Ind vs Eng : ಅಯ್ಯರ್​ಗೆ ಗಾಯ; ದ್ರಾವಿಡ್​ಗೆ ಮತ್ತೊಂದು ಟೆನ್ಷನ್​ - Vistara News

ಕ್ರಿಕೆಟ್

Ind vs Eng : ಅಯ್ಯರ್​ಗೆ ಗಾಯ; ದ್ರಾವಿಡ್​ಗೆ ಮತ್ತೊಂದು ಟೆನ್ಷನ್​

Ind vs Eng : ಹೈದರಾಬಾದ್ ಮತ್ತು ವಿಶಾಖಪಟ್ಟಣದಲ್ಲಿ ನಡೆಯಲಿರುವ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ಈಗಾಗಲೇ ವಿರಾಟ್ ಕೊಹ್ಲಿಯ ಕೊರತೆಯನ್ನು ಎದುರಿಸುತ್ತಿದೆ.

VISTARANEWS.COM


on

Shreyas Iyer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತ ಮತ್ತು ಇಂಗ್ಲೆಂಡ್ (Ind vs Eng) ನಡುವಿನ ಬಹುನಿರೀಕ್ಷಿತ ಮೊದಲ ಟೆಸ್ಟ್ ಪಂದ್ಯ ಜನವರಿ 25ರಿಂದ ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಸರಣಿಯ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ, ಎರಡೂ ತಂಡಗಳು ಹೈದರಾಬಾದ್​ಗೆ ಆಗಮಿಸಿವೆ ಮತ್ತು ತಮ್ಮ ಸಿದ್ಧತೆಗಳನ್ನು ನಡೆಸುತ್ತಿವೆ. ಏತನ್ಮಧ್ಯೆ ನೆಟ್ ಪ್ರಾಕ್ಟೀಸ್​ ಮಾಡುತ್ತಿದ್ದ ಭಾರತೀಯ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್ ಅಯ್ಯರ್ ಅವರಿಗೆ ಅಭ್ಯಾಸದ ವೇಳೆ ಬಲ ಮುಂಗೈಗೆ ಚೆಂಡು ತಗುಲಿದ್ದು ಅವರು ಆಟಕ್ಕೆ ಅಲಭ್ಯರಾಗುವ ಸಾಧ್ಯತೆಗಳಿವೆ.

ಹೊಡೆತದಿಂದ ಹೊರತಾಗಿಯೂ ಅಯ್ಯರ್ ತಮ್ಮ ಬ್ಯಾಟಿಂಗ್ ಅಭ್ಯಾಸಗಳನ್ನು ಮುಂದುವರಿಸಲು ಪ್ರಯತ್ನಿಸಿದರು. ಆದರೆ ಇಂಗ್ಲೆಂಡ್​ ವಿರುದ್ಧದ ಪ್ರಮುಖ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ಮಾಡಲೇಬೇಕಾಗಿದ್ದ ಪೂರ್ವಾಭ್ಯಾಸವನ್ನು ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ.

ರೋಹಿತ್ ಶರ್ಮಾ ನೇತೃತ್ವದ ತಂಡವು ಈಗಾಗಲೇ ರಾಜ್​ಕೋಟ್​ನಲ್ಲಿ ನಡೆಯಲಿರುವ ಮೂರನೇ ಪಂದ್ಯದವರೆಗೆ ತಮ್ಮ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ಕೊರತೆ ಎದುರಿಸಲಿದೆ. ಸ್ಟಾರ್ ಬ್ಯಾಟರ್​​ ವಿರಾಟ್ ಕೊಹ್ಲಿ ಅವರ ಅಲಭ್ಯತೆಯು ಟೀಮ್ ಮ್ಯಾನೇಜ್ಮೆಂಟ್​ಗೆ ಸಮಸ್ಯೆಯಾಗಿ ತೋರಿದೆ. ಆದಾಗ್ಯೂ, ಅಯ್ಯರ್ ಫಿಸಿಯೋಗಳಿಂದ ಐಸ್ ಪ್ಯಾಕ್​ಗಳ ಚಿಕಿತ್ಸೆ ಪಡೆದರು. ಬಳಿಕ ನೆಟ್ಸ್​ಗೆ ಮರಳಿದರು. ನಿಂತಿರುವ ಸ್ಥಳದಿಂದಲೇ ಅಭ್ಯಾಸ ಮುಂದುವರಿಸಿದರು.

ಏತನ್ಮಧ್ಯೆ, ಕೊಹ್ಲಿ ಅಲಭ್ಯತೆಯಿಂದಾಗಿ 4 ನೇ ಕ್ರಮಾಂಕದ ಬಗ್ಗೆ ತಂಡಕ್ಕೆ ಕಳವಳಗಳಿವೆ. ಇದು ರಾಹುಲ್​​ಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿಯನ್ನು ನೀಡಬಹುದು. ನಂತರ ಅಯ್ಯರ್, ಕೆ.ಎಸ್​ ಭರತ್ ಅವರನ್ನು ಆಡಿಸಬಹುದು.

