Site icon Vistara News

Sachin Tendulkar : ಸಚಿನ್ ಭೇಟಿಯಾದ ತೆಂಡೂಲ್ಕರ್​; ವಿಡಿಯೊ ವೈರಲ್​

Sachin Tedulkar

ಬೆಂಗಳೂರು: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ (Sachin Tendulkar) ರಸ್ತೆ ಪ್ರಯಾಣದ ಸಂದರ್ಭದಲ್ಲಿ ತಮ್ಮ ಅಪ್ಪಟ ಅಭಿಮಾನಿಯೊಬ್ಬರನ್ನು ಕರೆದು ಮಾತನಾಡಿಸುವ ಮೂಲಕ ಸುದ್ದಿಯಾಗಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ,50 ವರ್ಷದ ಕ್ರಿಕೆಟಿಗ ಈ ವಿಡಿಯೊವನ್ನು ಪೋಸ್ಟ್​ ಮಾಡಿದ್ದಾರೆ. ಕ್ರಿಕೆಟ್ ದೇವರ ಪ್ರೀತಿಗೆ ಸೋಶಿಯಲ್​ ಮೀಡಿಯಾಗಲ್ಲಿ ದೊಡ್ಡ ಪ್ರಮಾಣದಲ್ಲಿ ಮೆಚ್ಚುಗೆ ವ್ಯಕ್ತಗೊಂಡಿದೆ. ಸಚಿನ್​ ಅವರು ಫೆಬ್ರವರಿ 1 ರಂದು ಅಭಿಮಾನಿಯೊಂದಿಗಿನ ಸಂವಾದ ನಡೆಸುವ ಸಣ್ಣ ವೀಡಿಯೊವನ್ನು ಹಂಚಿಕೊಂಡಿದ್ದಾದ್ದಾರೆ.

ವೀಡಿಯೊದಲ್ಲಿ, ಸಚಿನ್ ತೆಂಡೂಲ್ಕರ್ ತಮ್ಮ ಅಭಿಮಾನಿಯೊಂದಿಗೆ ಸಂಭಾಷಣೆಯಲ್ಲಿ ತೊಡಗಿರುವುದನ್ನು ಕಾಣಬಹುದು. ಅಭಿಮಾನಿಗೆ ಆಟೋಗ್ರಾಫ್ ನೀಡುವ ಮೊದಲು ಒಟ್ಟಿಗೆ ಫೋಟೋಗೆ ಪೋಸ್ ಕೂಡ ಕೊಟ್ಟಿದ್ದಾರೆ. ಅದಕ್ಕವರು ಸಚಿನ್​ ಭೇಟಿಯಾದ ತೆಂಡೂಲ್ಕರ್​ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.

ಅಭಿಮಾನಿಯೊಂದಿಗೆ ಸಂವಾದ ನಡೆಸಿದ ಸಚಿನ್ ತೆಂಡೂಲ್ಕರ್

ಫೆಬ್ರವರಿ 1 ರಂದು ಸಚಿನ್ ತೆಂಡೂಲ್ಕರ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಒಂದೂವರೆ ನಿಮಿಷದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ತಮ್ಮ ಅಭಿಮಾನಿಯೊಂದಿಗೆ ಸಂವಹನ ನಡೆಸುವುದನ್ನು ಕಾಣಬಹುದು.

“ತೆಂಡೂಲ್ಕರ್, ಐ ಮಿಸ್ ಯೂ” ಎಂಬ ವಾಕ್ಯವನ್ನು ಬರೆದ ಮುಂಬೈ ಇಂಡಿಯನ್ಸ್ ಜರ್ಸಿಯನ್ನು ಧರಿಸಿದ್ದ ಟಿಶರ್ಟ್​ ಹಾಕಿಕೊಂಡು ಅಭಿಮಾನಿ ಸ್ಕೂಟರ್​ನಲ್ಲಿ ಹೋಗುತ್ತಿದ್ದರು. ಆತನ ಪಕ್ಕದಲ್ಲಿಯೇ ಕಾರು ನಿಲ್ಲಿಸಿದ ಸಚಿನ್ ತೆಂಡೂಲ್ಕರ್​ ಏರ್​ಪೋರ್ಟ್​ಗೆ ದಾರಿ ಕೇಳುವಂತೆ ನಟಿಸುತ್ತಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಬೈಕ್ ನಲ್ಲಿ ಹೋಗುತ್ತಿದ್ದ ಅಭಿಮಾನಿಯನ್ನ ಅಚ್ಚರಿಗೊಳಿಸಿದ್ದಾರೆ. ಬದಲಿಗೆ ಅವರೊಂದಿಗೆ ಸಾಕಷ್ಟು ಮಾತನಾಡಿದರು. ಆ ವಿಡಿಯೊವನ್ನು ಭಾರತೀಯ ದಂತಕಥೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ:

ನನ್ನ ಮೇಲೆ ಜನರು ಇಷ್ಟೊಂದು ಪ್ರೀತಿಯನ್ನು ತೋರುವುದನ್ನು ನೋಡಿದಾಗ ನನ್ನ ಹೃದಯವು ತುಂಬಿ ಬರುತ್ತದೆ. ಅನಿರೀಕ್ಷಿತವಾಗಿ ಎದುರಾಗುವ ಜನರ ಪ್ರೀತಿಯೇ ಜೀವನವನ್ನು ತುಂಬಾ ವಿಶೇಷಗೊಳಿಸುತ್ತದೆ ಎಂದು ಸಚಿನ್​ ಹೇಳಿಕೊಂಡಿದ್ದಾರೆ. ಇದೇ ವೇಳೆ ಸಚಿನ್​ ಅವರು ಹೆಲ್ಮೆಟ್ ಹಾಕಿಕೊಂಡೇ ಬೈಕ್​ ರೈಡ್ ಮಾಡುತ್ತಿದ್ದ ಅಭಿಮಾನಿಯ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ. ಚೆನ್ನಾಗಿರಿ ಎಂದು ಹಾರೈಕೆಯನ್ನೂ ತಿಳಿಸುತ್ತಾರೆ.

