ಲಂಡನ್: ರೋಹನ್ ಬೋಪಣ್ಣ(Rohan Bopanna) ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್(Matthew Ebden) ಜೋಡಿ ವಿಂಬಲ್ಡನ್ ಟೂರ್ನಿಯ(Wimbledon 2023) ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್(Wimbledon semi-final) ತಲುಪಿದ್ದಾರೆ. ಇನ್ನೊಂದು ಹರ್ಡಲ್ಸ್ ದಾಟಿದರೆ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯುವ ಮೂಲಕ ಇತಿಹಾಸ ಬರೆಯಲಿದ್ದಾರೆ.
ಬುಧವಾರ ತಡ ರಾತ್ರಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಡೋ-ಆಸೀಸ್ ಜೋಡಿ ಡಚ್ ಜೋಡಿಯಾದ ಬಾರ್ಟ್ ಸ್ಟೀವನ್ಸ್ ಮತ್ತು ಟ್ಯಾಲನ್ ಗ್ರೀಕ್ಸ್‌ಪೂರ್ ಅವರನ್ನು 6-7 (6-3) 7-5 6-2 ಸೆಟ್‌ಗಳ ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಈ ಪಂದ್ಯದ ಮೊದಲ ಸೆಟ್ನಲ್ಲಿ ರೋಹನ್ ಬೋಪಣ್ಣ ಜೋಡಿ ಸೋಲು ಕಂಡಿತು. ಆದರೆ ಈ ಹೋರಾಟ ತೀವ್ರ ಪೈಪೋಟಿಯಿಂದ ಕೂಡಿತ್ತು.
ನಿರ್ಣಾಯ ಸೆಟ್ನಲ್ಲಿ ತಿರುಗಿ ಬಿದ್ದ ಇಂಡೋ-ಆಸೀಸ್ ಜೋಡಿ ಉತ್ಕೃಷ್ಟ ಮಟ್ಟದ ಆಟವಾಡುವ ಮೂಲಕ ಪಂದ್ಯವನ್ನು ತಮ್ಮ ಹಿಡಿತಕ್ಕೆ ತಂದರು. ಸತತವಾಗಿ ಎರಡು ಸೆಟ್ಗಳಲ್ಲಿಯೂ ಗೆಲುವು ಸಾಧಿಸಿ ಡಚ್ ಜೋಡಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಉಭಯ ಆಟಗಾರರ ಈ ಹೋರಾಟ ಒಂದು ಗಂಟೆ 54 ನಿಮಿಷಗಳ ಕಾಲ ಸಾಗಿತು.
Wimbledon Update @rohanbopanna and @mattebden are through to Semis
— Tennis Karnataka (@KarnatakaTennis) July 13, 2023
They battled their way into the semifinals with a thrilling victory over Tallon Griekspoor and Bart Stevens, triumphing with a 6-7, 7-5, 6-2 scoreline. This is the first Wimbledon semis for Bopanna since 2015. pic.twitter.com/l1i3qqqQaj
ಮಂಗಳವಾರ ನಡೆದಿದ್ದ ಪ್ರೀ-ಕ್ವಾರ್ಟರ್ ಫೈನಲ್ನಲ್ಲಿ ಬೋಪಣ್ಣ-ಎಬ್ಡೆನ್ ಜೋಡಿ ಅಮೆರಿಕದ ಸ್ಟಾಲ್ಡರ್ ಮತ್ತು ಡಚ್‌ಮ್ಯಾನ್ ಪೆಲ್ ಜೋಡಿಯನ್ನು 7-5, 4-6, 7-6 (10-5)ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದರು. 2ನೇ ಸುತ್ತಿನ ಪಂದ್ಯದಲ್ಲಿ ಬ್ರಿಟನ್‌ನ ಜೇಕಬ್-ಜೊಹನ್ನಸ್ ಮಂಡೇ ವಿರುದ್ಧ ಇಂಡೋ-ಆಸ್ಟ್ರೇಲಿಯನ್ ಜೋಡಿ 7-5, 6-3 ನೇರ ಸೆಟ್‌ಗಳಿಂದ ಗೆದ್ದು ಫ್ರೀ ಕ್ವಾರ್ಟರ್ ಪ್ರವೇಶ ಪಡೆದಿದ್ದರು. 43 ವಯಸ್ಸಿನ ಬೋಪಣ್ಣ 2015ರ ವಿಂಬಲ್ಡನ್‌ನಲ್ಲಿ ಕೊನೆಯ ನಾಲ್ಕರ ಘಟ್ಟ ತಲುಪಿದ್ದರು. ಇದೀಗ ಸೆಮಿಫೈನಲ್ ಪ್ರವೇಶಿಸಿ ಇಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
ಬೋಪಣ್ಣ-ಎಬ್ಡೆನ್ ಜೋಡಿ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ನೆದರ್ಲೆಂಡ್ಸ್ ಮತ್ತು ಬ್ರಿಟನ್ ಜೋಡಿ ವೆಸ್ಲಿ ಕೂಲ್ಹೋಫ್ ಮತ್ತು ನೀಲ್ ಸ್ಕುಪ್ಸ್ಕಿ ಅವರ ಸವಾಲು ಎದುರಿಸಬೇಕಿದೆ. 2010ರ ಯುಎಸ್ ಓಪನ್ ರನ್ನರ್ ಅಪ್ ಆಗಿದ್ದ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ನಾಲ್ಕು ಬಾರಿ ಗ್ರ್ಯಾಂಡ್ ಸ್ಲಾಮ್ ಸೆಮಿಫೈನಲ್‌ಗೆ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ Wimbledon 2023: ಫೆಡರರ್ ದಾಖಲೆ ಸರಿಗಟ್ಟಿದ ಜೊಕೋವಿಕ್; 24ನೇ ಗ್ರ್ಯಾನ್‌ಸ್ಲಾಮ್ ಕನಸು ಜೀವಂತ
ಸಬಲೆಂಕಾ ಸೆಮಿಗೆ
ಮಹಿಳೆಯರ ಸಿಂಗಲ್ಸ್‌ನಲ್ಲಿ ಟುನೇಶಿಯಾದ ಜೆಬೌರ್ ಮತ್ತು ಸಬಲೆಂಕಾ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಜೆಬೌರ್ ಅವರು ರೈಬಕಿನಾ ಅವರನ್ನು 6-7, 6-4, 6-4 ಸೆಟ್‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು. ಸಬಲೆಂಕಾ ಅವರು, ಮ್ಯಾಡಿಸನ್ ಕೀಸ್ ಅವರನ್ನು 6-2, 6-4 ಸೆಟ್‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು. ಗುರುವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಜೆಬೌರ್, ಸಬಲೆಂಕಾ ಅವರನ್ನು ಎದುರಿಸಿದರೆ, ಇನ್ನೊಂದು ಪಂದ್ಯದಲ್ಲಿ ಸ್ವಿಟೋಲಿನಾ ಅವರು ವೋಂಡ್ರೋಸೋವಾ ಅವರ ವಿರುದ್ಧ ಸೆಣೆಸಲಿದ್ದಾರೆ.