ತಿರುವನಂತಪುರಂ: ಕೇರಳದ ಸವ್ಯಸಾಚಿ ಕ್ರಿಕೆಟಿಗ ಸಂಜು ಸ್ಯಾಮ್ಸನ್(Sanju Samson) ಅವರು ತಮಗೆ ಕ್ರಿಕೆಟ್ನಿಂದ ಬರುತ್ತಿರುವ ಆಧಾಯದಲ್ಲಿ ಯುವ ಮತ್ತು ಪ್ರತಿಭಾವಂತ ಕ್ರಿಕೆಟಿಗರ ತರಬೇತಿಗೆ ನೆರವು ನೀಡಿವ ಮೂಲಕ ಎಲ್ಲರ ಹೈದಯ ಗೆದ್ದಿದ್ದಾರೆ. ಸಂಜು ಅವರು ಬಡ ಕ್ರಿಕೆಟ್ ಪ್ರತಿಭೆಗಳ ತರಬೇತಿಗೆ ಹಣಕಾಸಿನ ನೆರವು ನೀಡುತ್ತಿರುವ ವಿಚಾರವನ್ನು ರಾಜಸ್ಥಾನ ಫ್ರಾಂಚೈಸಿಯ ಫಿಟ್ನೆಸ್ ತರಬೇತುದಾರ ರಾಜಮಣಿ ಪ್ರಭು (Rajamani Prabhu) ಅವರು ಬಹಿರಂಗ ಪಡಿಸಿದ್ದಾರೆ.
ವಿಶ್ವದ ಕ್ಯಾಶ್ ರಿಚ್ ಲೀಗ್ಗಳಲ್ಲಿ ಒಂದಾದ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್(rajasthan royals) ಪರ ಆಡುತ್ತಿರುವ ಸಂಜು ಸ್ಯಾಮ್ಸನ್ ಅವರು ಸದ್ಯ ಗಳಿಸುತ್ತಿರುವ 15 ಕೋಟಿ ವೇತನದಲ್ಲಿ ಯುವ ಮತ್ತು ಪ್ರತಿಭಾವಂತ ಕ್ರಿಕೆಟಿಗರಿಗೆ 2 ಕೋಟಿ ನೆರವಿನ ಹಸ್ತ ಚಾಚುತ್ತಿದ್ದಾರೆ. ಈ ಮೂಲಕ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವಂತ ಕೆಲಸವನ್ನು ಮಾಡುತ್ತಿದ್ದಾರೆ. ಟೀಮ್ ಇಂಡಿಯಾದಲ್ಲಿ ತಮಗೆ ಸರಿಯಾದ ಅವಕಾಶ ಸಿಗದಿದ್ದರೂ ಯುವ ಆಟಗಾರರು ಬೆಳಕಿಗೆ ಬರುವಲ್ಲಿ ಶ್ರಮಿಸುತ್ತಿರುವ ಅವರ ಗುಣವನ್ನು ನಿಜಕ್ಕೂ ಮೆಚ್ಚಲೇ ಬೇಕು.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ಧೋನಿಯಂತೆ ಶಾಂತ ಸ್ವಾಭಾವದಿಂದ ಗಮನ ಸೆಳೆದಿರುವ ಸಂಜು ಸ್ಯಾಮ್ಸನ್ (Sanju Samson)ಗೆ ವಿಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಈಗಾಗಲೇ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರ ಜತೆಗೆ ಇದೇ ವರ್ಷ ನಡೆಯುವ ಏಕದಿನ ವಿಶ್ವ ಕಪ್ ಟೂರ್ನಿಯಲ್ಲಿಯಲ್ಲಿಯೂ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಗಲಿದೆ ಎಂದು ವರದಿಯಾಗಿದೆ. ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ರಿಷಭ್ ಪಂತ್ ಸದ್ಯ ಕ್ರಿಕೆಟ್ಗೆ ಮರಳಲು ಇನ್ನೂ ಹೆಚ್ಚಿನ ಸಮಯ ಬೇಕಿರುವುದರಿಂದ ಈ ಸ್ಥಾನಕ್ಕೆ ಸಂಜು ಸೂಕ್ತ ಎಂಬುದು ಹಕವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ ICC World Cup 2023: ಏಕದಿನ ವಿಶ್ವಕಪ್ ತಂಡದಲ್ಲಿ ಸಂಜು ಸ್ಯಾಮ್ಸನ್ಗೆ ಅವಕಾಶ
ಸಂಜು ಸ್ಯಾಮ್ಸನ್ ಅವರು ಯುವ ಪ್ರತಿಭೆಗಳ ನೆರವಿಗೆ ನಿಂತಿರುವ ವಿಚಾರದ ಬಗ್ಗೆ ಮಾಹಿತಿ ನೀಡಿರುವ ರಾಜಮಣಿ ಪ್ರಭು,” 2013ರಲ್ಲಿ ರಾಜಸ್ಥಾನ್ ತಂಡಕ್ಕೆ ಸೇರ್ಪಡೆಯಾದ ಸಂಜು ಹಲವು ವರ್ಷಗಳಿಂದ ಬಡ ಕ್ರಿಕೆಟ್ ಪ್ರತಿಭೆಗಳಿಗೆ ಆರ್ಥಿಕ ಸಹಾಯ ಮಾಡುತ್ತಲೇ ಬರುತ್ತಿದ್ದಾರೆ. ಅವರ ಈ ಗುಣ ನಿಜಕ್ಕೂ ಶ್ರೇಷ್ಠ” ಎಂದು ಹೇಳಿದರು.