ನಾಯಕ ಬೆನ್ ಸ್ಟೋಕ್ಸ್ ಅವರ ಪಂದ್ಯದ ಸಿದ್ಧತೆ ಬಗ್ಗೆ ಇಂಗ್ಲೆಂಡ್ ತಂಡಕ್ಕೆ ತಿಳಿದಿಲ್ಲ ಎಂದು ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದಾಗ್ಯೂ, ಸ್ಟೋಕ್ಸ್ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿದ್ದಾರೆ ಮತ್ತು ಗುರುವಾರದಿಂದ ಪ್ರಾರಂಭವಾಗುವ ಆರಂಭಿಕ ಪಂದ್ಯಕ್ಕೆ ಅವರ ಲಭ್ಯತೆಯನ್ನು ಘೋಷಿಸಲು ಮ್ಯಾನೇಜ್ಮೆಂಟ್ ಯಾವುದೇ ಆತುರವಿಲ್ಲ ಎಂದು ಮೆಕಲಮ್ ಹೇಳಿದರು. ಹೀಗಾಗಿ, ಉಪ್ಪಲ್ನಲ್ಲಿ ನಡೆಯಲಿರುವ ಪಂದ್ಯಕ್ಕೆ ಮುಂಚಿತವಾಗಿ ಇಂಗ್ಲಿಷ್ ನಾಯಕನ ಸೇರ್ಪಡೆಯ ಬಗ್ಗೆ ತಡವಾಗಿ ಕರೆ ಬರುವ ನಿರೀಕ್ಷೆಯಿದೆ.

ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್​ ಅಲ್ಲ

ಬೆಂಗಳೂರು: ಜನವರಿ 25ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ (Ind vs Eng) 5 ಪಂದ್ಯಗಳ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸಜ್ಜಾಗಿದೆ. ಹೈದರಾಬಾದ್​​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಮೊದಲ ಟೆಸ್ಟ್ ಸಮೀಪಿಸುತ್ತಿರುವುದರಿಂದ ಭಾರತ ವಿರುದ್ಧದ ಸರಣಿಗೆ ಭಾರತದ ವಿಕೆಟ್ ಕೀಪರ್ ಯಾರು ಎಂಬ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ.

ಕೆಎಲ್ ರಾಹುಲ್, ಕೆಎಸ್ ಭರತ್ ಮತ್ತು ಧ್ರುವ್ ಜುರೆಲ್ ಸೇರಿದಂತೆ ಮೂವರು ವಿಕೆಟ್​ಕೀಪರ್​ಗಳು ಭಾರತ ತಂಡದಲ್ಲಿದ್ದಾರೆ. ಆದರೆ, ಇಂಗ್ಲೆಂಡ್ ವಿರುದ್ಧ ಭಾರತ ತಂಡಕ್ಕಾಗಿ ಯಾರು ಗ್ಲವ್ಸ್​ ಧರಿಸುತ್ತಾರೆ ಎಂಬ ಬಗ್ಗೆ ಅನೇಕ ಚರ್ಚೆಗಳು ನಡೆಯುತತಿದೆ. ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಈ ವಿಷಯಕ್ಕೆ ಕೊನೆ ಹಾಡಲು ಮುಂದಾಗಿದ್ದು ರಾಹುಲ್ ಗ್ಲವ್ಸ್​ ಹಾಕುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : BCCI Awards: ಗಿಲ್​ಗೆ ವರ್ಷದ ಕ್ರಿಕೆಟಿಗ,ರವಿಶಾಸ್ತ್ರಿಗೆ ಜೀವಮಾನ ಸಾಧನೆ ಪ್ರಶಸ್ತಿ

ದಕ್ಷಿಣ ಆಫ್ರಿಕಾ ವಿರುದ್ಧ ವಿಕೆಟ್ ಕೀಪಿಂಗ್ ಮಾಡುವಲ್ಲಿ ರಾಹುಲ್ ಅದ್ಭುತ ಕೆಲಸ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ರಾಹುಲ್, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೈಗವಸು ಧರಿಸುವುದಿಲ್ಲ. ತಂಡವು ಆಯ್ಕೆ ಮಾಡಿದ ಇತರ ಎರಡು ಆಟಗಾರರ ನಡುವೆ ಆಯ್ಕೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಆಡುವುದಿಲ್ಲ. ನಾವು ಇನ್ನೂ ಇಬ್ಬರು ವಿಕೆಟ್ ಕೀಪರ್​ಗಳನ್ನು ಆಯ್ಕೆ ಮಾಡಿದ್ದೇವೆ. ನಿಸ್ಸಂಶಯವಾಗಿ ರಾಹುಲ್ ದಕ್ಷಿಣ ಆಫ್ರಿಕಾದಲ್ಲಿ ನಮಗಾಗಿ ಅದ್ಭುತ ಕೆಲಸ ಮಾಡಿದ್ದರು. ಸರಣಿಯನ್ನು ಡ್ರಾ ಮಾಡಲು ನಮಗೆ ಸಹಾಯ ಮಾಡುವಲ್ಲಿ ನಿಜವಾಗಿಯೂ ದೊಡ್ಡ ಪಾತ್ರ ವಹಿಸಿದರು. ಆದರೆ ಐದು ಟೆಸ್ಟ್ ಪಂದ್ಯಗಳನ್ನು (ಇಂಗ್ಲೆಂಡ್ ವಿರುದ್ಧ) ಭಾರತದಲ್ಲಿ ಆಡುವ ಪರಿಸ್ಥಿತಿಯನ್ನು ಪರಿಗಣಿಸಿ ಇತರ ಇಬ್ಬರು ಕೀಪರ್​ಗಳಿಗೆ ಆದ್ಯತೆ ನೀಡುತ್ತೇವೆ.”ಎಂದು ದ್ರಾವಿಡ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IND vs SL: ಭಾರತ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟಿಸಿದ ಶ್ರೀಲಂಕಾ

