ನವದೆಹಲಿ: ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್ (Australian Open) ಟೆನಿಸ್ ಟೂರ್ನಿಯ ಪುರಷರ ಡಬಲ್ಸ್ನಲ್ಲಿ ಚಾಂಪಿಯನ್ ಪಟ್ಟ ಅಲಂರಿಸಿದ ಕನ್ನಡಿಗ ರೋಹನ್ ಬೋಪಣ್ಣ(Rohan Bopanna) ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಭೇಟಿಯಾಗಿದ್ದಾರೆ. ಪ್ರಧಾನಿಯನ್ನು(PM Modi) ಭೇಟಿಯಾದ ಫೋಟೊವನ್ನು ಬೊಪಣ್ಣ ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಭೇಟಿ ವೇಳೆ ಮೋದಿಗೆ ವಿಶೇಷ ಉಡುಗೊರೆಯನ್ನು ಕೂಡ ನೀಡಿದ್ದಾರೆ.
ಶುಕ್ರವಾರ ನವದೆಹಲಿಯ ಪ್ರಧಾನಿ ನಿವಾಸದಲ್ಲಿ ಮೋದಿ ಅವರನ್ನು ಭೇಟಿಯಾದ ಬೋಪಣ್ಣ ತಮ್ಮ ಟೆನಿಸ್ ಮತ್ತು ಫಿಟ್ನೆಸ್ ಅನುಭವದ ಬಗ್ಗೆ ಕೆಲ ಕಾಲ ಮೋದಿ ಜತೆ ಕುಶಲೋಪರಿ ಹಂಚಿಕೊಂಡರು. ಬಳಿಕ ಟ್ವೀಟ್ ಮಾಡಿದ ಬೋಪಣ್ಣ “ಗೌರವಾನ್ವಿತ ಪ್ರಧಾನಿ ಮೋದಿ ಜಿ ಅವರನ್ನು ಭೇಟಿ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಇದೊಂದು ತುಂಬಾ ವಿನಮ್ರವಾದ ಭೇಟಿ. ನಾನು ವಿಶ್ವದ ನಂ.1 ಆಟಗಾರ ಮತ್ತು ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಲು ಕಾರಣವಾದ ಟೆನಿಸ್ ರಾಕೆಟ್ ಅನ್ನು ಮೋದಿ ಅವರಿಗೆ ನೀಡುವುದು ನನ್ನ ಪಾಲಿಗೆ ಗೌರವವಾಗಿದೆ. ನಿಮ್ಮ ಹಾರೈಕೆಯು ನನಗೆ ಸ್ಫೂರ್ತಿ ಮತ್ತು ಪ್ರೋತ್ಸಾಹವನ್ನು ತುಂಬಿದೆ” ಎಂದು ಬರೆದುಕೊಂಡಿದ್ದಾರೆ.
I had the privilege to meet our honourable Prime Minister Modi ji today. This acknowledgement is very humbling & it was my honour to present the very racket that led me to become World no. 1 and the AO grand slam champion. Your grace has left me inspired & encouraged. @PMOIndia pic.twitter.com/R01Ae00RrR
— Rohan Bopanna (@rohanbopanna) February 2, 2024
ಪ್ರಶಂಸೆ ವ್ಯಕ್ತಪಡಿಸಿದ್ಧ ಮೋದಿ
ರೋಹನ್ ಬೋಪಣ್ಣ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಶುಭ ಹಾರೈಸಿದ್ದರು. ವಯಸ್ಸು ಕೇವಲ ನಂಬರ್ ಮಾತ್ರ ಎನ್ನುವುದನ್ನು ಬೋಪಣ್ಣ ತೋರಿಸಿಕೊಟ್ಟಿದ್ದಾರೆ. ಸಾಧನೆ ಮಾಡುವ ಛಲವಿದ್ದರೆ ಏನೂ ಕೂಡ ಮಾಡಬಹುದು ಎನ್ನುವುದಕ್ಕೆ ನಮಗೆಲ್ಲ ಬೋಪಣ್ಣ ಸಾಧನೆಯೇ ಸ್ಫೂರ್ತಿ. ಅವರ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯವನ್ನು ಮೆಚ್ಚಲೇ ಬೇಕು. ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು” ಎಂದು ಮೋದಿ ಟ್ವಿಟರ್ ಎಕ್ಸ್ನಲ್ಲಿ ಅಭಿನಂದಿಸಿದ್ದರು.
ಇದನ್ನೂ ಓದಿ Australian Open 2024 : ಚಾಂಪಿಯನ್ ರೋಹನ್ ಬೋಪಣ್ಣ ಗಳಿಸಿದ ಬಹುಮಾನ ಮೊತ್ತವೆಷ್ಟು?
Time and again, the phenomenally talented @rohanbopanna shows age is no bar!
— Narendra Modi (@narendramodi) January 27, 2024
Congratulations to him on his historic Australian Open win.
His remarkable journey is a beautiful reminder that it is always our spirit, hard work and perseverance that define our capabilities.
Best… pic.twitter.com/r06hkkJOnN
ಕಳೆದ ಶನಿವಾರ ಮೆಲ್ಬೋರ್ನ್ನಲ್ಲಿ ನಡೆದಿದ್ದ ಜಿದ್ದಾಜಿದ್ದಿನ ಪುರುಷರ ಡಬಲ್ಸ್ ಫೈನಲ್(Australian Open Men’s Doubles Final) ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಅವರ ಜತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್(Matthew Ebden) ಸೇರಿಕೊಂಡು ಇಟಲಿಯ ಸಿಮೋನ್ ಬೊಲೆಲ್ಲಿ-ಆ್ಯಂಡ್ರಿಯಾ ವಸಸ್ಸೊರಿ ವಿರುದ್ಧ 7-6(7-0), 7-5 ನೇರ ಸೆಟ್ಗಳಿಂದ ಗೆಲುವು ಸಾಧಿಸಿದ್ದರು. ಈ ಮೂಲಕ ಟೆನಿಸ್ ಓಪನ್ ಯುಗದಲ್ಲಿ ಗ್ರ್ಯಾನ್ ಸ್ಲಾಮ್ ಟ್ರೋಫಿ ಗೆದ್ದ ಅತಿ ಹಿರಿಯ ಟೆನಿಸಿಗ ಎಂಬ ಹಿರಿಮೆಗೆ ರೋಹನ್ ಬೋಪಣ್ಣ ಪಾತ್ರರಾಗಿದ್ದರು.