sawe-gemechu-win-tcs-world-10k-bengaluru-crowns-in-sensational-style TCS World 10K Bengaluru : ಮ್ಯಾರಾಥಾನ್​ ಕಿರೀಟ ಮುಡಿಗೇರಿಸಿಕೊಂಡ ಸಾವ್, ಗೆಮೆಚು - Vistara News

ಕ್ರಿಕೆಟ್

TCS World 10K Bengaluru : ಮ್ಯಾರಾಥಾನ್​ ಕಿರೀಟ ಮುಡಿಗೇರಿಸಿಕೊಂಡ ಸಾವ್, ಗೆಮೆಚು

ರಾಜಧಾನಿ ಬೆಂಗಳೂರಿನಲ್ಲಿ ನಡೆದ 15ನೇ ಆವೃತ್ತಿಯಲ್ಲಿ 27,000 ಕ್ಕೂ ಹೆಚ್ಚು ಹವ್ಯಾಸಿಗಳು ರೋಡ್ ರೇಸ್ ನಲ್ಲಿ ಭಾಗವಹಿಸಿದರು. ಇದು ದೇಶದ ಫಿಟ್​​ನೆಸ್​ ರೇಸ್​ನಲ್ಲಿ ದಾಖಲೆಯಾಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ವರ್ಲ್ಡ್ 10ಕೆ ಬೆಂಗಳೂರು (TCS World 10K Bengaluru ) ಇದರ 15ನೇ ಆವೃತ್ತಿಯ ಎಲೈಟ್ ವಿಭಾಗದಲ್ಲಿ ಕೀನ್ಯಾ ಸಬಾಸ್ಟಿಯನ್ ಸಾವ್ ಪುರುಷರ ವಿಭಾಗದ ಪ್ರಶಸ್ತಿ ಗೆದ್ದರೆ, ಇಥಿಯೋಪಿಯಾದ ಸೆಹೇ ಗೆಮೆಚು ಮಹಿಳಾ ವಿಭಾಗದ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಶ್ವದ ಪ್ರತಿಷ್ಥಿತ ಮ್ಯಾರಾಥಾನ್​ ಓಟದಲ್ಲಿ ಎರಡನೇ ಬಾರಿಗೆ ಪಾಲ್ಗೊಂಡಿದ್ದ ಮುರಳಿ ಗವಿತ್ ಭಾರತೀಯ ಪುರುಷರ ಪ್ರಶಸ್ತಿಯನ್ನು ಗೆದ್ದು, ಭಾರತಿಯ ಮಹಿಳೆಯರ ವಿಭಾಗದಲ್ಲಿ ತಮ್ಶಿ ಸಿಂಗ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಕಳೆದ ತಿಂಗಳು ಜರ್ಮನಿಯಲ್ಲಿ ನಡೆದ 10 ಸಾವಿರ ಮೀಟರ್​ ಓಟದ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದಿದ್ದ ಸೆಬಾಸ್ಟಿಯನ್​ ಸಾವ್ ಭಾನುವಾರ ಬೆಳಗ್ಗೆ ಅದ್ಭುತ ಪ್ರದರ್ಶನ ನೀಡುವ ಮೂಲಕ 27:58.24 ನಿಮಿಷಗಳಲ್ಲಿ ಓಟ ಮುಗಿಸಿದರು. ಗೆಮೆಚು 31:38 ನಿಮಿಷದಲ್ಲಿ ಗುರಿ ತಲುಪಿದರು. ಈ ಮೂಲಕ ಅವರಿಬ್ಬರೂ 21,55,543 ರೂಪಾಯಿ ಬಹುಮಾನ ಗೆದ್ದರು. (26 ಸಾವಿರ ರೂ.)

ಮಹಿಳೆಯರ ಓಟದಲ್ಲಿ ಇಥಿಯೋಪಿಯನ್ ಫೊಟ್ಯೆನ್ ಟೆಸಾಫೆ ಗೆಮೆಚುಗಿಂತ ನಾಲ್ಕು ಸೆಕೆಂಡುಗಳ ಹಿಂದೆ ಉಳಿದ ಎರಡನೇ ಸ್ಥಾನ ಪಡೆದರು. ಅನುಭವಿ ಡೇರಾ ದಿಡಾ ವಿಜೇತರಿಗಿಂತ ಪ್ರಶಸ್ತಿ ವಿಜೇತ ಓಟಗಾರ್ತಿಗಿತಂ ಕೇವಲ ಏಳು ಸೆಕೆಂಡುಗಳಷ್ಟು ಹಿಂದೆ ಉಳಿದರು.

2019ರಲ್ಲಿ ಬೆಂಗಳೂರಿನ ಓಟದಲ್ಲಿ ಗೆಮೆಚು ಆರನೇ ಸ್ಥಾನ ಪಡೆದಿದ್ದರು. ” ಈ ಗೆಲುವು ನನ್ನ ನಿರೀಕ್ಷೆಯಾಗಿತ್ತು. 2019 ರಲ್ಲಿ, ನಾನು ಒಂದು ತಪ್ಪು ಮಾಡಿದ್ದೆ. ಅದರ ಬಗ್ಗೆ ನನಗೆ ಅರಿವು ಇತ್ತು. ಟ್ರ್ಯಾಕ್ ಅನುಭವವು ಗೆಲುವಿಗೆ ಸಹಕಾರಿಯಾಯಿತು ಎಂದು ನಾನು ಭಾವಿಸುತ್ತೇನೆ” ಎಂದು ಅವರು ತಮ್ಮ ರೋಚಕ ಗೆಲುವಿನ ನಂತರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಳೆದ ವರ್ಷದ ವಿಜೇತ ಮತ್ತು ಕೋರ್ಸ್ ದಾಖಲೆ ಹೊಂದಿರುವ ನಿಕೋಲಸ್ ಕಿಪ್ಕೊಕಿರ್ ನಾಲ್ಕನೇ ಸ್ಥಾನ ಪಡೆದರು. ಪುರುಷರ ರೇಸ್​ನಲ್ಲಿ ಅಗ್ರ ನಾಲ್ಕು ಸ್ಥಾನ ಪಡೆದವರಲ್ಲಿ ಮೂವರು ಕೀನ್ಯಾದವರು.

