ಕ್ರಿಕೆಟ್
IPL 2023 : ಧೋನಿ ಬಟರ್ ಚಿಕನ್ ತಿನ್ನುವ ವಿಚಿತ್ರ ಶೈಲಿ ಬಹಿರಂಗ ಮಾಡಿದ ರಾಬಿನ್ ಉತ್ತಪ್ಪ!
ಧೋನಿ ಬಟರ್ ಚಿಕಿನ್ ಕೊಟ್ಟರೆ ಚಿಕನ್ ತಿನ್ನದೇ ಕೇವಲ ಗ್ರೇವಿ ಮಾತ್ರ ತಿನ್ನುತ್ತಿದ್ದರು ಎಂದ ರಾಬಿನ್ ಉತ್ತಪ್ಪ ಹೇಳಿದ್ದಾರೆ.
ಚೆನ್ನೈ: ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ದೊಡ್ಡ ಫ್ಯಾನ್ ಬೇಸ್ ಇದೆ. ಧೋನಿಯ ಪ್ರತಿಯೊಂದು ಶೈಲಿಯೂ ಅವರಿಗೆ ಇಷ್ಟ. ಆದರೆ, ಅವರು ಬಟರ್ ಚಿಕನ್ ತಿನ್ನುವ ರೀತಿ ರೀತಿ ಮಾತ್ರ ಎಲ್ಲರಿಗೂ ಇಷ್ಟವಾಗದು ಎಂದು ಅಂದುಕೊಳ್ಳಬಹುದು. ಯಾಕೆ ಗೊತ್ತಾ? ಸಾಮಾನ್ಯವಾಗಿ ನಾನ್ವೆಜ್ ಪ್ರಿಯರಿಗೆ ಬಟರ್ ಚಿಕನ್ ತಂದುಕೊಟ್ಟರೆ ಗ್ರೇವಿ ಮತ್ತು ಚಿಕನ್ ಒಟ್ಟೊಟ್ಟಿಗೆ ತಿನ್ನುತ್ತಾರೆ. ರೋಟಿ ಅಥವಾ ಚಪಾತಿ ಜತೆ ನೆಂಚಿಕೊಂಡು ತಿನ್ನುತ್ತಾರೆ. ಆದರೆ, ಧೋನಿಗೆ ಯಾರಾದರೂ ಬಟರ್ ಚಿಕನ್ ತಂದುಕೊಟ್ಟರೆ ಅದರಲ್ಲಿರುವ ತುಂಡುಗಳನ್ನು (ಪೀಸ್) ತಿನ್ನುವುದೇ ಇಲ್ಲವಂತೆ. ಕೇವಲ ಗ್ರೇವಿ ಮಾತ್ರ ಸೇವಿಸಿ ಸಂತೃಪ್ತಿ ಪಡುತ್ತಾರೆ. ಅಷ್ಟಕ್ಕೆ ಮುಗಿದಿಲ್ಲ ಅವರ ಕತೆ. ಒಂದು ವೇಳೆ ಬಟರ್ ಚಿಕನ್ನಲ್ಲಿರುವ ಕೋಳಿಯ ತುಣುಕನ್ನು ತಿಂದರೆ ರೋಟಿಯನ್ನು ಮುಟ್ಟುವುದೇ ಇಲ್ಲವಂತೆ. ಧೋನಿಯ ಈ ವಿಚಿತ್ರ ಅಭ್ಯಾಸವನ್ನು ಬಯಲು ಮಾಡಿದ್ದು ಐಪಿಎಲ್ನಲ್ಲಿ (IPL 2023) ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯ ರಾಬಿನ್ ಉತ್ತಪ್ಪ.
ಐಪಿಎಲ್ 2023ನೇ ಆವೃತ್ತಿಗಾಗಿ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಲೈವ್ ಸ್ಟ್ರೀಮಿಂಗ್ ಹಕ್ಕು ಪಡೆದುಕೊಂಡಿರುವ ಜಿಯೋ ಸಿನಿಮಾ ಪೂರ್ವಭಾವಿಯಾಗಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅಂತೆಯೇ ರಾಬಿನ್ ಉತ್ತಪ್ಪ ಅವರನ್ನೂ ಕರೆಸಿ ಮಾತನಾಡಿದೆ. ಕಾರ್ಯಕ್ರಮದ ಹೆಸರು ಮೈ ಟೈಮ್ ವಿತ್ ಧೋನಿ, ಉತ್ತಪ್ಪ (My Time With Dhoni ft. Uthappa ). ಈ ಕಾರ್ಯಕ್ರಮದಲ್ಲಿ ಮಹೇಂದ್ರ ಸಿಂಗ್ ಧೋನಿಯ ಜತೆಗಿನ ಗೆಳೆತನವನ್ನು ರಾಬಿನ್ ಉತ್ತಪ್ಪ ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ಧೋನಿಯ ಬಟರ್ ಚಿಕಿನ್ ಸೀಕ್ರೆಟ್ ಕೂಡ ಬಯಲು ಮಾಡಿದ್ದಾರೆ.