IND vs SL: ಇತ್ತೀಚೆಗೆ ಮುಕ್ತಾಯಗೊಂಡ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಚರಿತ್ ಅಸಲಂಕಾ ನಾಯಕತ್ವದಲ್ಲಿ ಜಾಫ್ನಾ ಕಿಂಗ್ಸ್ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಹೀಗಾಗಿ ಲಂಕಾ ಕ್ರಿಕೆಟ್​ ಮಂಡಳಿ ಇವರಿಗೆ ನಾಯಕತ್ವ ಪಟ್ಟ ಕಟ್ಟಿದೆ.

VISTARANEWS.COM


on

IND vs SL
Koo

ಕೊಲಂಬೊ: ಭಾರತ(IND vs SL) ವಿರುದ್ಧದ ತವರಿನ ಟಿ20 ಸರಣಿಗಾಗಿ ಆತಿಥೇಯ ಶ್ರೀಲಂಕಾ(Sri Lanka) 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಚರಿತ್ ಅಸಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ. ಸರಣಿ ಆರಂಭಕ್ಕೂ ಮುನ್ನ ವನಿಂದು ಹಸರಂಗ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ನೂತನ ನಾಯಕನಾಗಿ ಚರಿತ್ ಅಸಲಂಕಾ(Charith Asalanka) ನೇಮಕಗೊಂಡಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಚರಿತ್ ಅಸಲಂಕಾ ನಾಯಕತ್ವದಲ್ಲಿ ಜಾಫ್ನಾ ಕಿಂಗ್ಸ್ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಹೀಗಾಗಿ ಲಂಕಾ ಕ್ರಿಕೆಟ್​ ಮಂಡಳಿ ಇವರಿಗೆ ನಾಯಕತ್ವ ಪಟ್ಟ ಕಟ್ಟಿದೆ. ಭಾರತ ಕೂಡ ನೂತನ ನಾಯಕ ಸೂರ್ಯಕುಮಾರ್​ ಯಾದವ್ ಸಾರಥ್ಯದಲ್ಲಿ ಆಡಲಿದೆ. ​ಭಾರತ ಮತ್ತು ಶ್ರೀಲಂಕಾ ನಡುವಣ ಟಿ20 ಸರಣಿಯು ಜುಲೈ 27 ರಿಂದ ಶುರುವಾಗಲಿದೆ.

34 ವರ್ಷದ ಅನುಭವಿ ಆಟಗಾರ ದಿನೇಶ್ ಚಂಡಿಮಲ್​ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಕಳೆದ ಟಿ20 ವಿಶ್ವಕಪ್​ ಆಡಿದ್ದ ಹಿರಿಯ ಆಲ್​ರೌಂಡರ್​ ಏಂಜೆಲೊ ಮ್ಯಾಥ್ಯೂಸ್ ಅವರನ್ನು ಕೈಬಿಡಲಾಗಿದೆ. ಏಕದಿನ ಸರಣಿಗೆ ಇನಷ್ಟೇ ತಂಡ ಪ್ರಕಟಗೊಳ್ಳಬೇಕಿದೆ.

ಶ್ರೀಲಂಕಾ ಟಿ20 ತಂಡ


ಚರಿತ್ ಅಸಲಂಕ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಜನಿತ್ ಪೆರೇರಾ, ಅವಿಷ್ಕ ಫೆರ್ನಾಂಡೋ, ಕುಸಾಲ್ ಮೆಂಡಿಸ್, ದಿನೇಶ್ ಚಂಡಿಮಲ್, ಕಮಿಂದು ಮೆಂಡಿಸ್, ದಸುನ್ ಶಾನಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಚಮಿಂದು ವಿಕ್ರಮಸಿಂಗ್, ಮಥೀಶ ಪತಿರಾಣ, ನುವಾನ್ ತುಷಾರ, ದುಷ್ಮಂತ ಚಮೀರ, ಬಿನೂರ ಫೆರ್ನಾಂಡೋ.

ಲಂಕಾ ಸರಣಿಗೆ ಭಾರತ ಈಗಾಗಲೇ ಏಕದಿನ ಮತ್ತು ಟಿ20 ತಂಡಗಳನ್ನು ಪ್ರಕಟಿಸಿದೆ. ವಿಶ್ರಾಂತಿ ಬಯಸಿದ್ದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಮತ್ತು ಜಸ್​ಪ್ರೀತ್​ ಬುಮ್ರಾ ತಮ್ಮ ವಿಶ್ರಾಂತಿ ಮೊಟಕುಗೊಳಿಸಿ ಈ ಸರಣಿಗೆ ಮರಳಿದ್ದಾರೆ.