ಬುರುಂಡಿದೇಶದ ರೊಡ್ರಿಗಸ್ ಕ್ವಿಜೆರಾ ಅವರಿಗಿಂತ ಮಿಲಿ ಸೆಕೆಂಡುಗಳ ಅಂತರದಲ್ಲಿ ಸಾವ್ ಗೆಲುವು ಸಾಧಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ. ಗೆಲುವಿನ ಬಳಿಕ ಮಾತನಾಡಿದ ಅವರು “ಇದೇ ಮೊದಲ ಬಾರಿಗೆ ನಾನು ಇಲ್ಲಿಗೆ ಬಂದಿದ್ದೇನೆ. ನಾನು ಜರ್ಮನಿಯಲ್ಲಿ ಜಯ ಗಳಿಸುತ್ತಿರುವುದರಿಂದ ಓಟಕ್ಕೆ ಬರುವ ಬಗ್ಗೆ ನನಗೆ ವಿಶ್ವಾಸವಿತ್ತು. ಕೊನೆಯ ಎರಡು ಕಿಲೋಮೀಟರ್ ನಿಜವಾಗಿಯೂ ಕಠಿಣವಾಗಿತ್ತು. ಕೊನೆಯ 500 ಮೀಟರ್ ಓಟವೂ ತುಂಬಾ ಸವಾಲಿನದ್ದು, “ಎಂದು ಅವರು ಹೇಳಿದರು.

ಮುರಳಿ ಉತ್ತಮ ಪ್ರದರ್ಶನ

ಭಾರತದ ಅತ್ಯಂತ ಭರವಸೆಯ ದೂರ ಓಟಗಾರ ಮುರಳಿ 29:58.03 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರ ಸ್ಥಾನ ಪಡೆದರು. ಹರ್ಮನ್​ಜೋತ್​ ಸಿಂಗ್ ( 29:59.10 ನಿಮಿಷ) ಎರಡನೇ ಸ್ಥಾನ ಪಡೆದರೆ , ಉತ್ತಮ್ ಚಾಂದ್ 29:59.24 ನಿಮಿಷದೊಂದಿಗೆ ಮೂರನೇ ಸ್ಥಾನ ಪಡೆದರು.

ಇದು ಇಲ್ಲಿ ನನ್ನ ಎರಡನೇ ರೇಸ್ ಆಗಿತ್ತು. ನಾನು ಕೊನೆಯ ಬಾರಿಗೆ 2015 ರಲ್ಲಿ ಟಿಸಿಎಸ್ ವರ್ಲ್ಡ್ 10 ಕೆ ನಲ್ಲಿ ಭಾಗವಹಿಸಿದ್ದೆ. ನಾನು ಚೆನ್ನಾಗಿ ತರಬೇತಿ ಪಡೆಯುತ್ತಿದ್ದೇನೆ. ಇದು ನನ್ನ ವೈಯಕ್ತಿಕ ಅತ್ಯುತ್ತಮವಲ್ಲದಿದ್ದರೂ, ದೊಡ್ಡ ಗೆಲುವಿನಿಂದ ನನಗೆ ಸಂತೋಷವಾಗಿದೆ ಎಂದು ಮುರಳಿ ಹೇಳಿದ್ದಾರೆ.

19 ವರ್ಷದ ತಾಮ್ಶಿ ಸಿಂಗ್ ಮೊದಲ ಪಂದ್ಯದಲ್ಲೇ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿದರು. ಪೂನಂ ಸೋನುನೆ 34:29 ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರೆ, ಸೀಮಾ 34:30 ಸೆಕೆಂಡುಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು.

ರಾಜಧಾನಿ ಬೆಂಗಳೂರಿನಲ್ಲಿ ನಡೆದ 15ನೇ ಆವೃತ್ತಿಯಲ್ಲಿ 27,000 ಕ್ಕೂ ಹೆಚ್ಚು ಹವ್ಯಾಸಿಗಳು ರೋಡ್ ರೇಸ್ ನಲ್ಲಿ ಭಾಗವಹಿಸಿದರು. ಇದು ದೇಶದ ಫಿಟ್​​ನೆಸ್​ ರೇಸ್​ನಲ್ಲಿ ದಾಖಲೆಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Urvashi Rautela: ಕ್ರಿಕೆಟಿಗರಾದ ಪಂತ್​,ನಸೀಮ್​ಗೆ ಕೈಕೊಟ್ಟು ಖ್ಯಾತ ಫುಟ್ಬಾಲರ್​ ಜತೆ ಡೇಟಿಂಗ್ ಆರಂಭಿಸಿದ ಊರ್ವಶಿ ರೌಟೇಲಾ​

ಕರೀಮ್ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರು ಸೌದಿ ಪ್ರೊ ಲೀಗ್‌ನಲ್ಲಿ ಚಾಂಪಿಯನ್‌ ಆಗಿರುವ ಅಲ್ ಇತ್ತಿಹಾದ್‌ (Al Ittihad) ಕ್ಲಬ್‌ ಪರ ಆಡುತ್ತಿದ್ದಾರೆ. ತಿಂಗಳಿಗೆ 148 ಕೋಟಿ ರೂ ಸಂಪಾದಿಸುತ್ತಾರೆ ಎಂದು ಅಂದಾಜಿಸಲಾಗಿದೆ.

