Site icon Vistara News

IPL 2023 : ಮೋದಿ ಸ್ಟೇಡಿಯಂ ಬಳಿ ಐಪಿಎಲ್​ ಟಿಕೆಟ್​ಗೆ ನೂಕುನುಗ್ಗಲು, ಕಾಲ್ತುಳಿತ; ಪೊಲೀಸರಿಂದ ಲಾಠಿ ಚಾರ್ಜ್​​

IPL 2023 Final match

#image_title

ಅಹಮದಾಬಾದ್​​ : ಇಂಡಿಯನ್ ಪ್ರೀಮಿಯರ್ ಲೀಗ್ (IPL 2023 ) 2023ರ ಫೈನಲ್ ಪಂದ್ಯದ ಟಿಕೆಟ್ ವಿತರಣೆ ವೇಳೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಮಹಿಳಾ ಅಭಿಮಾನಿಗಳು ಪುರುಷರ ನಡುವೆ ಸಿಲುಕಿ ತೊಂದರೆ ಎದುರಿಸಿದ ಪ್ರಸಂಗವೂ ಎದುರಾಗಿದೆ. ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಬಳಿ ಟಿಕೆಟ್​ಗಳ ಹಂಚಿಕೆ ನಡೆಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕ್ರಿಕೆಟ್​ ಅಭಿಮಾನಿಗಳು ಘಟನೆಯ ದೃಶ್ಯಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳ ಮೂಲಕ ಶೇರ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಸಿಸಿ ಟಿಕೆಟ್​ ವಿತರಣೆ ಪ್ರಕ್ರಿಯಲ್ಲಿ ವೈಫಲ್ಯ ಕಂಡಿದೆ ಎಂಬುದಾಗಿ ಅಭಿಮಾನಿಗಳು ಆರೋಪಸಿದ್ದಾರೆ. ಮೂಲಗಳ ಪ್ರಕಾರ, ಫೈನಲ್​ ಪಂದ್ಯದ ಟಿಕೆಟ್​​ಗಳನ್ನು ಸ್ಟೇಡಿಯಮ್​ ಬಳಿಕ ಕೌಂಟರ್​ನಲ್ಲಿ ವಿತರಿಸುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ, ಆನ್​ಲೈನ್​ ಟಿಕೆಟ್​ ಪಡೆದವರು ಬಾಕ್ಸ್ಆಫೀಸ್​​ ಬಳಿಗೆ ಹೋಗಿ ಕ್ಯೂಆರ್​ ಕೋಡ್ ಸ್ಕ್ಯಾನ್​ ಮಾಡಿ ಹಾರ್ಡ್​ ಕಾಪಿ ಪಡೆದುಕೊಳ್ಳಬೇಕಾಗಿತ್ತು. ಈ ಪ್ರಕ್ರಿಯೆಗೆ ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಅಭಿಮಾನಿಗಳು ಏಕಾಏಕಿ ನುಗ್ಗಿದ ಬಳಿಕ ತಳ್ಳಾಟ ಆರಂಭವಾಗಿದೆ.

ಟಿಕೆಟ್ ಸಂಗ್ರಹಕ್ಕಾಗಿ ಬಾಕ್ಸ್ ಆಫೀಸ್ ಮೇ 25 ಗುರುವಾರ ಬೆಳಗ್ಗೆ 11ರಿಂದ ಸಂಜೆ 6 ರವರೆಗೆ ತೆರೆದಿಡಲಾಗಿತ್ತು, ಇದು ಸ್ಥಳದಲ್ಲಿ ಅವ್ಯವಸ್ಥೆಗೆ ಕಾರಣವಾಯಿತು. ಟಿಕೆಟ್ ಪಡೆಯಲು ನೂರಾರು ಜನರು ಸ್ಥಳದ ಹೊರಗೆ ಜಮಾಯಿಸಿದರು. ಜನಸಂದಣಿಯನ್ನು ನಿರ್ವಹಿಸಲು ಸ್ಥಳೀಯ ಪೊಲೀಸರು ವಿಫಲರಾದರು. ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಧಾವಿಸಿದ ಕಾರಣ ಪರಿಸ್ಥಿತಿ ಹದಗೆಟ್ಟಿತು. ಬಳಿಕ ಪೊಲೀಸರು ಲಾಠಿ ಚಾರ್ಜ್​ ಮಾಡಿದರು.

ಇದನ್ನೂ ಓದಿ : IPL Betting: ಐಪಿಎಲ್‌ ಬೆಟ್ಟಿಂಗ್‌ ದಂಧೆಗೆ ಯುವಕ ಬಲಿ, ಹಣ ಕೇಳಲು ಹೋದಾಗ ಕೊಲೆ

ಮೇ 26ರಂದು ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಐಪಿಎಲ್​ ಕ್ವಾಲಿಫೈಯರ್ 2 ಇದೇ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಈ ದಿನ ಟಿಕೆಟ್​ ವಿತರಣೆ ಹಾಗೂ ಭೌತಿಕವಾಗಿ ಟಿಕೆಟ್​ ಪಡೆಯುವ ಪ್ರಕ್ರಿಯೆ ಇರಲಿಲ್ಲ. 25 ಮತ್ತು 27ರಂದು ಅವಕಾಶ ನೀಡಲಾಗಿದೆ. 25ರಂದು ಸ್ಥಳದಲ್ಲಿ ಗೊಂದಲ ಸೃಷ್ಟಿಯಾಗಿ ಸಮಸ್ಯೆ ಆಗಿತ್ತು. ಸ್ಟೇಡಿಯಮ್​​ನಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ವೀಕ್ಷಣೆ ಮಾಡಲು ಸಾಧ್ಯವಿರುವ ಕಾರಣ ಶನಿವಾರ ಮತ್ತೆ ಸಮಸ್ಯೆ ಉಂಟಾಬಹುದು ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.

Exit mobile version