Site icon Vistara News

IPL 2023 : ಸಂಜು, ಶಿಮ್ರೋನ್ ಅಬ್ಬರದ ಬ್ಯಾಟಿಂಗ್​, ಗುಜರಾತ್​ ವಿರುದ್ಧ ರಾಜಸ್ಥಾನ್​ ತಂಡಕ್ಕೆ 3 ವಿಕೆಟ್​ ವಿಜಯ

Sanju, Shimron's brilliant batting, 3 wicket victory for Rajasthan team against Gujarat

#image_title

ಅಹಮದಾಬಾದ್​: ಸಂಜು ಸ್ಯಾಮ್ಸನ್​ (60) ಹಾಗೂ ಶಿಮ್ರೋನ್​ ಹೆಟ್ಮಾಯರ್​ (ಅಜೇಯ 50) ಅವರ ಅರ್ಧ ಶತಕಗಳ ನೆರವು ಪಡೆದ ರಾಜಸ್ಥಾನ್​ ರಾಯಲ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ (IPL 2023) 23ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್ ಟೈಟನ್​​ ವಿರುದ್ಧ 3 ವಿಕೆಟ್​ಗಳ ವಿಜಯ ಸಾಧಿಸಿತು. ಈ ಮೂಲಕ ಗೆಲುವಿನ ಹಳಿಯಲ್ಲಿ ಸಾಗುತ್ತಿದ್ದ ಗುಜರಾತ್​ ಸೋಲಿನ ದವಡೆಗೆ ಸಿಲುಕಿದರೆ, ರಾಜಸ್ಥಾನ್​ ಬಳಗ ಹ್ಯಾಟ್ರಿಕ್ ವಿಜಯ ಸವಿಯುಂಡಿತು. ಅಲ್ಲದೆ ಕಳೆದ ಆವೃತ್ತಿಯ ಐಪಿಎಲ್​ನ ಫೈನಲ್​ ಪಂದ್ಯದಲ್ಲಿ ಸೋಲುಣಿಸಿದ್ದ ಹಾರ್ದಿಕ್​ ಪಾಂಡ್ಯ ಬಳಗದ ವಿರುದ್ಧ ಸೇಡು ತೀರಿಸಿಕೊಂಡಿತು.

ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್​ ಮಾಡಲು ಆಹ್ವಾನ ಪಡೆದ ಹಾಲಿ ಚಾಂಪಿಯನ್ ಗುಜರಾತ್​ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 177 ರನ್​ ಬಾರಿಸಿತು. ಪ್ರತಿಯಾಗಿ ಆಡಿದ ಗುಜರಾತ್​ ತಂಡ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್​ ನಷ್ಟಕ್ಕೆ 179 ರನ್ ಬಾರಿಸಿ ಗೆಲುವು ಸಾಧಿಸಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ರಾಜಸ್ಥಾನ್​ ತಂಡ 4 ರನ್​ಗಳಿಗೆ 2 ವಿಕೆಟ್​ ಕಳೆದುಕೊಳ್ಳುವ ಮೂಲಕ ನಿರಾಸೆ ಎದುರಿಸಿತು. ಯಶಸ್ವಿ ಜೈಸ್ವಾಲ್​ 1 ಹಾಗೂ ಜೋಸ್ ಬಟ್ಲರ್​ ಶೂನ್ಯಕ್ಕೆ ಔಟಾದರು. ಬಳಿಕ ಬಂದ ದೇವದತ್​ ಪಡಿಕ್ಕಲ್​ 26 ರನ್ ಬಾರಿಸಿದರೂ ಅದರಲ್ಲಿ ವೇಗವಿರಲಿಲ್ಲ. ರಿಯಾನ್​ ಪರಾಗ್​ 5 ರನ್​ಗೆ ವಿಕೆಟ್​ ಒಪ್ಪಿಸಿದರು. ಇದರಿಂದಾಗಿ 10.3 ಓವರ್​​ಗಳಲ್ಲಿ 55 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿತು.

ಈ ವೇಳೆ ಜತೆಯಾದ ಸಂಜು ಸ್ಯಾಮ್ಸನ್​ ಹಾಗೂ ಶಿಮ್ರೋನ್ ಹೆಟ್ಮಾರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ, ದೊಡ್ಡ ಹೊಡೆತಕ್ಕೆ ಮುಂದಾದ ಸ್ಯಾಮ್ಸನ್​ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ದ್ರುವ ಜುರೆಲ್​ (18) ಹಾಗೂ ಆರ್. ಅಶ್ವಿನ್​ (10) ಗೆಲುವಿಗೆ ತಮ್ಮ ಕೊಡುಗೆಗಳನ್ನು ಕೊಟ್ಟರು.