VISTARANEWS.COM


on

Urvashi Rautela
Koo

ಮುಂಬಯಿ: ಇಷ್ಟು ದಿನ ಟೀಮ್​ ಇಂಡಿಯಾದ ಆಟಗಾರ ರಿಷಭ್​ ಪಂತ್​ ವಿಚಾರದಲ್ಲಿ ಸುದ್ದಿಯಲ್ಲಿದ್ದ ಊರ್ವಶಿ(Urvashi Rautela) ಇದೀಗ ಖ್ಯಾತ ಫುಟ್ಬಾಲ್​ ಆಟಗಾರನ ಬೆನ್ನು ಬಿದ್ದಿದ್ದಾರೆ. ಫ್ರಾನ್ಸ್ ತಂಡದ ಸ್ಟ್ರೈಕರ್ ಕರೀಂ ಬೆಂಜೆಮಾ(Karim Benzema) ಅವರ ಜತೆ ಬಹಳ ಆತ್ಮೀಯವಾಗಿರುವ ಫೋಟೊವನ್ನು ಶೇರ್​ ಮಾಡಿದ್ದಾರೆ. ಇದನ್ನು ಕಂಡು ನೆಟ್ಟಿಗರು ಊರ್ವಶಿ ಅವರು ಬೆಂಜೆಮಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕರೀಂ ಬೆಂಜೆಮಾ ಮತ್ತು ಊರ್ವಶಿ ರೌಟೇಲಾ ದುಬೈನಲ್ಲಿ ಭೇಟಿಯಾಗಿದ್ದಾರೆ. ಕರೀಮ್ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರು ಸೌದಿ ಪ್ರೊ ಲೀಗ್‌ನಲ್ಲಿ ಚಾಂಪಿಯನ್‌ ಆಗಿರುವ ಅಲ್ ಇತ್ತಿಹಾದ್‌ (Al Ittihad) ಕ್ಲಬ್‌ ಪರ ಆಡುತ್ತಿದ್ದಾರೆ. ತಿಂಗಳಿಗೆ 148 ಕೋಟಿ ರೂ ಸಂಪಾದಿಸುತ್ತಾರೆ. ರಿಯಲ್‌ ಮ್ಯಾಡ್ರಿಡ್‌ ಕ್ಲಬ್‌ ಪರ 14 ವರ್ಷಗಳ ಕಾಲ ಆಡಿದ ಬೆಂಜೆಮಾ ಮೂರು ವರ್ಷಗಳ ಒಪ್ಪಂದದಡಿ ಸೌದಿ ಅರೇಬಿಯಾದ ಅಲ್ ಇತ್ತಿಹಾದ್‌ ತಂಡದ ಪರ ಆಡಲಿದ್ದಾರೆ. ರೌಟೇಲಾ ಅವರ ಮಾಸಿಕ ಗಳಿಕೆ ಸುಮಾರು 45 ಲಕ್ಷ ಎಂದು ಅಂದಾಜಿಸಲಾಗಿದೆ. ನಟನೆಯ ಜತೆಗೆ ಜಾಹೀರಾತುಗಳಿಂದಲೂ ಹಣ ಸಂಪಾದಿಸುತ್ತಾರೆ. ಮುಂಬೈನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಖಾಸಗಿ ಐಷಾರಾಮಿ ಬಂಗಲೆ ಕೂಡ ಹೊಂದಿದ್ದಾರೆ.

ಇದನ್ನೂ ಓದಿ Urvashi Rautela : ನಟಿ ಊರ್ವಶಿಯ 24 ಕ್ಯಾರೆಟ್ ಚಿನ್ನವಿರುವ ಐಫೋನ್ ನಾಪತ್ತೆ

ಊರ್ವಶಿ ರೌಟೇಲಾ ಅವರು ಕರೀಂ ಬೆಂಜೆಮಾ ಜತೆಗೆ ತೆಗೆಸಿಕೊಂಡ ಫೋಟೊಗೆವನ್ನು ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳುವ ಜತೆಗೆ ಲವ್​ ಎಂದು ಬರೆದ ಹ್ಯಾಶ್​ ಟ್ಯಾಗ್​ ಕೂಡ ಬಳಸಿಕೊಂಡಿದ್ದಾರೆ. ಹೀಗಾಗಿ ನೆಟ್ಟಿಗರು ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ ಎಂದು ಹೇಳಿದ್ದಾರೆ.

ಆರಂಭದಲ್ಲಿ ರಿಷಭ್​ ಪಂತ್​ ಜತೆ ಇವರ ಹೆಸರು ಕೇಳಿಬರುತ್ತಿತ್ತು. ಪಂತ್​ ಹೋದಲೆಲ್ಲ ಇವರು ಕೂಡ ಹೋಗುತ್ತಿದ್ದರು. ಬಳಿಕ ಇವರಿಬ್ಬರ ಮಧ್ಯೆ ಜಗಳವಾಗಿದೆ ಎಂದು ಸುದ್ದಿಯಾಗಿತ್ತು. ಪಂತ್​ ಅವರು ಕಾರು ಅಪಘಾತಗೊಂಡಾದ ಚೇತರಿಕೆಗಾಗಿ ದೇವರಲ್ಲಿ ಪ್ರಾರ್ಧಿಸುವೆ ಎಂಬ ಪೋಸ್ಟರ್​ ಕೂಡ ಹಾಕಿದ್ದರು. ಇದಾದ ಬಳಿಕ ಪಾಕಿಸ್ತಾನ ಯುವ ಆಟ್ಆರ ನಸೀಮ್ ಶಾ ಜತೆಗೆ ಊರ್ವಶಿ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಇವರಿಬ್ಬರ ಇನ್​ಸ್ಟಾಗ್ರಾಮ್​ ಚಾಟ್​ ಮತ್ತು ಹಾರೈಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ಫುಟ್ಬಾಲ್​ ಆಟಗಾರನ ಬೆನ್ನು ಬಿದ್ದಿದ್ದಾರೆ ಎನ್ನಲಾಗಿದೆ.

