Site icon Vistara News

IPL 2023 : ಹೈದರಾಬಾದ್​ ತಂಡದ ವಿರುದ್ಧ 171 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದ ಕೆಕೆಆರ್​

Sunrisers Hyderabad vs Kolkata Knight Riders

#image_title

ಹೈದರಾಬಾದ್​​ : ನಾಯಕ ನಿತೀಶ್​ ರಾಣಾ (42) ಹಾಗೂ ಯುವ ಬ್ಯಾಟರ್​ ರಿಂಕು ಸಿಂಗ್​ (46) ಅವರ ಸಮಯೋಚಿತ ಬ್ಯಾಟಿಂಗ್​ನ ನೆರವು ಪಡೆದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಐಪಿಎಲ್​ 16ನೇ ಆವೃತ್ತಿಯ 47ನೇ ಪಂದ್ಯದಲ್ಲಿ 171 ರನ್​ ಬಾರಿಸಿದೆ. ಈ ಮೂಲಕ ಆತಿಥೇಯ ಎಸ್​ಆರ್​ಎಚ್​ ತಂಡದ ಗೆಲುವಿಗೆ 172 ರನ್​ಗಳ ಸವಾಲು ಎದುರಾಗಿದೆ.

ಇಲ್ಲಿನ ರಾಜೀವ್​ಗಾಂಧಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಕೆಕೆಆರ್​ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ನಿಗದಿತ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 171 ರನ್​ ಬಾರಿಸಿತು.

ಬ್ಯಾಟಿಂಗ್ ಆರಂಭಿಸಿದ ಕೆಕೆಆರ್​ ತಂಡಕ್ಕೆ ರಹಮನುಲ್ಲಾ ಗುರ್ಬಜ್​ ವಿಕೆಟ್​ ಶೂನ್ಯಕ್ಕೆ ಪತನವಾಗುವ ಮೂಲಕ ನಿರಾಸೆ ಎದುರಾಯಿತು. ಬಳಿಕ ಬಂದ ವೆಂಕಟೇಶ್ ಅಯ್ಯರ್​ ಕೂಡ 7 ರನ್​ಗೆ ವಿಕೆಟ್​ ಒಪ್ಪಿಸವುದರೊಂದಿಗೆ ಇನ್ನಷ್ಟು ಆಘಾತ ಎದುರಾಯಿತು. ಜೇಸನ್ ರಾಯ್​ 19 ಎಸೆತಕ್ಕೆ 20 ರನ್​ ಬಾರಿಸಿದ ಕಾರಣ ತಂಡದ ಪಾಲಿಗೆ ಉತ್ತಮ ಆರಂಭ ದೊರೆತಂತಾಗಲಿಲ್ಲ.

ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ನಿತೀಶ್ ರಾಣಾ ಹಾಗೂ ಐದನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿದ ರಿಂಕು ಸಿಂಗ್ ತಂಡಕ್ಕೆ ಆಧಾರವಾದರು. 35 ರನ್​ಗಳಿಗೆ ಮೊದಲ ಮೂರು ವಿಕೆಟ್​ ನಷ್ಟ ಮಾಡಿಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದರು. ಆದರೆ, ತಂಡದ ಮೊತ್ತ 96 ಆಗುವಷ್ಟರಲ್ಲಿ ನಿತೀಶ್​ ರಾಣಾ ವಿಕೆಟ್ ಒಪ್ಪಿಸಿದರು. ದೊಡ್ಡ ಹೊಡೆತಕ್ಕೆ ಮುಂದಾದ ಅವರು ಕ್ಯಾಚಿತ್ತು ನಿರ್ಗಮಿಸಿದರು. ವಿಂಡೀಸ್ ದೈತ್ಯ ಆಂಡ್ರೆ ರಸೆಲ್​ (15 ಎಸೆತಕ್ಕೆ 24 ರನ್​) ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರೂ ದೀರ್ಘ ಇನಿಂಗ್ಸ್​ ಕಟ್ಟಲು ಅವರಿಗೆ ಸಾಧ್ಯವಾಗಲಿಲ್ಲ.

ವಿಕೆಟ್​ಗಳು ಪತನಗೊಳ್ಳುತ್ತಿದ್ದ ನಡುವೆಯೂ ರಿಂಕು ಸಿಂಗ್ ಸಮಯೋಚಿತ ಬ್ಯಾಟಿಂಗ್ ಮಾಡಿದ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಆದರೆ, ನಾಲ್ಕು ರನ್​ಗಳ ಕೊರತೆಯಿಂದ ಐಪಿಎಲ್​ನಲ್ಲಿ ಎರಡನೇ ಅರ್ಧ ಶತಕ ಬಾರಿಸಲು ಸಾಧ್ಯವಾಗದೇ ನಿರಾಸೆ ಎದುರಿಸಿದರು.

ಸುನೀಲ್​ ನರೈನ್​ 1 ರನ್ ಬಾರಿಸಿದರೆ, ಶಾರ್ದೂಲ್​ ಠಾಕೂರ್​ 8 ರನ್​ಗಳಿಗೆ ಸೀಮಿತಗೊಂಡರು. ಕೊನೆಯಲ್ಲಿ ಅನುಕೂಲ್​ ರಾಯ್​ 7 ಎಸೆತಗಳಿಗೆ 13 ರನ್​ ಬಾರಿಸಿದರು. ವೈಭರ್ ಅರೋರಾ 2 ರನ್​ ಬಾರಿಸಿದರು.

ಎಸ್​ಆರ್​ಎಚ್ ತಂಡದ ಪರ ಮಾರ್ಕೊ ಜಾನ್ಸೆನ್​ ಹಾಗೂ ಟಿ ನಟರಾಜನ್​ ತಲಾ 2 ವಿಕೆಟ್ ಉರುಳಿಸಿದರು. ಭುವನೇಶ್ವರ್​ ಕುಮಾರ್​, ಕಾರ್ತಿಕ್​ ತ್ಯಾಗಿ, ಏಡೆನ್​ ಮಾರ್ಕ್ರಮ್ ಹಾಗೂ ಮಯಾಂಕ್​ ಮಾರ್ಕಂಡೆ ತಲಾ ಒಂದು ವಿಕೆಟ್​ ಉರುಳಿಸಿದರು.

Exit mobile version