ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ವರ್ಲ್ಡ್ 10ಕೆ ಬೆಂಗಳೂರು (TCS World 10K Bengaluru ) ಇದರ 15ನೇ ಆವೃತ್ತಿಯ ಎಲೈಟ್ ವಿಭಾಗದಲ್ಲಿ ಕೀನ್ಯಾ ಸಬಾಸ್ಟಿಯನ್ ಸಾವ್ ಪುರುಷರ ವಿಭಾಗದ ಪ್ರಶಸ್ತಿ ಗೆದ್ದರೆ, ಇಥಿಯೋಪಿಯಾದ ಸೆಹೇ ಗೆಮೆಚು ಮಹಿಳಾ ವಿಭಾಗದ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಶ್ವದ ಪ್ರತಿಷ್ಥಿತ ಮ್ಯಾರಾಥಾನ್ ಓಟದಲ್ಲಿ ಎರಡನೇ ಬಾರಿಗೆ ಪಾಲ್ಗೊಂಡಿದ್ದ ಮುರಳಿ ಗವಿತ್ ಭಾರತೀಯ ಪುರುಷರ ಪ್ರಶಸ್ತಿಯನ್ನು ಗೆದ್ದು, ಭಾರತಿಯ ಮಹಿಳೆಯರ ವಿಭಾಗದಲ್ಲಿ ತಮ್ಶಿ ಸಿಂಗ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಕಳೆದ ತಿಂಗಳು ಜರ್ಮನಿಯಲ್ಲಿ ನಡೆದ 10 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದಿದ್ದ ಸೆಬಾಸ್ಟಿಯನ್ ಸಾವ್ ಭಾನುವಾರ ಬೆಳಗ್ಗೆ ಅದ್ಭುತ ಪ್ರದರ್ಶನ ನೀಡುವ ಮೂಲಕ 27:58.24 ನಿಮಿಷಗಳಲ್ಲಿ ಓಟ ಮುಗಿಸಿದರು. ಗೆಮೆಚು 31:38 ನಿಮಿಷದಲ್ಲಿ ಗುರಿ ತಲುಪಿದರು. ಈ ಮೂಲಕ ಅವರಿಬ್ಬರೂ 21,55,543 ರೂಪಾಯಿ ಬಹುಮಾನ ಗೆದ್ದರು. (26 ಸಾವಿರ ರೂ.)
ಮಹಿಳೆಯರ ಓಟದಲ್ಲಿ ಇಥಿಯೋಪಿಯನ್ ಫೊಟ್ಯೆನ್ ಟೆಸಾಫೆ ಗೆಮೆಚುಗಿಂತ ನಾಲ್ಕು ಸೆಕೆಂಡುಗಳ ಹಿಂದೆ ಉಳಿದ ಎರಡನೇ ಸ್ಥಾನ ಪಡೆದರು. ಅನುಭವಿ ಡೇರಾ ದಿಡಾ ವಿಜೇತರಿಗಿಂತ ಪ್ರಶಸ್ತಿ ವಿಜೇತ ಓಟಗಾರ್ತಿಗಿತಂ ಕೇವಲ ಏಳು ಸೆಕೆಂಡುಗಳಷ್ಟು ಹಿಂದೆ ಉಳಿದರು.
2019ರಲ್ಲಿ ಬೆಂಗಳೂರಿನ ಓಟದಲ್ಲಿ ಗೆಮೆಚು ಆರನೇ ಸ್ಥಾನ ಪಡೆದಿದ್ದರು. ” ಈ ಗೆಲುವು ನನ್ನ ನಿರೀಕ್ಷೆಯಾಗಿತ್ತು. 2019 ರಲ್ಲಿ, ನಾನು ಒಂದು ತಪ್ಪು ಮಾಡಿದ್ದೆ. ಅದರ ಬಗ್ಗೆ ನನಗೆ ಅರಿವು ಇತ್ತು. ಟ್ರ್ಯಾಕ್ ಅನುಭವವು ಗೆಲುವಿಗೆ ಸಹಕಾರಿಯಾಯಿತು ಎಂದು ನಾನು ಭಾವಿಸುತ್ತೇನೆ” ಎಂದು ಅವರು ತಮ್ಮ ರೋಚಕ ಗೆಲುವಿನ ನಂತರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ ವರ್ಷದ ವಿಜೇತ ಮತ್ತು ಕೋರ್ಸ್ ದಾಖಲೆ ಹೊಂದಿರುವ ನಿಕೋಲಸ್ ಕಿಪ್ಕೊಕಿರ್ ನಾಲ್ಕನೇ ಸ್ಥಾನ ಪಡೆದರು. ಪುರುಷರ ರೇಸ್ನಲ್ಲಿ ಅಗ್ರ ನಾಲ್ಕು ಸ್ಥಾನ ಪಡೆದವರಲ್ಲಿ ಮೂವರು ಕೀನ್ಯಾದವರು.