ಇದನ್ನೂ ಓದಿ Sri Lanka Tour: ಸಂಜು, ಅಭಿಷೇಕ್​ಗೆ ಅವಕಾಶ ನೀಡದಕ್ಕೆ ಬಿಸಿಸಿಐ ವಿರುದ್ಧ ಕಿಡಿಕಾರಿದ ಸಂಸದ ​ತರೂರ್

ಪ್ರವಾಸದ ಮೊದಲ 3 ಟಿ20 ಪಂದ್ಯಗಳು ಜುಲೈ 27, 28 ಮತ್ತು 30ರಂದು ಪಲ್ಲೆಕಿಲೆಯಲ್ಲಿ ನಡೆಯಲಿವೆ. ಮೊದಲು ಪ್ರಕಟಗೊಂಡಿದ್ದ ವೇಳಾಪಟ್ಟಿಯಲ್ಲಿ 26ರಿಂದ ಟಿ20 ಪಂದ್ಯ ಆರಂಭವಾಗಬೇಕಿತ್ತು. ಏಕದಿನ ಸರಣಿ ಕೂಡ ಒಂದು ದಿನ ತಡವಾಗಿ ಶುರುವಾಗಬೇಕಿತ್ತು. ಏಕದಿನ ಆಗಸ್ಟ್​ 1ರದ ಬದಲಾಗಿ ಆಗಸ್ಟ್​ 2ರಿಂದ ಆರಂಭಗೊಳ್ಳಲಿದೆ. ಉಳಿದ ಪಂದ್ಯಗಳ ದಿನಾಂಕ ಬದಲಾಗಲಿಲ್ಲ. ಈ ಹಿಂದಿನಂತೆ ಆಗಸ್ಟ್​ 4 ಮತ್ತು 7ರಂದೇ ನಡೆಯಲಿದೆ.

ಟಿ20 ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿ.ಕೀ ), ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ , ಅರ್ಶದೀಪ್​ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್​ ಸಿರಾಜ್.

ಏಕದಿನ ತಂಡ


ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿ.ಕೀ), ರಿಷಬ್ ಪಂತ್ (ವಿ.ಕೀ), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

Continue Reading

ಕ್ರಿಕೆಟ್

QPL 2024: ಸಪ್ತಮಿ ಗೌಡ ಟೀಮ್‌ಗೆ ನಿರಾಸೆ: QPL ಕಿರೀಟ ʻಕೋಲಾರ ಕ್ವೀನ್ಸ್ʼ ಮುಡಿಗೆ!

QPL 2024: ಕೋಲಾರ ಕ್ವೀನ್ಸ್ ತಂಡದ ಆಟಗಾರ್ತಿ ಹೇಮಾ ಟೂರ್ನಿಯ ಶ್ರೇಷ್ಠ ಆಟಗಾರ್ತಿಯಾಗಿ ಹೊರಹೊಮ್ಮಿದರೆ, ಬೆಂಗಳೂರು ಕ್ವೀನ್ಸ್ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಬೆಳಗಾವಿ ಕ್ವೀನ್ಸ್ ನ ಕವಿತಾ ಗೌಡ ಅತ್ಯುತ್ತಮ ಬ್ಯಾಟ್ಸ್ ಮೆನ್ ಸ್ಥಾನ ಪಡೆದರೆ ಬೆಂಗಳೂರು ಕ್ವೀನ್ಸ್ ನ ಅನುಪಮಾ ಗೌಡ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

VISTARANEWS.COM


on

QPL 2024 Saptami Gowda disappointment QPL crown Kolara Queens!
Koo

ಬೆಂಗಳೂರು: ಕ್ರಿಯೇಟಿವ್ ಫ್ರೆಂಡ್ಸ್ ಸಂಸ್ಥೆ ಮೊದಲ ಬಾರಿಗೆ ಆಯೋಜಿಸಿದ್ದ ಕ್ವೀನ್ಸ್ ಪ್ರೀಮಿಯರ್ ಲೀಗ್ (QPL 2024) ಕ್ರಿಕೆಟ್ ಪಂದ್ಯಾವಳಿಗೆ ತೆರೆಬಿದ್ದಿದೆ. ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಈ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಧನ್ಯರಾಮ ನಾಯಕತ್ವದ ಕೋಲಾರ ಕ್ವೀನ್ಸ್ ಟೀಮ್ QPL ಕಪ್‌ನ್ನು ಮುಡಿಗೇರಿಸಿಕೊಂಡಿತು. ‘ಕ್ವೀನ್ಸ್ ಪ್ರೀಮಿಯರ್ ಲೀಗ್’ ನಲ್ಲಿ ಇಡೀ ತಂಡ ಕುಣಿದು ಕುಪ್ಪಳಿಸಿದೆ.

ಕೋಲಾರ ತಂಡವು 5 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 88 ರನ್ ಗಳಿಸಿದರು. ಈ ಮೊತ್ತಕ್ಕೆ ಉತ್ತರವಾಗಿ ಬೆಂಗಳೂರು ತಂಡವು ಐದು ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 53 ರನ್‌ ಗಳಿಸಿ ಹೋರಾಟವನ್ನು ಮುಗಿಸಿತು. ಕೋಲಾರ ಕ್ಲೀನ್ಸ್ ತಂಡವು ಅಕರ್ಷಕ ಟ್ರೋಫಿಯೊಂದಿಗೆ 6 ಲಕ್ಷ ಬಹುಮಾನವನ್ನು ತನ್ನದಾಗಿಸಿಕೊಂಡಿತು. ರನ್ನರ್ ಅಪ್ ಬೆಂಗಳೂರು ಕ್ಲೀನ್ಸ್ ತಂಡವು 3 ಲಕ್ಷ ಬಹುಮಾನ ಪಡೆಯಿತು.