Continue Reading

ಕ್ರೀಡೆ

IPL 2024: ಆರ್​ಸಿಬಿಗೆ ಬಿಗ್​ ಶಾಕ್​; ಐಪಿಎಲ್​ ಟೂರ್ನಿಯಿಂದ ಹೊರ ಬಿದ್ದ ಆಲ್​ರೌಂಡರ್​!

IPL 2024: ಗ್ಲೆನ್​​ ಮ್ಯಾಕ್ಸ್​ವೆಲ್​(Glenn Maxwell) ಅವರ ಕಳಪೆ ಪ್ರದರ್ಶನಕ್ಕೆ ಕುಡಿತದ ಚಟವೇ ಪ್ರಮುಖ ಕಾರಣ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ. ಪ್ರತಿ ದಿನ ಮ್ಯಾಕ್ಸ್​ವೆಲ್ ಕುಡಿಯುತ್ತಿದ್ದು ಇದರಿಂದ ಅವರಿಗೆ ಆಟದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

VISTARANEWS.COM


on

IPL 2024
Koo

ಬೆಂಗಳೂರು: ಸತತ ಸೋಲಿನಿಂದ ಕಂಗೆಟ್ಟಿರುವ ಆರ್​ಸಿಬಿ(RCB) ತಂಡಕ್ಕೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ. ತಂಡದ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್(Glenn Maxwell)​ ಅವರು ಗಾಯದಿಂದಾಗಿ ಸಂಪೂರ್ಣವಾಗಿ ಐಪಿಎಲ್​(IPL 2024) ಟೂರ್ನಿಯಿಂದ(Maxwell ruled out of IPL) ಹೊರ ಬೀಳಲಿದ್ದಾರೆ ಎಂದು ತಂಡದ ಮೂಲಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಮ್ಯಾಕ್ಸ್​ವೆಲ್ ಅವರು ಈ ಬಾರಿಯ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆಡಿದ 6 ಪಂದ್ಯಗಳಲ್ಲಿ 2 ಪಂದ್ಯ ಶೂನ್ಯ ಸಾಧನೆ. ಉಳಿದ ಎರಡಂಕಿ ದಾಟಿತ್ತು ಒಂದು ಪಂದ್ಯದಲ್ಲಿ ಮಾತ್ರ. ಬ್ಯಾಟಿಂಗ್​ ಮಾತ್ರವಲ್ಲದೆ ಫೀಲ್ಡಿಂಗ್​ನಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ 2 ಕ್ಯಾಚ್​ ಕೈಚೆಲ್ಲಿ ಪಂದ್ಯದ ಸೋಲಿಗೆ ಕಾರಣರಾಗಿದ್ದರು. ಇದೇ ಪಂದ್ಯದಲ್ಲಿ ಬೆರಳಿನ ಗಾಯಕ್ಕೂ ತುತ್ತಾಗಿದ್ದರು. ಒಟ್ಟಾರೆ ಅಸ್ಥಿರ ಪ್ರದರ್ಶನ ತೋರುತ್ತಿರುವ ಮ್ಯಾಕ್ಸ್​ವೆಲ್​ ಐಪಿಎಲ್​ನಿಂದ ಹೊರಬಿಳಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಫ್ರಾಂಚೈಸಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಕುಡಿತದ ಚಟಕ್ಕೆ ದಾಸನಾದ ಮ್ಯಾಕ್ಸ್​ವೆಲ್​?


ಗ್ಲೆನ್​​ ಮ್ಯಾಕ್ಸ್​ವೆಲ್​(Glenn Maxwell) ಅವರ ಕಳಪೆ ಪ್ರದರ್ಶನಕ್ಕೆ ಕುಡಿತದ ಚಟವೇ ಪ್ರಮುಖ ಕಾರಣ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ. ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನದ ಮೂಲಕ ಏಕಾಂಗಿಯಾಗಿ 200 ರನ್​ ಚಚ್ಚಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಅಲ್ಲದೆ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದರು. ಹೀಗಾಗಿ ಅವರ ಮೇಲೆ ಈ ಬಾರಿ ಆರ್​ಸಿಬಿ ಹೆಚ್ಚಿನ ನಿರೀಕ್ಷೆ ಇರಿಸಿತ್ತು. ಆದರೆ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಇದಕ್ಕೆ ಕುಡಿತದ ಚಟವೇ ಕಾರಣ ಎನ್ನಲಾಗಿದೆ.

ಇದನ್ನೂ ಓದಿ IPL 2024: ಆರ್​ಸಿಬಿ ಪ್ಲೇ ಆಫ್​ ಪ್ರವೇಶದ ಲೆಕ್ಕಾಚಾರ ಹೇಗಿದೆ?