ಇದನ್ನೂ ಓದಿ : IPL 2023: ಗಿಟಾರ್ ಹಿಡಿದು ಕುಣಿದ ಧೋನಿ; ವಿಡಿಯೊ ವೈರಲ್
ತಿನ್ನುವ ವಿಚಾರಕ್ಕೆ ಬಂದಾಗ ಮಹೇಂದ್ರ ಸಿಂಗ್ ಧೋನಿ ದೊಡ್ಡ ಗೆಳೆಯರ ಬಳಗವನ್ನು ಹೊಂದಿದ್ದರು. ಸುರೇಶ್ ರೈನಾ, ಇರ್ಫಾನ್ ಪಠಾಣ್, ಆರ್ ಪಿ ಸಿಂಗ್, ಪಿಯೂಶ್ ಚಾವ್ಲಾ. ಮುನಾಫ್ ಪಟೇಲ್ ಜತೆಗೆ ಸೇರಿಕೊಂಡು ಬಗೆಬಗೆಯ ಭಕ್ಷ್ಯಗಳನ್ನು ಆರ್ಡರ್ ಮಾಡುತ್ತಿದ್ದರು. ಇವರೆಲ್ಲರ ನಡುವೆ ಧೋನಿ ವಿಭಿನ್ನ ವ್ಯಕ್ತಿಯಾಗಿದ್ದರು. ಹೇಗೆಂದರೆ ಬಟರ್ ಚಿಕನ್ ಅನ್ನು ಚಿಕನ್ ಇಲ್ಲದೇ ತಿನ್ನುತ್ತಿದ್ದರು. ರೋಟಿ ತಿಂದರೆ ಚಿಕನ್ ತಿನ್ನಲ್ಲ, ಚಿಕನ್ ತಿಂದರೆ ರೋಟಿ ತಿನ್ನುತ್ತಿರಲಿಲ್ಲ ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.
ಯಾವ ಹೆಸರಿನಿಂದ ಬೇಕಾದರೂ ಕರೆಯಬಹದು
ಮಹೇಂದ್ರ ಸಿಂಗ್ ಧೋನಿ ಹಿರಿಯ ಆಟಗಾರ. ಅವರ ವರ್ಚಸ್ಸು ಕೂಡ ಜಾಸ್ತಿಯಿದೆ. ಹೀಗಾಗಿ ಅವರನ್ನು ಯಾವ ರೀತಿ ಕರೆಯಬೇಕು ಎಂಬುದು ಕಿರಿಯ ಆಟಗಾರರಿಗೆ ಎನಿಸುತ್ತದೆ. ಆದರೆ, ಧೋನಿ ಮಾತ್ರ ಈ ವಿಚಾರದಲ್ಲಿ ಧಾರಾಳಿ. ನಿಮಗೆ ಹೇಗೆ ಬೇಕೊ, ಹಾಗೆ ಕರೆಬಹುದು ಎಂದು ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡುವ ವೇಳೆ ರಾಬಿನ್ ಉತ್ತಪ್ಪ ಮಹೇಂದ್ರ ಸಿಂಗ್ ಧೋನಿಯ ಬಳಿ, ನಿಮ್ಮನ್ನು ಎಲ್ಲರೂ ಮಹೀ ಬಾಯ್ ಎಂದು ಕರೆಯುತ್ತಾರೆ. ನಾನು ಹಾಗೆಯೇ ಕರೆಯಬಹುದೇ ಎಂದು ಪ್ರಶ್ನಿಸುತ್ತಾರೆ. ಆಗ ಧೋನಿ, ನಿಮಗೆ ಹೇಗೆ ಇಷ್ಟವೋ ಹಾಗೆ ಕರೆಯಿರಿ. ನನಗೆ ಯಾವುದೇ ಆಕ್ಷೇಪ ಇಲ್ಲ. ಮಹೀ ಎಂದು ಕರೆದರೂ ಸಾಕ ಎಂದು ಹೇಳಿದ್ದೆರಂತೆ.
ಕ್ರಿಕೆಟ್
IPL 2023: ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಕಂಗೊಳಿಸಲಿದೆ ವಿಶೇಷ ಡ್ರೋನ್ ಶೋ
ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಮೊದಲು ಪ್ರದರ್ಶಿಸಲಿರುವ ಡ್ರೋನ್ ಶೋದ ಒಂದು ನೋಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಹಮದಾಬಾದ್: 16ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿಯ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾದ ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಐಪಿಎಲ್ ಉದ್ಘಾಟಮಾ ಕಾರ್ಯಕ್ರಮ ನಡೆಯಲಿದೆ. ಇದೇ ಕಾರಣಕ್ಕೆ ಈ ಬಾರಿಯ ಉದ್ಘಾಟನಾ ಸಮಾರಂಭ ಹಿಂದೆದಿಂತಲೂ ಅದ್ದೂರಿಯಾಗಿ ಇರಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ನ್ಯಾಶನಲ್ ಕ್ರಸ್ ಖ್ಯಾತಿಯ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ, ಅರಿಜಿತ್ ಸಿಂಗ್ ಅಭಿಮಾನಿಗಳನ್ನು ನೃತ್ಯ ಮತ್ತು ಸಂಗೀತದ ಮೂಲಕ ರಂಜಿಸಲು ಎಲ್ಲ ಸಿದ್ಧತೆ ನಡೆಸಿದ್ದಾರೆ. ಇದರ ಹೊರತಾಗಿ ಅಭಿಮಾನಿಗಳನ್ನು ಮಂತ್ರಮುಗ್ದರನ್ನಾಗಿಸುವ ಸಲುವಾಗಿ ಇದೇ ಮೊದಲ ಬಾರಿ ಡ್ರೋನ್ ಶೋ ಏರ್ಪಡಿಸಲಾಗಿದೆ. ಬಿಸಿಸಿಐ ಡ್ರೋನ್ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಉದ್ಘಾಟನಾ ಕಾರ್ಯಕ್ರಮಕ್ಕೆ ಮತಷ್ಟು ಮೆರುಗು ತರಲು ಮುಂದಾಗಿದೆ.
ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಮೊದಲು ಈ ಡ್ರೋನ್ ಪ್ರದರ್ಶನದ ಒಂದು ನೋಟವನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ. ವರದಿಗಳ ಪ್ರಕಾರ ಉದ್ಘಾಟನಾ ಸಮಾರಂಭದಲ್ಲಿ ಸುಮಾರು 1500 ಡ್ರೋನ್‌ಗಳನ್ನು ಬಳಸಿ ವಿಶಿಷ್ಟ ಎಲ್‌ಇಡಿ ಮತ್ತು ಲೈಟ್ ಶೋ ಪ್ರದರ್ಶನ ಇದರಲಿದೆ ಎಂದು ತಿಳಿದು ಬಂದಿದೆ.
ಟೂರ್ನಿಯ ಉದ್ಘಾಟನಾ ಸಮಾರಂಭದ ಸಿದ್ಧತೆಯ ಫೋಟೊವನ್ನು ಜಯ್ ಶಾ ಟ್ವೀಟ್ ಮಾಡಿದ್ದಾರೆ. ಸದ್ಯ ಈ ಫೊಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೊದಲ್ಲಿ ಮೈದಾನದ ಮಧ್ಯದಲ್ಲಿ 10 ತಂಡಗಳ ಲೋಗೊವನ್ನು ಬಿಡಿಸಿರುವುದು ಕಂಡು ಬಂದಿದೆ.
ಮೂರು ವರ್ಷಗಳ ಬಳಿಕ ಫ್ಯಾನ್ ಪಾರ್ಕ್
ಐಪಿಎಲ್ನಲ್ಲಿ ಮೂರು ವರ್ಷಗಳ ಬಳಿಕ ಐಪಿಎಲ್ ಫ್ಯಾನ್ ಪಾರ್ಕ್ ಮಾಡಲಾಗುತ್ತಿದೆ. ಕೊರೊನಾ ಕಾರಣದಿಂದ ಐಪಿಎಲ್ ಫ್ಯಾನ್ ಪಾರ್ಕ್‌ಗಳಿಗೆ ಬ್ರೇಕ್ ಹಾಕಲಾಗಿತ್ತು. ಇದೀಗ 2019ರ ಬಳಿಕ ಮತ್ತೆ ಫ್ಯಾನ್ ಪಾರ್ಕ್ ಕಾಣಿಸಿಕೊಳ್ಳಲಿದೆ. 20 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 45ಕ್ಕೂ ಹೆಚ್ಚು ನಗರಗಳಲ್ಲಿ ಈ ಫ್ಯಾನ್ ಪಾರ್ಕ್ ಇರಲಿದೆ. ಐಪಿಎಲ್ ಟೂರ್ನಿಯನ್ನು ದೇಶದ ವಿವಿಧ ನಗರಗಳಲ್ಲಿ ವೀಕ್ಷಣೆ ಮಾಡುವ ಮೂಲಕ ಈ ಟೂರ್ನಿಗೆ ಮತ್ತಷ್ಟು ಪ್ರಚಾರ ಸಿಗುವಂತಾಗಲು ಬಿಸಿಸಿಐ 2015ರ ಈ ಪರಿಕಲ್ಪನೆಯನ್ನು ಜಾರಿಗೆ ತಂದಿತ್ತು.
