Site icon Vistara News

IND vs SA 3rd T2O | ಭಾರತಕ್ಕೆ ಭರ್ಜರಿ ಗೆಲುವು, ಸರಣಿ ಸಮಬಲ

cricket t20

ರಾಜ್‌ಕೋಟ್‌ (ಗುಜರಾತ್‌): ಮೂರನೇ ಪಂದ್ಯದ ಗೆಲುವಿನಿಂದ ಆತ್ಮವಿಶ್ವಾಸ ಬೆಳೆಸಿಕೊಂಡಿದ್ದ ಟೀಮ್‌ ಇಂಡಿಯಾ ನಾಲ್ಕನೇ ಪಂದ್ಯದಲ್ಲಿಯೂ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.
ಹೀಗಾಗಿ ಜೂನ್‌ 19ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯ ತೀವ್ರ ಕುತೂಹಲ ಮೂಡಿಸಲಿದೆ.

ಇಲ್ಲಿಯ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಪಂತ್‌ ಬಳಗ ಸರಣಿಯನ್ನು 2-2 ರಿಂದ ಸಮಬಲ ಮಾಡಿಕೊಂಡಿದ್ದು, ಐದನೇ ಪಂದ್ಯಕ್ಕೆ ಈಗ ಮಹತ್ವ ಬಂದಿದೆ.

ಇಂದು ನಡೆದ ನಾಲ್ಕನೇ ಪಂದ್ಯದಲ್ಲಿಯೂ ದಕ್ಷಿಣ ಆಫ್ರಿಕಾ ಟಾಸ್‌ ಗೆದ್ದಿದ್ದು, ಭಾರತವನ್ನು ಬ್ಯಾಟಿಂಗ್‌ ಮಾಡಲು ಬಿಟ್ಟಿತ್ತು. 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು ಟೀಮ್‌ ಇಂಡಿಯಾ 169 ರನ್‌ಗಳ ಗುರಿ ನಿಗದಿಪಡಿಸಿತ್ತು.

ಆದರೆ ದಕ್ಷಿಣ ಆಫ್ರಿಕಾ ತಂಡ ಎಂದಿನ ಹೋರಾಟ ಮನೋಭಾವವನ್ನು ತೋರದೆ ನಿರೀಕ್ಷೆಗಿಂತಲೂ ಮೊದಲೇ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಭಾರತಕ್ಕೆ ಶರಣಾಯಿತು. ಭಾರತ ತಂಡ 82 ರನ್‌ ಗಳ ಜಯ ತನ್ನದಾಗಿಸಿಕೊಂಡಿತು.

Exit mobile version