Site icon Vistara News

IND vs AUS T20: ಎಮೋಜಿ ಮೂಲಕವೇ ಆಯ್ಕೆ ಸಮಿತಿಗೆ ತಿವಿದ ಯಜುವೇಂದ್ರ ಚಹಲ್

Yuzvendra Chahal

ಮುಂಬಯಿ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ(IND vs AUS T20) ಆಯ್ಕೆಯಾಗದ ಯಜುವೇಂದ್ರ ಚಹಲ್(Yuzvendra Chahal)​ ಅವರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಹಾಕಿ ಅಸಮಾಧಾನ ಹೊರಹಾಕಿದ್ದಾರೆ. ಅಳುತ್ತಿರುವ ಎಮೋಜಿಯನ್ನು ಹಾಕಿದ್ದಾರೆ. ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Post)​ ಆಗಿದೆ.

ಆಸೀಸ್​ ವಿರುದ್ಧದ ಟಿ20 ಸರಣಿಗೆ ಸೋಮವಾರ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿತ್ತು. ಏಷ್ಯಾಕಪ್​ ಮತ್ತು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಯಜುವೇಂದ್ರ ಚಹಲ್​, ಸಂಜು ಸ್ಯಾಮ್ಸನ್​ ಮತ್ತು ಭುವನೇಶ್ವರ್​ ಕುಮಾರ್​ ಅವರು ಈ ಸರಣಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಆಯ್ಕೆ ಸಮಿತಿ ಮುಂದಿನ ವರ್ಷದ ಟಿ20 ವಿಶ್ವಕಪ್​ ದೃಷ್ಟಿಯಲ್ಲಿ ಯುವ ಆಟಗಾರರಿಗೆ ಮಣೆ ಹಾಕಿತು. ಇದರಿಂದ ಬೇಸರಗೊಂಡ ಚಹಲ್​ ಅವರು ಪೋಸ್ಟ್​ ಒಂದನ್ನು ಮಾಡುವ ಮೂಲಕ ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ IND vs AUS Final: ವಿಶ್ವಕಪ್​ ಸೋಲಿನ ನೋವು ಮರೆಯಲು ಒಂದು ದಿನ ರಜೆ ಕೊಟ್ಟ ಕಂಪನಿ

ಚಹಲ್​ ಮಾಡಿರುವ ಪೋಸ್ಟ್​

ಕೆಲವು ವಿಷಯಗಳು ನಮ್ಮ ಕೈಯಲ್ಲಿಲ್ಲ; ಚಹಲ್​

ವಿಶ್ವಕಪ್​ಗೆ ಆಯ್ಕೆಯಾಗದಿದ್ದಾಗ ಕೂಡ ಚಹಲ್​ ಅವರು ಇದೇ ರೋತಿಯ ಪೋಸ್ಟ್​ ಮಾಡಿ ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ್ದರು. “ಕೆಲವು ವಿಷಯಗಳು ನಮ್ಮ ಕೈಯಲ್ಲಿಲ್ಲ, ಆದ್ದರಿಂದ ನಾನು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನನ್ನ ಗಮನವು ಅತ್ಯುತ್ತಮ ಪ್ರದರ್ಶನವನ್ನು ನೀಡುವುದು ಮತ್ತು ನಾನು ಆಟವನ್ನು ಆಡುವವರೆಗೂ ಉತ್ತಮ ಪ್ರದರ್ಶನ ನೀಡುವುದು. ಯಾವುದೇ ಪಂದ್ಯವಾಗಿರಲಿ, ನನ್ನ ಗುರಿ ಶೇಕಡಾ 100 ಉತ್ತಮ ಪ್ರದರ್ಶನ ನೀಡುವುದು. ಆಯ್ಕೆ ನಮ್ಮ ಕೈಯಲ್ಲಿಲ್ಲ “ಎಂದು ಹೇಳಿದ್ದರು. ಇದು ಮಾತ್ರವಲ್ಲದೆ ಆಸೀಸ್​ ವಿರುದ್ಧದ ಸರಣಿಯಲ್ಲಿ ಅಶ್ವಿನ್ ಅವರು ಮೂರು ವಿಕೆಟ್​ ಕಿತ್ತ ಸಂದರ್ಭದಲ್ಲಿ ಟ್ವಿಟ್​ ಮಾಡಿ, ಲೆಜೆಂಡರಿ ಆಟಗಾರ ಎಂದು ಹೇಳಬೇಕಿಲ್ಲ ಎಂಬ ಪೋಸ್ಟ್​ ಮಾಡಿದ್ದರು.

ಸಂಜು ಸ್ಯಾಮ್ಸನ್(Sanju Samson)​ ಅವರನ್ನು ಆಯ್ಕೆ ಮಾಡದ ಕಾರಣ ಅವರ ಅಭಿಮಾನಿಗಳು ಕೂಡ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜು ಅವರನ್ನು ಬೇಕಂತಲೇ ಟಾರ್ಗೆಟ್​ ಮಾಡಿ ಈ ರೀತಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಐರ್ಲೆಂಡ್ ಸರಣಿಯಲ್ಲಿ ವಿಕೆಟ್​ ಕೀಪಿಂಗ್​ ಜತೆಗೆ ಬ್ಯಾಟಿಂಗ್​ ಸಹ ಮಾಡಿದ್ದ ಸಂಜು ಸ್ಯಾಮ್ಸನ್​ ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಜಿತೇಶ್ ಶರ್ಮಾ ಅವರನ್ನೇ ಪ್ರಮುಖ ಕೀಪರ್​ ಆಗಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸಂಜು ಅವರಿಗೆ ಈ ರೀತಿ ಅನ್ಯಾಯವಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಉತ್ತಮ ಫಾರ್ಮ್​ನಲ್ಲಿದ್ದರೂ ಅವರನ್ನು ತಂಡಕ್ಕೆ ಆಯ್ಕೆ ಮಾಡಿರಲಿಲ್ಲ.

ಇದನ್ನೂ ಓದಿ IND vs AUS T20: ಭಾರತ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸೀಸ್​

ಭಾರತ ತಂಡ

ಸೂರ್ಯಕುಮಾರ್‌ ಯಾದವ್‌ (ನಾಯಕ), ಋತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌, ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮ, ರಿಂಕು ಸಿಂಗ್‌, ಜಿತೇಶ್‌ ಶರ್ಮ, ವಾಷಿಂಗ್ಟನ್‌ ಸುಂದರ್‌, ಅಕ್ಷರ್‌ ಪಟೇಲ್‌, ಶಿವಂ ದುಬೆ, ರವಿ ಬಿಷ್ಣೋಯಿ, ಆರ್ಷದೀಪ್‌ ಸಿಂಗ್‌, ಪ್ರಸಿದ್ಧ್ ಕೃಷ್ಣ, ಆವೇಶ್‌ ಖಾನ್‌, ಮುಕೇಶ್‌ ಕುಮಾರ್‌.

Exit mobile version