title

ಚೆನ್ನೈ: ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿಗೆ ದೊಡ್ಡ ಫ್ಯಾನ್​ ಬೇಸ್​ ಇದೆ. ಧೋನಿಯ ಪ್ರತಿಯೊಂದು ಶೈಲಿಯೂ ಅವರಿಗೆ ಇಷ್ಟ. ಆದರೆ, ಅವರು ಬಟರ್​ ಚಿಕನ್​ ತಿನ್ನುವ ರೀತಿ ರೀತಿ ಮಾತ್ರ ಎಲ್ಲರಿಗೂ ಇಷ್ಟವಾಗದು ಎಂದು ಅಂದುಕೊಳ್ಳಬಹುದು. ಯಾಕೆ ಗೊತ್ತಾ? ಸಾಮಾನ್ಯವಾಗಿ ನಾನ್​ವೆಜ್ ಪ್ರಿಯರಿಗೆ ಬಟರ್​ ಚಿಕನ್​ ತಂದುಕೊಟ್ಟರೆ ಗ್ರೇವಿ ಮತ್ತು ಚಿಕನ್​ ಒಟ್ಟೊಟ್ಟಿಗೆ ತಿನ್ನುತ್ತಾರೆ. ರೋಟಿ ಅಥವಾ ಚಪಾತಿ ಜತೆ ನೆಂಚಿಕೊಂಡು ತಿನ್ನುತ್ತಾರೆ. ಆದರೆ, ಧೋನಿಗೆ ಯಾರಾದರೂ ಬಟರ್​ ಚಿಕನ್​ ತಂದುಕೊಟ್ಟರೆ ಅದರಲ್ಲಿರುವ ತುಂಡುಗಳನ್ನು (ಪೀಸ್​​) ತಿನ್ನುವುದೇ ಇಲ್ಲವಂತೆ. ಕೇವಲ ಗ್ರೇವಿ ಮಾತ್ರ ಸೇವಿಸಿ ಸಂತೃಪ್ತಿ ಪಡುತ್ತಾರೆ. ಅಷ್ಟಕ್ಕೆ ಮುಗಿದಿಲ್ಲ ಅವರ ಕತೆ. ಒಂದು ವೇಳೆ ಬಟರ್​ ಚಿಕನ್​ನಲ್ಲಿರುವ ಕೋಳಿಯ ತುಣುಕನ್ನು ತಿಂದರೆ ರೋಟಿಯನ್ನು ಮುಟ್ಟುವುದೇ ಇಲ್ಲವಂತೆ. ಧೋನಿಯ ಈ ವಿಚಿತ್ರ ಅಭ್ಯಾಸವನ್ನು ಬಯಲು ಮಾಡಿದ್ದು ಐಪಿಎಲ್​ನಲ್ಲಿ (IPL 2023) ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಸದಸ್ಯ ರಾಬಿನ್​ ಉತ್ತಪ್ಪ.

ಐಪಿಎಲ್​ 2023ನೇ ಆವೃತ್ತಿಗಾಗಿ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಲೈವ್​ ಸ್ಟ್ರೀಮಿಂಗ್​ ಹಕ್ಕು ಪಡೆದುಕೊಂಡಿರುವ ಜಿಯೋ ಸಿನಿಮಾ ಪೂರ್ವಭಾವಿಯಾಗಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅಂತೆಯೇ ರಾಬಿನ್​ ಉತ್ತಪ್ಪ ಅವರನ್ನೂ ಕರೆಸಿ ಮಾತನಾಡಿದೆ. ಕಾರ್ಯಕ್ರಮದ ಹೆಸರು ಮೈ ಟೈಮ್​ ವಿತ್​ ಧೋನಿ, ಉತ್ತಪ್ಪ (My Time With Dhoni ft. Uthappa ). ಈ ಕಾರ್ಯಕ್ರಮದಲ್ಲಿ ಮಹೇಂದ್ರ ಸಿಂಗ್​ ಧೋನಿಯ ಜತೆಗಿನ ಗೆಳೆತನವನ್ನು ರಾಬಿನ್​ ಉತ್ತಪ್ಪ ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ಧೋನಿಯ ಬಟರ್ ಚಿಕಿನ್​ ಸೀಕ್ರೆಟ್​ ಕೂಡ ಬಯಲು ಮಾಡಿದ್ದಾರೆ.