ಪ್ರತಿ ದಿನ ಮ್ಯಾಕ್ಸ್​ವೆಲ್ ಕುಡಿಯುತ್ತಿದ್ದು ಇದರಿಂದ ಅವರಿಗೆ ಆಟದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಪಂದ್ಯದ ಮುನ್ನ ದಿನವೂ ಕೂಡ ಅವರು ಪಾನಮತ್ತರಾಗಿರುತ್ತಾರೆ ಎಂದು ಕೆಲ ಮೂಲಗಳು ತಿಳಿಸಿವೆ. ಇದೇ ವರ್ಷಾರಂಭದಲ್ಲಿ ಮ್ಯಾಕ್ಸ್​ವೆಲ್(Glenn Maxwell)​ ಅವರು ಕಂಠ ಪೂರ್ತಿ ಕುಡಿದು ಅಸ್ವಸ್ಥರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜನವರಿಯಲ್ಲಿ ಅಡಿಲೇಡ್​ನಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ಏರ್ಪಡಿಸಿದ್ದ ಮದ್ಯಪಾನ ಪಾರ್ಟಿಯಲ್ಲಿ ಅತಿಯಾಗಿ ಕುಡಿದ ಮ್ಯಾಕ್ಸ್​ವೆಲ್​ ಅನಾರೋಗ್ಯಕ್ಕೀಡಾದ್ದರು. ತಕ್ಷಣ ಅವರನ್ನು ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹಿಂದೊಮ್ಮೆ ಗೆಳೆಯನ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಮ್ಯಾಕ್ಸ್​ವೆಲ್​ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು. ಇದರಿಂದ ಬಿಗ್ ಬ್ಯಾಶ್ ಕೂಟದಿಂದ ಮ್ಯಾಕ್ಸ್​ವೆಲ್​ ಹೊರಬಿದ್ದಿದ್ದರು.

2022ರ ಮಾರ್ಚ್‌ 18ರಂದು ಮ್ಯಾಕ್ಸ್‌ವೆಲ್‌ ಮತ್ತು ವಿನಿ ರಾಮನ್‌ ತಮಿಳು ಸಂಪ್ರದಾಯದಂತೆ ಮದುವೆಯಾಗಿದ್ದರು. ಅಲ್ಲದೆ ಭಾರತೀಯ ಸಂಪ್ರದಾಯದಂತೆ ಸೀಮಂತ ಕೂಡ ಮಾಡಿ ಎಲ್ಲರ ಗಮನಸೆಳೆದಿದ್ದರು. ಈ ಜೋಡಿಗೆ ಮುದ್ದಾದ ಒಂದು ಗಂಡು ಮಗುವಿದೆ. ಮಗುವಿನ ಹೆಸರು ಲೋಗನ್‌ ಮಾವೆರಿಕ್‌(Logan Maverick).

Continue Reading

ಕ್ರೀಡೆ

Zaheer Khan: ಪತ್ನಿ ಜತೆ ಯುಗಾದಿ ಹಬ್ಬ ಆಚರಿಸಿದ ಜಹೀರ್​ ಖಾನ್​ಗೆ ನಿಂದನೆ

Zaheer Khan: ಬಾಲಿವುಡ್‌ ನಟಿ ಸಾಗರಿಕಾ ಘಾಟ್ಕೆ ಅವರನ್ನು ಜಹೀರ್​ ಅವರು 2017ರಲ್ಲಿ ವಿವಾಹವಾಗಿದ್ದರು. ಸಾಗರಿಕಾ ಘಾಟ್ಕೆ ಚಕ್‌ ದೇ ಇಂಡಿಯಾ ಸಿನಿಮಾ ಮೂಲಕ ಪ್ರಚಾರಕ್ಕೆ ಬಂದರು. ಅದಕ್ಕೂ ಮುನ್ನ ಅವರು ಭಾರತೀಯ ಹಾಕಿ ತಂಡದಲ್ಲಿ ಆಡಿದ್ದರು. ಮುಂದೆ ಬಾಲಿವುಡ್‌ನ‌ಲ್ಲಿ ಸಾಗರಿಕಾ ಹೆಸರು ಮಾಡಿದರು. ಇದೇ ಕಾರಣಕ್ಕೆ ಜಹೀರ್‌ ನಡುವೆ ಪ್ರೀತಿ ಬೆಳೆದಿತ್ತು.

VISTARANEWS.COM


on

zaheer khan
Koo

ಮುಂಬಯಿ: ಟೀಮ್​ ಇಂಡಿಯಾದ ಮಾಜಿ ವೇಗಿ, ವಿಶ್ವಕಪ್​ ವಿಜೇತ ತಂಡದ ಆಟಗಾರ ಜಹೀರ್​ ಖಾನ್​(Zaheer Khan) ಅವರು ಇತ್ತೀಗೆಚೆ ತಮ್ಮ ಪತ್ನಿ ಸಾಗರಿಕಾ ಘಾಟ್ಗೆ(Sagarika Ghatge) ಜತೆಗೂಡಿ ಹಿಂದುಗಳ ಹೊಸ ವರ್ಷವಾದ ಯುಗಾದಿ ಹಬ್ಬವನ್ನು ಆಚರಿಸಿಕೊಂಡಿದ್ದರು. ಇದರ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನು ಕಂಡ ಕೆಲ ಮುಸ್ಲಿಂ ಮೂಲಭೂತವಾದಿಗಳು ಜಹೀರ್​ ವಿರುದ್ಧ ಕೆಂಡಕಾರಿದ್ದಾರೆ.