ಕರ್ನಾಟಕದಲ್ಲಿಯೂ ಇರಲಿದೆ ಫ್ಯಾನ್ ಪಾರ್ಕ್
ಕರ್ನಾಟಕದಲ್ಲಿ ನಾಲ್ಕು ಕಡೆ ಈ ಐಪಿಎಲ್ ಫ್ಯಾನ್ ಪಾರ್ಕ್ ಮಾಡಲಾಗುತ್ತಿದೆ. ಹುಬ್ಬಳ್ಳಿ, ಬೆಳಗಾವಿ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಅಭಿಮಾನಿಗಳಿಗೆ ದೊಡ್ಡ ಪರದೆಯ ಮೂಲಕ ಪಂದ್ಯ ನೋಡಲು ವ್ಯವಸ್ಥೆ ಇರಲಿದೆ. ಹುಬ್ಬಳ್ಳಿಯಲ್ಲಿ ಏಪ್ರಿಲ್ 15 ಮತ್ತು 16, ಬೆಳಗಾವಿ ಏ.22 ಮತ್ತು 23, ಶಿವಮೊಗ್ಗ ಮೇ 6 ಮತ್ತು 7 ಹಾಗೂ ಮೈಸೂರಿನಲ್ಲಿ ಮೇ 20 ಮತ್ತು 21 ರಂದು ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಫೈನಲ್ ಪಂದ್ಯಕ್ಕೆ 5 ಕಡೆ ಫ್ಯಾನ್ ಪಾರ್ಕ್ ಇರಲಿದೆ. ಮೇ 28 ರಂದು ನಡೆಯುವ ಫೈನಲ್ ಕದನಕ್ಕೆ ಜಮ್ಮು, ಜೆಮ್‌ಶೆಡ್‌ಪುರ, ಪಾಲಕ್ಕಾಡ್, ಜೋರ್ಹತ್ ಮತ್ತು ಭೋಪಾಲ್ ಒಟ್ಟು ಐದು ಕಡೆ ಫ್ಯಾನ್ ಪಾರ್ಕ್ ಇರಲಿದೆ.
ಕ್ರಿಕೆಟ್
IPL 2023: ಮೂರು ವರ್ಷಗಳ ಬಳಿಕ ಐಪಿಎಲ್ ಫ್ಯಾನ್ ಪಾರ್ಕ್; ಕರ್ನಾಟಕದಲ್ಲಿಯೂ ಇರಲಿದೆ ಜೋಶ್
ಐಪಿಎಲ್ 2023ರ ಉದ್ಘಾಟನಾ ಪಂದ್ಯವ್ನಾಡಲು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಸಜ್ಜಾಗಿದೆ.
ಬೆಂಗಳೂರು: ಕೊರೊನಾ ಕಾರಣದಿಂದ ಕಳೆದ ಮೂರು ವರ್ಷ ಮನೆಯಲ್ಲಿಯೇ ಬಂದಿಯಾಗಿ ಐಪಿಎಲ್ ಪಂದ್ಯ ವೀಕ್ಷಿಸಿದ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಈ ಬಾರಿ ಮುಕ್ತವಾಗಿ ಫ್ಯಾನ್ ಪಾರ್ಕ್(ipl fan park) ಮೂಲಕ ಪಂದ್ಯ ವೀಕ್ಷಿಸುವ ಅವಕಾಶ ಲಭಿಸಲಿದೆ.
2019ರಲ್ಲಿ ಕೊರೊನಾ ಕಾರಣದಿಂದ ಜನ ಒಂದೆಡೆ ಒಟ್ಟಾಗಿ ಸೇರಬಾರದು ಎಂಬ ನಿಯಮದನ್ವಯ ಪ್ರೇಕ್ಷಕರಿಲ್ಲದ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಡಿಸಲಾಗಿತ್ತು. ಅದೇ ನಿಯಮದನ್ವಯ ಫ್ಯಾನ್ ಪಾರ್ಕ್ ಕೂಡಾ ರದ್ದಾಗಿತ್ತು. ಆದರೆ ಈ ಬಾರಿ ಕೊರೊನಾ ಮುಕ್ತವಾಗಿ ಟೂರ್ನಿ ನಡೆಯಲಿದೆ. ಜತೆಗೆ ಟೂರ್ನಿ ಹಳೆಯ ಸ್ವರೂಪಕ್ಕೆ ಮರಳಿದೆ. ಅದ್ಧೂರಿ ಉದ್ಘಾಟನಾ ಸಮಾರಂಭ ಕೂಡ ನಡೆಯಲಿದೆ. ಇದೀಗ ಫ್ಯಾನ್ ಪಾರ್ಕ್ ಮೂಲಕ ಐಪಿಎಲ್‌ಪ್ರಿಯರಿಗೆ ತಮ್ಮ ನಗರದಲ್ಲಿ ದೊಡ್ಡ ಪರದೆಯ ಮೇಲೆ ಪಂದ್ಯ ನೋಡುವ ಅವಕಾಶವನ್ನು ಬಿಸಿಸಿಐ ಮಾಡಿಕೊಟ್ಟಿದೆ.
ಐಪಿಎಲ್ನಲ್ಲಿ ಮೂರು ವರ್ಷಗಳ ಬಳಿಕ ಐಪಿಎಲ್ ಫ್ಯಾನ್ ಪಾರ್ಕ್ ಮಾಡಲಾಗುತ್ತಿದೆ. ಕೊರೊನಾ ಕಾರಣದಿಂದ ಐಪಿಎಲ್ ಫ್ಯಾನ್ ಪಾರ್ಕ್‌ಗಳಿಗೆ ಬ್ರೇಕ್ ಹಾಕಲಾಗಿತ್ತು. ಇದೀಗ 2019ರ ಬಳಿಕ ಮತ್ತೆ ಫ್ಯಾನ್ ಪಾರ್ಕ್ ಕಾಣಿಸಿಕೊಳ್ಳಲಿದೆ. 20 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 45ಕ್ಕೂ ಹೆಚ್ಚು ನಗರಗಳಲ್ಲಿ ಈ ಫ್ಯಾನ್ ಪಾರ್ಕ್ ಇರಲಿದೆ. ಐಪಿಎಲ್ ಟೂರ್ನಿಯನ್ನು ದೇಶದ ವಿವಿಧ ನಗರಗಳಲ್ಲಿ ವೀಕ್ಷಣೆ ಮಾಡುವ ಮೂಲಕ ಈ ಟೂರ್ನಿಗೆ ಮತ್ತಷ್ಟು ಪ್ರಚಾರ ಸಿಗುವಂತಾಗಲು ಬಿಸಿಸಿಐ 2015ರ ಈ ಪರಿಕಲ್ಪನೆಯನ್ನು ಜಾರಿಗೆ ತಂದಿತ್ತು.