ಇದನ್ನೂ ಓದಿ : IPL 2023: ಗಿಟಾರ್​ ಹಿಡಿದು ಕುಣಿದ ಧೋನಿ; ವಿಡಿಯೊ ವೈರಲ್​

ತಿನ್ನುವ ವಿಚಾರಕ್ಕೆ ಬಂದಾಗ ಮಹೇಂದ್ರ ಸಿಂಗ್​ ಧೋನಿ ದೊಡ್ಡ ಗೆಳೆಯರ ಬಳಗವನ್ನು ಹೊಂದಿದ್ದರು. ಸುರೇಶ್​ ರೈನಾ, ಇರ್ಫಾನ್​ ಪಠಾಣ್​, ಆರ್​ ಪಿ ಸಿಂಗ್, ಪಿಯೂಶ್​ ಚಾವ್ಲಾ. ಮುನಾಫ್​ ಪಟೇಲ್​ ಜತೆಗೆ ಸೇರಿಕೊಂಡು ಬಗೆಬಗೆಯ ಭಕ್ಷ್ಯಗಳನ್ನು ಆರ್ಡರ್​ ಮಾಡುತ್ತಿದ್ದರು. ಇವರೆಲ್ಲರ ನಡುವೆ ಧೋನಿ ವಿಭಿನ್ನ ವ್ಯಕ್ತಿಯಾಗಿದ್ದರು. ಹೇಗೆಂದರೆ ಬಟರ್​ ಚಿಕನ್​ ಅನ್ನು ಚಿಕನ್​ ಇಲ್ಲದೇ ತಿನ್ನುತ್ತಿದ್ದರು. ರೋಟಿ ತಿಂದರೆ ಚಿಕನ್​ ತಿನ್ನಲ್ಲ, ಚಿಕನ್ ತಿಂದರೆ ರೋಟಿ ತಿನ್ನುತ್ತಿರಲಿಲ್ಲ ಎಂದು ರಾಬಿನ್​ ಉತ್ತಪ್ಪ ಹೇಳಿದ್ದಾರೆ.

ಯಾವ ಹೆಸರಿನಿಂದ ಬೇಕಾದರೂ ಕರೆಯಬಹದು

ಮಹೇಂದ್ರ ಸಿಂಗ್ ಧೋನಿ ಹಿರಿಯ ಆಟಗಾರ. ಅವರ ವರ್ಚಸ್ಸು ಕೂಡ ಜಾಸ್ತಿಯಿದೆ. ಹೀಗಾಗಿ ಅವರನ್ನು ಯಾವ ರೀತಿ ಕರೆಯಬೇಕು ಎಂಬುದು ಕಿರಿಯ ಆಟಗಾರರಿಗೆ ಎನಿಸುತ್ತದೆ. ಆದರೆ, ಧೋನಿ ಮಾತ್ರ ಈ ವಿಚಾರದಲ್ಲಿ ಧಾರಾಳಿ. ನಿಮಗೆ ಹೇಗೆ ಬೇಕೊ, ಹಾಗೆ ಕರೆಬಹುದು ಎಂದು ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಿದ್ದರು. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರವಾಗಿ ಆಡುವ ವೇಳೆ ರಾಬಿನ್​ ಉತ್ತಪ್ಪ ಮಹೇಂದ್ರ ಸಿಂಗ್​ ಧೋನಿಯ ಬಳಿ, ನಿಮ್ಮನ್ನು ಎಲ್ಲರೂ ಮಹೀ ಬಾಯ್​ ಎಂದು ಕರೆಯುತ್ತಾರೆ. ನಾನು ಹಾಗೆಯೇ ಕರೆಯಬಹುದೇ ಎಂದು ಪ್ರಶ್ನಿಸುತ್ತಾರೆ. ಆಗ ಧೋನಿ, ನಿಮಗೆ ಹೇಗೆ ಇಷ್ಟವೋ ಹಾಗೆ ಕರೆಯಿರಿ. ನನಗೆ ಯಾವುದೇ ಆಕ್ಷೇಪ ಇಲ್ಲ. ಮಹೀ ಎಂದು ಕರೆದರೂ ಸಾಕ ಎಂದು ಹೇಳಿದ್ದೆರಂತೆ.

Exit mobile version