ಅಂತರ್​ ಧಮೀರ್ಯ ವಿವಾಹವಾಗಿರುವ ಜಹೀರ್ ಹಿಂದುಗಳ ಹಬ್ಬವನ್ನು ಆಚರಿಸಿದ್ದಕ್ಕೆ ಜಹೀರ್​ ವಿರುದ್ಧ ದ್ವೇಷಪೂರಿತ ಕಾಮೆಂಟ್​ಗಳ ಮೂಲಕ ನಿಂದನೆ ಮಾಡಲಾಗಿದೆ. ಜಹೀರ್​ ಅವರನ್ನು ಮೂಲಭೂತವಾದಿಗಳು ಈ ರೀತಿ ನಿಂದನೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ದೀಪಾವಳಿ ಹಬ್ಬವನ್ನು ಆಚರಿಸಿದಾಗಲೂ​ ಇಂಥದ್ದೇ ನಿಂದನೆಗಳಿಗೆ ಒಳಪಟ್ಟಿದ್ದರು. ಯಾರು ಏನೇ ಅಂದರೂ ಕೂಡ ಜಹೀರ್ ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಳ್ಳ ತಮಗಿಷ್ಟದ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಬಾಲಿವುಡ್‌ ನಟಿ ಸಾಗರಿಕಾ ಘಾಟ್ಕೆ ಅವರನ್ನು ಜಹೀರ್​ ಅವರು 2017ರಲ್ಲಿ ವಿವಾಹವಾಗಿದ್ದರು. ಸಾಗರಿಕಾ ಘಾಟ್ಕೆ ಚಕ್‌ ದೇ ಇಂಡಿಯಾ ಸಿನಿಮಾ ಮೂಲಕ ಪ್ರಚಾರಕ್ಕೆ ಬಂದರು. ಅದಕ್ಕೂ ಮುನ್ನ ಅವರು ಭಾರತೀಯ ಹಾಕಿ ತಂಡದಲ್ಲಿ ಆಡಿದ್ದರು. ಮುಂದೆ ಬಾಲಿವುಡ್‌ನ‌ಲ್ಲಿ ಸಾಗರಿಕಾ ಹೆಸರು ಮಾಡಿದರು. ಇದೇ ಕಾರಣಕ್ಕೆ ಜಹೀರ್‌ ನಡುವೆ ಪ್ರೀತಿ ಬೆಳೆದಿತ್ತು.

ಇದನ್ನೂ ಓದಿ IPL 2024: ಆರ್​ಸಿಬಿ ಪ್ಲೇ ಆಫ್​ ಪ್ರವೇಶದ ಲೆಕ್ಕಾಚಾರ ಹೇಗಿದೆ?

ಕ್ರಿಕೆಟ್​ ಸಾಧನೆ


ಭಾರತ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಆಗಿ ಜಹೀರ್‌ ಖಾನ್‌ ಅಪಾರ ಸಾಧನೆ ಮಾಡಿದ್ದಾರೆ. 2011ರ ಏಕದಿನ ವಿಶ್ವಕಪ್​ನಲ್ಲಿ ಮಪದಲ ಓವರ್​ ಮೇಡನ್​ ಎಸೆದು ಎದುರಾಳಿ ಲಂಕಾ ತಂಡದ ಮೇಲೆ ಒತ್ತಡ ಹೇರಿದ್ದರು. ಭಾರತ ಪರ 200 ಏಕದಿನ ಪಂದ್ಯ ಆಡಿರುವ ಅವರು 282 ವಿಕೆಟ್​ ಕಬಳಿಸಿದ್ದಾರೆ. 92 ಟೆಸ್ಟ್​ಗಳಿಂದ 311 ವಿಕೆಟ್​, 17 ಟಿ20 ಪಂದ್ಯಗಳಿಂದ 17 ವಿಕೆಟ್​ ಪಡೆದಿದ್ದಾರೆ. ಐಪಿಎಲ್​ನಲ್ಲಿ ಭರ್ತಿ 100 ಪಂದ್ಯ ಆಡಿ 102 ವಿಕೆಟ್​ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 610 ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ.

Continue Reading

ಕ್ರೀಡೆ

IPL 2024: ಆರ್​ಸಿಬಿ ಪ್ಲೇ ಆಫ್​ ಪ್ರವೇಶದ ಲೆಕ್ಕಾಚಾರ ಹೇಗಿದೆ?

IPL 2024: ಆರ್​ಸಿಬಿಗೆ ಇನ್ನು 8 ಪಂದ್ಯಗಳು ಬಾಕಿ ಉಳಿದಿವೆ. ಈ ಪಂದ್ಯಗಳಲ್ಲಿ 7 ಪಂದ್ಯ ಗೆದ್ದರೆ ಆರ್​ಸಿಬಿಗೆ ಪ್ಲೇ ಆಫ್​ ಪ್ರವೇಶ ಪಡೆಯಬಹುದು. ಆರ್​ಸಿಬಿ ಮುಂದಿನ ಪಂದ್ಯದಲ್ಲಿ ಏಪ್ರಿಲ್​ 15ರಂದು ಸನ್​ರೈಸರ್ಸ್​ ಹೈದರಾಬಾದ್​ ತಂಡದ ವಿರುದ್ಧ ಆಡಲಿದೆ. ಈ ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

