ನವ ದೆಹಲಿ: ಅಭಿಷೇಕ್ ಶರ್ಮಾ (67) ಹಾಗೂ ಹೆನ್ರಿಚ್ ಕ್ಲಾಸೆನ್ (51) ಅವರ ಅರ್ಧ ಶತಕದ ನೆರವು ಪಡೆದ ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 16ನೇ ಆವೃತ್ತಿಯ 40ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ 197 ರನ್ ಬಾರಿಸಿದೆ. ಈ ಮೂಲಕ ಆತಿಥೇಯ ಡೆಲ್ಲಿ ತಂಡಕ್ಕೆ 198 ರನ್ಗಳ ಗೆಲುವಿನ ಗುರಿ ಎದುರಾಗಿದೆ. ಎಸ್ಆರ್ಎಚ್ ತಂಡದ ಪ್ರಮುಖ ಬ್ಯಾಟರ್ಗಳು ಮತ್ತೆ ವೈಫಲ್ಯ ಕಾಣುವ ಮೂಲಕ ತಮ್ಮ ಚಾಳಿ ಪ್ರದರ್ಶಿಸಿದರು.
ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಹಣಾಹಣಿಲ್ಲಿ ಟಾಸ್ ಗೆದ್ದ ಎಸ್ಆರ್ಎಚ್ ತಂಡದ ನಾಯಕ ಏಡೆನ್ ಮಾರ್ಕ್ರಮ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡು ಆಡಿದ ಬ್ಯಾಟರ್ಗಳು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 197 ರನ್ ಬಾರಿಸಿತು.
ಎಸ್ಆರ್ಎಚ್ ತಂಡದ ಮಯಾಂಕ್ ಅಗರ್ವಾಲ್ (5) ಮತ್ತೆ ಬ್ಯಾಟಿಂಗ್ನಲ್ಲಿ ವೈಫಲ್ಯ ಕಾಣುವ ಮೂಲಕ ಎಸ್ಆರ್ಎಚ್ ತಂಡದ ಹಿನ್ನಡೆಗೆ ಕಾರಣರಾದರು. ಆರಂಭಿಕರಾಗಿ ಆಡಲು ಬಂದ ಅವರು ತಂಡದ ಮೊತ್ತು 21 ಆಗುವಷ್ಟರಲ್ಲಿ ಇಶಾಂತ್ ಶರ್ಮಗೆ ವಿಕೆಟ್ ಒಪ್ಪಿಸಿ ನಿರಾಸೆಯಿಂದ ಪೆವಿಲಿಯನ್ಗೆ ನಡೆದರು. ನಂತರದ ಬಂದ ರಾಹುಲ್ ತ್ರಿಪಾಠಿ ಕೂಡ 10 ರನ್ಗೆ ಸೀಮಿತಗೊಂಡರು. ನಾಯಕ ಏಡೆನ್ ಮಾರ್ಕ್ರಮ್ ಕೂಡ 8 ರನ್ಗೆ ಔಟಾಗಿ ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಮತ್ತೊಂದು ಬಾರಿ ತಮ್ಮ ವೈಫಲ್ಯ ಪ್ರದರ್ಶಿಸಿದರು. ಐದನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆದುಕೊಂಡಿದ್ದ ಹ್ಯಾರಿ ಬ್ರೂಕ್ ಶೂನ್ಯ ಸುತ್ತುವ ಮೂಲಕ ತಂಡ ಸಂಪೂರ್ಣ ಕುಸಿತ ಅನುಭವಿಸಿತು. ಇವೆಲ್ಲದರ ನಡುವೆ ಅಭಿಷೇಕ್ ಶರ್ಮಾ 25 ಎಸೆತಗಳಲ್ಲಿ 50 ರನ್ ಬಾರಿಸಿದರು. ಆದರೆ, 36 ಎಸೆತಗಳಲ್ಲಿ 67 ರನ್ ಬಾರಿಸಿದ ಅವರು ಔಟಾದರು.
ಕ್ಲಾಸೆನ್ ಅಬ್ಬರ
ಆರನೇಯವರಾಗಿ ಬ್ಯಾಟ್ ಮಾಡಲು ಇಳಿದ ಹೆನ್ರಿನ್ ಕ್ಲಾಸೆನ್ ಮತ್ತೊಮ್ಮೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದರು. 4 ಸಿಕ್ಸರ್ ಹಾಗೂ 2 ಫೋರ್ ಸಮೇತ 27 ಎಸೆತಗಳಲ್ಲಿ ಅವರು 53 ರನ್ ಬಾರಿಸಿದರು. ಅಬ್ದುಲ್ ಸಮದ್ ಕೂಡ 21 ಎಸೆತಗಳಲ್ಲಿ 28 ರನ್ ಗಳಿಸಿದರು. ಅಕೇಲ್ ಹೊಸೈನ್ 10 ಎಸೆತಗಳಲ್ಲಿ 16 ರನ್ ಮಾಡುವ ಮೂಲಕ ಹೈದರಾಬಾದ್ ತಂಡದ ಮೊತ್ತ 200 ಸಮೀಪ ಬಂತು.
ಡೆಲ್ಲಿ ಕ್ಯಾಪಿಟಲ್ಸ್ ಪರ ಬೌಲಿಂಗ್ನಲ್ಲಿ 27 ರನ್ಗಳ ವೆಚ್ಚದಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದರು. ಅಕ್ಷರ್ ಪಟೇಲ್ ಹಾಗೂ ಇಶಾಂತ್ ಶರ್ಮಾ ತಲಾ 1 ವಿಕೆಟ್ಪಡೆದರು.