ಇದನ್ನೂ ಓದಿ IPL 2023: ಧೋನಿಗೆ ಗಾಯ; ಮೊದಲ ಪಂದ್ಯಕ್ಕೆ ಅನುಮಾನ; ಸ್ಟೋಕ್ಸ್ ನಾಯಕತ್ವ ಸಾಧ್ಯತೆ
ಕರ್ನಾಟಕದಲ್ಲಿಯೂ ಇರಲಿದೆ ಫ್ಯಾನ್ ಪಾರ್ಕ್
ಕರ್ನಾಟಕದಲ್ಲಿ ನಾಲ್ಕು ಕಡೆ ಈ ಐಪಿಎಲ್ ಫ್ಯಾನ್ ಪಾರ್ಕ್ ಮಾಡಲಾಗುತ್ತಿದೆ. ಹುಬ್ಬಳ್ಳಿ, ಬೆಳಗಾವಿ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಅಭಿಮಾನಿಗಳಿಗೆ ದೊಡ್ಡ ಪರದೆಯ ಮೂಲಕ ಪಂದ್ಯ ನೋಡಲು ವ್ಯವಸ್ಥೆ ಇರಲಿದೆ. ಹುಬ್ಬಳ್ಳಿಯಲ್ಲಿ ಏಪ್ರಿಲ್ 15 ಮತ್ತು 16, ಬೆಳಗಾವಿ ಏ.22 ಮತ್ತು 23, ಶಿವಮೊಗ್ಗ ಮೇ 6 ಮತ್ತು 7 ಹಾಗೂ ಮೈಸೂರಿನಲ್ಲಿ ಮೇ 20 ಮತ್ತು 21 ರಂದು ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಫೈನಲ್ ಪಂದ್ಯಕ್ಕೆ 5 ಕಡೆ ಫ್ಯಾನ್ ಪಾರ್ಕ್ ಇರಲಿದೆ. ಮೇ 28 ರಂದು ನಡೆಯುವ ಫೈನಲ್ ಕದನಕ್ಕೆ ಜಮ್ಮು, ಜೆಮ್‌ಶೆಡ್‌ಪುರ, ಪಾಲಕ್ಕಾಡ್, ಜೋರ್ಹತ್ ಮತ್ತು ಭೋಪಾಲ್ ಒಟ್ಟು ಐದು ಕಡೆ ಫ್ಯಾನ್ ಪಾರ್ಕ್ ಇರಲಿದೆ.
ಕ್ರಿಕೆಟ್
IPL 2023: ಧೋನಿಗೆ ಗಾಯ; ಮೊದಲ ಪಂದ್ಯಕ್ಕೆ ಅನುಮಾನ; ಸ್ಟೋಕ್ಸ್ ನಾಯಕತ್ವ ಸಾಧ್ಯತೆ
ಮೊಣ ಕಾಲಿನ ಗಾಯಕ್ಕೆ ತುತ್ತಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಇಂದು ನಡೆಯುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.
ಅಹಮದಾಬಾದ್: ಇನ್ನೇನು ಕೆಲವೇ ಗಂಟೆಗಳಲ್ಲಿ ಕ್ಯಾಶ್ ರಿಚ್ ಕ್ರಿಕೆಟ್ ಲೀಗ್ ಐಪಿಎಲ್ಗೆ(IPL 2023) ಚಾಲನೆ ದೊರೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಮತ್ತು ಗುಜರಾತ್ ಟೈಟಾನ್ಸ್(Gujarat Titans) ಮುಖಾಮುಖಿಯಾಗಲು ಸಜ್ಜಾಗಿದೆ. ಆದರೆ ಇದೀಗ ಚೆನ್ನೈ ತಂಡಕ್ಕೆ ಮತ್ತು ತಂಡದ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಎಡ ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಧೋನಿ ಅವರು ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಚೆನ್ನೈಯ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸ ನಡೆಸುವ ವೇಳೆ ಧೋನಿ ಅವರ ಎಡ ಮೊಣಕಾಲಿಗೆ ಗಾಯವಾಗಿದೆ. ಹೀಗಾಗಿ ಅವರು ಗುರುವಾರ ತಂಡದ ಆಟಗಾರರೊಂದಿಗೆ ಅಭ್ಯಾಸ ನಡೆಸಿಲ್ಲ. ಹೀಗಾಗಿ ಅವರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬ ಅನುಮಾನ ಮೂಡಿದೆ.