ಕೋಲಾರ ಕ್ವೀನ್ಸ್ ತಂಡದ ಆಟಗಾರ್ತಿ ಹೇಮಾ ಟೂರ್ನಿಯ ಶ್ರೇಷ್ಠ ಆಟಗಾರ್ತಿಯಾಗಿ ಹೊರಹೊಮ್ಮಿದರೆ, ಬೆಂಗಳೂರು ಕ್ವೀನ್ಸ್ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಬೆಳಗಾವಿ ಕ್ವೀನ್ಸ್ ನ ಕವಿತಾ ಗೌಡ ಅತ್ಯುತ್ತಮ ಬ್ಯಾಟ್ಸ್ ಮೆನ್ ಸ್ಥಾನ ಪಡೆದರೆ ಬೆಂಗಳೂರು ಕ್ವೀನ್ಸ್ ನ ಅನುಪಮಾ ಗೌಡ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಸರಣಿ ಆಟಗಾರ ಪ್ರಶಸ್ತಿಯನ್ನು ಕೋಲಾರ ಟೀಂನ ಹೇಮಾ ತಿಮ್ಮಯ್ಯ ಪಡೆದುಕೊಂಡರೆ, ಗ್ರೀಷ್ಮಾ ಗೌಡ ಪಂದ್ಯದ ಅಂತಿಮ ಆಟಗಾರ ಪ್ರಶಸ್ತಿ ಪಡೆದುಕೊಂಡರು.

ಇದನ್ನೂ ಓದಿ: Actor Yash: ಯಶ್‌ ಹೊಸ ಹೇರ್‌ ಸ್ಟೈಲ್‌ ಯಾವ ಸಿನಿಮಾಗಾಗಿ? ಕೇಶ ವಿನ್ಯಾಸಕ ಕೊಟ್ಟೇ ಬಿಟ್ರು ಬಿಗ್‌ ಅಪ್‌ಡೇಟ್‌!

ಈ ಟೂರ್ನಿಯನ್ನು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಮಾಡಲು ಬೇರೆ ಬೇರೆ ರಾಜ್ಯಗಳ ತಂಡಗಳನ್ನೂ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಐಪಿಎಲ್ ಮಟ್ಟಕ್ಕೆ ಬೆಳೆಸುವುದು ನಮ್ಮ ಗುರಿ ಎಂದು ಸಂಘಟಕರಾದ ಮಹೇಶ್ ಗೌಡ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಮೋದ್ ಶೆಟ್ಟಿ, ಭವ್ಯಾ ಗೌಡ, ಪ್ರೇಮ್ ಮಾಲೂರ್, ಸ್ವಸ್ತಿಕ್ ಆರ್ಯಾ, ಚೇತನ್ ಪಾರೀಕ್, ಸಂತೋಷ್ ಬಿಲ್ಲವ, ಸಚಿನ್ ಮಹಾದೇವ,ರೂಪಿಕಾ ಉಪಸ್ಥಿತರಿದ್ದರು. ಟೂರ್ನಿಯಲ್ಲಿ ಕಿರುತೆರೆ ಹಾಗೂ ಹಿರಿತೆರೆ ಕಲಾವಿದೆಯರ ಜೊತೆಯಲ್ಲಿ ನಿರೂಪಕಿಯರು, ರೂಪದರ್ಶಿಯರು ಭಾಗವಹಿಸಿದ್ದರು. ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳು ಸೆಣಸಾಡಿದವು. ಕ್ವೀನ್ ಪ್ರೀಮಿಯರ್ ಲೀಗ್ ನಿಂದ ಸಂಗ್ರವಾದ ಹಣವನ್ನು ರಂಗಸೌರಭ ನೀಡಲಾಗುತ್ತದೆ.

Continue Reading

ಕ್ರಿಕೆಟ್

Mumbai Indians : ಮುಂದಿನ ಐಪಿಎಲ್​ಗೆ ಮುಂಬೈ ತೊರೆಯಲಿದ್ದಾರೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್​

Mumbai Indians :

VISTARANEWS.COM


on

Mumbai Indians
Koo

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2025 ಕ್ಕೆ (IPL 2025) ಮುಂಚಿತವಾಗಿ ಮುಂಬೈ ಇಂಡಿಯನ್ಸ್ (Mumbai Indian’s) ಇಬ್ಬರು ಪ್ರಸಿದ್ಧ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಉಪಸ್ಥಿತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ದೈನಿಕ್ ಜಾಗರಣ್ ಪತ್ರಿಕೆ ಪ್ರಕಾರ, ರೋಹಿತ್ ಮತ್ತು ಸೂರ್ಯಕುಮಾರ್ ಐದು ಬಾರಿಯ ಚಾಂಪಿಯನ್ಸ್ ತಂಡ ತೊರೆಯಬಹುದು. ಮುಂದಿನ ವರ್ಷ ನಡೆಯಲಿರುವ ಮೆಗಾ ಹರಾಜಿನಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಅವರನ್ನು ಖರೀದಿ ಮಾಡಬಹುದು.

