ಹೈದರಾಬಾದ್: ವಿರಾಟ್ ಕೊಹ್ಲಿಯ ಐಪಿಎಲ್ ಇತಿಹಾಸದ ಆರನೇ ಶತಕ (100 ರನ್, 63 ಎಸೆತ, 12 ಫೋರ್, 4 ಸಿಕ್ಸರ್) ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ (71 ರನ್, 47 ರನ್, 2 ಸಿಕ್ಸರ್) ನೆರವು ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 16ನೇ ಆವೃತ್ತಿಯ 65ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ… ವಿಕೆಟ್ಗಳ ನಿರಾಯಾಸ ಗೆಲುವು ಪಡೆಯಿತು. ಈ ಗೆಲುವಿನೊಂದಿಗೆ ಆರ್ಸಿಬಿ ತಂಡ ಪ್ಲೇಆಫ್ ಹಾದಿಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸಿತು. ಅತ್ತ ಎಸ್ಆರ್ಎಚ್ ತಂಡ ಹ್ಯಾಟ್ರಿಕ್ ಸೋಲಿಗೆ ಒಳಗಾಯಿತು.
ಇಲ್ಲಿನ ರಾಜೀವ್ಗಾಂಧಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆಯೋಜನೆಗೊಂಡಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಪ್ ಡು ಪ್ಲೆಸಿಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟ ಮಾಡಿಕೊಂಡು 186 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್ಸಿಬಿ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಕೇವಲ 2 ವಿಕೆಟ್ ನಷ್ಟ ಮಾಡಿಕೊಂಡು 187 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು. ಈ ಸೋಲಿನೊಂದಿಗೆ ಎಸ್ಆರ್ಎಚ್ ತಂಡದ ವಿಕೆಟ್ಕೀಪರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ (104 ರನ್, 51 ಎಸೆತ, 6 ಸಿಕ್ಸರ್, 8 ಫೋರ್) ಬಾರಿಸಿದ ವಿಸ್ಫೋಟಕ ಶತಕ ವ್ಯರ್ಥವಾಯಿತು.
ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಆರ್ಸಿಬಿ ಅತ್ಯಂತ ನಿರಾಳವಾಗಿ ಆಡಿತು. ಆರಂಭಿಕರಾದ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ನಿರಂತರವಾಗಿ ರನ್ ಬಾರಿಸಿಕೊಂಡು ಬಂದರು. 25 ಎಸೆತಗಳಲ್ಲಿ 50 ರನ್ ಕಲೆ ಹಾಕಿದ ಈ ಇಬ್ಬರು ಆಟಗಾರರು. 68 ಎಸೆತಗಳಲ್ಲಿ 100ಗ ಗಡಿ ತಲುಪಿಸಿದರು. ಅದಕ್ಕಿಂತ ಮೊದಲು ಫಾಫ್ ಡು ಪ್ಲೆಸಿಸ್ 34 ಎಸೆತಗಳಲ್ಲಿ ತಮ್ಮ ಹಾಳಿ ಆವೃತ್ತಿಯಲ್ಲಿ ಎಂಟನೇ ಅರ್ಧ ಶತಕ ಬಾರಿಸಿದರು. ಸ್ವಲ್ಪ ಹೊತ್ತಿನಲ್ಲೇ ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ ಹಾಲಿ ಆವೃತ್ತಿಯ ಏಳನೇ ಅರ್ಧ ಶತಕ ಬಾರಿಸಿದರು. ಆದರೆ, ಅವರು ಅದನ್ನು ಶತಕವಾಗಿ ಪರಿವರ್ತಿಸಿದರು. ಅರ್ಧ ಶತಕದ ಬಳಿಕ ಏಕಾಏಕಿ ಗಳಿಕೆಗೆ ವೇಗ ಕೊಟ್ಟ ವಿರಾಟ್ ಕೊಹ್ಲಿ 62 ಎಸೆತದಲ್ಲಿ 100 ರನ್ ಬಾರಿಸಿದರು. ಈ ಜೋಡಿ 91 ಎಸೆತಕ್ಕೆ 150 ರನ್ ಬಾರಿಸಿದರು. ಆದರೆ, ಭುವೇಶ್ವರ್ ಕುಮಾರ್ ಎಸೆತ ಬೌನ್ಸರ್ಗೆ ಸಿಕ್ಸರ್ ಬಾರಿಸಲು ಮುಂದಾದ ವಿರಾಟ್ ಕೊಹ್ಲಿ ಕ್ಯಅಚ್ ನೀಡಿ ಔಟಾದರು. ತಂಡದ ಮೊತ್ತ 177 ಆಗುಷ್ಟರಲ್ಲಿ ಫಾಫ್ ಡು ಪ್ಲೆಸಿಸ್ ಔಟಾದರು. ಗ್ಲೆನ್ಮ್ಯಾಕ್ಸ್ವೆಲ್ 5 ರನ್ ಹಾಗೂ ಮೈಕೆಲ್ ಬ್ರಾಸ್ವೆಲ್ ಗೆಲುವಿನ ಗುರಿ ಮುಟ್ಟಿಸಿದರು.