16ನೇ ಆವೃತ್ತಿಯ ಈ ಐಪಿಎಲ್ಗೆ ಈಗಾಗಲೇ ಹಲವು ಆಟಗಾರರು ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದಾರೆ. ಇದೇ ಕಾರಣಕ್ಕೆ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಇಂಜುರಿ ಟೂರ್ನಿ ಎಂದು ಕರೆಯಲಾಗುತ್ತಿದೆ. ಇದೀಗ ಧೋನಿ ಕೂಡ ಗಾಯಕ್ಕೆ ತುತ್ತಾಗಿರುವುದು ಅವರ ಅಭಿಮಾನಿಗಳಿಗೆ ಭಾರಿ ಚಿಂತೆ ಉಂಟುಮಾಡಿದೆ.
ಧೋನಿ ಅವರು ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸುಳಿವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಿಇಒ ನೀಡಿದ್ದಾರೆ. ಆದರೆ ಅವರ ಹೇಳಿಕೆ ಒಂದು ರೀತಿ ಗೊಂದಲದಿಂದ ಕೂಡಿದೆ. ಆರಂಭದಲ್ಲಿ “ನನಗೆ ತಿಳಿದಿರುವಂತೆ ಧೋನಿ ಶೇ 100 ರಷ್ಟು ಆಡುತ್ತಾರೆ. ಬೇರೆ ಯಾವುದೇ ಬೆಳವಣಿಗೆಯ ಬಗ್ಗೆ ನನಗೆ ತಿಳಿದಿಲ್ಲ” ಎಂದು ಹೇಳಿದರು. ಆ ಬಳಿಕ ಒಂದು ವೇಳೆ ಧೋನಿ ಆಡದಿದ್ದರೆ, ಡೆವೊನ್ ಕಾನ್ವೇ ಅಥವಾ ಅಂಬಾಟಿ ರಾಯುಡು ವಿಕೆಟ್ ಕೀಪಿಂಗ್ ಮಾಡಬಹುದು. ಟೀಮ್ನಲ್ಲಿ ಧೋನಿ ಬಿಟ್ಟರೆ ಇವರಿಬ್ಬರು ಕೀಪಿಂಗ್ ಸಾಮರ್ಥ್ಯ ಹೊಂದಿದ್ದಾರೆ” ಎಂದರು. ಒಟ್ಟಾರೆ ಇವರ ಈ ಹೇಳಿಕೆ ಗಮನಿಸುವಾಗ ಧೋನಿ ಆಡುವುದು ಅನುಮಾನ ಎಂಬಂತಿದೆ.
ಇದನ್ನೂ ಓದಿ IPL 2023: ಧೋನಿ ವಿಶ್ವದ ಗ್ರೇಟ್ ಫಿನಿಶರ್; ರಿಯಾನ್ ಪರಾಗ್
ಇತ್ತೀಚೆಗೆ ಸಿಎಸ್ಕೆ ತನ್ನ ಟ್ವಿಟರ್ನಲ್ಲಿ ಧೋನಿ ಅಭ್ಯಾಸಕ್ಕೆ ಮೈದಾನಕ್ಕೆ ಬರುತ್ತಿರುವ ವಿಡಿಯೊ ಹಂಚಿಕೊಂಡಿತ್ತು. ಇದು ಕೆಲವೇ ಗಂಟೆಯಲ್ಲಿ ವೈರಲ್ ಆದದ್ದಲ್ಲದೇ, ಮೈದಾನಕ್ಕಿಳಿಯುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟುವಂತಿತ್ತು. ಈ ಬಾರಿಯ ಐಪಿಎಲ್ ಬಳಿಕ ಧೋನಿ ಅವರು ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಗಳು ಜೋರಾಗಿ ಹರಿದಾಡುತ್ತಿದೆ. ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಆಟವನ್ನು ಕೊನೆಯಾ ಬಾರಿ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ ಈ ಮಧ್ಯೆ ಧೋನಿ ಅವರಿಗೆ ಮೊಣಕಾಲಿನ ಗಾಯವಾಗಿರುವುದು ಅವರ ಅಭಿಮಾನಿಗಳಿಗೆ ಆತಂಕ ಉಂಟುಮಾಡಿದೆ. ಒಂದೊಮ್ಮೆ ಧೋನಿ ಅವರು ಮೊದಲ ಪಂದ್ಯದಿಂದ ಹೊರಗುಳಿದರೆ ಬೆನ್ ಸ್ಟೋಕ್ಸ್ ಅವರು ತಂಡದ ನಾಯಕತ್ವ ನಿರ್ವಹಿಸುವ ಸಾಧ್ಯತೆ ಇದೆ.