ಈ ವರ್ಷದ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ಕೆಟ್ಟ ಸಮಯವನ್ನು ಎದುರಿಸಿತು. ಕಳೆದ ವರ್ಷ ಗುಜರಾತ್ ಟೈಟಾನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಅವರನ್ನು ಖರೀದಿಸಿದ್ದರು. ಆದಾಗ್ಯೂ, ಬರೋಡಾ ಆಲ್ರೌಂಡರ್ ತವರು ಹೀರೋ ರೋಹಿತ್ ಬದಲಿಗೆ ನಾಯಕತ್ವ ವಹಿಸಿಕೊಂಡಾಗ ಅಭಿಮಾನಿಗಳು ಅಸಮಾಧಾನಗೊಂಡರು. ಪಂದ್ಯಾವಳಿಯ ಸಮಯದಲ್ಲಿ ಹಾರ್ದಿಕ್ ಮತ್ತು ರೋಹಿತ್, ಸೂರ್ಯಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ನಡುವೆ ಭಿನ್ನಾಭಿಪ್ರಾಯವಿದೆ ಎಂದು ವರದಿಗಳು ಬಂದವು. 30 ವರ್ಷದ ಆಟಗಾರನ ನಾಯಕತ್ವದಲ್ಲಿ, ಮುಂಬೈ ಇಂಡಿಯನ್ಸ್ ಪಾಯಿಂಟ್ಸ್ ಟೇಬಲ್​​ನಲ್ಲಿ ಕೊನೆಯ ಸ್ಥಾನ ಪಡೆಯಿತು. ಏಕೆಂದರೆ ತಂಡವು ಒಂದು ಘಟಕವಾಗಿ ಆಡಲು ಸಾಧ್ಯವಾಗಲಿಲ್ಲ.

ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಐಪಿಎಲ್ 2025ರಲ್ಲಿ ವಿಷಯಗಳನ್ನು ಬದಲಾಯಿಸುವ ಭರವಸೆ ಹೊಂದಿತ್ತು. ಆದರೆ ರೋಹಿತ್ ಮತ್ತು ಸೂರ್ಯಕುಮಾರ್ ನಿರ್ಗಮಿಸಿದರೆ ಅದು ಅವರಿಗೆ ತುಂಬಲು ಸಾಧ್ಯವಾದರ ಕೊರತೆಯಾಗುತ್ತದೆ. ಆದಾಗ್ಯೂ, ನಿರ್ಗಮನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಗದ ಕಾರಣ ಮುಂಬೈ ಅಭಿಮಾನಿಗಳು ಈ ಸಮಯದಲ್ಲಿ ಹೆಚ್ಚು ಚಿಂತಿಸಬೇಕಾಗಿಲ್ಲ.

ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತೊರೆದರೆ, ಅವರು ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ಸೇರುವ ಸಾಧ್ಯತೆಯಿದೆ. ಟೈಟಾನ್ಸ್ 2022 ರಲ್ಲಿ ಲೀಗ್ ಗೆದ್ದಿತು ಮತ್ತು ನಂತರದ ವರ್ಷ ರನ್ನರ್ ಅಪ್ ಸ್ಥಾನ ಪಡೆಯಿತು. ಆದಾಗ್ಯೂ, ಈ ವರ್ಷ, ಅವರು ಶುಬ್ಮನ್ ಗಿಲ್ ಅವರ ಅಡಿಯಲ್ಲಿ ಒಂಬತ್ತನೇ ಸ್ಥಾನವನ್ನು ಪಡೆದರು, ಇದು ಐಪಿಎಲ್​​ನಲ್ಲಿ ನಾಯಕನಾಗಿ ಅವರ ಮೊದಲ ಋತುವಾಗಿದೆ. ಏತನ್ಮಧ್ಯೆ, ರಿಷಭ್ ಪಂತ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಈ ವರ್ಷ 6 ನೇ ಸ್ಥಾನದಲ್ಲಿ ಕೊನೆಗೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: Abhinav Bindra : ಭಾರತದ ಶೂಟರ್ ಅಭಿನವ್ ಬಿಂದ್ರಾಗೆ ‘ಒಲಿಂಪಿಕ್​ ಆರ್ಡರ್’ ಗೌರವ​

ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಚೆನ್ನೈ ಸೂಪರ್ ಕಿಂಗ್ಸ್ಗೆ ಸೇರುವ ಸಾಧ್ಯತೆಯಿದೆ. ಏಕೆಂದರೆ ಪಂತ್ ಅವರ ಪ್ರದರ್ಶನದಿಂದ ಡೆಲ್ಲಿ ಸಂತೋಷವಾಗಿಲ್ಲ ಎಂದು ವರದಿಯಾಗಿದೆ. ಅಲ್ಲದೆ, ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತೊರೆದು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡವನ್ನು ಮುನ್ನಡೆಸಬಹುದು. ಕಳೆದ ಮೂರು ಆವೃತ್ತಿಗಳಲ್ಲಿ ಫಾಫ್ ಡು ಪ್ಲೆಸಿಸ್ ಆರ್​ಸಿಬಿಯನ್ನು ಮುನ್ನಡೆಸಿದ್ದಾರೆ. ಆದರೆ ಅವರನ್ನು ಮೊದಲ ಪ್ರಶಸ್ತಿಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ.