ಬುರುಂಡಿದೇಶದ ರೊಡ್ರಿಗಸ್ ಕ್ವಿಜೆರಾ ಅವರಿಗಿಂತ ಮಿಲಿ ಸೆಕೆಂಡುಗಳ ಅಂತರದಲ್ಲಿ ಸಾವ್ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಗೆಲುವಿನ ಬಳಿಕ ಮಾತನಾಡಿದ ಅವರು “ಇದೇ ಮೊದಲ ಬಾರಿಗೆ ನಾನು ಇಲ್ಲಿಗೆ ಬಂದಿದ್ದೇನೆ. ನಾನು ಜರ್ಮನಿಯಲ್ಲಿ ಜಯ ಗಳಿಸುತ್ತಿರುವುದರಿಂದ ಓಟಕ್ಕೆ ಬರುವ ಬಗ್ಗೆ ನನಗೆ ವಿಶ್ವಾಸವಿತ್ತು. ಕೊನೆಯ ಎರಡು ಕಿಲೋಮೀಟರ್ ನಿಜವಾಗಿಯೂ ಕಠಿಣವಾಗಿತ್ತು. ಕೊನೆಯ 500 ಮೀಟರ್ ಓಟವೂ ತುಂಬಾ ಸವಾಲಿನದ್ದು, “ಎಂದು ಅವರು ಹೇಳಿದರು.
ಮುರಳಿ ಉತ್ತಮ ಪ್ರದರ್ಶನ
ಭಾರತದ ಅತ್ಯಂತ ಭರವಸೆಯ ದೂರ ಓಟಗಾರ ಮುರಳಿ 29:58.03 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರ ಸ್ಥಾನ ಪಡೆದರು. ಹರ್ಮನ್ಜೋತ್ ಸಿಂಗ್ ( 29:59.10 ನಿಮಿಷ) ಎರಡನೇ ಸ್ಥಾನ ಪಡೆದರೆ , ಉತ್ತಮ್ ಚಾಂದ್ 29:59.24 ನಿಮಿಷದೊಂದಿಗೆ ಮೂರನೇ ಸ್ಥಾನ ಪಡೆದರು.
ಇದು ಇಲ್ಲಿ ನನ್ನ ಎರಡನೇ ರೇಸ್ ಆಗಿತ್ತು. ನಾನು ಕೊನೆಯ ಬಾರಿಗೆ 2015 ರಲ್ಲಿ ಟಿಸಿಎಸ್ ವರ್ಲ್ಡ್ 10 ಕೆ ನಲ್ಲಿ ಭಾಗವಹಿಸಿದ್ದೆ. ನಾನು ಚೆನ್ನಾಗಿ ತರಬೇತಿ ಪಡೆಯುತ್ತಿದ್ದೇನೆ. ಇದು ನನ್ನ ವೈಯಕ್ತಿಕ ಅತ್ಯುತ್ತಮವಲ್ಲದಿದ್ದರೂ, ದೊಡ್ಡ ಗೆಲುವಿನಿಂದ ನನಗೆ ಸಂತೋಷವಾಗಿದೆ ಎಂದು ಮುರಳಿ ಹೇಳಿದ್ದಾರೆ.
19 ವರ್ಷದ ತಾಮ್ಶಿ ಸಿಂಗ್ ಮೊದಲ ಪಂದ್ಯದಲ್ಲೇ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿದರು. ಪೂನಂ ಸೋನುನೆ 34:29 ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರೆ, ಸೀಮಾ 34:30 ಸೆಕೆಂಡುಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು.
ರಾಜಧಾನಿ ಬೆಂಗಳೂರಿನಲ್ಲಿ ನಡೆದ 15ನೇ ಆವೃತ್ತಿಯಲ್ಲಿ 27,000 ಕ್ಕೂ ಹೆಚ್ಚು ಹವ್ಯಾಸಿಗಳು ರೋಡ್ ರೇಸ್ ನಲ್ಲಿ ಭಾಗವಹಿಸಿದರು. ಇದು ದೇಶದ ಫಿಟ್ನೆಸ್ ರೇಸ್ನಲ್ಲಿ ದಾಖಲೆಯಾಗಿದೆ.