ನವದೆಹಲಿ: ಭಾರತ ಕ್ರಿಕೆಟ್ ತಂಡ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಜೂನ್ 23 (ಶುಕ್ರವಾರ) ನೆದರ್‌ಲ್ಯಾಂಡ್ಸ್‌ನ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಭಾರತೀಯ ಥೀಮ್ ರೆಸ್ಟೋರೆಂಟ್ ಅನ್ನು ತೆರೆದಿದ್ದಾರೆ. ಮಾಜಿ ಆಲ್‌ರೌಂಡರ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೊಸ ರೆಸ್ಟೋರೆಂಟ್ ಕೆಲವು ಚಿತ್ರಗಳನ್ನು ಅಪ್ ಲೋಡ್ ಮಾಡಿದ್ದಾರೆ. ವಿಶೇಷವೆಂದರೆ, ರೈನಾ ಇತ್ತೀಚೆಗೆ ತಮ್ಮ ಪತ್ನಿಯ ಜನ್ಮದಿನವನ್ನು ಡಚ್ ರಾಜಧಾನಿಯಲ್ಲಿ ಆಚರಿಸಿದ್ದರು. ಅದೇ ರೀತಿ ಜೂನ್ 21 ರಂದು ಆಮ್‌ಸ್ಟರ್‌ಡ್ಯಾಂನಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ವೀಡಿಯೊವನ್ನು ಅವರು ಹಂಚಿಕೊಂಡಿದ್ದರು. ಇವೆಲ್ಲದರ ಬಳಿಕ ಇದೀಗ ಹೋಟೆಲ್ ಆರಂಭಿಸಿರುವ ಸುದ್ದಿಯನ್ನೂ ನೀಡಿದ್ದಾರೆ.
ಹೊಸ ರೆಸ್ಟೋರೆಂಟ್ ಆರಂಭಿಸಿರುವುದನ್ನು ಟ್ವಿಟರ್ ಮೂಲಕ ಅವರು ಘೋಷಿಸಿದ್ದಾರೆ. ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಇಂಡಿಯನ್ ರೆಸ್ಟೋರೆಂಟ್ ಅನ್ನು ಪರಿಚಯಿಸಲು ನಾನು ಸಂಪೂರ್ಣವಾಗಿ ಉತ್ಸುಕನಾಗಿದ್ದೇನೆ. ಅಲ್ಲಿ ಆಹಾರ ಮತ್ತು ಅಡುಗೆಯು ನನ್ನ ಉತ್ಸಾಹ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ : INDvsWI 2023 : ವಿಂಡೀಸ್ ಪ್ರವಾಸಕ್ಕೆ ಟೆಸ್ಟ್, ಏಕದಿನ ತಂಡ ಪ್ರಕಟ; ಯಾರಿಗೆಲ್ಲ ಸಿಕ್ತು ಚಾನ್ಸ್?
ನೀವು ಆಹಾರದ ಮೇಲಿನ ನನ್ನ ಪ್ರೀತಿಯನ್ನು ನೋಡಿದ್ದೀರಿ. ನನ್ನ ಪಾಕಶಾಲೆಯ ಸಾಹಸಗಳಿಗೆ ಸಾಕ್ಷಿಯಾಗಿದ್ದೀರಿ, ಈಗ, ಭಾರತದ ವಿವಿಧ ಭಾಗಗಳ ನಿಜವಾದ ರುಚಿಗಳನ್ನು ನೇರವಾಗಿ ಯುರೋಪಿನ ಮಂದಿಗೆ ಪರಿಚಯಿಸುವ ಧ್ಯೇಯ ಹೊಂದಿದ್ದೇನೆ. ಎಂದು ರೈನಾ ಹೇಳಿಕೊಂಡಿದ್ದಾರೆ.
ನನ್ನ ರುಚಿಕರವಾದ ಸಾಹಸದ ಪ್ರಯಾಣದಲ್ಲಿ ಜತೆಯಾಗಿರಿ ಎಂದು ರೈನಾ ಬರೆದುಕೊಂಡಿದ್ದಾರೆ. ನೆದರ್ಲೆಂಡ್‌ನ ರಾಜಧಾನಿಯಲ್ಲಿ ರೈನಾ ಅವರ ಸಂಬಂಧವು ಹೊಸದೇನಲ್ಲ . ಅವರ ಪತ್ನಿ ಪ್ರಿಯಾಂಕಾ ಆಮ್‌ಸ್ಟರ್‌ಡ್ಯಾಂನ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಆಗಾಗ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಹೊಸ ರೆಸ್ಟೋರೆಂಟ್ ಆರಂಭಿಸುವ ಕಾರಣ ಬರುತ್ತಿರುವುದರಿಂದ ರೈನಾ ಆನಗರಕ್ಕೆ ಹೆಚ್ಚಿನ ಭೇಟಿ ನೀಡುವ ನಿರೀಕ್ಷೆಯಿದೆ. ಆಮ್‌ಸ್ಟರ್‌ಡ್ಯಾಮ್‌ನಲ್ಲಿರುವ ರೈನಾ ಇಂಡಿಯನ್ ರೆಸ್ಟೋರೆಂಟ್ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ತೆರೆದಿರುತ್ತದೆ, ಟೇಕ್ಅವೇ ವಿಭಾಗ ಮತ್ತು ಉನ್ನತ ಊಟದ ಅನುಭವ ನೀಡುವ ವಿಭಾಗವೂ ಇಲ್ಲಿದೆ.