ಬೆಂಗಳೂರು: ಕಳೆದ ಆವೃತ್ತಿಯ ಮಹಿಳೆಯ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಪರ ಮಿಂಚಿದ್ದ ಕನ್ನಡತಿ ಹಾಗೂ ಆಲ್ರೌಂಡರ್ ಶ್ರೇಯಾಂಕ ಪಾಟೀಲ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇತ್ತಿಚೆಗೆ ಅವರು ಎಮರ್ಜಿಂಗ್ ಏಷ್ಯಾ ಕಪ್ನಲ್ಲೂ ಐದು ವಿಕೆಟ್ ಪಡೆದು ಮಿಂಚಿದ್ದರು. ಇವೆಲ್ಲದರ ಪರಿಣಾಮವಾಗಿ ಅವರು ಮುಂಬರುವ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್ (WPCL) ಗಾಗಿ ಗಯಾನಾ ಅಮೆಜಾನ್ ವಾರಿಯರ್ಸ್ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ಅವರು ಈ ಅವಕಾಶ ಪಡೆದ ಭಾರತ ಮಹಿಳೆಯರ ತಂಡದ ಮೊದಲ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಪಂದ್ಯವಾಡುವ ಮೊದಲು ವಿದೇಶೀ ಟೂರ್ನಿಯಲ್ಲಿ ಅವಕಾಶ ಪಡೆದ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಆಗಸ್ಟ್ 31 ರಿಂದ ಸೆಪ್ಟೆಂಬರ್ 10 ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಆಡಲಿರುವ ಮೊದಲ ಭಾರತೀಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಪಾಟೀಲ್ . ಅವರು ಇತ್ತೀಚೆಗೆ ಮಹಿಳಾ ಉದಯೋನ್ಮುಖ ಏಷ್ಯಾ ಕಪ್ನಲ್ಲಿ ಕಾಣಿಸಿಕೊಂಡಿದ್ದರು. ಅದೇ ರೀತಿ ಕಳೆದ ಆವೃತ್ತಿಯಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಡಬ್ಲ್ಯುಪಿಎಲ್ನಲ್ಲಿ ಆರ್ಸಿಬಿ ಪರ ಪ್ರದರ್ಶನ ನೀಡುವ ಮೂಲಕ ಅವರು ಬೆಳಕಿಗೆ ಬಂದಿದ್ದರು.
ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ವಿದೇಶಿ ಲೀಗ್ಗಳಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಿದೆ. ನಾಯಕಿ ಹರ್ಮನ್ಪ್ರೀತ್ ಕೌರ್, ಸ್ಮೃತಿ ಮಂಧಾನಾ, ಜೆಮಿಮಾ ರೊಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ ಮತ್ತು ರಿಚಾ ಘೋಷ್ ಅವರಂತಹ ಅಗ್ರ ಆಟಗಾರ್ತಿಯರು ಆಸ್ಟ್ರೇಲಿಯಾದಲ್ಲಿ ನಡೆಯುವ ಡಬ್ಲ್ಯುಬಿಬಿಎಲ್ ಮತ್ತು ಇಂಗ್ಲೆಂಡ್ನ ದಿ ಹಂಡ್ರೆಡ್ನಲ್ಲಿ ಆಡಿದ್ದಾರೆ. ಆದರೆ, ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಿಲ್ಲ. ಶ್ರೇಯಾಂಕ ಆ ಅವಕಾಶ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : MotoGp : ಭಾರತದಲ್ಲಿ ನಡೆಯುವ ಬೃಹತ್ ಬೈಕ್ ರೇಸ್‌ನ ಟಿಕೆಟ್ ಮಾರಾಟ ಆರಂಭ; ದರ ಸಿಕ್ಕಾಪಟ್ಟೆ ದುಬಾರಿ!
ಶ್ರೇಯಾಂಕಾ ಆರ್ಸಿಬಿ ತಂಡದ ಪರ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಉತ್ತಮ ಹೆಸರು ಮಾಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಮೊದಲೇ ವಿದೇಶಿ ಲೀಗ್ನಲ್ಲಿ ಗುತ್ತಿಗೆ ಪಡೆದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅವರು ಇತ್ತೀಚೆಗೆ ಹಾಂಗ್ ಕಾಂಗ್ ನಲ್ಲಿ ನಡೆದ ಮಹಿಳಾ ಉದಯೋನ್ಮುಖ ಏಷ್ಯಾ ಕಪ್ ನಲ್ಲಿ ಪಂದ್ಯಾವಳಿಯಲ್ಲಿ ಆಡಿದ್ದರು. ಅಲ್ಲಿ ಅವರು ಭಾರತ ಎ ಪರ ಎರಡು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಪಡೆದರು.
ಬಾರ್ಬಡೋಸ್ ರಾಯಲ್ಸ್, ಗಯಾನಾ ಅಮೆಜಾನ್ ವಾರಿಯರ್ಸ್ ಮತ್ತು ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡಗಳು 2023 ರ ಕೆರಿಬಿಯನ್ ಪ್ರೀಮಿಯರ್ ಲೀಗ್ಲ್ಲಿ ಸ್ಪರ್ಧಿಸಲಿವೆ. ಸ್ಟಾರ್ ಆಟಗಾರರಿರುವ ತಂಡಗಳಲ್ಲಿ ಡಿಯಾಂಡ್ರಾ ಡಾಟಿನ್, ಹೇಲಿ ಮ್ಯಾಥ್ಯೂಸ್ ಮತ್ತು ಸ್ಟೆಫಾನಿ ಟೇಲರ್ ಸೇರಿದಂತೆ ಕೆರಿಬಿಯನ್ ದೇಶದ ಅತ್ಯುತ್ತಮ ಆಟಗಾರ್ತಿಯರು ಇದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ಭಾರತದ ವಿದೇಶಿ ಆಟಗಾರರು ಸಹ ಇರಲಿದ್ದು, ಕೆಲವು ಅತ್ಯುತ್ತಮ ಅಂತರರಾಷ್ಟ್ರೀಯ ಕ್ರಿಕೆಟಿಗರು ವಿಸ್ತೃತ ವಿಶ್ವಕಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.