ಕ್ರಿಕೆಟ್​ ಲೀಗ್​ನ ಮುಖ್ಯಸ್ಥರಾದ ಸಚಿನ್ ತೆಂಡೂಲ್ಕರ್

ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ಐಎಸ್​ಪಿಎಲ್) ತನ್ನ ಎಲ್ಲಾ ಆರು ಫ್ರಾಂಚೈಸಿಗಳ ಸಹ ಮಾಲೀಕರ ಹೆಸರುಗಳನ್ನು ಬಹಿರಂಗಪಡಿಸಿದೆ. ಮುಂಬೈನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಸೇರಿದಂತೆ ಹಲವಾರು ಪ್ರಮುಖ ಐಎಸ್​ಪಿಎಲ್ ಕೋರ್ ಕಮಿಟಿ ಸದಸ್ಯರು ಭಾಗವಹಿಸಿದ್ದರು. ಅದರಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು ಸಚಿನ್ ತೆಂಡೂಲ್ಕರ್ ಅವರು. ಅವರಲ್ಲದೆ ಆಶಿಶ್ ಶೆಲಾರ್, ಅಮೋಲ್ ಕಾಳೆ, ಸೂರಜ್ ಸಮತ್ ಮತ್ತು ಭಾರತದ ಮಾಜಿ ಮುಖ್ಯ ಕೋಚ್ ಮತ್ತು ಭಾರತ ಕ್ರಿಕೆಟ್​ ತಂಡದ ದಂತಕಥೆ ರವಿ ಶಾಸ್ತ್ರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : Fact Check: ಮೊಹಮ್ಮದ್​ ಶಮಿ-ಸಾನಿಯಾ ಮಿರ್ಜಾ ನಿಶ್ಚಿತಾರ್ಥ ಫೋಟೊ ವೈರಲ್​; ಅಸಲಿಯತ್ತು ಇಲ್ಲಿದೆ 

ಹೈದರಾಬಾದ್, ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತಾ ಮತ್ತು ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) ಆರು ಐಎಸ್​ಪಿಎಲ್ ತಂಡಗಳಾಗಿವೆ. ರಾಮ್ ಚರಣ್ (ಹೈದರಾಬಾದ್), ಅಮಿತಾಭ್ ಬಚ್ಚನ್ (ಮುಂಬೈ), ಹೃತಿಕ್ ರೋಷನ್ (ಬೆಂಗಳೂರು), ಸೂರ್ಯ (ಚೆನ್ನೈ), ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ (ಕೋಲ್ಕತ್ತಾ) ಮತ್ತು ಅಕ್ಷಯ್ ಕುಮಾರ್ (ಶ್ರೀನಗರ) ಸೇರಿದಂತೆ ಭಾರತದ ಮನರಂಜನಾ ಉದ್ಯಮದ ಕೆಲವು ದೊಡ್ಡ ಸೂಪರ್​ ಸ್ಟಾರ್​ಗಳು ಈ ಎಲ್ಲಾ ತಂಡಗಳ ಸಹ ಮಾಲೀಕರಾಗಿದ್ದಾರೆ.

ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಪೋಷಿಸುವ ಉದ್ದೇಶದೊಂದಿಗೆ ಮಾಡಿರುವ ಸಾಕಾರಗೊಳಿಸುವಲ್ಲಿ ಸಹ ಮಾಲೀಕರು ದೊಡ್ಡ ಪಾತ್ರ ವಹಿಸುತ್ತಾರೆ ಎಂದು ಐಎಸ್​​ಪಿಎಲ್​ ಕೋರ್ ಕಮಿಟಿ ಸದಸ್ಯರಾಗಿರುವ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಇದನ್ನೂ ಓದಿ : Ind vs Eng : ಮೂರನೇ ಪಂದ್ಯಕ್ಕೂ ಜಡೇಜಾ ಅಲಭ್ಯ; ರಾಹುಲ್ ಕತೆ ಏನು?

ಐಎಸ್​ಪಿಎಲ್​ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿನ್​ ತೆಂಡೂಲ್ಕರ್​ ಟೆನಿಸ್ ಚೆಂಡಿನೊಂದಿಗೆ ವೃತ್ತಿಪರ ಲೀಗ್ ಸ್ವರೂಪದ ಮೂಲಕ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಹುಡುಕುವ ಐಎಸ್​ಪಿಎಲ್​ ಪ್ರಮುಖ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಸಹ-ಮಾಲೀಕರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಆಟದೊಂದಿಗಿನ ಈ ಹೊಸ ಒಡನಾಟವನ್ನು ಪ್ರಾರಂಭಿಸುತ್ತಿರುವ ಅವರಿಗೆ ನಾನು ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.

Exit mobile version