VISTARANEWS.COM


on

IPL 2024
Koo

ಬೆಂಗಳೂರು: ಮಹಿಳಾ ಆರ್​ಸಿಬಿ(RCB) ತಂಡ ಕಪ್​ ಗೆದ್ದ ಬೆನ್ನಲ್ಲೇ ಈ ಬಾರಿ ಹೊಸ ಅಧ್ಯಾಯ ಎಂದು ಐಪಿಎಲ್(IPL 2024)​ ಆಡಲಿಳಿದ ಆರ್​ಸಿಬಿ ಪುರುಷರ ತಂಡ ತನ್ನ ಮಾತಿಗೆ ತಕ್ಕ ಪ್ರದರ್ಶನ ತೋರುವಲ್ಲಿ ಸಂಪೂರ್ಣ ವಿಫಲವಾಗಿದೆ. ಆರ್​ಸಿಬಿಯ ಈ ಕಳಪೆ ಆಟ ಕಂಡು ಸ್ವತಃ ಅಭಿಮಾನಿಗಳೇ ಇದು ಮುಗಿದ ಅಧ್ಯಾಯ ಎಂದು ಟ್ರೋಲ್​ ಮಾಡಲಾರಂಭಿಸಿದ್ದಾರೆ. 6 ಪಂದ್ಯಗಳನ್ನಾಡಿ ಕೇವಲ 1 ಪಂದ್ಯ ಗೆದ್ದಿರುವ ಆರ್​ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ ಆರ್​ಸಿಬಿಗೆ ಇನ್ನೂ ಪ್ಲೇ ಆಫ್​ ಪ್ರವೇಶಿಸುವ ಅವಕಾಶವಿದೆ. ಇದಕ್ಕಾಗಿ ಆರ್​ಸಿಬಿ ಈ ಕೆಲಸ ಮಾಡಬೇಕಿದೆ.

ಪ್ಲೇ ಆಫ್​ ಪ್ರವೇಶ ಹೇಗೆ?


ಆರ್​ಸಿಬಿಗೆ ಇನ್ನು 8 ಪಂದ್ಯಗಳು ಬಾಕಿ ಉಳಿದಿವೆ. ಈ ಪಂದ್ಯಗಳಲ್ಲಿ 7 ಪಂದ್ಯ ಗೆದ್ದರೆ ಆರ್​ಸಿಬಿಗೆ ಪ್ಲೇ ಆಫ್​ ಪ್ರವೇಶ ಪಡೆಯಬಹುದು. 7 ಪಂದ್ಯ ಗೆದ್ದರೆ 16 ಅಂಕ ಸಿಗಲಿದೆ. ಈಗಾಗಲೇ ಒಂದು ಪಂದ್ಯ ಗೆದ್ದಿದೆ. ಒಂದೊಮ್ಮೆ ಆರ್​ಸಿಬಿ ಮುಂದಿನ ಪಂದ್ಯಗಳಲ್ಲಿ 2 ಪಂದ್ಯ ಸೋತರೆ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ. ಇನ್ನೊಂದು ಅವಕಾಶವೆಂದರೆ ತನಗಿಂತ ಮೇಲಿರುವ ತಂಡಗಳು ಸತತ ಸೋಲು ಕಂಡರೆ ಆಗ ಕ್ಷೀಣ ಅವಕಾಶವೊಂದು ಲಭಿಸುವ ಸಾಧ್ಯತೆಯೂ ಇದೆ. ಒಟ್ಟಾರೆಯಾಗಿ ಆರ್​ಸಿಬಿಗೆ ಮುಂದಿನ ಪಂದ್ಯಗಳು ಮಸ್ಟ್​ ವಿನ್​ ಗೇಮ್ ಆಗಿದೆ.

ತಂಡದದಲ್ಲಿ ಸ್ಟಾರ್​ ಆಟಗಾರರಿದ್ದರೂ ಕೂಡ ಯಾರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ವಿರಾಟ್​ ಕೊಹ್ಲಿ, ದಿನೇಶ್​ ಕಾರ್ತಿಕ್​ ಮಾತ್ರ ತಂಡದ ನಂಬಿಕಸ್ಥ ಆಟಗಾರರಾಗಿದ್ದಾರೆ. ಬೌಲಿಂಗ್​ ವಿಭಾಗವಂತೂ ಕೇಳುವುದೇ ಬೇಡ ಉಳಿದೆಲ್ಲ ತಂಡಕ್ಕಿಂತ ಕಳಪೆ ಮಟ್ಟದಲ್ಲಿದೆ. ಭಾರತ ತಂಡದ ಪ್ರಧಾನ ವೇಗಿಗಳಲ್ಲಿ ಒಬ್ಬರಾಗಿರುವ ಸಿರಾಜ್​ ಓವರ್​ಗೆ ಕನಿಷ್ಠ​ 20ಕ್ಕಿಂತ ಅಧಿಕ ರನ್​ ಚಚ್ಚಿಸಿಕೊಳ್ಳುತ್ತಿದ್ದಾರೆ. ಅದೂ ಕೂಡ ಅನಾನುಭವಿ ಬ್ಯಾಟರ್​ಗಳ ಮುಂದೆ.

ಇದನ್ನೂ ಓದಿ IPL 2024: ಮಕ್ಕಳ ಶಾಲಾ ಶುಲ್ಕಕ್ಕೆ ತೆಗೆದಿಟ್ಟ 64 ಸಾವಿರ ಹಣದಲ್ಲಿ ಟಿಕೆಟ್​ ಖರೀದಿಸಿ ಐಪಿಎಲ್​ ಪಂದ್ಯ ವೀಕ್ಷಿಸಿದ ತಂದೆ