ಗಿಲ್​, ಮಿಲ್ಲರ್​ ಆಟ

ಇನಿಂಗ್ಸ್ ಆರಂಭಿಸಿದ ಗುಜರಾತ್​ ತಂಡ ವೃದ್ಧಿಮಾನ್ ಸಾಹ (4ರನ್​) ವಿಕೆಟ್ ಪತನದೊಂದಿಗೆ ಕೆಟ್ಟ ಆರಂಭ ಪಡೆಯಿತು. ಬಳಿಕ ಸಾಯಿ ಸುದರ್ಶನ್ (20 ರನ್​)​ ಮತ್ತು ಮತ್ತು ಶುಭ್​ಮನ್​ ಗಿಲ್​ (45ರನ್​ ) ರನ್​ ಪೇರಿಸಲು ಆರಂಭಿಸಿದರು. ಆದರೆ, ಬಟ್ಲರ್​ ಅವರ ನಿಖ ಥ್ರೋ ಫಲವಾಗಿ ವಿಕೆಟ್​ಕೀಪರ್​​ ಸಂಜು ಸ್ಯಾಮ್ಸನ್​ ಸಾಯಿ ಸುದರ್ಶನ್ ಅವರನ್ನು ರನ್​ಔಟ್​ ಮಾಡಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ನಾಯಕ ಹಾರ್ದಿಕ್ ಪಾಂಡ್ಯ ರನ್​ ಗಳಿಕೆಗೆ ವೇಗ ಕೊಟ್ಟರು. ಅವರು 19 ಎಸೆತಗಳಲ್ಲಿ 28 ರನ್ ಬಾರಿಸಿದರು. ಈ ವೇಳೆ ಗುಜರಾತ್​ ತಂಡ 3 ವಿಕೆಟ್​ ನಷ್ಟಕ್ಕೆ 91 ರನ್​ ಬಾರಿಸಿತು.

ಪಾಂಡ್ಯ ವಿಕೆಟ್​ ಪತನಗೊಂಡ ಬಳಿಕ ಆಡಲು ಬಂದ ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟರ್​ ಡೇವಿಡ್​ ಮಿಲ್ಲರ್​ ಭರ್ಜರಿಯಾಗಿ ಬ್ಯಾಟ್​ ಬೀಸಿ 46 ರನ್ ಬಾರಿಸಿದರು. ಏತನ್ಮಧ್ಯೆ, ಶುಭ್​ಮನ್​ ಗಿಲ್​ ಸಂದೀಪ್ ಶರ್ಮಾಗೆ ವಿಕೆಟ್​ ಒಪ್ಪಿಸಿದರು. ಆ ಬಳಿಕ ಆಡಲು ಬಂದ ಅಭಿನವ್​ ಮನೋಹರ್​ 13 ಎಸೆತಗಳಲ್ಲಿ 27 ರನ್​ ಬಾರಿಸಿ ಮಿಂಚಿದರು. ಅವರ ಇನಿಂಗ್ಸ್​ನಲ್ಲಿ 3 ಸಿಕ್ಸರ್​ಗಳಿದ್ದವು.

ಕೊನೇ ಹಂತದಲ್ಲ ಅವರಿಬ್ಬರೂ ಔಟಾದರೂ ಗುಜರಾತ್​ ತಂಡ 170 ರನ್​ಗಳ ಗಡಿ ದಾಟಿ ಎದುರಾಳಿ ತಂಡಕ್ಕೆ ಸ್ಪರ್ಧಾತ್ಮ ಗುರಿಯನ್ನು ಒಡ್ಡಿತ್ತು. ರಾಜಸ್ಥಾನ್ ಪರ ಬೌಲಿಂಗ್​ನಲ್ಲಿ ಸಂದೀಪ್ ಶರ್ಮಾ 2 ವಿಕೆಟ್ ಉರುಳಿಸಿದರೆ, ಟ್ರೆಂಟ್ ಬೌಲ್ಟ್​, ಆ್ಯಡಂ ಜಂಪಾ, ಯಜ್ವೇಂದ್ರ ಚಹಲ್​ ತಲಾ ಒಂದು ವಿಕೆಟ್​ ಪಡೆದರು.

Exit mobile version