ಬ್ಯಾಟಿಂಗ್ ಆರಂಭಿಸಿದ ಎಸ್ಆರ್ಎಚ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಅಭಿಷೇಕ್ ಶರ್ಮಾ (11) ಹಾಗೂ ರಾಹುಲ್ ತ್ರಿಪಾಠಿ (15) ಬೇಗನೆ ವಿಕೆಟ್ ಒಪ್ಪಿಸಿದರು. ಇವರಿಬ್ಬರೂ ಸ್ಪಿನ್ನರ್ ಬ್ರೇಸ್ವೆಲ್ ಎಸೆತಕ್ಕೆ ಒಂದೇ ಓವರ್ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ನಡೆದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ನಾಯಕ ಏಡೆನ್ ಮಾರ್ಕ್ರಮ್ ಕೂಡ ಬಿರುಸಾಗಿ ಆಡಲಿಲ್ಲ. ಅವರು ಕೇವಲ 18 ರನ್ಗಳಿಗೆ ಔಟಾದರು. ಆದರೆ, ಶತಕ ವೀರ ಹೆನ್ರಿನ್ಗೆ ಉತ್ತಮ ಜತೆಯಾಟ ನೀಡಿದರು.
ಕ್ಲಾಸೆನ್ ಕ್ಲಾಸ್ ಆಟ
ಹಾಲಿ ಟೂರ್ನಿಯಲ್ಲಿ ಎಸ್ಆರ್ಎಚ್ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಹೆನ್ರಿಚ್ ಕ್ಲಾಸೆನ್ ಆರ್ಸಿಬಿ ವಿರುದ್ಧ ಅಕ್ಷರಶಃ ಅಬ್ಬರಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರಿಸ್ಗೆ ಬಂದ ಅವರು ಎಂದಿನ ಶೈಲಿಯಲ್ಲೇ ಅಬ್ಬರದ ಬ್ಯಾಟಿಂಗ್ ಆರಂಭಿಸಿದರು. ಕೇವಲ 25 ಎಸೆತಗಳಿಗೆ ತಮ್ಮ ಅರ್ಧ ಶತಕ ಪೂರೈಸಿದರು. ಒಂದು ಹಂತದಲ್ಲಿ ಮೇಲುಗೈ ಸಾಧಿಸಿದ್ದ ಆರ್ಸಿಬಿ ಬೌಲರ್ಗಳನ್ನು ಸತತವಾಗಿ ದಂಡಿಸಿದರು. ಆ ಬಳಿಕವೂ ಆಟ ಮುಂದುವರಿಸಿದ 49 ಎಸೆತಗಳಲ್ಲಿ ಶತಕ ಪೂರೈಸಿದರು. ಆದರೆ, ಹರ್ಷಲ್ ಪಟೇಲ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿ ಮರಳಿದರು.
ಇದನ್ನೂ ಓದಿ : IPL 2023 : ಐಪಿಎಲ್ನಲ್ಲಿ 4000 ರನ್ ಪೂರೈಸಿದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್
ಕೊನೇ ಹಂತದಲ್ಲಿ ಹ್ಯಾರಿ ಬ್ರೂಕ್ 19 ಎಸೆತಗಳಲ್ಲಿ 27 ರನ್ ಬಾರಿಸಿದರೆ ಗ್ಲೆನ್ ಫಿಲಿಫ್ಸ್ 5 ರನ್ಗಳನ್ನು ಬಾರಿಸಿ ಕೊನೇ ಎಸೆತಕ್ಕೆ ಔಟಾದರು. ಆರ್ಸಿಬಿ ಪರ ಬೌಲಿಂಗ್ನಲ್ಲಿ ಮೈಕೆಲ್ ಬ್ರಾಸ್ವೆಲ್ 13 ರನ್ಗಳಿಗೆ 2 ವಿಕೆಟ್ ಕಳೆದುಕೊಂಡರೆ ಮೊಹಮ್ಮದ್ ಸಿರಾಜ್ 1 ವಿಕೆಟ್ ತಮ್ಮದಾಗಿಸಿಕೊಂಡರು.