ಬೆಂಗಳೂರು: ಭಾರತ ಮತ್ತು ಇಂಗ್ಲೆಂಡ್ (Ind vs Eng) ನಡುವಿನ ಬಹುನಿರೀಕ್ಷಿತ ಮೊದಲ ಟೆಸ್ಟ್ ಪಂದ್ಯ ಜನವರಿ 25ರಿಂದ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಸರಣಿಯ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ, ಎರಡೂ ತಂಡಗಳು ಹೈದರಾಬಾದ್ಗೆ ಆಗಮಿಸಿವೆ ಮತ್ತು ತಮ್ಮ ಸಿದ್ಧತೆಗಳನ್ನು ನಡೆಸುತ್ತಿವೆ. ಏತನ್ಮಧ್ಯೆ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ಭಾರತೀಯ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರಿಗೆ ಅಭ್ಯಾಸದ ವೇಳೆ ಬಲ ಮುಂಗೈಗೆ ಚೆಂಡು ತಗುಲಿದ್ದು ಅವರು ಆಟಕ್ಕೆ ಅಲಭ್ಯರಾಗುವ ಸಾಧ್ಯತೆಗಳಿವೆ.
ಹೊಡೆತದಿಂದ ಹೊರತಾಗಿಯೂ ಅಯ್ಯರ್ ತಮ್ಮ ಬ್ಯಾಟಿಂಗ್ ಅಭ್ಯಾಸಗಳನ್ನು ಮುಂದುವರಿಸಲು ಪ್ರಯತ್ನಿಸಿದರು. ಆದರೆ ಇಂಗ್ಲೆಂಡ್ ವಿರುದ್ಧದ ಪ್ರಮುಖ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ಮಾಡಲೇಬೇಕಾಗಿದ್ದ ಪೂರ್ವಾಭ್ಯಾಸವನ್ನು ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ.
ರೋಹಿತ್ ಶರ್ಮಾ ನೇತೃತ್ವದ ತಂಡವು ಈಗಾಗಲೇ ರಾಜ್ಕೋಟ್ನಲ್ಲಿ ನಡೆಯಲಿರುವ ಮೂರನೇ ಪಂದ್ಯದವರೆಗೆ ತಮ್ಮ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಕೊರತೆ ಎದುರಿಸಲಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಅಲಭ್ಯತೆಯು ಟೀಮ್ ಮ್ಯಾನೇಜ್ಮೆಂಟ್ಗೆ ಸಮಸ್ಯೆಯಾಗಿ ತೋರಿದೆ. ಆದಾಗ್ಯೂ, ಅಯ್ಯರ್ ಫಿಸಿಯೋಗಳಿಂದ ಐಸ್ ಪ್ಯಾಕ್ಗಳ ಚಿಕಿತ್ಸೆ ಪಡೆದರು. ಬಳಿಕ ನೆಟ್ಸ್ಗೆ ಮರಳಿದರು. ನಿಂತಿರುವ ಸ್ಥಳದಿಂದಲೇ ಅಭ್ಯಾಸ ಮುಂದುವರಿಸಿದರು.
ಏತನ್ಮಧ್ಯೆ, ಕೊಹ್ಲಿ ಅಲಭ್ಯತೆಯಿಂದಾಗಿ 4 ನೇ ಕ್ರಮಾಂಕದ ಬಗ್ಗೆ ತಂಡಕ್ಕೆ ಕಳವಳಗಳಿವೆ. ಇದು ರಾಹುಲ್ಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿಯನ್ನು ನೀಡಬಹುದು. ನಂತರ ಅಯ್ಯರ್, ಕೆ.ಎಸ್ ಭರತ್ ಅವರನ್ನು ಆಡಿಸಬಹುದು.
ನಾಯಕ ಬೆನ್ ಸ್ಟೋಕ್ಸ್ ಅವರ ಪಂದ್ಯದ ಸಿದ್ಧತೆ ಬಗ್ಗೆ ಇಂಗ್ಲೆಂಡ್ ತಂಡಕ್ಕೆ ತಿಳಿದಿಲ್ಲ ಎಂದು ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದಾಗ್ಯೂ, ಸ್ಟೋಕ್ಸ್ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿದ್ದಾರೆ ಮತ್ತು ಗುರುವಾರದಿಂದ ಪ್ರಾರಂಭವಾಗುವ ಆರಂಭಿಕ ಪಂದ್ಯಕ್ಕೆ ಅವರ ಲಭ್ಯತೆಯನ್ನು ಘೋಷಿಸಲು ಮ್ಯಾನೇಜ್ಮೆಂಟ್ ಯಾವುದೇ ಆತುರವಿಲ್ಲ ಎಂದು ಮೆಕಲಮ್ ಹೇಳಿದರು. ಹೀಗಾಗಿ, ಉಪ್ಪಲ್ನಲ್ಲಿ ನಡೆಯಲಿರುವ ಪಂದ್ಯಕ್ಕೆ ಮುಂಚಿತವಾಗಿ ಇಂಗ್ಲಿಷ್ ನಾಯಕನ ಸೇರ್ಪಡೆಯ ಬಗ್ಗೆ ತಡವಾಗಿ ಕರೆ ಬರುವ ನಿರೀಕ್ಷೆಯಿದೆ.
ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ
ಬೆಂಗಳೂರು: ಜನವರಿ 25ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ (Ind vs Eng) 5 ಪಂದ್ಯಗಳ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸಜ್ಜಾಗಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಮೊದಲ ಟೆಸ್ಟ್ ಸಮೀಪಿಸುತ್ತಿರುವುದರಿಂದ ಭಾರತ ವಿರುದ್ಧದ ಸರಣಿಗೆ ಭಾರತದ ವಿಕೆಟ್ ಕೀಪರ್ ಯಾರು ಎಂಬ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ.
ಕೆಎಲ್ ರಾಹುಲ್, ಕೆಎಸ್ ಭರತ್ ಮತ್ತು ಧ್ರುವ್ ಜುರೆಲ್ ಸೇರಿದಂತೆ ಮೂವರು ವಿಕೆಟ್ಕೀಪರ್ಗಳು ಭಾರತ ತಂಡದಲ್ಲಿದ್ದಾರೆ. ಆದರೆ, ಇಂಗ್ಲೆಂಡ್ ವಿರುದ್ಧ ಭಾರತ ತಂಡಕ್ಕಾಗಿ ಯಾರು ಗ್ಲವ್ಸ್ ಧರಿಸುತ್ತಾರೆ ಎಂಬ ಬಗ್ಗೆ ಅನೇಕ ಚರ್ಚೆಗಳು ನಡೆಯುತತಿದೆ. ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಈ ವಿಷಯಕ್ಕೆ ಕೊನೆ ಹಾಡಲು ಮುಂದಾಗಿದ್ದು ರಾಹುಲ್ ಗ್ಲವ್ಸ್ ಹಾಕುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : BCCI Awards: ಗಿಲ್ಗೆ ವರ್ಷದ ಕ್ರಿಕೆಟಿಗ,ರವಿಶಾಸ್ತ್ರಿಗೆ ಜೀವಮಾನ ಸಾಧನೆ ಪ್ರಶಸ್ತಿ
ದಕ್ಷಿಣ ಆಫ್ರಿಕಾ ವಿರುದ್ಧ ವಿಕೆಟ್ ಕೀಪಿಂಗ್ ಮಾಡುವಲ್ಲಿ ರಾಹುಲ್ ಅದ್ಭುತ ಕೆಲಸ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ರಾಹುಲ್, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೈಗವಸು ಧರಿಸುವುದಿಲ್ಲ. ತಂಡವು ಆಯ್ಕೆ ಮಾಡಿದ ಇತರ ಎರಡು ಆಟಗಾರರ ನಡುವೆ ಆಯ್ಕೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಆಡುವುದಿಲ್ಲ. ನಾವು ಇನ್ನೂ ಇಬ್ಬರು ವಿಕೆಟ್ ಕೀಪರ್ಗಳನ್ನು ಆಯ್ಕೆ ಮಾಡಿದ್ದೇವೆ. ನಿಸ್ಸಂಶಯವಾಗಿ ರಾಹುಲ್ ದಕ್ಷಿಣ ಆಫ್ರಿಕಾದಲ್ಲಿ ನಮಗಾಗಿ ಅದ್ಭುತ ಕೆಲಸ ಮಾಡಿದ್ದರು. ಸರಣಿಯನ್ನು ಡ್ರಾ ಮಾಡಲು ನಮಗೆ ಸಹಾಯ ಮಾಡುವಲ್ಲಿ ನಿಜವಾಗಿಯೂ ದೊಡ್ಡ ಪಾತ್ರ ವಹಿಸಿದರು. ಆದರೆ ಐದು ಟೆಸ್ಟ್ ಪಂದ್ಯಗಳನ್ನು (ಇಂಗ್ಲೆಂಡ್ ವಿರುದ್ಧ) ಭಾರತದಲ್ಲಿ ಆಡುವ ಪರಿಸ್ಥಿತಿಯನ್ನು ಪರಿಗಣಿಸಿ ಇತರ ಇಬ್ಬರು ಕೀಪರ್ಗಳಿಗೆ ಆದ್ಯತೆ ನೀಡುತ್ತೇವೆ.”ಎಂದು ದ್ರಾವಿಡ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.