Site icon Vistara News

Rohit Sharma: ಲಿಯೋನೆಲ್ ಮೆಸ್ಸಿ ಶೈಲಿಯಲ್ಲಿ ವಿಶ್ವಕಪ್​ ಎತ್ತಿ ಹಿಡಿದ ರೋಹಿತ್​; ವಿಡಿಯೊ ವೈರಲ್​

Rohit Sharma

Rohit Sharma: Rohit recreates Lionel Messi's iconic moment after Kuldeep Yadav advice for T20 World Cup trophy celebration

ನವದೆಹಲಿ: 2022 ಕತಾರ್​ನಲ್ಲಿ ನಡೆದ ಫಿಫಾ ಫುಟ್ಬಾಲ್​​​​​​​​​ ವಿಶ್ವ ಕಪ್(Fifa World Cup 2022) ರೋಮಾಂಚನಕಾರಿ ಫೈನಲ್​ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ(Lionel Messi) ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್​ ತಂಡವನ್ನು ಮಣಿಸಿ 36 ವರ್ಷಗಳ ಬಳಿಕ ವಿಶ್ವ ಚಾಂಪಿಯನ್ ಆಗಿ ಹೊರಮೊಮ್ಮಿತ್ತು. ಲಿಯೋನೆಲ್ ಮೆಸ್ಸಿ ಅವರು ವಿಭಿನ್ನ ಶೈಲಿಯಲ್ಲಿ ಬಂದು ಕಪ್​ ಎತ್ತಿ ಹಿಡಿಯುವ ಮೂಲಕ ಫೋಟೊಗೆ ಫೋಸ್​ ಕೊಟ್ಟಿದ್ದರು. ಶನಿವಾರ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಚಾಂಪಿಯನ್(T20 World Cup final)​ ಪಟ್ಟ ಅಲಂಕರಿಸಿದ ಭಾರತ ತಂಡದ ನಾಯಕ ರೋಹಿತ್​ ಶರ್ಮ(Rohit Sharma) ಕೂಡ ಮೆಸ್ಸಿಯ ಶೈಲಿಯಲ್ಲೇ ವಿಶ್ವಕಪ್​ ಎತ್ತಿ ಹಿಡಿದಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ರೋಹಿತ್​ಗೆ ಮೆಸ್ಸಿಯ ಈ ಶೈಲಿಯನ್ನು ಹೇಳಿಕೊಟ್ಟದ್ದು ತಂಡದ ಸಹ ಆಟಗಾರ ಕುಲ್​ದೀಪ್​ ಯಾದವ್​. ಆಟಗಾರರೆಲ್ಲ ಪದಕ ಸ್ವೀಕರಿಸುತ್ತಿದ್ದ ವೇಳೆ ಕುಲ್​ದೀಪ್​ ಅವರು ರೋಹಿತ್​ ಅವರಿಗೆ ಯಾವ ರೀತಿಯಲ್ಲಿ ಬಂದು ಕಪ್​ ಎತ್ತಬೇಕು ಎಂದು ನಟನೆ ಮಾಡಿ ತೋರಿಸಿದರು. ಈ ವೇಳೆ ರೋಹಿತ್​ ಓಕೆ ಓಕೆ.. ಎಂದು ಹೇಳುತ್ತಾರೆ. ಬಳಿಕ ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೊಗೆ ಫೋಸ್​ ನೀಡಲು ಬರುವ ವೇಳೆ ಕುಲ್​ದೀಪ್​ ಹೇಳಿಕೊಟ್ಟಂತೆ ರೋಹಿತ್ ಅವರು ಅಂದು​ ಮೆಸ್ಸಿ ನಡೆದು ಬಂದು ಟ್ರೋಫಿಯನ್ನು ಎತ್ತಿ ಹಿಡಿದ ರೀತಿಯಲ್ಲೇ ವಿಶ್ವಕಪ್​ ಟ್ರೋಫಿಯನ್ನು ಎತ್ತಿ ಸಂಭ್ರಮಿಸಿದ್ದಾರೆ. ಟೀಮ್​ ಇಂಡಿಯಾ ಆಟಗಾರರು ಕೂಡ ಅರ್ಜೆಂಟೀನಾ ಫುಟ್ಬಾಲ್​ ತಂಡದ ಆಟಗಾರರಂತೆ ಸಂಭ್ರಮಿಸಿದ್ದು ಕಂಡುಬಂತು.

ಇದನ್ನೂ ಓದಿ T20 World Cup 2024: ಎರಡನೇ ವಿಶ್ವಕಪ್‌ಗೆ ತಾಳ್ಮೆಯಿಂದ ಕಾದಂತೆ ಟ್ರಾಫಿಕ್‌ ಸಿಗ್ನಲ್‌ನಲ್ಲೂ ಕಾಯಿರಿ; ದೆಹಲಿ ಪೊಲೀಸರ ಕ್ರಿಯೇಟಿವ್​ ವಿಷ್‌

ಅಂದು ನಡೆದಿದ್ದ ರಣರೋಚಕ ಫುಟ್ಬಾಲ್​ ಫೈನಲ್​ ಪಂದ್ಯದಲ್ಲಿ ಪೂರ್ಣ ಅವಧಿ 90 ನಿಮಿಷ ಹಾಗೂ ಹೆಚ್ಚುವರಿ 30 ನಿಮಿಷಗಳ ಆಟದಲ್ಲಿ ಇತ್ತಂಡಗಳು 3-3 ಗೋಲ್​ಗಳನ್ನು ಬಾರಿಸಿದ ಕಾರಣ ಫಲಿತಾಂಶಕ್ಕೆ ಪೆನಾಲ್ಟಿ ಮೊರೆ ಹೋಗಲಾಯಿತು. ಅಲ್ಲಿ ಅರ್ಜೆಂಟೀನಾ 4-2 ಗೋಲ್​ಗಳ ಅಂತರದಿಂದ ಗೆದ್ದು ವಿಜಯೋತ್ಸವ ಆಚರಿಸಿತ್ತು.

ಮೆಸ್ಸಿ ಸಂಭ್ರಮಿಸಿದ ಕ್ಷಣ

ವಿದಾಯ ಹೇಳಿದ ರೋಹಿತ್​


ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

Exit mobile version