ಕ್ರಿಕೆಟ್
IPL 2023: ಧೋನಿ ವಿಶ್ವದ ಗ್ರೇಟ್ ಫಿನಿಶರ್; ರಿಯಾನ್ ಪರಾಗ್
16ನೇ ಆವೃತ್ತಿಯ ಐಪಿಎಲ್ ಟೂರ್ನಿ ಶುಕ್ರವಾರ ಆರಂಭಗೊಳ್ಳಲಿದೆ. ಉದ್ಘಾಟನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಟೈಟಾನ್ಸ್ ಮತ್ತು ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಅಹಮದಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರಂತೆ ಫಿನಿಶರ್ ಪಾತ್ರವನ್ನು ಯಾರೂ ನಿರ್ವಹಿಸಲು ಸಾಧ್ಯವಿಲ್ಲ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಆಲ್ರೌಂಡರ್ ರಿಯಾನ್ ಪರಾಗ್(riyan parag) ಹೇಳಿದ್ದಾರೆ.
16ನೇ ಆವೃತ್ತಿಯ ಐಪಿಎಲ್ ಟೂರ್ನಿ ಶುಕ್ರವಾರ ಆರಂಭಗೊಳ್ಳಲಿದೆ. ಉದ್ಘಾಟನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಟೈಟಾನ್ಸ್ ಮತ್ತು ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ನಡೆಸಿದ ಸಂದರ್ಶನವೊಂದರಲ್ಲಿ ಮಾತನಾಡಿದ ಧೋನಿ ಅವರ ಅಪ್ಪಟ ಅಭಿಮಾನಿಯಾಗಿರುವ ರಿಯಾನ್ ಪರಾಗ್, ನಾನು ಕೂಡ ಧೋನಿಯಂತೆ ಫಿನಿಶರ್ ರೋಲ್ ನಿರ್ವಹಿಸಲು ಬಯಸುತ್ತಿದ್ದೇನೆ ಆದರೆ ಅವರಂತೆ ಗ್ರೇಟ್ ಫಿನಿಶರ್ ಆಗಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ IPL 2023: ಬಹುನಿರೀಕ್ಷಿತ ಐಪಿಎಲ್ ಟೂರ್ನಿಗೆ ಕ್ಷಣಗಣನೆ; ಈ ಬಾರಿ ಟೂರ್ನಿಯ ಮಾದರಿ ಹೇಗಿದೆ?
“ಕಳೆದ ಮೂರು ವರ್ಷಗಳಿಂದ ನಾನು ಫಿನಿಶಿಂಗ್ ಪಾತ್ರ ನಿಭಾಯಿಸುತ್ತಿದ್ದೇನೆ. ಫಿನಿಶಿಂಗ್ ವಿಚಾರಕ್ಕೆ ಬಂದಾಗ ನನ್ನ ನೆನಪಿಗೆ ಬರುವ ಒಂದೇ ಒಂದು ಹೆಸರು ಎಂದರೆ ಅದು ಧೋನಿ ಸರ್, ಈ ಹಿಂದೆಯೂ ಇದನ್ನೇ ಹೇಳಿದ್ದೆ. ಧೋನಿ ಹೊರತುಪಡಿಸಿ ಫಿನಿಶಿಂಗ್ ಕಲೆಯನ್ನು ಬೇರೆ ಯಾರೂ ಉತ್ತಮವಾಗಿ ನಿರ್ವಹಿಸಲು ಸಾಧ್ಯವಿಲ್ಲ. ನಾನು ಕೂಡ ಅವರಂತೆ ಆಗಲು ಪ್ರಯತ್ನಿಸುತ್ತಿದ್ದೇನೆ” ಎಂದು ಪರಾಗ್ ಅಭಿಪ್ರಾಯಪಟ್ಟರು.
ತಮ್ಮ ಆಟದ ಸಾಮರ್ಥ್ಯದ ಬಗ್ಗೆ ಮಾತನಾಡಿದ ಅವರು, “ಈ ಋತುವಿನ ದೇಶಿಯಾ ಕ್ರಿಕೆಟ್ ಟೂರ್ನಿಗಳಲ್ಲಿ ನಾನು ಬ್ಯಾಟಿಂಗ್ ಜತೆಗೆ ಸಾಕಷ್ಟು ಬೌಲಿಂಗ್ ಮಾಡಿದ್ದೇನೆ. ಇದರಿಂದ ಬೌಲಿಂಗ್ನಲ್ಲಿಯೂ ದೊಡ್ಡ ಮಟ್ಟದ ಸುಧಾರಣೆಯಾಗಿದೆ. ಆದ್ದರಿಂದ ನಾನು ಈ ಬಾರಿ ಆಲ್ರೌಂಡರ್ ಪ್ರದರ್ಶ ತೋರಲಿದ್ದೇನೆ” ಎಂದು ತಿಳಿಸಿದರು.
