Site icon Vistara News

IPL 2023 : ದುರ್ಬಲರ ನಡುವಿನ ಕಾದಾಟದಲ್ಲಿ ಗೆದ್ದ ಎಸ್​ಆರ್​​ಎಚ್​​

#image_title

ನವ ದೆಹಲಿ: ಅಭಿಷೇಕ್ ಶರ್ಮಾ (67) ಹಾಗೂ ಹೆನ್ರಿಚ್ ಕ್ಲಾಸೆನ್​ (51) ಅವರ ಅರ್ಧ ಶತಕದ ನೆರವು ಪಡೆದ ಸನ್​ರೈಸರ್ಸ್​ ಹೈದರಾಬಾದ್ ತಂಡ ಐಪಿಎಲ್ 16ನೇ ಆವೃತ್ತಿಯ 40ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ … ರನ್​ಗಳ ಜಯ ದಾಖಲಿಸಿತು. ಇದರೊಂದಿಗೆ ಸತತ ಎರಡು ಗೆಲುವು ದಾಖಲಿಸಿ ವಿಶ್ವಾಸ ಮೂಡಿಸಿಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೋಲಿನ ಸುಳಿಗೆ ಸಿಲುಕಿದರೆ, ಹ್ಯಾಟ್ರಿಕ್ ಸೋಲಿನ ಬಳಿಕ ಹೈದರಾಬಾದ್​ ತಂಡ ಗೆಲುವಿನ ಹಳಿಗೆ ಮರಳಿತು.

ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಹಣಾಹಣಿಲ್ಲಿ ಟಾಸ್​ ಗೆದ್ದ ಎಸ್​ಆರ್​ಎಚ್​ ತಂಡದ ನಾಯಕ ಏಡೆನ್​ ಮಾರ್ಕ್ರಮ್​ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡು ಆಡಿದ ಬ್ಯಾಟರ್​ಗಳು 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 197 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ತಂಡ ನಿಗದಿತ 20 ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ ಕಳೆದುಕೊಂಡು 186 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಎಸ್​ಆರ್​ಎಚ್​ ತಂಡದ ಮಯಾಂಕ್ ಅಗರ್ವಾಲ್​ (5) ಮತ್ತೆ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಾಣುವ ಮೂಲಕ ಎಸ್​ಆರ್​ಎಚ್​ ತಂಡದ ಹಿನ್ನಡೆಗೆ ಕಾರಣರಾದರು. ಆರಂಭಿಕರಾಗಿ ಆಡಲು ಬಂದ ಅವರು ತಂಡದ ಮೊತ್ತು 21 ಆಗುವಷ್ಟರಲ್ಲಿ ಇಶಾಂತ್​ ಶರ್ಮಗೆ ವಿಕೆಟ್​ ಒಪ್ಪಿಸಿ ನಿರಾಸೆಯಿಂದ ಪೆವಿಲಿಯನ್​ಗೆ ನಡೆದರು. ನಂತರದ ಬಂದ ರಾಹುಲ್​ ತ್ರಿಪಾಠಿ ಕೂಡ 10 ರನ್​ಗೆ ಸೀಮಿತಗೊಂಡರು. ನಾಯಕ ಏಡೆನ್ ಮಾರ್ಕ್ರಮ್​ ಕೂಡ 8 ರನ್​ಗೆ ಔಟಾಗಿ ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ ಮತ್ತೊಂದು ಬಾರಿ ತಮ್ಮ ವೈಫಲ್ಯ ಪ್ರದರ್ಶಿಸಿದರು. ಐದನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆದುಕೊಂಡಿದ್ದ ಹ್ಯಾರಿ ಬ್ರೂಕ್​ ಶೂನ್ಯ ಸುತ್ತುವ ಮೂಲಕ ತಂಡ ಸಂಪೂರ್ಣ ಕುಸಿತ ಅನುಭವಿಸಿತು. ಇವೆಲ್ಲದರ ನಡುವೆ ಅಭಿಷೇಕ್​ ಶರ್ಮಾ 25 ಎಸೆತಗಳಲ್ಲಿ 50 ರನ್ ಬಾರಿಸಿದರು. ಆದರೆ, 36 ಎಸೆತಗಳಲ್ಲಿ 67 ರನ್​ ಬಾರಿಸಿದ ಅವರು ಔಟಾದರು.