Continue Reading

ಕ್ರೀಡೆ

Chamari Athapaththu : ಏಷ್ಯಾ ಕಪ್​ನಲ್ಲಿ ಶತಕ ಬಾರಿಸಿ ವಿಶ್ವ ದಾಖಲೆ ಬರೆದ ಲಂಕಾದ ಮಹಿಳಾ ಕ್ರಿಕೆಟರ್​​

Chamari Athapaththu : 18ನೇ ಓವರ್​ ಬಳಿಕ ಚಾಮರಿ ಸ್ಫೋಟಕ ಬ್ಯಾಟಿಂಗ್ ಮಾಡಿದರು 19 ನೇ ಓವರ್ ಅನ್ನು ಬೌಂಡರಿಯೊಂದಿಗೆ ಪ್ರಾರಂಭಿಸಿದರು. ಶ್ರೀಲಂಕಾ ಇನಿಂಗ್ಸ್​​ನ ಕೊನೆಯ ಓವರ್​ಗೆ ಮೊದಲು ಅಟ್ಟಪಟ್ಟು 63 ಎಸೆತಗಳಲ್ಲಿ ಶತಕ ಪೂರ್ಣಗೊಳಿದರು. ವಿನ್ಫ್ರೈಡ್ ದುರೈಸಿಂಗಂ ಓವರ್​​ನ ಮೂರನೇ ಎಸೆತದಲ್ಲಿ, ಸಿಕ್ಸರ್ ಬಾರಿಸಿ ಪಂದ್ಯಾವಳಿಯ ಇತಿಹಾಸದಲ್ಲಿ ಇತಿಹಾಸ ನಿರ್ಮಿಸಿದರು.

VISTARANEWS.COM


on

Chamari Athapaththu
Koo

ಬೆಂಗಳೂರು: ಶ್ರೀಲಂಕಾದ ಬ್ಯಾಟರ್​ ಚಾಮರಿ ಅಟ್ಟಪಟ್ಟು (Chamari Athapaththu) ಏಷ್ಯಾಕಪ್ ಇತಿಹಾಸದಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜುಲೈ 22ರಂದು ಶ್ರೀಲಂಕಾದ ರಣಗಿರಿ ಡಂಬುಲ್ಲಾ ಅಂತಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಲಂಕಾ ನಾಯಕಿ ಈ ಸಾಧನೆ ಮಾಡಿದ್ದಾರೆ. ಮೊದಲು ಬ್ಯಾಟ್ ಮಾಡಿದ ಲಂಕಾ ಪರ 69 ಎಸೆತಗಳಲ್ಲಿ 14 ಬೌಂಡರಿ ಮತ್ತು ಏಳು ಸಿಕ್ಸರ್​​ಗಳ ಸಮೇತ 119 ರನ್ ಗಳಿಸಿ ಔಟಾಗದೆ ಉಳಿದರು. ಈ ಮೂಲಕ ಮಹಿಳೆಯರ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಇತಿಹಾಸ ಬರೆದರು.

ವಿಶ್ಮಿ ಗುಣರತ್ನೆ ಅವರ ಆರಂಭಿಕ ವಿಕೆಟ್ ಕಳೆದುಕೊಂಡ ನಂತರ, ಚಾಮರಿ ಹರ್ಷಿತಾ ಸಮರವಿಕ್ರಮ ಅವರೊಂದಿಗೆ ಎರಡನೇ ವಿಕೆಟ್​​ಗೆ 64 ರನ್​​ಗಳ ಜೊತೆಯಾಟ ನೀಡಿದರು. ಚಾಮರಿ ಮತ್ತು ಅನುಷ್ಕಾ ಸಂಜೀವಿನಿ ಮೂರನೇ ವಿಕೆಟ್​​ಗೆ 115 ರನ್​ಗಳ ಜೊತೆಯಾಟವಾಡಿದರು. ಅನುಭವಿ ಆಟಗಾರ್ತಿ 35 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಚಾಮರಿ ವಿಸ್ಫೋಟಕ ಆಟ

18ನೇ ಓವರ್​ ಬಳಿಕ ಚಾಮರಿ ಸ್ಫೋಟಕ ಬ್ಯಾಟಿಂಗ್ ಮಾಡಿದರು 19 ನೇ ಓವರ್ ಅನ್ನು ಬೌಂಡರಿಯೊಂದಿಗೆ ಪ್ರಾರಂಭಿಸಿದರು. ಶ್ರೀಲಂಕಾ ಇನಿಂಗ್ಸ್​​ನ ಕೊನೆಯ ಓವರ್​ಗೆ ಮೊದಲು ಅಟ್ಟಪಟ್ಟು 63 ಎಸೆತಗಳಲ್ಲಿ ಶತಕ ಪೂರ್ಣಗೊಳಿದರು. ವಿನ್ಫ್ರೈಡ್ ದುರೈಸಿಂಗಂ ಓವರ್​​ನ ಮೂರನೇ ಎಸೆತದಲ್ಲಿ, ಸಿಕ್ಸರ್ ಬಾರಿಸಿ ಪಂದ್ಯಾವಳಿಯ ಇತಿಹಾಸದಲ್ಲಿ ಇತಿಹಾಸ ನಿರ್ಮಿಸಿದರು.