2018ರ ಅಂಡರ್-19 ವಿಶ್ವಕಪ್ ವಿಜೇತ ತಂಡದಲ್ಲಿ ಸ್ಥಾನ ಪಡೆದಿದ್ದ ಪರಾಗ್ ಅವರು 2022-23ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಐದನೇ ಅತಿ ಹೆಚ್ಚು ರನ್ಗಳಿಸಿದ್ದ ಆಟಗಾರರಾಗಿದ್ದರು. 69 ಸರಾಸರಿಯೊಂದಿಗೆ 552 ರನ್ಗಳನ್ನು ಗಳಿಸಿದ್ದ ಪರಾಗ್ ಮೂರು ಶತಕ ಮತ್ತು ಒಂದು ಅರ್ಧಶತಕ ಸಿಡಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟ20 ಟ್ರೋಫಿಯಲ್ಲಿ ಎರಡು ಅರ್ಧಶತಕಗಳೊಂದಿಗೆ 253 ರನ್ ಗಳಿಸಿದ್ದರು. ಇದೀಗ 16ನೇ ಆವೃತ್ತಿಯ ಐಪಿಎಲ್ನಲ್ಲಿ ಮಿಂಚಲು ಕಾತರರಾಗಿದ್ದಾರೆ.
ಇದನ್ನೂ ಓದಿ IPL 2023: ಗುರು ಶಿಷ್ಯರ ಕಾದಾಟ; ಯಾರಿಗೆ ಒಲಿಯಲಿದೆ ಗೆಲುವಿನ ಶುಭಾರಂಭ
ಐಪಿಎಲ್ಗೆ ವಿದಾಯ ಹೇಳಲಿದ್ದಾರಾ ಧೋನಿ?
ಈ ಬಾರಿಯ ಐಪಿಎಲ್ ಬಳಿಕ ಧೋನಿ(ms dhoni) ಅವರು ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡಲಾರಂಭಿಸಿದೆ. ಆದರೆ ಈ ಬಗ್ಗೆ ಧೋನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸದ್ಯಕ್ಕೆ ಧೋನಿ ಅವರು ಹಲವು ದಾಖಲೆಗಳನ್ನು ನಿರ್ಮಿಸುತ್ತ ಚಿತ್ತ ನೆಟ್ಟಿದ್ದಾರೆ.
5000 ರನ್ ಸನಿಹದಲ್ಲಿ ಧೋನಿ
ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರು ಈ ವರೆಗೆ 234 ಪಂದ್ಯಗಳಿಂದ 4978 ರನ್ ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ಅವರು 22 ರನ್ ಗಳಿಸಿದರೆ 5 ಸಾವಿರ ರನ್ ಪೂರೈಸಿದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ಬರೆಯಲಿದ್ದಾರೆ. ಇದರ ಜತೆಗೆ 185 ರನ್ ಬಾರಿಸಿದರೆ ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ (5162) ಅವರನ್ನು ಹಿಂದಿಕ್ಕಲಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ 6ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಸಿಕ್ಸರ್ ದಾಖಲೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಯುನಿವರ್ಸ್ ಬಾಸ್ ಖ್ಯಾತಿಯ ವಿಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರಿನಲ್ಲಿದೆ ಅವರು 357 ಸಿಕ್ಸರ್ಗಳನ್ನು ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಸದ್ಯ ಧೋನಿ 229 ಸಿಕ್ಸರ್ ಸಿಡಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಬಾರಿ ಅವರು 23 ಸಿಕ್ಸ್ ಸಿಡಿಸಿದರೆ 250 ಸಿಕ್ಸರ್ ಕ್ಲಬ್ಗೆ ಸೇರುವ ಜತೆಗೆ ಎಬಿಡಿ ಅವರ ದಾಖಲೆಯನ್ನು ಮುರಿಯಲಿದ್ದಾರೆ ಎಬಿಡಿ 251 ಸಿಕ್ಸರ್ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 240 ಸಿಕ್ಸರ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ ಅವರಿಗೂ ಎಬಿಡಿ ಅವರ ದಾಖಲೆ ಮುರಿಯುವ ಅವಕಾಶವಿದೆ.
250ನೇ ಐಪಿಎಲ್ ಪಂದ್ಯ
ಐಪಿಎಲ್ನ ಇದುವರೆಗಿನ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯವನ್ನಾಡಿದ ದಾಖಲೆ ಧೋನಿ ಹೆಸರಿನಲ್ಲಿದೆ. ಸದ್ಯ ಅವರು 234 ಪಂದ್ಯಗಳನ್ನಾಡಿದ್ದಾರೆ. ಈ ಬಾರಿ ಅವರು 16 ಪಂದ್ಯಗಳಲ್ಲಿ ಆಡಿದರೆ 250 ಪಂದ್ಯಗಳನ್ನು ಪೂರೈಸಿದ ಮೊದಲ ಆಟಗಾರ ಎಂಬ ಮೈಲುಗಲ್ಲು ಸ್ಥಾಪಿಸಲಿದ್ದಾರೆ. ಆರ್‌ಸಿಬಿ ಆಟಗಾರ ದಿನೇಶ್ ಕಾರ್ತಿಕ್ 229 ಪಂದ್ಯಗಳನ್ನಾಡಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಈ ಬಾರಿಯೂ ಅವರು ಆಡುತ್ತಿರುವ ಕಾರಣ ಪಂದ್ಯಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ.
-
ಸುವಚನ11 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ8 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ17 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ9 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ವೈರಲ್ ನ್ಯೂಸ್24 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ20 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್21 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ
-
ಕರ್ನಾಟಕ24 hours ago
Karnataka Election 2023: ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ; ತಪ್ಪಿದರೆ ಸದಾನಂದ?