ಆರ್​ಸಿಬಿ ಮುಂದಿನ ಪಂದ್ಯದಲ್ಲಿ ಏಪ್ರಿಲ್​ 15ರಂದು ಸನ್​ರೈಸರ್ಸ್​ ಹೈದರಾಬಾದ್​ ತಂಡದ ವಿರುದ್ಧ ಆಡಲಿದೆ. ಈ ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮುಂಬೈ ವಿರುದ್ಧ ಸೋಲಿನ ಬಳಿಕ ಮಾತನಾಡಿದ್ದ ನಾಯಕ ಡುಪ್ಲೆಸಿಸ್​, ‘ನಮ್ಮ ತಂಡದ ಪ್ರಮುಖ ವೈಫಲ್ಯವೆಂದರೆ ಬೌಲಿಂಗ್​. ಹೀಗಾಗಿ ಬ್ಯಾಟರ್​ಗಳು ಹೆಚ್ಚಿನ ರನ್​ಗಳಿಕೆಗೆ ಗಮನ ನೀಡಬೇಕು. ಇನ್ನುಳಿದ ಪ್ರತಿ ಪಂದ್ಯದಲ್ಲಿಯೂ ನಾವು 200ಕ್ಕೂ ಹೆಚ್ಚು ರನ್ ಗಳಿಸಬೇಕಿದೆ. ಇದು ಸಾಧ್ಯವಾಗದಿದ್ದರೆ ಮತ್ತೆ ಸೋಲು ಖಚಿತ ಎಂದು ಬೇಸರದಿಂದಲೇ ಹೇಳಿದ್ದರು.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​5418 (+0.871)
ಕೆಕೆಆರ್​​4316 (+1.528)
ಚೆನ್ನೈ ಸೂಪರ್​ ಕಿಂಗ್ಸ್​​5326 (+0.666)
ಲಕ್ನೋ ಸೂಪರ್​ಜೈಂಟ್ಸ್​5326(+0.436)
ಹೈದರಾಬಾದ್​​5326 (+0.344)
ಗುಜರಾತ್​6336 (-0.637)
ಮುಂಬಯಿ​​​​5234 (-0.073)
ಪಂಜಾಬ್5234 (-0.196)
ಡೆಲ್ಲಿ ಕ್ಯಾಪಿಟಲ್ಸ್​6244 (-0.975)
ಆರ್​ಸಿಬಿ6152 (-1.124)
Continue Reading
Advertisement
Urvashi Rautela
ಕ್ರೀಡೆ6 mins ago

Urvashi Rautela: ಕ್ರಿಕೆಟಿಗರಾದ ಪಂತ್​,ನಸೀಮ್​ಗೆ ಕೈಕೊಟ್ಟು ಖ್ಯಾತ ಫುಟ್ಬಾಲರ್​ ಜತೆ ಡೇಟಿಂಗ್ ಆರಂಭಿಸಿದ ಊರ್ವಶಿ ರೌಟೇಲಾ​

murder-case
ಕ್ರೈಂ29 mins ago

Murder Case: ಹೆಂಡತಿಯ ಕೊಂದ ಗಂಡನ ಸುಳಿವಿಗೆ 3 ಕೋಟಿ ರೂ. ಬಹುಮಾನ!

Gold price
ಚಿನ್ನದ ದರ38 mins ago

Gold Price Explainer: ಚಿನ್ನದ ದರ ಇಷ್ಟೊಂದು ಏರಲು ಏನು ಕಾರಣ? ಬಂಗಾರದ ಮೇಲೆ ಹೂಡಿಕೆಗಿದು ಸಕಾಲವೇ?

Lok Sabha Election 2024
ಬೆಂಗಳೂರು58 mins ago

Lok Sabha Election 2024 : ಮಾವಿನ ಹಣ್ಣಿನ ಬ್ಯಾಗ್‌ ಬಿಡ್ರೀ ಎಂದವರ ಬಳಿ ಗರಿ ಗರಿ ನೋಟು; ಜಯನಗರದಲ್ಲಿ 4 ಕೋಟಿ ರೂ. ಸೀಜ್‌

Sonu Srinivas Gowda shares Jail Experience
ಸಿನಿಮಾ59 mins ago

Sonu Srinivas Gowda: ಸಿಕ್ಕಾಪಟ್ಟೆ ಸೊಳ್ಳೆ ಕಾಟ ಇತ್ತು ಎಂದು ಜೈಲಿನ ಅನುಭವ ಹಂಚಿಕೊಂಡ ಸೋನು ಗೌಡ!

CM Siddaramaiah
ಕರ್ನಾಟಕ1 hour ago

ಇಂಡಿಯಾ ಒಕ್ಕೂಟಕ್ಕೆ ಬಹುಮತ ಸಿಗಲ್ಲ ಎಂದ ಸಿದ್ದರಾಮಯ್ಯ; ಚುನಾವಣೆ ಮೊದಲೇ ಸೋಲೊಪ್ಪಿಗೆ?

Siddaramaiah
ಕರ್ನಾಟಕ2 hours ago

ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ ಎಂದ ಶ್ರೀನಿವಾಸ ಪ್ರಸಾದ್!‌ ಏನಿದರ ಮರ್ಮ?

Vinesh Phogat
ಕ್ರೀಡೆ2 hours ago

Vinesh Phogat: ಡೋಪಿಂಗ್ ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆದಿದೆ; ಡಬ್ಲ್ಯುಎಫ್‌ಐ ವಿರುದ್ಧ ಗಂಭೀರ ಆರೋಪ ಹೊರಿಸಿದ ವಿನೇಶ್

Salman khan Aayush Sharma recalls his father words marry Arpita
ಸಿನಿಮಾ2 hours ago

Salman Khan: ಬಿಡಿಗಾಸೂ ಕೈಯಲ್ಲಿ ಇಲ್ಲದೇ ಇದ್ದಾಗ ಸಲ್ಮಾನ್‌ ಖಾನ್‌ ಸಹೋದರಿಯನ್ನು ಮದುವೆಯಾಗಿದ್ರಂತೆ ಈ ನಟ!

Medical Negligence in Chitradurga
ಚಿತ್ರದುರ್ಗ2 hours ago

Medical Negligence : ಗ್ಯಾಸ್ಟ್ರಿಕ್‌ ಎಂದು ಆಸ್ಪತ್ರೆಗೆ ಹೋದ ಯುವಕ ಮನೆಗೆ ಹೆಣವಾಗಿ ವಾಪಸ್‌

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 day ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 day ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ2 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20242 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ4 days ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ4 days ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ4 days ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ5 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

ಟ್ರೆಂಡಿಂಗ್‌