ಇದನ್ನೂ ಓದಿ: Raghu Dixit : ಪ್ಯಾರಿಸ್​ ಒಲಿಂಪಿಕ್ಸ್​ಗೆ ಕನ್ನಡ ಹಾಡುಗಳ ಮೆರುಗು ; ರಘು ದೀಕ್ಷಿತ್ ತಂಡದಿಂದ ವಿಶೇಷ ಕಾರ್ಯಕ್ರಮ

ಅಂತಿಮವಾಗಿ ಶ್ರೀಲಂಕಾ 20 ಓವರ್​ಗೆ 4 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು. 136 ಪಂದ್ಯಗಳಿಂದ 24.44ರ ಸರಾಸರಿಯಲ್ಲಿ 3153 ರನ್ ಗಳಿಸಿರುವ ಚಾಮರಿ ಟಿ20ಐನಲ್ಲಿ ಮೂರು ಶತಕ ಬಾರಿಸಿದ್ದಾರೆ. ಅವರ ಇತರ ಎರಡು ಶತಕಗಳು ಆಸ್ಟ್ರೇಲಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಬಂದಿವೆ.

ಸುಜಿ ಬೇಟ್ಸ್, ಹರ್ಮನ್ಪ್ರೀತ್ ಕೌರ್, ಮೆಗ್ ಲ್ಯಾನಿಂಗ್, ಸ್ಮೃತಿ ಮಂದಾನ, ಸ್ಟೆಫಾನಿ ಟೇಲರ್ ಮತ್ತು ಸೋಫಿ ಡಿವೈನ್ ನಂತರ ಮಹಿಳಾ ಟಿ 20 ಐನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಟ್ಟಪಟ್ಟು ಏಳನೇ ಸ್ಥಾನದಲ್ಲಿದ್ದಾರೆ.

Continue Reading
Advertisement
Akhila bharat Veerashaiva Mahasabha taluk unit new president and directors padagrahana programme in koratagere
ತುಮಕೂರು4 mins ago

Koratagere News: ವೀರಶೈವ ಮಹಾಸಭಾದಿಂದ ಧಾರ್ಮಿಕ ನೆಲೆಗಟ್ಟು ಭದ್ರ; ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ

IBPS
ಉದ್ಯೋಗ19 mins ago

IBPS: ರಾಷ್ಟ್ರೀಕೃತ ಬ್ಯಾಂಕ್‌ಗಳ 6,128 ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ; ಇಲ್ಲಿದೆ ಹೊಸ ಟೈಮ್‌ ಟೇಬಲ್‌

Congress Protest
ಕರ್ನಾಟಕ24 mins ago

Congress Protest: ಇಡಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ; ದ್ವೇಷ ರಾಜಕೀಯವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದ ಸಿಎಂ

Tharun Sudhir sonal monteiro age differnce
ಸ್ಯಾಂಡಲ್ ವುಡ್27 mins ago

Tharun Sudhir: ತರುಣ್-ಸೋನಲ್‌ ನಡುವಿನ ವಯಸ್ಸಿನ ಅಂತರ ಎಷ್ಟು?

murder case
ಬೆಳಗಾವಿ28 mins ago

Murder case : ಭೂ ವಿವಾದಕ್ಕಾಗಿ ಪರಸ್ಪರ ಹೊಡೆದಾಡಿಕೊಂಡ ಅಣ್ಣ-ತಮ್ಮ ಮೃತ್ಯು

Paris Olympic 2024
ಕ್ರೀಡೆ41 mins ago

Paris Olympic 2024:’ಆ್ಯಂಟಿ-ಸೆಕ್ಸ್ ಬೆಡ್’ನ ಸಾಮರ್ಥ್ಯ ಪರೀಕ್ಷೆ ನಡೆಸಿದ ಆಸ್ಟ್ರೇಲಿಯಾದ ಟೆನಿಸ್​ ಆಟಗಾರ್ತಿಯರು; ವಿಡಿಯೊ ವೈರಲ್​

Suraj Revanna Case
ಕ್ರೈಂ47 mins ago

Suraj Revanna Case: ಸಲಿಂಗ ಕಾಮ ಪ್ರಕರಣ; ಸೂರಜ್‌ ರೇವಣ್ಣ ಜೈಲಿನಿಂದ ರಿಲೀಸ್‌

IND vs SL
ಕ್ರೀಡೆ1 hour ago

IND vs SL: ಭಾರತ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟಿಸಿದ ಶ್ರೀಲಂಕಾ

Kannada New Movie Ashu Bedra Vafah New movie update
ಸ್ಯಾಂಡಲ್ ವುಡ್1 hour ago

Kannada New Movie: ಬರ್ತ್‌ಡೇ ದಿನವೇ ಹೊಸ ಸಿನಿಮಾ ಅಪ್ ಡೇಟ್ ಕೊಟ್ಟ ಅಶು ಬೆದ್ರ!

Union Budget 2024
Latest1 hour ago

Union Budget 2024: 7 ಬಜೆಟ್‍ಗಳಲ್ಲಿ 7 ಬಣ್ಣದ ಸೀರೆ ಧರಿಸಿ ಮಿಂಚಿದ ನಿರ್ಮಲಾ ಸೀತಾರಾಮನ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ3 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ4 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ4 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ5 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ5 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ1 week ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