ಕ್ಲಾಸೆನ್ ಅಬ್ಬರ

ಆರನೇಯವರಾಗಿ ಬ್ಯಾಟ್​ ಮಾಡಲು ಇಳಿದ ಹೆನ್ರಿನ್​ ಕ್ಲಾಸೆನ್ ಮತ್ತೊಮ್ಮೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್​ ಸಾಮರ್ಥ್ಯವನ್ನು ಪ್ರದರ್ಶಿಸಿದರು. 4 ಸಿಕ್ಸರ್​ ಹಾಗೂ 2 ಫೋರ್ ಸಮೇತ 27 ಎಸೆತಗಳಲ್ಲಿ ಅವರು 53 ರನ್​ ಬಾರಿಸಿದರು. ಅಬ್ದುಲ್​ ಸಮದ್​ ಕೂಡ 21 ಎಸೆತಗಳಲ್ಲಿ 28 ರನ್ ಗಳಿಸಿದರು. ಅಕೇಲ್​ ಹೊಸೈನ್​ 10 ಎಸೆತಗಳಲ್ಲಿ 16 ರನ್ ಮಾಡುವ ಮೂಲಕ ಹೈದರಾಬಾದ್ ತಂಡದ ಮೊತ್ತ 200 ಸಮೀಪ ಬಂತು.

ಡೆಲ್ಲಿ ಕ್ಯಾಪಿಟಲ್ಸ್ ಪರ ಬೌಲಿಂಗ್​ನಲ್ಲಿ 27 ರನ್​ಗಳ ವೆಚ್ಚದಲ್ಲಿ 4 ವಿಕೆಟ್​ ಕಬಳಿಸಿ ಮಿಂಚಿದರು. ಅಕ್ಷರ್ ಪಟೇಲ್​ ಹಾಗೂ ಇಶಾಂತ್ ಶರ್ಮಾ ತಲಾ 1 ವಿಕೆಟ್​ಪಡೆದರು.

ಇದನ್ನೂ ಓದಿ : ಆಟದ ನಡುವೆ ಗ್ರೌಂಡ್​ನ ಗಾತ್ರ ಬದಲು, ಟ್ರೋಲ್​ಗೆ ಒಳಗಾದ ಪಾಕಿಸ್ತಾನ ಕ್ರಿಕೆಟ್​ ಮಂಡಳಿ

ಅವಕಾಶ ಕೈ ಚೆಲ್ಲಿದ ಡೆಲ್ಲಿ

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ತಂಡದ ಪರ ನಾಯಕ ಡೇವಿಡ್ ವಾರ್ನರ್​ ಶೂನ್ಯಕ್ಕೆ ಔಟಾದರು. ಬಳಿಕ ಎರಡನೇ ವಿಕೆಟ್​ಗೆ ಫಿಲ್​ ಸಾಲ್ಟ್ (59) ಹಾಗೂ ಮಿಚೆಲ್​ ಮಾರ್ಷ್​ (63) ಅರ್ಧ ಶತಕಗಳನ್ನು ಬಾರಿಸಿ ಗೆಲುವಿನ ಭರವಸೆ ಮೂಡಿಸಿದರು. ಈ ಜೋಡಿ ಎರಡನೇ ವಿಕೆಟ್​ಗೆ 112 ರನ್​ ಬಾರಿಸಿದಾಗ ಗೆಲುವಿನ ಅವಕಾಶದ ಬಾಗಿಲು ತೆರೆಯಿತು. ಆದರೆ, ಇವರಿಬ್ಬರು ಔಟಾದ ಬಳಿಕ ಡೆಲ್ಲಿ ಬ್ಯಾಟರ್​ಗಳ ಪೆವಿಲಿಯನ್​ ಪರೇಡ್​ ಶುರುವಾಯಿತು. ಎಂದಿನಂತೆ ಕೊನೆಯಲ್ಲಿ ಅಕ್ಷರ್ ಪಟೇಲ್​ 14 ಎಸೆತಗಳಿಗೆ 29 ರನ್ ಬಾರಿಸಿ ಪೈಪೋಟಿ ಕೊಟ್ಟರೂ ಗೆಲುವು ತಂದುಕೊಡಲು ಅವರಿಗೆ ಸಾಧ್ಯವಾಗಲಿಲ್ಲ.

Exit mobile version